ಸದಸ್ಯ:Rohan Biddaiah A B/sandbox
ನನ್ನ ಊರು ಮಡಿಕೇರಿ ನನ್ನ ಹೆಸರು ರೋಹನ್ ಬಿದ್ದೈಃ ಎ.ಬಿ. ನಾನು ಸಂತ ಅಲೋಶಿಎಸ್ ಕಾಲೇಜ್ ನಲ್ಲಿ ವಿಧ್ಯಾಭ್ಯಾಸ ಮಾಡುತಿದ್ದೇನೆ.
ನನ್ನ ಅಪ್ಪನ ಹೆಸರು ಬಿದ್ದೈಃ ಎ.ಏನ್, ಅಮ್ಮ ರೇಖಾ,ತಂಗಿ ಚೆರಿಲ್ .ನನಗೆ ನನ್ನ ಊರು ತುಂಬಾ ಇಷ್ಟ .ಒಳ್ಳೆಯ ಪರಿಸರ ,ಒಳ್ಳೆಯ ಗಾಳಿ ಕೂಡ ದೊರೆಯುತ್ತದೆ . ಮಳೆಗಾಲದಲ್ಲಿ ಒಳ್ಳೆಯ ಮಳೆ ಹೊಡೆಯುತ್ತದೆ ಮತ್ತು ತುಂಬಾ ತಂಪು ಕೂಡ.ನಮ್ಮ ಊರಿನಲ್ಲಿ ಕಾಫಿ ತೋಟಗಳು ಬಹಳ ಹೆಚ್ಚು ,ಹಣ್ಣು - ಹಂಪಲು, ಮರ-ಗಿಡಗಳು ಕೂಡ ತುಂಬಾ ಇವೆ . ಮಂಗಳೂರಿನಲ್ಲಿ ಮಳೆಗಾಲಕ್ಕೆ ರಜೆ ಸಿಗುವುದಿಲ್ಲ ,ಆದರೆ ಇಲ್ಲಿ ೧೦ ದಿನಗಳ ರಜೆ ಸಿಗುತ್ತದೆ. ಮರ ಗಿಡಗಳು ಬಿದ್ದು ವಾಹನಗಳಲ್ಲಿ ಸಂಚರಿಸಲು ತುಂಬಾ ತೊಂದರೆಯಾಗುತ್ತದೆ. ನನಗೆ ಸ್ಯಕಲ್ ಚಲಿಸಲು ತುಂಬಾ ಇಷ್ಟ . ಚಿಕ್ಕ ವಯಸ್ಸಿನಲ್ಲಿ ಇದರೊಡನೆ ಬಹಳೇ ಮೋಜು ಮಾಡಿದ್ದೇವೆ. ಮನೆಯಲ್ಲಿದ್ದರೆ ಸುಮ್ಮನೆ ಸಮಯ ಕಳೆಯುತ್ತೇನೆ. ಕೆಲವೊಮ್ಮೆ ವಿದ್ಯುತ್ ಇಲ್ಲದ ಕಾರಣ ತುಂಬಾ ಉದಾಸೀನವಾಗುತ್ತದೆ. ಅಮ್ಮ ಒಳ್ಳೆಯ ಅಡಿಗೆ ಮಾಡುತ್ತಾಳೆ,ಭಾನುವಾರ ನಾವು ತೋಟಕ್ಕೆ ಹೋಗುತ್ತೇವೆ ಮತ್ತು ಕಿತ್ತಳೆ ಹಣ್ಣು ,ನೇರಳೆ ಹಣ್ಣು ,ಸ್ಸೇಬೆ ಕಾಯಿ ,ಇನ್ನಿತರ ತಿನಿಸುಗಳನ್ನು ತಿನ್ನುತ್ತೇವೆ.
