ಸದಸ್ಯ:RjCruzer/sandbox
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೇಗೂರು ೧೯೨ನೇ ವಾರ್ಡ್ ಎಂ.ಆಂಜನಪ್ಪ,ಸದಸ್ಯರು.
ಜನನ
ಬದಲಾಯಿಸಿಎಂ.ಆಂಜನಪ್ಪರವರು ಜುಲೈ ೦೩,೧೯೬೮ ರಂದು ಬೆಂಗಳೂರು ಜಿಲ್ಲೆಯ ಬೇಗೂರು ಗ್ರಾಮ.
ತಂದೆ ತಾಯಿ
ಬದಲಾಯಿಸಿಮುನಿಯಪ್ಪ ಹಾಗೂ ರಾಮಕ್ಕ ದಂಪತಿಯ ಆರು ಜನ ಮಕ್ಕಳಲ್ಲಿ ದ್ವಿತೀಯ ಪುತ್ರನಾಗಿ ಜನಿಸುತ್ತಾರೆ. ದಂಪತಿಯ ಮುದ್ದು ಮಗನಾಗಿ ಜನಿಸಿದ ಆಂಜನಪ್ಪರವರಿಗೆ ತಮ್ಮ ಇಷ್ಟ ದೈವನಾದ ಶ್ರೀ ಆಂಜನೇಯನ ಸ್ವಾಮಿಯ ನಾಮಕರಣ ಮಾಡುತ್ತಾರೆ. ಕಿತ್ತು ತಿನ್ನುವ ಬಡತನವಿದ್ದರು ತಂದೆ ತಾಯಿ ಇಬ್ಬರು ವ್ಯವಸಾಯ ಮಾಡಿ ತಮ್ಮ ಮಕ್ಕಳನ್ನು ಪೋಷಿಸಿದರು. ಆದರೆ ಅನಾರೋಗ್ಯ ಪೀಡಿತ ತಂದೆಯ ಮರಣದ ನಂತರ ಕುಟುಂಬದ ಹೊರೆಯನ್ನು ಹೊತ್ತು ತನ್ನ ಅಣ್ಣನೊಡನೆ ಸಮನಾಗಿ ನಿಭಾಯಿಸ ತೊಡಗಿದರು, ಶಾಲೆಗೂ ಹೋಗುತ್ತ ಇತ್ತ ತನ್ನವರನ್ನು ಪೋಷಿಸುತ್ತ ದ್ವಿತೀಯ ಪಿಯುಸಿವರಗೆ ವಿದ್ಯಾಭ್ಯಾಸ ಮಾಡುತ್ತಾರೆ. ಕುಟುಂಬದ ಏಳಿಗೆಗಾಗಿ ವಿದ್ಯಭ್ಯಾಸ ಮುಂದುವರೆಸಲಾಗಲಿಲ್ಲ.
ಆಸಕ್ತಿ
ಬದಲಾಯಿಸಿಶಾಲೆಯಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿ ಶಿಕ್ಷಕರ ಅಚ್ಛು ಮೆಚ್ಛಿನ ವಿದ್ಯಾರ್ಥಿಯಾಗಿದ್ದರು, ಊರಿನ ಸಮಸ್ಯೆಗಳನ್ನು ಅರಿತ ಇವರು ಜನರಲ್ಲಿ ಬೆರೆತು ಯುವಕರನ್ನು ಒಗ್ಗೂಡಿಸಿ ಅನೇಕ ಹೋರಾಟ ಮಾಡಿರುವ ಉದಾಹರಣೆಗಳಿವೆ. ಎಂ.ಆಂಜನಪ್ಪ ರವರ ನಾಯಕತ್ವದ ಗುಣಗಳು ಹಾಗೂ ಸರಳ ವ್ಯಕ್ತಿತ್ವ ಜನರ ಅಪಾರ ಪ್ರೀತಿಗೆ ಪಾತ್ರವಾಯಿತು.
