ಮೈಟೋಕಾಂಡ್ರಿಯನ್

ಸೆಲ್ ಬೈಯಲಾಜಿಯಲ್ಲಿ (ಜೀವಕೋಶಗಳ ಜೀವವಿಜ್ಞಾನ ಶಾಸ್ತ್ರ) ಮೈಟಕಾಂಡ್ರಿಯನ್‌ (ಬಹುವಚನ: ಮೈಟ್ರೊಕಾಂಡ್ರಿಯ )- ತಂತುಮಯ ಸಂಯೋಜಕ ಅಂಗಾಂಶಗಳ ಮೆಂಬರೇನ್‌ಗಳಿಂದ ಮುಚ್ಚಲ್ಪಟ್ಟಿರುವ ಒಂದು ಅಂಗಕ(ಆರ್ಗನೆಲ್‌) ಆಗಿದ್ದು, ಇದು ಬಹಳಷ್ಟು ಯೂಕರಿಯಾಟಿಕ್‌ ಜೀವಕೋಶಗಳಲ್ಲಿ ಸಿಗುತ್ತದೆ.ಈ ಅಂಗಕಗಳ ವ್ಯಾಸ 0.5 ರಿಂದ 10 ಮೈಕ್ರೊಮಿಟರ್‌ (μm) ಗಳಷ್ಟಿರುತ್ತದೆ. ಮೈಟಕಾಂಡ್ರಿಯಗಳನ್ನು ಕೆಲವೊಮ್ಮೆ "ಸೆಲುಲಾರ್ ಪವರ್‌ ಪ್ಲಾಂಟ್ಸ್‌" (ಜೀವಕೋಶದ ಶಕ್ತಿಯ ಮೂಲ) ಎಂದು ಕೆರೆಯಲಾಗುತ್ತದೆ, ಏಕೆಂದರೆ ಇದು ಜೀವಕೋಶಗಳು ಪೂರೈಸುವ ಕೆಮಿಕಲ್‌ ಎನರ್ಜಿಯ (ರಸಾಯನಿಕ ಶಕ್ತಿ) ಮೂಲವಾದ ಅಡಿನೊಸೀನ್ ಟ್ರೈಫಾಸ್ಫೇಟ್‌ (ATP), ಅನ್ನು ಉತ್ಪಾದಿಸುತ್ತದೆ. ಜೀವಕೋಶಗಳಿಗೆ ಬೇಕಾದ ಶಕ್ತಿಯನ್ನು(ಸೆಲುಲಾರ್‌ ಎನರ್ಜಿಯನ್ನು) ಪೂರೈಸುವುದರ ಜೊತೆಯಲ್ಲಿ ಮೈಟೊಕಾಂಡ್ರಿಯಾ ಇತರ ವಿವಿಧ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತದೆ, ಅವು: ಸಿಗ್ನಲಿಂಗ್‌, ಸೆಲುಲಾರ್ ಡಿಫರೆನ್ಷಿಯೇಷನ್ (ಜೀವಕೋಶಗಳ ಭೇದಕರಣ)‌, ಸೆಲ್‌ ಡೆತ್ (ಜೀವಕೋಶಗಳ ಮರಣ)‌, ಇದಲ್ಲದೆ ಮೈಟೊಕಾಂಡ್ರಿಯ ಸೆಲ್‌ ಸೈಕಲ್‌(ಜೀವಕೋಶದ ಜೀವನಚಕ್ರ) ಮತ್ತು ಸೆಲ್‌ ಗ್ರೋತ್(ಜೀವಕೋಶದ ಬೆಳವಣಿಗೆ)‌ ಅನ್ನು ಕೂಡ ನಿಯಂತ್ರಿಸುತ್ತದೆ.