ಈಗ ನಾನು ನನ್ನ ಈಗಿನ ಜೀವನದ ಬಗೆ ಕೆಲವು ಮಾತನ್ನು ಹೇಳಲು ಬಯಸುತ್ತೇನೆ. ನಮ್ಮ ಕಾಲೇಜ್ ತುಂಬ ದೊಡ್ಡದು.ನಮ್ಮ ಕಾಲೇಜ್ನಲ್ಲಿ ಬಹಳ ತರಹದ ಕೋರ್ಸ್ಗಗಳಿವೆ. ತರಗತಿಯ ಕೋಣೆಗಳು ಬಹಳ ದೊಡ್ಡದಾಗಿದ್ದು ನಮಗೆ ಯಾವುದೇ ರೀತಿಯ ತೊಂದರೆ ಆಗುವ ಸಂಶಯವಂತೂ ಇಲ್ಲ. ಶಿಕ್ಷಕರು ಬಹಳ ಒಳ್ಳೆಯ ರೀತಿಯಿಂದ ಪಾಠ ಮಾಡುವುದರಿಂದ ಎಲ್ಲರಿಗೂ ಒಳ್ಳೆಯದಾಗಿ ಅರ್ಥವಾಗುತ್ತದೆ.ಪಾಠದ ಜೊತೆಗೂ ಬೇರೆ ಚಟುವಟಿಕೆಗಳನ್ನೂ ಮಾಡಿಸುವುದರಿಂದ ಪಾಠ ಕೇಳಲು ಬಹಳ ಅನುಕೂಲವಾಗುತ್ತದೆ. ಹಾಸ್ಟೆಲ್ ಕೂಡ ಕಾಲೇಜ್ ಗೆ ಬಹಳ ಪಕ್ಕವಿರುವುದರಿಂದ ಹೋಗಲು ಬರಲು ಕೂಡ ಬಹಳ ಅನುಕೂಲವಾಗುತ್ತದೆ. ಊಟ ಮುಗಿಸಿಕೊಂಡು ೪೦ ನಿಮಿಷಗಳಲ್ಲಿ ಹಿಂದಿರುಗಬಹುದು.ಕಾಲೇಜ್ನಲ್ಲಿ ಎಲ್ಲ ಶಿಕ್ಷಕರು ನಮ್ಮನ್ನು ಗ್ರಂಥಾಲಯಕ್ಕೆ ಹೋಗಲು ಹೇಳುತ್ತಾರೆ,ಆದೆರೆ ನಾನು ಕೆಲವು ಸತಿ ಮಾತ್ರೆ ಹೋಗಿರುವುದು. ಗ್ರಂಥಾಲಯವನ್ನು ನೋಡುವುದು ಕಣ್ಣಿಗೆ ಒಂದು ಸಿಹಿ ನೋಟ ಎಕೆಂದರ ಅಲ್ಲಿ ೧೦ ಸಾವಿರಕ್ಕಿಂತು ಹೆಚ್ಚು ಪುಸ್ತಕಗಳಿವೆ. ತರಗತಿಯ ಹೊರಗಡೆ ತುಂಬಾ ಮರಗಳಿವೆ,ಹಸಿರು ಮರಗಳು ನನಗೆ ಮನೆಯ ನೆನಪು ತರಿಸುತ್ತದೆ. ಯಾವಗಲು ಇದನ್ನು ನೋಡಿದರೆ ಮೈಯೆಲ್ಲ ತಂಪಾಗುತ್ತದೆ. ಹೊಸದಾಗಿ ಈಜುವ ಹೊಲವನ್ನು ಕೂಡ ನಿರ್ಮಿಸುತ್ತಿದ್ಧಾರೆ,ಇದು ಪೂರ್ಣಗೊಂಡ ಮೇಲಂತು ಮಂಗಳೂರಿನ ಒಂದೇ ದೊಡ್ಡ ಈಜುವ ಮೈದಾನವಾಗುತ್ತದೆ.
