ಸದಸ್ಯ:Roopesh Kumar RB/sandbox
ದತ್ತಾಂಶ ಪ್ರಸರಣ ವ್ಯವಸ್ಥೆಗಳು IMF ದತ್ತಾಂಶ ಪ್ರಸರಣ ವ್ಯವಸ್ಥೆಗಳಲ್ಲಿ ಭಾಗಿಯಾದವರು:
1995ನೇ ಇಸವಿಯಲ್ಲಿ, IMFನ ಸದಸ್ಯ ರಾಷ್ಟ್ರಗಳು ತಮ್ಮ ಆರ್ಥಿಕ ಹಾಗೂ ಹಣಕಾಸಿನ ದತ್ತಾಂಶಗಳನ್ನು ಸಾರ್ವಜನಿಕರಿಗೆ ತಿಳಿಸಲು ನಿರ್ದೇಶನ ಮಾಡುವತ್ತ ಗಮನಹರಿಸುವಂತೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು ದತ್ತಾಂಶ ಪ್ರಸರಣ ವ್ಯವಸ್ಥೆಯ ಮಾನದಂಡಗಳನ್ನು ರೂಪಿಸುವತ್ತ ಕಾರ್ಯ ಪ್ರವೃತ್ತವಾಯಿತು. ದಿ ಇಂಟರ್‌ನ್ಯಾಷನಲ್ ಮಾನಿಟರಿ ಅಂಡ್ ಫೈನಾನ್ಷಿಯಲ್ ಕಮಿಟಿಯು (IMFC) ಪ್ರಸರಣ ಮಾನಕಗಳ ಮಾರ್ಗದರ್ಶನ ಸೂತ್ರಗಳಿಗೆ ಅನುಮೋದನೆ ನೀಡಿದ್ದು ಅವುಗಳನ್ನು ಎರಡು ಶ್ರೇಣಿಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ: ಸಾಮಾನ್ಯ ದತ್ತಾಂಶ ಪ್ರಸರಣ ವ್ಯವಸ್ಥೆ (GDDS) ಹಾಗೂ ವಿಶೇಷ ದತ್ತಾಂಶ ಪ್ರಸರಣ ವ್ಯವಸ್ಥಾ ಮಾನಕ (SDDS). ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಕಾರ್ಯನಿರ್ವಾಹಕ ಮಂಡಳಿಯು SDDS ಹಾಗೂ GDDSಗಳಿಗೆ 1996ನೇ ಇಸವಿ ಹಾಗೂ 1997ನೇ ಇಸವಿಯಲ್ಲಿ ಅನುಕ್ರಮವಾಗಿ ಅನುಮೋದನೆ ನೀಡಿತು ಹಾಗೂ ಸಾಕಷ್ಟು ಸುಧಾರಣೆಗಳನ್ನು ತಂದಿದ್ದು ಅವುಗಳನ್ನು ಪರಿಷ್ಕರಣೆ ಮಾಡಿ “ಗೈಡ್ ಟು ಜನರಲ್ ಡಾಟಾ ಡಿಸೆಮಿನೇಷನ್ ಸಿಸ್ಟಮ್” ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಈ ವ್ಯವಸ್ಥೆಯನ್ನು ಪ್ರಮುಖವಾಗಿ ದೇಶದಲ್ಲಿರುವ ಸಂಖ್ಯಾಶಾಸ್ತ್ರಜ್ಞರನ್ನು ಹಾಗೂ ಸಂಖ್ಯಾಶಾಸ್ತ್ರದ ವ್ಯವಸ್ಥೆಗಳನ್ನು ಗಮನದಲ್ಲಿ ಇರಿಸಿಕೊಂಡು ಮಾಡಲಾಗಿದೆ. ಇವುಗಳು ವಿಶ್ವ ಬ್ಯಾಂಕ್ ಶತಮಾನದ ಅಭಿವೃದ್ಧಿ ಕಾರ್ಯ ಯೋಜನೆ ಹಾಗೂ ಬಡತನ ಕಡಿಮೆ ಮಾಡುವ ಯೋಜನೆಗಳ ಭಾಗವೇ ಆಗಿದೆ. IMF ತನ್ನ ಸದಸ್ಯ ರಾಷ್ಟ್ರಗಳು