ಟೊಕಾಂಡ್ರಿಯದ ಹಲವಾರು ವಿಶಿಷ್ಟ ಗುಣವಿಶೇಷಗಳು ಇದನ್ನು ಅನನ್ಯವಾಗಿಸುತ್ತದೆ. ಒಂದು ಜೀವಕೋಶದಲ್ಲಿ ಮೈಟೊಕಾಂಡ್ರಿಯದ ಸಂಖ್ಯೆಯು ಜೀವಿ ಮತ್ತು ಟಿಸ್ಯೂ (ಅಂಗಾಂಶ) ವಿಧದ ಮೇಲೆ ಅವಲಂಬಿತವಾಗಿರುತ್ತದೆ. ಆನೇಕ ಜೀವಕೋಶಗಳಲ್ಲಿ ಕೇವಲ ಒಂದು ಮೈಟೊಕಾಂಡ್ರಿಯವಿರಬಹುದು, ಹಾಗೆಯೆ ಮತ್ತೆ ಇನ್ನು ಕೆಲವು ಜೀವಕೋಶಗಳಲ್ಲಿ ಹಲವಾರು ಸಾವಿರ ಮೈಟೊಕಾಂಡ್ರಿಯಗಳಿರಬಹುದು. ಈ ಅಂಗಕವು(ಆರ್ಗೆನಲ್), ಅನೇಕ ವೈಶಿಷ್ಟ್ಯಪೂರ್ಣ ಕ್ರಿಯೆಗಳನ್ನು ನಿರ್ವಹಿಸುವ ಸಲುವಾಗಿ ವಿವಿಧ ಅಂಕಣಗಳಿಂದ (ಕಂಪಾರ್ಟ್‌ಮೆಂಟ್‌) ಕೂಡಿದ ರಚನೆಯಾಗಿರುತ್ತದೆ. ಈ ಅಂಕಣಗಳು (ಕಂಪಾರ್ಟ್‌ಮೆಂಟ್‌) ಅಥವಾ ಭಾಗಗಳೆಂದರೆ: ಹೊರ ಮೆಂಬರೇನ್(ಔಟರ್‌ ಮೆಂಬರೇನ್)‌, ಇಂಟರ್‌ಮೆಂಬರೇನ್‌ ಸ್ಪೇಸ್‌ (ಮೇಂಬರೇನ್‌ಗಳ ನಡುವಿನ ಪ್ರದೇಶ), ಒಳ ಮೆಂಬರೇನ್ (ಇನ್ನರ್‌ ಮೆಂಬರೇನ್‌) ಹಾಗು ಕ್ರಿಸ್ಟೆ ಮತ್ತು ಮಾಟ್ರಿಕ್ಸ್‌. (ಮೆಂಬರೇನ್‌: ಪೊರೆ/ಪರೆ, ತಂತುಮಯ ಸಂಯೋಜಕ ಅಂಗಾಂಶ). ಮೈಟೊಕಾಂಡ್ರಿಯದ ಪ್ರೋಟೀನ್‌ಗಳು ಟಿಸ್ಯೂ ಮತ್ತು ಪ್ರಭೇದಕ್ಕೆ ತಕ್ಕ ಹಾಗೆ ವ್ಯತ್ಯಾಸವಾಗುತ್ತವೆ. ಮನುಷ್ಯರ ಕಾರ್ಡಿಯಾಕ್‌ ಮೈಟೊಕಾಂಡ್ರಿಯದಲ್ಲಿ (ಹೃದಯದ ಮೈಟೊಕಾಂಡ್ರಿಯ) 615 ವಿವಿಧ ಬಗೆಯ ಪ್ರೋಟೀನ್‌ಗಳನ್ನು ಗುರುತಿಸಲಾಗಿದೆ; ಅದಾಗ್ಯೂ, ಮ್ಯುಅರೈನ್‌ಗಳಲ್ಲಿ(ಇಲಿಗಳು), ಭಿನ್ನ ಜೀನ್‌ಗಳಿಂದ (ಜೀನ್‌: ವಂಶವಾಹಿ) ಎನ್‌ಕೋಡ್‌ ಮಾಡಲ್ಪಟಂತಹ 940 ಪ್ರೋಟೀನ್‌ಗಳಿವೆ, ಎಂದು ಅಧ್ಯಯನಗಳು ತಿಳಿಸಿದೆ. ಮೈಟ್ರೊಕಾಂಡ್ರಿಯದ ಪ್ರೋಟಿಒಮ್‌ ಸಮರ್ಥವಾಗಿ ನಿಯಂತ್ರಿಸಲ್ಪಡುತ್ತದೆ ಎಂದು ಹೇಳಲಾಗಿದೆ. ಜೀವಕೋಶದ DNA ಯ ಬಹುಭಾಗವು ಸೆಲ್‌ ನ್ಯೂಕ್ಲಿಯಸ್‌‌ನಲ್ಲಿದೆ ಎಂದು ಹೇಳಲಾಗುತ್ತದೆ, ಅದರೂ ಮೈಟೊಕಾಂಡ್ರಿಯ ತನ್ನದೆ ಅದ ಸ್ವತಂತ್ರವಾದ ಜೀನೊಮ್‌ ಹೊಂದಿದೆ. ಇಷ್ಟಲ್ಲದೆ, ಇದರ DNAಯು ಬ್ಯಾಕ್ಟೀರೀಯದ ಜೀನೊಮ್‌ನೊಂದಿಗೆ ಸಾಮ್ಯತೆಯಿದೆ.