ಗಾಡಿಗಳನ್ನು ನಿಲ್ಲಿಸಲು ಬಹಳ ಜಾಗವಿದೆ, ಆದರೆ ನನ್ನ ಹತ್ತಿರ ಗಾಡಿ ಅಂತು ಇಲ್ಲ, ಕಾರಣ ಪೋಷಕರು. ವೈ -ಫ್ಯ್ ಸೌಲಭ್ಯ ಕೂಡ ದೊರೆಯುತ್ತದೆ. ನಮಗೆ ಅಂತರ್ಜಾಲವು ಬಹಳ ಕಷ್ಟ ಪಡೆಯದೇ ದೊರಕುತ್ತಿದೆ. ಮಂಗಳೂರಿನಲ್ಲಿ ನಮ್ಮ ಕಾಲೇಜ್ ಬಹಳ ಮಹತ್ವ ಪೂರ್ಣದ್ದು . ತುಂಬಾ ತರಹದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ನಮಗೂ ಕೂಡ ಬಾಗವಹಿಸಬಹುದು,ಸಹಾಯ ಕೂಡ ಮಾಡ ಬಹುದು. ಇದೆಲ್ಲವನ್ನು ವಿವರಿಸುತ್ತಿದ್ದರೆ ನನಗೆ 'ಸಹಾಯ'ದ ನೆನಪು ಬಂತು . ಈ ಯೋಜನೆಯಲ್ಲಿ ನಾವು ಕಾಲೇಜ್ ನ ಹೊರಗಡೆ ಹೋಗಿ ಸಮಾಜ ಸೇವೆ ಮಾಡ ಬೇಕು. ೧೦ ಗಂಟೆಗಳ ಅವಧಿ ಇದಕ್ಕೆ ಪ್ರಯೋಗಿಸಬೇಕು. ಪರೀಕ್ಷೆಗಳು ನಡೆಯುತ್ತಲೇ ಇರುತ್ತದೆ. ಆದ್ದರಿಂದ್ದ ನಾವು ಇದಕ್ಕೆ ತಯಾರಿ ಮಾಡುತ್ತಾ ಇರಬೇಕು. ಕೊನೆಗೆ ನಮ್ಮ ಕಾಲೇಜ್ ಒಂದು ಶಾಂತಿಯ ಗ್ರಹ.ಯಾವ ತರಹದ ತೊಂದರೆ ಇಲ್ಲ .ರಾಗ್ಗಿಂಗ್ ಎಂಬ ಮಾನ ಮತ್ತು ಮಾನಸಿಕ ಹಿಂಸೆ ಇಲ್ಲ . ನನಗಂತೂ ನಮ್ಮ ಕಾಲೇಜ್ ಮೇಲೆ ತುಂಬಾ ಪ್ರೀತಿ, ಅಭಿಮಾನ,ಗೌರವ. ನನಗೆ ಸ್ನೇಹಿತರು ಕೂಡ ತುಂಬಾ ಸಹಾಯ ಮಾಡುತ್ತಾರೆ ಮತ್ತು ನಾವು ಒಟ್ಟಿಗೆ ತುಂಬಾ ನಲಿದಾದುತ್ತೇವೆ.
ನನಗೆ ಸ್ನೇಹಿತರು ಕೂಡ ತುಂಬಾ ಸಹಾಯ ಮಾಡುತ್ತಾರೆ ಮತ್ತು ನಾವು ಒಟ್ಟಿಗೆ ತುಂಬಾ ನಲಿದಾದುತ್ತೇವೆ. ನನಗೆ ಚಲನ ಚಿತ್ರ ಮತ್ತು ಇನ್ನಿತರ ಕಾರ್ಯಕ್ರಮ ನೋಡಲು ತುಂಬಾ ಇಷ್ಟ,ತುಂಬಾ ಹಾಡುಗಳನ್ನು ಕೂಡ ಕೇಳುತ್ತೇನೆ. ಭಾನುವಾರ ಮತ್ತು ಶನಿವಾರ ಕೆಲವೊಮ್ಮೆ ನಾನು ಹೊರಗೆ ಹೋಗುತ್ತೇನೆ,ಸ್ನೇಹಿತರ ಹಾಸ್ಟೆಲ್ಗೆ ಕೂಡ ಹೋಗುತ್ತೇನೆ.ಈ ಎರಡು ದಿನಗಳು ಎಷ್ಟು ಬೇಗ ಹೋಗುತ್ತದೆ ಎಂದು ಹೇಳಕ್ಕಾಗಲ್ಲ. ಪೋಷಕರಂತು ನನಗೆ ಯಾವಾಗಲು ಕರೆ ಮಾಡುತ್ತಾರೆ, ಮತ್ತು ನಾನು ತಿಂಗಳಿಗೊಮ್ಮೆ ಮನೆಗೆ ಹೋಗುತ್ತೇನೆ. ಮನೆಗೆ ಹೋದರೆ ನನ್ನ ತಂಗಿ ತುಂಬಾ ಗಲಾಟೆ ಮಾಡುತ್ತಾಳೆ,ಅದರೊಡನೆ ಆಡಲು ಕೂಡ ಒಂದು ಸಹೋದರಿ ತರಹ.
ಇನ್ನು ನಮ್ಮ ಪೂರ್ಣ ಜೀವನ ನಮ್ಮ ಕಣ್ಮುಂದೆ ಇದೆ , ಈ ಜೀವನವನ್ನು ನಾವು ಹೇಗೆ ನಡೆಸುತ್ತೇವೆ ಎನ್ನುವುದು ನಮ್ಮ ಜವಾಬ್ದಾರಿ.