ಸದಸ್ಯ:Roshnidsilva/sandbox
ಪಶ್ಛಿಮ ಘಟ್ಟಗಳು
ಮಂಗಳೂರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಪ್ರಯಣಿಸುವಾಗ ನಾವು ಈ ಎರಡು ಘಟ್ಟ ಪ್ರದೇಶವನ್ನು ದಾಟಿ ಹೋಗಬೇಕು
ಮೊದಲನೆಯದಾಗಿ ಶಿರಾಡಿ ಘಾಟ್ ಇದು ಮಂಗಳೂರಿನಿಂದ ಬಿ.ಸಿ. ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ ಮಾರ್ಗವಾಗಿ ಹೊಗುತ್ತದೆ. ನೆಲ್ಯಾಡಿಯಿಂದ ಸುಮಾರು ೧೦ ಕೀ.ಮೀ ಹೋದಂತೆ ಆಕಾಶಕ್ಕೆ ಎಲೆ,ಕೊಂಬೆ,ರೆಂಬೆಗಳು ಮುಸುಕಿದ ವಾತವರಣ, ತಂಪನೆಯ ಗಾಳಿ, ಸ್ವಚಂದವಾದ ಹಸಿರು ಬಣ್ಣದ ಹುಲ್ಲುಗಾವಲು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಗುಡ್ಡ-ಬೆಟ್ಟಗಳ ಸಾಲುಗಳನ್ನು ಕೊರೆದು ಅಂಕು-ಡೊಂಕಾದ ರಸ್ತೆಯಲ್ಲಿ ವಾಹನಗಳು ಸಾಲು ಸಾಲಾಗಿ ನಿಶಬ್ದವಾಗಿ ಸಾಗುತ್ತವೆ.
ರಸ್ತೆಯುದ್ದಕ್ಕೂ ಅಲ್ಲಲ್ಲಿ ಹರಿಯುವ ಝರಿಗಳು, ರಸ್ತೆಯ ಎಡಬದಿಯಿಂದ ಬಲಬದಿಗೆ ಇರುವ ಮರದ ಬಳ್ಳಿಗಳು ಒಂದಕ್ಕೊಂದು ಅಂಟಿ ಕೊಂಡಂತೆ ಕಾಣುತ್ತದೆ, ವಾಹನದಿಂದ ರಸ್ತೆಗಿಳಿದು ಮೇಲೆ ನೋಡಿದಾಗ ಅಬ್ಬಾ!!! ಎಂದು ಅನಿಸುವಂತ ಪರ್ವತದ ಶ್ರೇಣಿ ಬದಿಗೆ ಹೋಗಿ ಕೆಳಗೆ ನೋಡಿದಾಗ ಅಯ್ಯೋ!! ಅನಿಸುವಂತ ಪಾತಾಳ