ರಚನೆ: ಮೈಟೊಕಾಂಡ್ರಿಯ ಹೊರಗಿನ ಮತ್ತು ಒಳಗಿನ ಮೆಂಬರೇನ್ ಹೊಂದಿದ್ದು, ಇದು ಪಾಸ್ಪೊಲಿಪಿಡ್‌ ಬೈಲೇಯರ್ (ಪಾಸ್ಪೊಲಿಪಿಡ್‌ ನ ಎರಡು ಲೇಯರ್‌ಗಳು(ಪದರಗಳು)) ಮತ್ತು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿರುತ್ತದೆ. ಆದರೆ, ಎರಡೂ ಮೆಂಬರೇನ್‌ಗಳೂ ಅದರದೆ ಆದ ಬೇರೆಬೇರೆ ಗುಣವಿಶೇಷಗಳನ್ನು ಪಡೆದಿರುತ್ತವೆ. ಈ ಎರಡು-ಮೆಂಬರೇನಿನ ಸಂಯೋಜನೆಯು ಮೈಟೊಕಾಂಡ್ರಿಯಗೆ ವಿಶಿಷ್ಟವಾದ ಐದು ಅಂಕಣಗಳ ವಿನ್ಯಾಸ ಕೊಡುತ್ತದೆ. ಅವು: ಮೈಟ್ರೊಕಾಂಡ್ರಿಯದ ಹೊರಗಿನ ಮೆಂಬರೇನ್, ಇಂಟರ್‌ಮೆಂಬರೇನ್‌ ಸ್ಪೇಸ್ (ಅಂತರ ಮೆಂಬರೇನುಗಳ ಪ್ರದೇಶ), (ಹೊರ ಮೆಂಬರೇನ್ ಮತ್ತು ಒಳ ಮೆಂಬರೇನಿನ ನಡುವೆ ಇರುವ ಪ್ರದೇಶ), ಮೈಟೊಕಾಂಡ್ರಿಯದ ಒಳ ಮೆಂಬರೇನ್, ಕ್ರಿಸ್ಟ ಪ್ರದೇಶ (ಒಳಮೆಂಬರೇನ್ ಒಳಗಡೆ ಮಡಚಿಕೊಂಡಿರುವ ಕಾರಣದಿಂದಾಗಿ ರಚಿತವಾಗುತ್ತದೆ.)‌ ಮತ್ತು ಮಾಟ್ರಿಕ್ಸ್‌(ಒಳ ಮೆಂಬರೇನ್‌ ಒಳಗಡೆಯಿರುವ ಪ್ರದೇಶ).