ಅಲ್ಲಿನ ಆರ್ಥಿಕ ಹಾಗೂ ಹಣಕಾಸಿನ ದತ್ತಾಂಶಗಳನ್ನು ಸಾರ್ವಜನಿಕರಿಗೆ ಸಿಗುವಂತೆ ಮಾಡಲು ಒಂದು ವ್ಯವಸ್ಥೆಯಡಿಯಲ್ಲಿ ಸಾಗುವಂತೆ ಮಾರ್ಗದರ್ಶನಗಳನ್ನು ನೀಡಿ ಮಾನಕಗಳನ್ನು ಸ್ಥಾಪಿಸಿದೆ. ಪ್ರಸ್ತುತವಾಗಿ ಅವುಗಳಲ್ಲಿ ಎರಡು ವ್ಯವಸ್ಥೆಗಳಿವೆ: ಅಂತರರಾಷ್ಟ್ರೀಯ ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶಿಸುತ್ತಿರುವ ಅಥವಾ ಈಗಾಗಲೇ ಪ್ರವೇಶಿಸಿರುವ ತನ್ನ ಸದಸ್ಯ ರಾಷ್ಟ್ರಗಳಿಗೆ ಸಾಮಾನ್ಯ ದತ್ತಾಂಶ ಪ್ರಸರಣ ವ್ಯವಸ್ಥೆ (GDDS) ಹಾಗೂ ಇದರ ಮತ್ತೊಂದು ಭಾಗವಾದ ವಿಶೇಷ ದತ್ತಾಂಶ ಪ್ರಸರಣ ವ್ಯವಸ್ಥೆ (SDDS) ಎಂಬುವೇ ಆ ಎರಡು ವ್ಯವಸ್ಥೆಗಳು. ಸದಸ್ಯ ರಾಷ್ಟ್ರಗಳು ದತ್ತಾಂಶಗಳ ಗುಣಮಟ್ಟವನ್ನು ಹಾಗೂ ಅಂಕಿಅಂಶಗಳ ಬೆಳೆಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವ ಚೌಕಟ್ಟನ್ನು ನಿರ್ಮಿಸುವಂತೆ ಮಾಡುವುದೇ IMF ಸ್ಥಾಪಿಸಿದ GDDSನ ಮೂಲ ಉದ್ದೇಶವಾಗಿದೆ. ಇದರೊಂದಿಗೆ ಇವುಗಳಲ್ಲಿ ಪ್ರಸ್ತುತ ಇರುವ ಅಂಕಿಅಂಶಗಳ ಸಂಗ್ರಹಣಾ ವಿಧಾನಗಳು ಹಾಗೂ ಅವುಗಳನ್ನು ಸಬಲಗೊಳಿಸುವ ಯೋಜನೆಗಳನ್ನು ತಿಳಿಸುವ ಅಪರದತ್ತವನ್ನು ರೂಪಿಸುವುದೂ ಸೇರಿದೆ. ಈ ಚೌಕಟ್ಟನ್ನು ನಿರ್ಮಿಸುವ ಸಂದರ್ಭದಲ್ಲಿ, ಒಂದು ರಾಷ್ಟ್ರ ತನ್ನ ಹಣಕಾಸಿನ ಹಾಗೂ ಆರ್ಥಿಕ ದತ್ತಾಂಶಗಳ ಸಕಾಲಿಕತೆ, ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ಗ್ರಾಹ್ಯತೆಯಂತಹ ಪ್ರಮುಖವಾದವುಗಳನ್ನು ನಿರ್ಧರಿಸಿ ತನ್ನು ಹೆಚ್ಚಿಸಲು ಸಾಂಖ್ಯಿಕ ಮೌಲ್ಯವನ್ನು ನಿರ್ಧರಿಸುತ್ತದೆ. ಕೆಲವು ರಾಷ್ಟ್ರಗಳು ಪ್ರಾಥಮಿಕವಾಗಿ GDDSಅನ್ನು ಬಳಕೆ ಮಾಡಿದರೂ, ನಂತರದಲ್ಲಿ ಮುಂದುವರಿದಂತೆ SDDSಯನ್ನು ಬಳಸಿಕೊಳ್ಳುತ್ತಿವೆ. IMF ಸದಸ್ಯರಲ್ಲದ ಕೆಲವು ರಾಷ್ಟ್ರಗಳೂ ಸಹ ಈ ವ್ಯವಸ್ಥೆಗೆ ಅಂಕಿಅಂಶಗಳ ದತ್ತಾಂಶಗಳನ್ನು ನೀಡಿವೆ: