ಸದಸ್ಯ:Roshnidsilva/sandbox1
ಡಾ.ರಾಜಶ್ರೀ
ಬದಲಾಯಿಸಿರಾಜಶ್ರೀ ಯವರು ಪೆರಿಮೊಗರು ಪಟೀಲ್ ರಘುನಾಥ ಶೆಟ್ಟಿ ಹಾಗೂ ಮೊಗರೋಡಿ ಸುನಂದಾ ಆರ್. ಶೆಟ್ಟಿ ಯವರ ಮಗಳಾಗಿ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದಲ್ಲಿ ೧೦.೦೯.೧೯೬೬ ರಲ್ಲಿ ಹುಟ್ಟಿದರು.
ಉದ್ಯೋಗ
ಬದಲಾಯಿಸಿ- ಇವರ ಮೊದಲನೆಯ ಉಪನ್ಯಾಸಕಿ ವೃತ್ತಿ ಜೀವನ ಪ್ರಾರಂಭಗೊಂಡಿದ್ದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ,
- ಶ್ರಿ.ಡಿ.ಎಂ. ತುಳುಪೀಠ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕಿಯಾಗಿ, ಹಾಗೂ
ಅಥಿತಿ ಉಪನ್ಯಾಸಕಿಯಾಗಿ, ಕನ್ನಡ ವಿಭಾಗ,ಮಂಗಳೂರು ವಿಶ್ವವಿಧ್ಯಾನಿಲಯ
- ಕರ್ನಾಟಕ ಜಾನಪದ ವಿಶ್ವವಿಧ್ಯಾನಿಲಯದ -ಕರ್ನಾಟಕ ಗ್ರಾಮ ಪದಕೋಶ-ಯೊಜನೇಯಲ್ಲಿ ಕ್ಷೇತ್ರತಜ್ಞರಾಗಿ ಕಾರ್ಯ ನಿರ್ವಹಣೆ,
- ಕರ್ನಾಟಕ ಜಾನಪದ ವಿಶ್ವವಿಧ್ಯಾನಿಲಯದ -ಜಾನಪದ ವಿಶ್ವಕೋಶ- ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ,
- ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ ದಯಾನಂದ ಪೈ ಮತ್ತು ಶ್ರಿ.ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೆಂದ್ರದಲ್ಲಿ ಆರು ವರ್ಷಗಳಲ್ಲಿ ಸಂಶೊಧನಾ ಅಧಿಕಾರಿಯಾಗಿ
ಯಕ್ಷಗಾನಕ್ಕೆ ಸಂಬಂಧಿಸಿದ ಸಂಶೊಧನ ಯೋಜನೆ, ಪ್ರಚಾರೊಪನ್ಯಾಸ, ಸಹಯೋಗದ ಕಾರ್ಯಕ್ರಮಗಳ ಸ್ವತಂತ್ರ ನಿರ್ವಹಣೆ,ಕೃತಿ ಸಂಪಾದನೆ ಹಾಗೂ ಪ್ರಕಟಣೆ, ಕಾರ್ಯಕ್ರಮಗಳ ಸಂಯೋಜನೆ, ಪೀಠದ ಸಂಘಟನಾತ್ಮಕ ಕೆಲಸಗಳ ನಿರ್ವಹಣೆಯ ಅನುಭವ.
ಶೈಕ್ಷಣಿಕ ಆಸಕ್ತಿಯ ಕ್ಷೇತ್ರಗಳು
ಬದಲಾಯಿಸಿ- ಪ್ರಾಚೀನ,ಮಧ್ಯಯುಗೀನ ಮತ್ತು ಆಧುನಿಕ ಕನ್ನಡ ಸಾಹಿತ್ಯ.
- ಜಾನಪದ ವಿಜ್ಞಾನ.
- ಜನಾಂಗೀಯ ಮತ್ತು ಪ್ರಾದೇಶಿಕ ಅಧ್ಯಯನ
- ಸಂಸ್ಕೃತಿ ಅಧ್ಯಯನ.
- ಸಾಹಿತ್ಯ -ಸಾಂಸ್ಕೃತಿಕ, ಸಾಮಾಜಿಕ ಎಚ್ಚರದ ಕಾರ್ಯಕ್ರಮಗಳ ಸಂಘಟನೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ.