ಹೊರಗಿನ ಮೆಂಬರೇನ್: ಮೈಟ್ರೊಕಾಂಡ್ರಿಯದ ಹೊರಗಿನ ಮೆಂಬರೇನ್, ಸಂಪೂರ್ಣ ಅಂಗಕವನ್ನು(ಆರ್ಗೆನಲ್) ಮುಚ್ಚಿಕೊಳ್ಳುತ್ತದೆ; ಇದು ಯೂಕರಿಯಾಟಿಕ್‌ ಪ್ಲಾಸ್ಮ ಮೆಂಬರೇನ್‌ಗಳಷ್ಟು ಪ್ರೋಟೀನ್‌-ಫಾಸ್ಪೊಲಿಪಿಡ್‌ ಪ್ರಮಾಣದ ನಿಷ್ಟತ್ತಿಯನ್ನು ಹೊಂದಿರುತ್ತದೆ (ತೂಕದಲ್ಲಿ ಸುಮಾರು 1:1). ಇದು ಪೊರಿನ್ಸ್‌ ಎಂದು ಕರೆಯಲಾಗುವ ಇಂಟೆಗ್ರಲ್‌‌ ಪ್ರೋಟೀನ್‌ಗಳನ್ನು (ಮೆಂಬರೇನಿನೊಂದಿಗೆ ಅವಿಭಾಜ್ಯವಾಗಿರುವ ಪ್ರೋಟೀನ್‌ಗಳು) ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುತ್ತದೆ. ಈ ಪೊರಿನ್ಸ್‌ಗಳು ದಾರಿಯನ್ನು ಕಲ್ಪಿಸುತ್ತವೆ, ಇದರ ಮೂಲಕ 5000 ಡಾಲ್ಟನ್‌ ಅಥವಾ ಇನ್ನು ಕಡಿಮೆಯ ಮಾಲಿಕ್ಯೂಲಾರ್ ಗಾತ್ರವಿರುವ ಮಾಲಿಕ್ಯೂಲ್‌ಗಳನ್ನು ಮೆಂಬರೇನಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ವಿಸ್ತರಿಸಲು (ಡಿಪ್ಯೂಸ್‌ ಆಗಲು) ಅವಕಾಶವಾಗುತ್ತದೆ.[೬] ದೊಡ್ಡ ಪ್ರೋಟೀನ್‌ಗಳು ಮೈಟೊಕಾಂಡ್ರಿಯವನ್ನು ಪ್ರವೇಶಿಸಬೇಕಾದರೆ ಅದರ ಎನ್‌-ಟರ್ಮಿನಸ್‌(ತುದಿಗೆ), ಹೊರ ಮೆಂಬರೇನ್‌ನಲ್ಲಿರುವ ಟ್ರಾನ್ಸ್‌‌ಲೋಕೆಸ್‌ ಎಂದು ಕರೆಯಲಾಗುವ ದೊಡ್ಡ ಮಲ್ಟಿಸಬ್‌ಯುನಿಟ್‌ ಪ್ರೋಟೀನ್‌ಗಳ ಜೊತೆಗೆ ಸೇರಿದೆ ಎನ್ನುವ ಸೇರು ಸಿಗ್ನಿಲಿಂಗ್‌ ಸಿಕ್ವೆನ್ಸ್‌(ಸಂಕೇತ ಸರಣಿ) ಇರಬೇಕಾಗುತ್ತದೆ. ಹೀಗಾದಾಗ ದೊಡ್ಡ ಪ್ರೋಟೀನ್‌ಗಳನ್ನು ಮೆಂಬರೇನ್ ಮೂಲಕ ಸಕ್ರಿಯವಾಗಿ ಸಾಗಿಸಲಾಗುತ್ತದೆ.[೧೨] ಹೊರಗಿನ ಮೆಂಬರೇನ್‌ ನಾಶವಾದರೆ ಇಂಟರ್‌ಮೆಂಬರೇನ್‌ ಸ್ಪೇಸ್‌ ನಲ್ಲಿರುವ ಪ್ರೋಟೀನ್‌ಗಳು ಸೈಟೊಸೊಲ್‌ಗೆ ಸೂಸಿಹೋಗುವುದರಿಂದಾಗಿ ಜೀವಕೋಶ ಒಂದು ರೀತಿಯಲ್ಲಿ ಮರಣ ಹೊಂದುತ್ತದೆ.[೧೩] ಮೈಟೊಕಾಂಡ್ರಿಯದ ಹೊರ ಮೆಂಬರೇನ್, ಎಂಡೊಪ್ಲಾಸ್ಮಿಕ್‌ ರೆಟಿಕುಲಮ್‌(ER)ಮೆಂಬರೇನ್‌ನೊಂದಿಗೆ ಸೇರಿಕೊಂಡು MAM (ಮೈಟೊಕಾಂಡ್ರಿಯಾ ಅಸೋಸಿಯೇಟೆಡ್‌ ER-ಮೆಂಬರೇನ್‌) ಎನ್ನುವ ರಚನೆಯನ್ನು ಉಂಟುಮಾಡುತ್ತದೆ. ಇದು ER-ಮೈಟೊಕಾಂಡ್ರಿಯ ಕ್ಯಾಲ್‌ಷಿಯಂ ಸಿಗ್ನಲಿಂಗ್‌ನಲ್ಲಿ ಬಹಳ ಮುಖ್ಯವಾಗುತ್ತದೆ. ಇದು ER ಮತ್ತು ಮೈಟೊಕಾಂಡ್ರಿಯಗಳ ನಡುವೆ ಲಿಪಿಡ್‌ಗಳ ಸ್ಥಾನಾಂತರದಲ್ಲಿ ಭಾಗವಹಿಸುತ್ತದೆ.[೧೪]

ಇಂಟರ್‌ಮೆಂಬರೇನ್‌ ಸ್ಪೇಸ್: ಹೊರಗಿನ ಮೆಂಬರೇನ್ ಮತ್ತು ಒಳಗಿನ ಮೆಂಬರೇನ್ ನಡುವಿನ ಪ್ರದೇಶವನ್ನು ಇಂಟರ್‌ಮೆಂಬರೇನ್‌ ಸ್ಪೇಸ್‌ (ಮೆಂಬರೇನ್‌ ಅಂತರ ಪ್ರದೇಶ) ಎಂದು ಕರೆಯುತ್ತೇವೆ. ಹೊರಗಿನ ಮೆಂಬರೇನ್ ಮೂಲಕ ಚಿಕ್ಕ ಮಾಲಿಕ್ಯೂಲ್‌ಗಳು ಸುಲಭವಾಗಿ ಪ್ರವೇಶಸಾಧ್ಯವಿರುವುದರಿಂದ, ಇಂಟರ್‌ಮೆಂಬರೇನ್‌ ಸ್ಪೇಸ್‌‌ನಲ್ಲಿ ಅಯಾನು ಮತ್ತು ಷುಗರ್‌‌ಗಳಂತಹ ಚಿಕ್ಕ ಮಾಲಿಕ್ಯೂಲ್‌ಗಳ ಪ್ರಮಾಣವು ಸೈಟೊಸಾಲ್‌ ಗಳ ಹಾಗೆಯೆ ಇರುತ್ತದೆ.[೬] ಆದರೆ, ದೊಡ್ಡ ಪ್ರೋಟೀನ್‌ಗಳನ್ನು ಹೊರಗಿನ ಮೆಂಬರೇನ್‌ ಮೂಲಕ ರವಾನಿಸಬೇಕಾದರೆ ಒಂದು ನಿರ್ದಿಷ್ಟ ಸಿಗ್ನಲಿಂಗ್‌ ಸಿಕ್ವೆನ್ಸ್‌ (ಸಂಕೇತಗಳ ಸರಣಿ) ಅವಶ್ಯಕತೆಯಿರುತ್ತದೆ, ಹೀಗಾಗಿ ಈ ಪ್ರದೇಶದ ಪ್ರೋಟೀನ್‌ ಸಂಯೋಜನೆಯು ಸೈಟೊಸಾಲ್‌ಗಿಂತ ವಿಭಿನ್ನವಾಗಿರುತ್ತದೆ. ಈ ರೀತಿಯಲ್ಲಿ ಇಂಟರ್‌ಮೆಂಬರೇನ್‌ ಸ್ಪೇಸ್‌ಗೆ ಸೀಮಿತವಾದ(ಲೋಕಲೈಸ್‌ ಆದ) ಪ್ರೋಟೀನ್‌ ಅಂದರೆ ಸೈಟೊಕ್ರೋಮ್ c.[೧೩]

