ಸದಸ್ಯ:Rohith kashi/ನನ್ನ ಪ್ರಯೋಗಪುಟ/1
ವೆರಾ ಬ್ರಿಟ್ಟೈನ್ ರವರು ಒಬ್ಬ ಅಂಗ್ಲ ವಾಲೆಂಟರಿ ಐಡ್ ಡಿಟ್ಟೇಚ್ಮೆಂಟ್(ವಿ.ಎ.ಡಿ) ನಲ್ಲಿ ಶುಶ್ರೂಷೆಕಾರರು,ಬರಹಗಾರರು,ಸ್ತ್ರಿವಾದಿ ಮತ್ತು ಶಾಂತಿಪ್ರಿಯರು ಆಗಿದ್ದರು.
ಜೀವನ
ಬದಲಾಯಿಸಿವೆರಾ ಬ್ರಿಟ್ಟೈನ್ ರವರು ೨೯ ಡಿಸೆಂಬರ್ ೧೮೯೩ ರಂದು ಇಂಗ್ಲ್ಂಡಿನ ಸ್ಟೆಫ಼ೊರ್ಡ್ ಸೈರ್ ನ ನ್ಯೂ ಕ್ಯಾಸಲ ಅಂಡರ್ ಲೈಮ್ ಎಂಬಲ್ಲಿ ಜನಿಸಿದರು.ಬ್ರಿಟ್ಟೈನ್ ರವರು ಥಾಮಸ್ ಅರ್ಥುರ್ ಬ್ರಿಟ್ಟೈನ್ (೧೮೬೪-೧೯೩೫) ಹಾಗೂ ಇದಿಥ್ ಬೆರವೊನ್ ಬ್ರಿಟ್ಟೈನ್(೧೮೬೮-೧೯೪೮) ರವರ ಪುತ್ರಿ. ಇವರು ನ್ಯೂ ಕ್ಯಾಸ್ತಲ್ ಅಂಡರ್ ಲೈಮ್ ನಲ್ಲಿ ಜನಿಸಿದರು.ಇವರು ವೆಲ್ ಟು ಡು ಕುಟುಂಬದ ಪುತ್ರಿಯಾಗಿ ಜನಿಸಿದರು. ಇವರ ಕುಟುಂಬವು ಕಾಗದದ ಕಾರ್ಖಾನೆಯಿಂದ ಪ್ರಸಿದ್ಧವನ್ನು ಹೊಂದಿತ್ತು.ಇದರೊಂದಿಗೆ ಇವರ ತಮ್ಮ ಇವರಿಗೆ ತುಂಬಾ ಒಳ್ಳೆಯ ಒಡನಾಡಿಯಾಗಿದ್ದ. ಇವರಿಗೆ ೧೮ ತಿಂಗಳು ಇರುವಾಗಲೆ ಇವರ ತಂದೆಯವರು ವಲಸೆಹೋಗಲು ನಿರ್ಧರಿಸಿ ಅವರು ಕುಟುಂಬದ ಸಮೇತ ಮೆಕ್ಕ್ಲೆಸ್ಫೀಲ್ಡ್ ಎಂಬ ಸ್ಥಳಕ್ಕೆ ಹೊರಟರು, ಮತ್ತೆ ಇವರ ೧೧ನೇ ವಯಸ್ಸಿನಲ್ಲಿದ್ದಾಗ ಡರ್ಬಿಶೈರ್ ನ ಬುಕ್ಸ್ಟೊನ್ ಎಂಬ ಪಟ್ಟಣಕ್ಕೆ ಹೊರಟರು. ಇವರು ತಮ್ಮ ೧೩ನೇ ವಯಸ್ಸಿನಲ್ಲಿದ್ದಾಗ ಸಂತ ಮೊನಿಕಾಸ್ ಕಿಂಗ್ಸ್ವುಡ್ ಎಂಬ ವಸತಿ ಶಾಲೆಗೆ ದಾಖಲಾದರು, ಇವರ ಚಿಕ್ಕಮ್ಮ ಆ ಶಾಲೆಯ ಪ್ರಾಂಶುಪಾಲರಾಗಿದ್ದರಿಂದ ಇವರು ಅದೇ ಶಾಲೆಗೆ ಸೇರಿದ್ದರು.
