ಲಿಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ ಬೆಟ್ಟ್ಟ್ಟ ಬಲ್ಲತ್ತೆಂದಡೆ ಉಳಿಯ ಮೊನೆಯಲ್ಲಿ

ಬಡತನವಿದ್ದಡೆ  ಒಡೆಯದೆ

ಘನ ಶಿವಭಕ್ತರಿಗೆ ಬಡತನವಿಲ್ಲ ಸತ್ಯ್ಯರಿಗೆ ದುಷ್ಕರ್ಮವಿಲ್ಲ ಆರ ಹಂಗಿಲ್ಲ ಮಾರಯ್ಯ ಎಂದು-''''Bold text'

ತಾವೂ ಉಂಡು, ಮೊದಲು ದಾಸೋಹವನ್ನು ಮಾಡುವ ಲಕ್ಕಮ್ಮನ ಶ್ರೀಮಂತಿಕೆಯನ್ನು ತೋರಿಸುತ್ತದೆ. ಮುಂದೆ ಆಸೆತಯಿಂದ ಕಾಯಕಕ್ಕಿಳಿದ ಗಂಡನನ್ನು ಈ ಸರಿಯಾದ ದಾರಿಗೆ ಎಳೆತಂದು ಆಕೆಯ ಎದೆಗಾರಿಕೆ ಹಾಗೂ ಶಿವಲೋಕದ ಸ್ವರ್ಗದ ಭ್ರಮೆಯನ್ನು ಹೊಂದಿದ್ದ ಪತಿಗೆ ಮಾಡುವ ಕಾಯಕದಲ್ಲೇ ಕೈಲಾಸ, ಸ್ವರ್ಗವಿದೆ ಎಂದು ತೋರಿಸಿದಳು. ಅದೇ ಅಮರೇಶ್ವರ ಲಿಂಗದ ನಿವಾಸವೆಂದು ಹೇಳುತ್ತಾಳೆ. ತಾನು ಇದನ್ನು ಮಾಡಿದ, ಪರರಿಗೆ ನೀಡಿದೆನೆಂಬ ಭ್ರಾಂತಿಗೆ ಭ್ರಮೆಗೆ ಒಳಗಾಗಿ ಇದ್ದಿಹೆನೆಂಬ ಕಾಯಕದ ಅರುಕೆ ಹಿಂಗಿತ್ತೆ, ನಾ ಮಾಡಿದೆನೆಂಬ ತವಕ, ಆತಂಕ ಹಿಂಗಿತ್ತೆ ಉಭಯದ ಕೈಕೂಲಿ ಹಿಂಗಿ ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ಆಲಸಿಕೆಯಾಯಿತು ಎಂದು ತಿಳಿಸುತ್ತಾ ವೈಚಾರಿಕತೆ, ಅಂತರಂಗದ ಪರಿಶೀಲನೆ ಆರ್ಥಿಕ ಸಮಾನತೆ ಹಾಗು ಸ್ವತಂತ್ರ ಮನೋಭಾವಗಳು ಲಕ್ಕಮ್ಮನ ವಚನಗಳಲ್ಲಿ ಗುರುತಿಸಬಹುದು.

ಒಮ್ಮೆ ಬಸವಣ್ಣನವರ ಮಹಾಮನೆಯ ಅನುಭವ ಗೋಷ್ಠಿಯಲ್ಲಿ ಶರಣರು ಓಲಾಡುತ್ತಿರುವ ಸಂದರ್ಭದಲ್ಲಿ ಲಕ್ಕಮ್ಮ ತನ್ನ ಪತಿಗೆ ಲಷದ ಮೇಲೆ ತೊಂಬತ್ತಾರು ಸಾವಿರ ಜಂಗಮಾರ್ಯರಿಗೆ ಅಮರೇಶ್ವರ ಲಿಂಗದ ಮನೆಗೆ ಭಿನ್ನಹ ಮಾಡುವಳು.