ಒಳಗಿನ ಮೆಂಬರೇನ್: ಮೈಟೊಕಾಂಡ್ರಿಯದ ಒಳಗಿನ ಮೆಂಬರೇನ್ ಐದು ರೀತಿಯ ಕ್ರಿಯೆಗಳನ್ನು ಮಾಡುವ ಪ್ರೋಟೀನ್‌ಗಳನ್ನು ಹೊಂದಿರುತ್ತದೆ:

ಆಕ್ಸಿಡೇಟಿವ್ ಫಾಸ್ಫಾರಿಲೇಷನ್‌ ಗಳ ರೆಡಾಕ್ಸ್‌ ರಿಯಾಕ್ಷನ್‌ಗಳನ್ನು (ಕ್ರಿಯೆ) ನಡೆಸುವಂತಹ ಪ್ರೋಟೀನ್‌ಗಳು.ATP ಸಿಂಥೇಸ್‌, ಇದು ATP ಯನ್ನು ಮಾಟ್ರಿಕ್ಸ್‌ನಲ್ಲಿ ಉತ್ಪಾದಿಸುತ್ತದೆ. ಮಾಟ್ರಿಕ್ಸ್‌‌ಗಳ ಒಳಗೂ ಹೊರಗೂ ಮೆಟಬೊಲೈಟ್‌ಗಳ (ಮೆಟಬೊಲೈಟ್‌: ಉಪಾವಚಯಕ, ಮೆಟಬಾಲಿಸಮ್‌ ಕ್ರಿಯೆಯ ಉತ್ಪನ್ನಗಳು) ಸಾಗಣೆಯನ್ನು (ಪ್ಯಾಸೆಜ್‌) ನಿಯಂತ್ರಿಸುವ ನಿರ್ದಿಷ್ಟ ಟ್ರಾನ್‌ಪೋರ್ಟ್‌ ಪ್ರೋಟೀನ್‌ಗಳು. ಪ್ರೋಟೀನ್‌ಗಳನ್ನು ಪಡೆಯುವ ಕ್ರಿಯಾವಿಧಾನ. ಮೈಟೊಕಾಂಡ್ರಿಯದ ಫ್ಯೂಷನ್‌ ಮತ್ತು ಫಿಷನ್‌ ಪ್ರೋಟೀನ್‌ಗಳು. (ಫ್ಯೂಷನ್‌: ಒಂದುಗೂಡುವುದು; ಫಿಷನ್: ವಿದಳನ) ಇದು 150 ಕ್ಕೂ ಹೆಚ್ಚಿನ ವಿವಿಧ ಪಾಲಿಪೈಪ್ಟೈಡ್‌ಗಳನ್ನು ಹೊಂದಿದೆ. ಇದರಲ್ಲಿ ಅತಿ ಹೆಚ್ಚು ಪ್ರೋಟೀನ್-ಪಾಸ್ಪೊಲಿಪಿಡ್‌ ನಿಷ್ಪತ್ತಿಯಿದೆ (ತೂಕದಲ್ಲಿ 3:1 ಕ್ಕಿಂತ ಜಾಸ್ತಿ, ಅಂದರೆ ಇದು ಸುಮಾರು 15 ಪಾಸ್ಪೊಲಿಪಿಡ್‌‌ಗಳಿಗೆ 1 ಪ್ರೋಟೀನ್‌ ಇರುತ್ತದೆ). ಮೈಟೊಕಾಂಡ್ರಿಯನಿನ ಒಟ್ಟು ಪ್ರೋಟೀನ್‌ಗಳ ಪ್ರಮಾಣದಲ್ಲಿ 1/5 ಭಾಗ ಒಳಗಿನ ಮೆಂಬರೇನಿನಲ್ಲಿದೆ. ಇದರ ಜೊತೆಗೆ, ಒಳಗಿನ ಮೆಂಬರೇನ್ ಕಾರ್ಡಿಯೊಲಿಪಿನ್‌ ಎನ್ನುವ ಬಹಳ ವಿಶೇಷವಾದ ಪಾಸ್ಪೊಲಿಪಿಡ್‌ನಿಂದ ಸಮೃದ್ಧವಾಗಿದೆ. ಈ ಪಾಸ್ಪೊಲಿಪಿಡ್‌ ಮೊದಲ ಬಾರಿಗೆ 1942ರಲ್ಲಿ ದನಗಳ (ಭೀಫ್‌‌) ಹೃದಯದಲ್ಲಿ ಕಂಡು