ಕೆಲಸ ಕಾರ್ಯಗಳು
ಬದಲಾಯಿಸಿ>ಜನರ ಪ್ರೀತಿ ಮುಂದೊಂದು ದಿನ ೧೯೯೩ರಲ್ಲಿ ಅವರನ್ನು ಬೇಗೂರು ಗ್ರಾಮ ಪಂಚಾಯಿತಿ ಚುಣಾವಣೆಯಲ್ಲಿ ವಾರ್ಡ್ ನಂ.೦೫ ರಿಂದ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆ ಮಾಡಿ ಜನಸೇವೆ ಮಾಡಲು ಅವಕಾಶ ಮಾಡಿಕೊಡುತ್ತಾರೆ. ವಿಶೇಷವೆಂದರೆ ಆಂಜನಪ್ಪರವರು ಬೇಗೂರಿನ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. >೨೦೦೧ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸೇವಾದಳ ಅದ್ಯಕ್ಷರಾಗಿ ಆಯ್ಕೆಗೊಂಡು ಗುಜರಾತ್ ಭೂಕಂಪನದ ನಿರಾಶ್ರಿತರ ಒಳಿತಿಗಾಗಿ ದುಡಿದು ಹಾಗೂ ಅನೇಕ ಸೇವ ಕಾರ್ಯಕ್ರಮಗಳಲ್ಲಿ ಉತ್ಸುಕರಾಗಿ ದುಡಿದಿರುತ್ತಾರೆ. >ಡಾ.ಅಂಬೇಡ್ಕರ್ ಯುವಕರ ಸಂಘ ಮತ್ತು ಜೈ ಭೀಮ್ ಯುವಕರ ಸಂಘದ ಅಧ್ಯಕ್ಷರಾಗಿ ಯುವಕರ ಹಾಗೂ ಕಾರ್ಮಿಕರ ಅಭಿವೃಧ್ದಿಗಾಗಿ ಶ್ರಮಿಸಿರುತ್ತಾರೆ. >ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಪಾರ್ವತಿ ಸಮೇತ ಶ್ರೀ ನಾಗನಾಥೇಶ್ವರ ದೇವಾಸ್ಥಾನದ ಧರ್ಮದರರ್ಶಿಯಾಗಿ ದೇವಾಸ್ಥಾನದ ಸರ್ವಾಂಗೀಣ ಅಭಿವೃದ್ಧಿ ಪಥದತ್ತ ಮುನ್ನಡೆಸಿರುತ್ತಾರೆ. >ಶಿಕ್ಷಣ ಕ್ಷೇತ್ರದಲ್ಲಿ ತಾವು ವಿದ್ಯಾಭ್ಯಾಸ ಮಾಡಿದ ಬೇಗೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಅಭಿವೃಧ್ಹಿಗೆ ಒತ್ತು ನೀಡಿ ವಿದ್ಯಾರ್ಥಿ ಸ್ನೇಹಿಯಾಗಿ ಅವರ ಸಮಸ್ಯೆಗಳನ್ನು ಸಮರ್ಪಕವಾಗಿ ನಿಭಾಯಿಸಿರುತ್ತಾರೆ. >ನಂತರದ ವರ್ಷಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರಾಗಿ ಕುಟುಂಬ ಹಾಗೂ ಮಕ್ಕಳೊಡನೆ ಹೆಚ್ಚಿನ ಕಾಲ ಕಳೆಯುತ್ತಾರೆ. >ಇಪ್ಪತ್ತು ವರ್ಷಗಳ ನಂತರ ಅದೃಷ್ಟ ಮತ್ತೊಮ್ಮೆ ಅವರ ಬಾಗಿಲಿಗೆ ಬಂದು ನಿಂತಿತ್ತು. ಈ ಬಾರಿ ಜನರ ಪ್ರೀತಿ ಒತ್ತಯಾದ ಮೇರೆಗೆ ೨೦೧೫ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುಣಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಬೃಹತ್ ಗೆಲುವು ದಾಖಲಿಸಿದರು. >ಗೆದ್ದು ಬಂದ ಕೇವಲ ಆರು ತಿಂಗಳಲ್ಲಿ ನೀರಿನ ಬವಣೆ ನೀಗಿಸಲು ೧೬ ಕೊಳವೆ ಬಾವಿಗಳನ್ನು ಕೊರೆಸಿ ಜನರ ಮೆಚ್ಚುಗೆಗೆ ಪಾತ್ರರಾದರು. >ರಸ್ತೆ ಡಾಂಬರೀಕರಣ ಮತ್ತು ಒಳಚರಂಡಿ ಕಾರ್ಯಗಳಿಗೆ ವಿಶೇಷ ಒತ್ತು ನೀಡಿದರು.ಇನ್ನು ಹಲವಾರು ಕೆಲಸ ಕಾರ್ಯಗಳು ನಡೆಯುತ್ತಿದೆ.ಬಿಬಿಎಂಪಿಗೆ ಸೇರುವುದಕ್ಕೂ ಮುಂಚಿತವಾಗಿದ್ದ ಬೇಗೂರು ಗ್ರಾಮ ಪಂಚಾಯಿತಿಯ ಸದಸ್ಯರಾಗಿ,ಎಲ್ಲರ ವಿಶ್ವಾಸ ಪಡೆದು ಅಧ್ಯಕ್ಷರಾಗಿ,ಸೇವೆ ಮಾಡಿದರು,ಮೂಲಭೂತ ಸಮಸ್ಯೆಗಳನ್ನು ಹೋಗಲಾಡಿಸಲು ಸರ್ವ ಪ್ರಯತ್ನವನ್ನು ಮಾಡಿದರು.ಅವತ್ತು ಅವರು ಮಾಡಿದ ಸೇವೆ ಇವತ್ತು ಬೇಗೂರು ವಾರ್ಡಿನ ಕಾರ್ಪೋರೇಟರಾಗಿ ಮಾಡಿದೆ ಎಂದರೆ ಬಹುಶಃ ತಪ್ಪಾಗಲಾರದು.ಇವರದು ಹೋರಟದ ಬದುಕು ವಿದ್ಯಾರ್ಥಿ ನಾಯಕರಾಗಿ,ವಿದ್ಯಾರ್ಥಿಗಳ ಸಮಸ್ಯೆಗಳ ವಿರುದ್ದ ನ್ಯಾಯಯುತವಾಗಿ ಹೋರಾಡಿದರು.
ಕೊಡುಗೆ
ಬದಲಾಯಿಸಿ೧೯೮೯ರಿಂದಲೇ ಕಾಂಗ್ರೆಸ್ ಪಕ್ಷದೊಂದಿಗೆ ನಂಟು ಬೆಳೆಸಿಕೊಂಡು.ಅದರ ಏಳಿಗೆಗಾಗಿ ದುಡಿದರು.ವಿಧಾನಸಭಾ,ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ತಾಲ್ಲೂಕು ಪಂಚಾಯಿತಿ,ಜಿಲ್ಲಾ ಪಂಚಾಯಿತಿ ಅಭ್ಯರ್ಥಿಗಳ ಗೆಲುವಿಗಾಗಿಯೂ ಶ್ರದ್ದೆಯಿಂದ ದುಡಿದರು.ನೆಹರೂ ಇಂದಿರಗಾಂಧಿ.ರಾಜೀವ್ ಗಾಂಧಿಯವರ ಕಾರ್ಯಕ್ರಮ ಹಾಗೂ ಬಡ ಜನತೆಯ ಬಗ್ಗೆ ಅವರ ಕಾಳಜಿ ಧ್ಯೇಯೋದ್ದೇಶ,ದೇಶದ ಅಭಿವೃದ್ಧಿಯ.ಕುರಿತು,ಅವರ ಕಾರ್ಯಕರ್ತರಾಗಿ,ಸದಸ್ಯರಾಗಿ.ಪಕ್ಷದ ಸಂಘಟನಾಕಾರರಾಗಿ, ಪಕ್ಷದ ಪರವಾಗಿ,ಪಕ್ಷದ ಜಯಕ್ಕೆ ದುಡಿದಿದ್ದಾರೆ.ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ,ಸಹಕಾರಿ ಕಾರ್ಯ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿರುವ ಆಂಜನಪ್ಪನವರು,ಬೇಗೂರಿನಲ್ಲಿರುವ ಶ್ರೀ ನಾಗೇಶ್ವರ ಸ್ವಾಮಿ ದೇವಸ್ಥಾನದ ರಾಜಗೋಪುರ ನಿರ್ಮಾಣ ಟ್ರಸ್ಟ್(ರಿ).ಸದಸ್ಯರಾಗಿ,ಶ್ರೀ ಪಾರ್ವತಿ ಸಮೇತ ಶ್ರೀ ನಾಗನಾಥೇಶ್ವರ ಧರ್ಮದರ್ಶಿಯಾಗಿ ದೇವಸ್ಥಾನದ ಅಭಿವೃದ್ದಿಗಾಗಿ ದುಡಿದು ಅನುಭವವಿರುತ್ತದೆ.ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಗ್ರಾಮ ದ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿ ಅಲ್ಲಿನ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಿರುತ್ತಾರೆ.ಬೇಗೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ ಉಪಾಧ್ಯಕ್ಷರಾಗಿ ಜನರ ಸಮಸ್ಯೆಗಳನ್ನು ನಿವಾರಣೆ ಮಾಡಿರುತ್ತಾರೆ.ಚುನಾವಣಾ ವೇಳೆ ಸಮಗ್ರ ಅಭಿವೃದ್ದಿಗಾಗಿ ವೈಯಕ್ತಿಕ ಗುರಿಗಳನ್ನಿಟ್ಟುಕೊಂಡು ಕಾವೇರಿ ನೀರು ತರಲು ಸರ್ವ ಪ್ರಯತ್ನ ಅಲ್ಲಿಯವರೆಗೂ ಎಲ್ಲರಿಗೂ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವುದು.ಪ್ರತಿನಿತ್ಯ ಕಸವಿಲೇವಾರಿ ಹಾಗೂ ಆರೋಗ್ಯ ಮತ್ತು ಸ್ವಚ್ಛ ದೃಷ್ಟಿಯಿಂದ ರಸ್ತೆ ಬದಿ ಕಸ ಸುರಿಯದಂತೆ ಕ್ರಮ,ಬಡಾವಣೆಗಳ ತಗ್ಗು ಪ್ರದೇಶದಲ್ಲಿ ಸರಾಗವಾಗಿ ಒಳಚರಂಡಿಗಳ ಮೂಲಕ ಹರಿದು ಹೋಗುವಂತೆ ಮಾಡುವುದು.ಇನ್ನು ಹಲವಾರು ಜನಪರ ಕೆಲಸಗಳನ್ನು ಸಾಚಾತನದಿಂದ ಮಾಡುವ ಸ್ಪಂದಿಸುವ ಪ್ರಾಮಾಣಿಕ ಭರವಸೆಯೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರನ್ನು ಬೇಗೂರು ವಾರ್ಡಿನ ಜನರು ಕೈ ಹಿಡಿದು ಗೆಲ್ಲಿಸಿದ್ದು,ಕಾರ್ಪೋರೇಟರಾಗಿ,ವಾರ್ಡಿನ ಜನತೆಗೆ ತಾನು ಕೊಟ್ಟ ಭರವಸೆಗಳನ್ನು ಪೂರೈಸಿ,ವಾರ್ಡನ್ನು ಮಾದರಿ ವಾರ್ಡಾಗಿ ಮಾಡುವುದರತ್ತ ದಾಪುಗಾಲಿಟ್ಟಿದ್ದು,ಇವರ ಸೇವೆ ವಾರ್ಡಿನ ಜನತೆಗೆ ಸಿಗಲಿ ಎಂದು ಆಶಿಸುತ್ತೇವೆ.