ಕೃತಿಗಳು
ಬದಲಾಯಿಸಿಸ್ವತಂತ್ರ ಕೃತಿಗಳು
ಬದಲಾಯಿಸಿ- ತುಳು ಜನಪದ ಕಾವ್ಯ ೨೦೦೮
- ಬೆನ್ಪಿ ಪೊಣ್ಣನ ಕನತ್ತ ಕದಿಕೆ ೨೦೦೮
- ಕೃಷಿ ಸಂಸ್ಕೃತಿಯಲ್ಲಿ ಹೆಣ್ಣಿನ ಪ್ರತಿನಿಧಿಕರಣ ೨೦೧೩
- ಇಹಪರ ಹಾದಿ ೨೦೧೩
ಸಂಪಾದಿತ ಕೃತಿಗಳು
ಬದಲಾಯಿಸಿ- ತುಳು ಕಬಿತಗಳು ೧೯೯೬
- ತಿಬಾರ ಉಳ್ಳಾಯ ಕೊಡಮಂದಾಯ ಮತ್ತು ಪರಿವಾರ ದೈವಗಳು ೨೦೧೦
- ಯಕ್ಷ ಸಿರಿ ೨೦೧೨
- ಯಕ್ಷ ಮುಡಿ ೨೦೧೨
- ಭೂತಾರಾಧನೆಯ ಬಣ್ಣಗಾರಿಕೆ ೨೦೦೧
- ಪುಟ್ಟು ಬಳಕೆಯ ಪಾಡ್ದನಗಳು ೨೦೦೪ [೧]
- ಅಯನ ೨೦೧೩
- ಯಕ್ಷ್ಹಕೇದಗೆ ೨೦೧೩
- ಕೋಟಶಿವರಾಮ ಕಾರಂತರು ಚಿಂತನೆ ಮತ್ತು ಪ್ರಯೋಗ ೨೦೧೨
- ನುಡಿ ಒಸಗೆ ೨೦೦೫
- ಬಂಟಐಸಿರೊ ೨೦೧೨
ಸಾಧನೆಗಳು
ಬದಲಾಯಿಸಿ- ತುಳು ಐಸಿರಿ(ರಿ), ಮಂಗಳೂರು -ತುಳು ಭಾಷೆ -ಸಾಹಿತ್ಯ-ಸಂಸ್ಕೃತಿ ಅಭಿವೃಧ್ದಿ ಕೂಟದಲ್ಲಿ ೨೦೦೯-೨೦೧೨ರ ವರೆಗೆ ಕಾರ್ಯದರ್ಶಿಯಾಗಿ, ೨೦೧೨ರಿಂದ ಅಧ್ಯೆಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ
- ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘ ಮಂಗಳೂರು : ಅಜೀವ ಸದಸ್ಯತ್ವ
- ಕರ್ನಾಟಕ ಲೇಖಕಿ ಮತ್ತು ವಾಚಕಿಯರ ಸಂಘ ಬೆಂಗಳೂರು : ಅಜೀವ ಸದಸ್ಯತ್ವ
- ಭಾರತಿಯರ ಭಾಷಾ ಜಾನಪದ ಸರ್ವೆಕ್ಷಣಾ ಕೇಂದ್ರ, ಭದ್ರಾವತಿ : ಅಜೀವ ಸದಸ್ಯತ್ವ
- ಜಾಗೃತಿ ಚಿಂತನ ವೇದಿಕೆ(ಅಜೀವ ಸದಸ್ಯತ್ವ)
- ವಿಶ್ವ ನುಡಿಸಿರಿ
- ಅಚಲ ಪತ್ರಿಕೆ,ಬೆಂಗಳೂರು : (ಅಜೀವ ಸದಸ್ಯತ್ವ)
ಪ್ರಶಸ್ತಿಗಳು/ಸನ್ಮಾನ
ಬದಲಾಯಿಸಿ- ಭೂತಾರಾಧನೆಯ ಬಣ್ಣಗಾರಿಕೆ ೨೦೦೧ ಈ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ೨೦೦೧ನೇ ಸಾಲಿನ ಪುಸ್ತಕ ಬಹುಮಾನ ದೊರೆತಿವೆ
- ಯುವ ಸಾಧಕ ಸನ್ಮಾನ ಹಿಂದೂ ಧಾರ್ಮಿಕ ಸಮಿತಿ, ಹರೇಕಳ