ಹಿಡಿಯಲಾಯಿತು. ಇದು ಸಾಮಾನ್ಯವಾಗಿ ಮೈಟೊಕಾಂಡ್ರಿಯ ಮತ್ತು ಬ್ಯಾಕ್ಟೀರಿಯದ ಪ್ಲಾಸ್ಮ ಮೆಂಬರೇನ್‌ಗಳ ವಿಶಿಷ್ಟವಾದ ಗುಣ. ಕಾರ್ಡಿಯೊಲಿಪಿನ್‌ ಎರಡರ ಬದಲಾಗಿ ನಾಲ್ಕು ಮೇದಾಮ್ಲಗಳನ್ನು (ಫ್ಯಾಟಿ ಆಸಿಡ್‌) ಹೊಂದಿದೆ, ಇದು ಒಳಗಿನ ಮೆಂಬರೇನ್‌‌ ಅನ್ನು ಅಪ್ರವೇಶ್ಯವನ್ನಾಗಿಸುತ್ತದೆ(ಪ್ರವೇಶಿಸಲು ಸಾಧ್ಯವಿಲ್ಲದ ಹಾಗೆ ಮಾಡುತ್ತದೆ). ಹೊರಗಿನ ಮೆಂಬರೇನಿನ ಹಾಗಿರದೆ, ಒಳಗಿನ ಮೆಂಬರೇನಿನಲ್ಲಿ ಪೊರಿನ್‌ಗಳಿರುವುದಿಲ್ಲ ಹಾಗು ಇದು ಎಲ್ಲಾ ಮಾಲಿಕ್ಯೂಲ್‌ಗಳಿಗೆ ಬಹು ಮಟ್ಟಿಗೆ ಅಪ್ರೇವಶ್ಯವಾಗಿರುತ್ತದೆ (ಒಳಗೆಹೊಗಲು ಅವಕಾಶ ಕೊಡುವುದಿಲ್ಲ). ಸುಮಾರು ಎಲ್ಲಾ ಅಯಾನು ಮತ್ತು ಮಾಲಿಕ್ಯೂಲ್‌ಗಳು ಮಾಟ್ರಿಕ್ಸ್‌ ಒಳಗೆ ಮತ್ತು ಹೊರಬರಲು ವಿಶೇಷ ಮೆಂಬರೇನ್‌ ಟ್ರಾನ್ಸ್‌ಪೋರ್ಟರ್ಸ್‌‌‌ಗಳ(ರವಾನಿಸುವ ವಿಶಿಷ್ಟ ಪದಾರ್ಥಗಳ) ಅವಶಕ್ಯತೆಯಿರುತ್ತದೆ. ಒಳ ಮೆಂಬರೇನಿನ ಟ್ರಾನ್ಸ್‌ಲೋಕೇಸ್‌‌(TIM) ಕಾಂಪ್ಲೆಕ್ಸ್‌ಗಳ ಮೂಲಕ ಅಥವಾ Oxa1 ಮೂಲಕ ಪ್ರೋಟೀನ್‌ಗಳನ್ನು ಮಾಟ್ರಿಕ್ಸ್‌ಗಳಿಗೆ ಸಾಗಿಸಲ್ಪಡುತ್ತದೆ. ಇದಲ್ಲದೆ, ಎಲೆಕ್ಟ್ರಾನ್‌ ಟ್ರಾನ್ಸ್‌ಪೋರ್ಟ್‌ ಚೈನಿನ (ಎಲೆಕ್ಟ್ರಾನ್‌ ರವಾನೆಯಾಗುವ ಸರಣಿ) ಎಂಜೈಮಿನ ಕ್ರಿಯೆಗಳಿಂದಾಗಿ ಒಳ ಮೆಂಬರೇನ್ ಅಡ್ಡಲಾಗಿ ಮೆಂಬರೇನ್‌ ಪಟೆನ್ಷಲ್‌ ಉಂಟಾಗುತ್ತದೆ.

ಕ್ರಿಸ್ಟೆ

ಇಲಿಯ ಲಿವರ್(ಯಕೃತ್) ಮೈಟೊಕಾಂಡ್ರಿಯದ ಕ್ರಿಸ್ಟೆಯ ಅಡ್ಢ ಛೇದದ ಚಿತ್ರಣ. ಇದರಲ್ಲಿ ಸಂಭವನಿಯ 3D ರಚನೆಯನ್ನು ಮತ್ತು ಒಳ ಮೆಂಬರೇನಿನ ಜೊತೆಯಿರುವ ಸಂಬಂಧವನ್ನು ಗಮನಿಸಬಹುದು.