ವೆರಾ ರವರು ತಮ್ಮ ತಂದೆಯ ಮಾತನ್ನು ಕೇಳದೆ ಅವರ ಕಟ್ಟುಪಾಡುಗಳನ್ನು ಮೀರಿ ತಾನು ಆಂಗ್ಲ ಸಾಹಿತ್ಯವನ್ನು ಅಕ್ಸ್ಫರ್ಡ್ನ ಸೋಮರ್ ವಿಲ್ಲ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಒಂದು ವರ್ಷ ವ್ಯಾಸಂಗ ಮುಂದೂಡಿಸಿನಮ್ತರ ೧೯೧೫ರ ಬೇಸಿಗೆಯಲ್ಲಿ ವಾಲೆಂಟರಿ ಐಡ್ ಡಿಟೇಚ್ಮೆಂಟ್ (ವಿ ಎ ಡಿ) ಯಲ್ಲಿ ಶುಶ್ರೂಷಕರಾಗಿ, ಮೊದಲನೇಯ ಪ್ರಪಂಚ ಯುಧದಲ್ಲಿ ಮೊದಲು ಬುಕ್ಸನ್ ನಂತರ ಲಂಡನ್,ಮಾಲ್ಪಾ ಮತ್ತು ಪ್ರಾನ್ಸ್ ಗಳಲ್ಲಿ ಕಾರ್ಯ ನಿರ್ವಹಿಸಿದರು. ವೆರಾ ರವರನ್ನು ನಿಶ್ಚಿತ ವರ ರೋಲೆಂಡ್ ಲೈಟನ್ ಮತ್ತು ಆಪ್ತಸ್ನೇಹಿತ ವಿಕ್ಟರ್ ರಿಚಾರ್ಡ್ಸನ್ ಮತ್ತು ಜಫೂರಿ ತುರ್ಲೊ ಮತ್ತು ಅವರ ತಮ್ಮನಾದ ಎಡ್ವರ್ಡ್ ಬ್ರಿಟೆನ್ ರವರು ಹುದ್ದದಲ್ಲಿ ಪ್ರಾಣವನ್ನು ಕಳೆದುಕೊಂಡರು.
೧೯೨೫ರಲ್ಲಿ ವೆರಾ ರವರು ಜಾರ್ಜ್ ಕ್ಯಾಟ್ಲಿನ್ ರವರನ್ನು ಮದುವೆಯಾದರು ಇವರು ರಾಜಕೀಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳು, ಒಬ್ಬ ಮಗ ಮತ್ತು ಒಬ್ಬಳು ಮಗಳು. ಮಗ ಜಾನ್ ಬ್ರಿಟೆನ್ ಕ್ಯಾಟ್ಲಿನ್ (೧೯೨೭ - ೧೯೮೭) ಒಬ್ಬ ಕಲಾವಿದ ವರ್ಣಚಿತ್ರಕಾರ ,ವ್ಯಾಪಾರಿ ಹಾಗೂ ತಮ್ಮ ಸ್ವಯಂ ಜೀವನಚರಿತ್ರೆಯ (ಪ್ಯಾಮಿಲಿ ಕ್ವಾರ್ಕೆಟ್) ಲೇಖಕರು ಆಗಿದ್ದರು. ಇವರ ಮಗಳು ಶಿರ್ಲಿ ವಿಲ್ಲಿಯಮ್ಸ್, ಮಾಜಿ ಕಾರ್ಮಿಕ ಕ್ಯಬಿನೆಟ್ ಸಚೀವರಾಗಿಗಿದ್ದರು ಈಗ ಲಿಬರಲ್ ಡೆಮೊಕ್ರೆಟ್ ಪೀರ್ ಎಂಬ ಪಧವಿಯಲ್ಲಿದ್ದರೆ.ವೆರಾ ಬ್ರಿಟ್ಟೈನ್ ರವರು ೨೯ ಮಾರ್ಚ್ ೧೯೭೦(ವಯಸ್ಸು-೭೬ ವರುಷ) ರಂದು ಇಂಗ್ಲ್ಂಡಿನ ಲಂಡನ್ ನ ವಿಂಬಲ್ಡನ್ ನಲ್ಲಿ ಮರಣ ಹೊಂದಿದರು.