ಬಸವಣ್ಣ ಚನ್ನಬಸವಣ್ಣ ಪ್ರಭುದೇವ ನೇಮ, ನಿತ್ಯಕೃತ್ಯ ಸಕಲ ಸಮೂಹ ನಿತ್ಯ ನೇಮದ ಜಂಗಮ ಭಕ್ತರು ಗಣಂಗಳು ಮುಂತಾದ ಸಮೂಹ ಸಂಪದಕ್ಕೆ ನೇವೇದ್ಯಕ್ಕೆ ವೇಳೆ ಎಂದು ಹೇಳಿ ಬಾ-

ಎಂದು ಗಂಡನಿಗೆ ಹೇಳಲು, ಮಾರಯ್ಯನು ಶಿವಶಿವ ನಾನೆತ್ತ ನಿತ್ಯನೇಮ ವೃತ ಶೀಲ ಸಂಪನ್ನಗಳಿಗೆ ಅವರವರ ನೇಮಗಳ ಸಲಹುವರೆಮಗಳಿವೆ? ನಾವು ನಿರ್ಧನಿಕರು ಬಸವಣ್ಣ, ಚನ್ನಬಸವಣ್ಣ, ಪ್ರಭುದೇವರು ಮುಂತಾದ ಅಸಂಖ್ಯಾತ ಮಹಾಗಣಂಗಳಿಗೆ ತೃಪ್ತಿ ಪಡಿಸಲು ನಮಗೆ ಶಕ್ಯವೆ ಎಂದು ಭಯಗೊಂಡಾಗ, ಲಕ್ಕಮ್ಮ ಶಿವಭಕ್ತರಿಗೆ ಶಿವ ಕರುಣೆ ಇರುವುದರಿಂದ ಶುದ್ಧ ಮನಸ್ಸಿನಿಂದ ಕಾಯಕ ಮಾಡುವಾಗ ಲಷ್ಮಿಯು ತಾನಾಗಿ ಬರುವಳು.

ಆವಾರಿಯೆಂದು ಮಾಡುವಲ್ಲಿ ಆವರಿವರೆಂದು ಪ್ರಮಾಣಿಸಲುಂಟೆ ಸಮಯಕ್ಕೆ ಹೋಗಿ ಸಮಯವನರಿರೆಂದು ಭವಗೆಡಲುಂಟೆ? ಭವಜ್ನನಾದಡೆ ಭಾವನರುದಲ್ಲಿ ಶುಚಿಯಾಗಿರಬಲ್ಲದೆ .

ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವನ್ನು ಹೊಂದುವಭಾವ ಎಂದು ಅರಿವು ಮೂಡಿಸಲು ಮಾರಯ್ಯನು ಬಸವಾದಿ ಶ್ರೀಮದಲ್ಲಮಪ್ರಭು ಮುಂತಾದ ಅಸಂಖ್ಯಾತ ಶರಣರನ್ನೊಳಗೊಂಡು ಸತ್ಯವೆಂಬ ಪಟ್ಟಿಯಲ್ಲಿ ಶುದ್ಧ ಚಿತ್ತವೆನ್ನುವ ವಿಭೂತಿಯನ್ನು ಬೈಚಿಟ್ಟ ಸಕಲ ಸಂಪದ ಪ್ರಮಥರು ಅಮರೇಶ್ವರ ಲಿಂಗದ ಆಶ್ರಯದಲ್ಲಿ ಪ್ರಸಾದವನ್ನು ತೆಗೆದುಕೊಳ್ಳುವಂತೆ ಭಿನ್ನವಿಸಿಕೊಂಡಾಗ ಬಸವಣ್ಣನವರು -

ಅಲ್ಲಾ ಎನಲುಬಾರದು ಅಹುದೆನಲುಬಾರದು ಕೂಡಲ ಸಂಗನ ಶರಣರ ಸಂಗ ಕರಗಸದ ಭಾಯ ಧಾರೆಯಂತೆ ಅರಿಬಿರಿದಯ್ಯ -

ಎಂದು ಅಸಂಖ್ಯಾತ ಶರಣರೊಡನೆ ಆಯ್ದಕ್ಕಿ ದಂಪತಿಗಳ ಮನೆಯನ್ನು ಪ್ರವೇಶಿಸಲು...

ಆಕಾಶವ ಮೀರುವ ತರುಗಿರಿಗಳುಂಟೆ ಪ್ರತಿದೃಷ್ಟಿಯಾಗಿ ಮಾಡಬಲ್ಲಡೆ ಅದೆಮಾಟ ಕೂಡಲ ಸಂಗಮ ದೇವರ ಕೂಡುವಕೂಟ-

ಎಂದು ಹಾರೈಯಿಸುತ್ತ ಪಾದಾರ್ಚನೆ ಮಾಡಿದ ಶಿವಶರಣರಿಗೆಲ್ಲಾ ಲಕ್ಕಮ್ಮನು ಫೋಡ ಶೋಪಚಾರವನ್ನು ಮಾಡಿ ಶರಣರ ಮನದ ನೇಮಗಳಂತೆ ಷಡ್ರುಚಿಯನ್ನು ಮಾಡಲು ಎಲ್ಲಾ ಗಣಂಗಳು ತೃಪ್ತಿ ಪಡಲು ಪ್ರಭುದೇವರು ಆಶ್ಚರ್ಯದಿಂದ....