ಸಾಹಿತ್ಯ ಕೊಡುಗೆಗಳು
ಬದಲಾಯಿಸಿವೆರಾ ರವರ ಮೊದಲ ಕಾದಂಬರಿಯಾಗಿ ದ ಡಾರ್ಕ್ ಟೈಡ್(೧೯೨೩) ಅನ್ನು ಪ್ರಕಟಿಸಿದರು ಆದರೆ ಈ ಕಾದಂಬರಿಯ ಮೇಲೆ ಹಗರಣ ಉಂಟಾಯಿತು. ಇದಾದ ನಂತರ ೧೯೩೦ರಲ್ಲಿ ವೆರಾ ರವರ ಟೆಸ್ಟಾಮೆಂಟ್ ಆಫ್ ಯೂಥ್ ಎಮ್ಬ ಕಾದಂಬರಿಯಿಂದ ಖ್ಯಾತಿಯನ್ನು ಪಡೆದರು. ಇದಾದ ನಂತರ ಟೆಸ್ಟಾಮೆಂಟ್ ಆಫ್ ಫ್ರೆಂಡ್ಶಿಪ್ ಅನ್ನು ೧೯೪೦ರಲ್ಲಿ ಪ್ರಕಟಿಸಿದರು,ಅದರೊಂದಿಗೆ ವಿನಿಫ್ರೆಡ್ ಹೋಲ್ಟ್ ಬೈ ರವರ ಜೀವನ ಚರಿತ್ರೆಯನ್ನು ಬರೆದರು ಮತ್ತು ಟೆಸ್ಟಾಮೆಂತ್ ಆಫ್ ಎಕ್ಸ್ಪೆರಿಎನ್ಸ್ ಎಂಬ ಕೃತಿ ೧೯೫೭ರಲ್ಲಿ ಪ್ರಕಟವಾಯಿತು.ಇವರ ಮುಂದುವರೆದ ಸ್ವಂತ ಕಥೆ ೧೯೨೫ ರಿಂದ ೧೯೫೦ರ ವರೆಗಿನದ್ದು. ಇವರು ಈ ಕಥೆಯನ್ನು ತನ್ನ ಹೃದಯಾಂತರಾಳದಿಂದ, ತಮ್ಮ ಪುರಾತನ ಕಾದಂಬರಿಗಳ ಆಧಾರದಿಂದ, ನಿಜವಾದ ಅನುಭವ ಹಾಗೂ ನಿಜವಾದ ಜನರನ್ನು ಉದ್ದೇಶಿಸಿ ಬರೆದಿದ್ದರೆ. ಇದನ್ನು ಪರಿಗನಿಸಿ ತಮ್ಮ ಕಾದಂಬರಿ ಹೊನರೆಬಲ್ ಎಸ್ಟೇಟ್ ಎಂಬುದು ೧೯೩೬ರಲ್ಲಿ ಪ್ರಕಟವಾಗಿದೆ, ಇದರಲ್ಲಿ ತಮ್ಮ ಆತ್ಮಕಥೆ ಹಾಗೂ ಕಾದಂಬರಿಕಾರ ಫಿಲಿಸ್ ಬೆಂಟ್ಲಿ ರವರೊಂದಿಗೆ ವಿಫಲವಾದ ಗೆಳೆತನ ಹಾಗೂ ತಮ್ಮ ಒಡಹುಟ್ಟಿದವನಾದ ಎಡ್ವರ್ಡ್ ನ ಮರಣ ಹಾಗೂ ಇನ್ನು ಮುಂತಾದ ಘಟನೆಗಳನ್ನು ಈ ಪುಸ್ತಕದಲ್ಲಿ ಬರೆದಿದ್ದರೆ. ೧೯೧೩ ರಿಂದ ೧೯೧೭ರ ವರೆಗಿನ ಡೈರಿಗಳನ್ನು ೧೯೮೧ ರಲ್ಲಿ ಕ್ರೊನಿಕಲ್ ಆಫ್ ಯೂಥ್ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದರೆ.ಕೆಲವು ವಿಮರ್ಶಕರು ತಮ್ಮ ಟೆಸ್ಟಾಮೆಂಟ್ ಆಫ್ ಯೂಥ್ ಎಂಬ ಕಾದಂಬರಿಯ ಸಾಹಿತ್ಯ ಬೆರೆ ಪುಸ್ತಕಗಳ ಸಾಹಿತ್ಯಕ್ಕೆ ಹೋಲಿಸಿದರೆ ಹೆಚ್ಚಿನ ವೆತ್ಯಾಸ ಕಂಡು ಬರುತ್ತಿದೆ, ಕಾರಣ ಅವರು ತಮ್ಮ ನೆನಪುಗಳನ್ನು ಪೂರ್ತಿಯಾಗಿ ನಿಯಂತ್ರಿಸುತ್ತಿದ್ದರು.