ಆಕಾರನೇಮಕ್ಕೆ ಸಂದಿತ್ತು ಇಚ್ಛಾ ಬೋಜನಕ್ಕೆ ಕೃತ್ಯವಾಯಿತು ಮನ ಘನದೊದನ ಕಂಡೆಯಾ ಸಂಗನ ಬಸವಣ್ಣಾ -

ಎಂದು ಹೇಳಲು ಬಸವಣ್ಣನು ಲಕ್ಕಮ್ಮ ಮತ್ತು ಮಾರಯ್ಯನವರ ಹೃದಯ ಸಂಪತ್ತನ್ನು ಕಂಡು ನಮ್ಮ ಶರಣರು ಬಡವರಲ್ಲ .

ಮನೆ ನೋಡಾ ಬಡವರು ಮನ ನೋಡಾ ಸಂಪನ್ನರು ಧನ ನೋಡಾ ಬಡವರು ಘನಮನ ಸಂಪನ್ನರು ಕೂಡಲ ಸಂಗನ ಶರಣರು ಕರುಳಿಲ್ಲದ ಕಲಿಗಳು ಆರಿಗೆ ಉಪಮನಬಹುದು

ಉಪಮಾತೀತರಾದ ಈ ಶರಣದಂಪತಿಗಳು ಬಡತನದಲ್ಲಿ ಶ್ರೀಮಂತಿಕೆಯನ್ನು ಕಂಡವರು ಎನ್ನುತ್ತ ಅಲ್ಲಮ ಪ್ರಭುದೇವರು ತೃಪ್ತಿಯಿಂದ...

ಉಭಯ ದೃಷ್ಟಿ ಹೀನನ ದೃಷ್ಟಿಯಲ್ಲಿ ಕಾಂಬಂತೆ ದಂಪತಿ ಏಕಭಾವವಾಗಿ ನಿಂದಲ್ಲಿ ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತ್ತು ಸಂಗನೆ ಬಸವಣ್ಣ -

ಎಂದು ಬೀಳ್ಕೊಡುವನು.

ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ ಮಾರಯ್ಯಪ್ರಿಯ ಅಮರೇಶ್ವರಲಿಂಗವ ಮುಟ್ಟದ ಭಕ್ತಿ-

ಇಲ್ಲಿ ಲಕ್ಕಮ್ಮನವರು ತೋರುಗಾಣಿಕೆಯ ಭಕ್ತಿಯು ಫಲವಿಲ್ಲದೆ ಹೋಗುವ ಬಗ್ಗೆ ತಿಳಿಸುವಳು. ತೋರುಗಾಣಿಕೆಯಿಂದ ಮಾಡುವ ಭಕ್ತಿಯೂ ಸಂಪತ್ತಿನ ಕೇಡು, ಮಾತನಾಡುವುದೊಂದು ಹಾಗು ನಡೆದುಕೊಳ್ಳುವುದೊಂದು ರೀತಿ, ಬುದ್ಧಿಗೆ ಹಾನಿ ಎಂದರೆ ಯಾರು ಈ ರೀತಿಯಲ್ಲಿ ನಡೆದುಕೊಳ್ಳುವನೋ ಅವನು ಶಿವನ್ನನು ಅರ್ಥ ಮಾಡಿಕೊಳ್ಳಲಾರನು . ಯಾವುದನ್ನೇ ಕೊಡದೆ ತ್ಯಾಗಿ ಎಂದು ಕರೆಸಿಕೊಳ್ಳುವವನನ್ನು ಲಕ್ಕಮ್ಮಳು ಮುಡಿಯಿಲ್ಲದ ಶೃಂಗಾರದ ಹಾಗೆ ಎಂದು ಹೋಲಿಸಿ ಹೇಳಿದ್ದಾಳೆ . ಚಂಚಲ ಮನಸ್ಸಿನ ಭಕ್ತಿಯನ್ನು - ಕೆಳಭಾಗದಲ್ಲಿ ತೂತು ಆದ ಮಡಿಕೆಯಲ್ಲಿ ಒಳ್ಳೆಯ ನೀರು ಅಥವಾ ತೀರ್ಥವು ಹೇಗೆ ಸೋರಿಹೋಗುವುದೋ , ಅದೇ ತರದಲ್ಲಿ ಮನಸ್ಸು ಎಂದು ಹೇಳುವಳು. ಇಂಥ ಭಕ್ತಿಯೂ ಶಿವನ್ನನು ಮುಟ್ಟಲಾರದು ಎಂದು ತಿಳಿಸುವಳು.

ಮನ ಶುದ್ದವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ದದಲ್ಲಿ ಕಾಯಕವ ಮಾಡುವಲ್ಲಿ ಸದ್ಬಕ್ತಂಗೆ ಎತ್ತ ನೋಡಿದಡತ್ತ ಲಕ್ಶ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕ.ರ

ಪರಿಶುದ್ಧಮನಸ್ಸಿನಿಂದ ಸಂಪತ್ತಿನ ಬಡತನವಲ್ಲದೆ, ಶುದ್ಧಮನಸ್ಸಿನಿಂದ ಕೆಲಸವನ್ನು ಮಾಡುತ್ತಾ, ಎಲ್ಲಿ ನೋಡಿದರಲ್ಲಿ ಲಕ್ಶ್ಮಿಯೂ ತಾನಾಗೆ ಒಳ್ಳೆಯ ಭಕ್ತನಿಗೆ ಒಲಿಯುವಳು ಎಂದು ಲಕ್ಕಮ್ಮ ಹೇಳುತ್ತಾಳೆ.


ಹಿನ್ನುಡಿ:- ಆಯ್ದಕ್ಕಿ ಲಕ್ಕಮ್ಮ ಮಾರ್ಗದರ್ಶಿಯಾದರು. ಇವರ ವಚನಗಳಲ್ಲಿ ಶಿವಶರಣರು ರೂಪಿಸಿದ ಕಾಯಕ ಮತ್ತು ದಾಸೋಹ ತತ್ವಗಳನ್ನು ತನ್ನ ಬದುಕಿನ ಮೌಲ್ಯವನ್ನಾಗಿ ಸ್ವೀಕರಿಸಿದ್ದನ್ನು ಕಾಣುತ್ತೇವೆ. ಸಮತಾಭಾವ, ಆತ್ಮವಿಶ್ವಾಸ, ನಿರಾಪೇಷ, ನಿಷ್ಕಾಮ ಭಕ್ತಿಯು ಪ್ರಧಾನವಾಗಿ ಕಂಡು ಬರುತ್ತದೆ. ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎಂದು ನಿರೂಪಿಸಿದ ಶರಣ ದಂಪತಿಗಳು ಬದುಕಿನಲ್ಲಿ ಯಶಸ್ವಿಯನ್ನು ಪಡೆದು ಕೊನೆಗೆ ಕರ್ಪೂರದ ಉರಿಯಲ್ಲಿ ಬೆರೆತರು. ಮಾರಯ್ಯನ ಕಾಯಕ ನಿಷ್ಠೆಯನ್ನು ಬಲಿಸಿದ ಸತಿ ಶಿರೋಮಣಿ ಲಕ್ಕಮ್ಮನೆಂಬುದು ನಮಗಿಲ್ಲಿ ವೇದ್ಯವಾಗುತ್ತದೆ ಎಂಥಹ ಕಾಯಕ ನಿಷ್ಠೆ , ಅದೆಂಥಹ ಪತಿಭಕ್ತಿ ಕಾಯಕಕ್ಕೇನಾದರು ಹೋಲಿಕೆ ಕೊಡಬಯಸಿದರೆ ಅಗ್ರಸ್ಥಾನದಲ್ಲಿ ಕಂಗೊಳಿಪ ಲಕ್ಕಮ್ಮನನ್ನು ಮೊದಲಿಗೆ ಸೂಚಿಸ ಬಯಸುತ್ತಾರೆ. ಪತಿ ಮಾರಯ್ಯನಿಗೆ ನಿಜ ಕೈಲಾಸ ಮಾರ್ಗ ತೋರಿದ ಸತಿ ಶಿರೋಮಣಿಯೇ ಲಕ್ಕಮ್ಮ.--Roopal.1994 (talk) ೧೮:೩೧, ೨೭ ಜನವರಿ ೨೦೧೪ (UTC)