ಕಾರ್ಯಗಳು
ಬದಲಾಯಿಸಿ೧೯೨೦ರಲ್ಲಿ ಲೀಗ್ ಆಫ್ ನೇಷನ್ ನ ಪರವಾಗಿ ನಿಯಮಿತ ಭಾಷಣಕಾರರಾಗಿದ್ದರು, ಆದರೆ ೧೯೩೦ರ ಜೂನ್ ರಲ್ಲಿ ಅವರಿಗೆ ಪೀಸ್ ರಾಲಿ (ಡಾರ್ಚೆಸ್ಟರ್) ನಲ್ಲಿ ಮಾತನಾಡಲು ಆಹ್ವಾನ ದೊರೆಯಿತು. ಅದೇ ಪೀಸ್ ರಾಲಿಯಲ್ಲಿ ವೆರಾ ರವರಿಹೆ ಡಿಕ್ ಶೆಪ್ಪರ್ಡ್, ಜಾರ್ಜ್ ಲೆನ್ಸ್ ಬರಿ ,ಲಾರೆನ್ಸ್ ಹೌಸ್ ಮನ್ ಮತ್ತು ಡೊನಾಲ್ಡ್ ಸೊಪರ್ ರವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಅವಕಾಶ ದೊರಕಿತು. ನಂತರ ಆ ರಾಲಿಯ ಮೂಲಕವಾಗಿ ಶೆಪ್ಪರ್ಡ್ರವರ ಪೀಸ್ ಪ್ಲೆಡ್ಜ್ ಯೂನಿಯನ್ಗೆ ಆಹ್ವಾನ ದೊರೆಯಿತು. ಇದಾದ ೬ ತಿಂಗಳ ನಂತರ ವೆರಾ ರವರು ಆಂಗ್ಳಿಕನ್ ಪೆಸಿಫಿಸ್ಟ್ ಫೆಲೊಶಿಪ್. ಇವರಲ್ಲಿ ಹೊಸದಾಗಿ ಕಂಡ ಶಾಂತಿಪ್ರೀಯತೆ ೨ನೇ ಪ್ರಪಂಚ ಯುದ್ದದ ಸಂದರ್ಭದಲ್ಲಿ ಜಾರಿಗೆ ಬಂದಿತು, ಆಗ ಅವರು ಲೆಟ್ಟೆರ್ಸ್ ಟೊ ಪೀಸ್ ಲವೆರ್ಸ್ನ ಸರಣಿಯನ್ನು ಪ್ರಾರಂಭಿಸಿದರು.
ವೆರಾ ರವರು ೧೯೩೦ರ ನಂತರ ಶಾಂತಿಯ ಸುದ್ದಿಗಳನ್ನು ಶಾಂತಿಪ್ರಿಯ ಪತ್ರಿಕೆಯಲ್ಲಿ ಬರಲು ನಿಯಮಿತ ಕೊಡುಗೆದಾರು ಆಗಿದ್ದರು. ಅಂತಿಮವಾಗಿ ಇವರು ೧೯೫೦ ಮತ್ತು ೧೯೬೦ರ ದಶಕಗಳಲ್ಲಿ ಪತ್ರಿಕೆಯ ಸಂಪಾದಕೀಯ ಸದಸ್ಯರಲ್ಲಿ ಒಬ್ಬರಾಗಿದ್ದು "ಪರಮಾಣು ನಿರಸ್ತೀಕರಣದ ಅನುಕೂಲವಾಗಿ ವರ್ನಬೇಧ ನೀತಿ ಹಾಗೂ ವಸಾಹತು ಶಾಹಿಯ ಎದುರಾಗಿ ಲೇಖನಗಲನ್ನು ಬರೆದರು".
ವೆರಾ ರವರು ೧೯೬೬ರಲ್ಲಿ ಮಾತನಾಡುವ ನಿಶ್ಚಯದ ಹಾದಿಯಲ್ಲಿರುವಾಗ ಅವರು ಬೆಳಗಿದ ಲಂಡನ್ಬೀದಿಯಲ್ಲಿ ಕೆಟ್ತದಾಗಿ ಬಿದ್ದ ಅನುಭವವಾಗುತ್ತದೆ. ವೆರಾ ರವರು ಎಡ ತೋಳು ಹಾಗೂ ಬಲಗೈನ ಕಿರುಬೆರಳು ಮುರಿದ ಅನುಭವದ ನಂತರ ಇವರ ನಿಶ್ಚಿತವನ್ನು ಪೂರೈಸುತ್ತರೆ. ಈ ರೀತಿಯ ಗಾಯಗಳಿಂದಾಗಿ ವೆರಾ ರವರು ಮಾನಸಿಕ ಹಾಗೂ ದೈಹಿಕವಾಗಿ ಕುಸಿದು ಗೊಂದಲಕ್ಕೊಳಗಾಗುತ್ತರೆ
ವೆರಾ ರವರು ೨೯ ಮಾರ್ಚ್ ೧೯೭೦ ರಲ್ಲಿ ವಿಂಬಲ್ಡನ್ ನಲ್ಲಿ ಮರಣ ಹೊಂದಿದರು.ಇವರ ಕೊನೆಯ ಆಸೆಯು ತಮ್ಮ ಬೂದಿಯನ್ನು ಎಡ್ವರ್ಡ್ನ ಸಮಾದಿಯ ಬಳಿ ಇಡಬೇಕೆಂದು ಕೆಳಿಕೊಳ್ಳುತ್ತಾರೆ. ಅವರ ಸಮಾದಿಯು ಇಟಲಿಯಲ್ಲಿದೆ. [೧] [೨]