ಮೈಟೊಕಾಂಡ್ರಿಯಾದ ಪದರನ್ನು ಅನೇಕ ಕ್ರಿಸ್ಟೆಗಳ ರೂಪದಲ್ಲಿ ಅಂಕಣಗಳನ್ನಾಗಿ ವಿಭಾಗಿಸಲಾಗಿದೆ. ಇದು ಮೈಟೊಕಾಂಡ್ರಿಯಗಳ ಒಳಗಿನ ಮೆಂಬರೇನಿನ ಮೇಲ್ಮೈ ವಿಸ್ತೀರ್ಣವು ವಿಸ್ತರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ATP ಯನ್ನು ಉತ್ಪಾದನೆ ಮಾಡುವ ಸಾಮರ್ಥ್ಯವು ಹೆಚ್ಚಾಗುತ್ತದೆ. ಒಂದು ಪ್ರಾತಿನಿಧಿಕ ಯಕೃತ್(ಲಿವರ್) ಮೈಟೊಕಾಂಡ್ರಿಯದ ಒಳಗಿನ ಮೆಂಬರೇನಿನ ವಿಸ್ತೀರ್ಣವು ಅದರ ಹೊರಗಿನ ಮೆಂಬರೇನಿನ ವಿಸ್ತೀರ್ಣಕ್ಕಿಂತ ಐದು ಪಟ್ಟು ಜಾಸ್ತಿಯಿರುತ್ತದೆ. ಇದರ ನಿಷ್ಪತ್ತಿಯು ಚರವಾಗಿರುತ್ತದೆ(ಆಸ್ಥಿರ: ಒಂದೇ ರೀತಿಯಲ್ಲಿ ಇರುವುದಿಲ್ಲ); ATPಗೆ ಹೆಚ್ಚಿನ ಬೇಡಿಕೆಯಿರುವ ಮಸಲ್‌ ಸೆಲ್‌‌ಗಳಂತಹ(ಸ್ನಾಯುಗಳ ಜೀವಕೋಶ) ಜೀವಕೋಶಗಳಲ್ಲಿ ಮೈಟೊಕಾಂಡ್ರಿಯದಲ್ಲಿ ಹೆಚ್ಚು ಕ್ರಿಸ್ಟೆಗಳಿರುತ್ತದೆ. ಈ ಮಡಿಕೆಗಳನ್ನು(ಫೋಲ್ಡ್‌) ಚಿಕ್ಕ ವರ್ತುಲಕಾರದ ಅಂಶಗಳಾದ F1 ಪಾರ್ಟಿಕಲ್‌ ಅಥವಾ ಆಕ್ಸಿಸೋಮ್‌ಗಳಿಂದ ಒತ್ತಾಗಿಡಲಾಗಿಸಿರುತ್ತದೆ. ಇವು ಕೇವಲ ಸರಳ ಸ್ವೇಚ್ಛೆಯಾಗಿರುವ ಫೋಲ್ಡ್‌ಗಳಲ್ಲ, ಆದರೆ ಒಳ ಪದರದ ಒಳಮಡಿಕೆಗಳಾಗಿರುತ್ತದೆ. ಇದು ಒಟ್ಟಾರೆ ಕೀಮಿಯೊಸೊಮಾಟಿಕ್‌ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮಾಟ್ರಿಕ್ಸ್ ಒಳಮೆಂಬರೇನಿನ ಒಳಗಡೆಯಿರುವ ಪ್ರದೇಶವನ್ನು ಮಾಟ್ರಿಕ್ಸ್‌ ಎಂದು ಕರೆಯಲಾಗುತ್ತದೆ. ಇದು ಒಂದು ಮೈಟೊಕಾಂಡ್ರಿಯನಿನ ಒಟ್ಟಾರೆ ಪ್ರೋಟೀನ್‌ ಅಂಶದ 2/3 ಭಾಗವನ್ನು ಹೊಂದಿರುತ್ತದೆ. ಮಾಟ್ರಿಕ್ಸ್‌ ATP ಉತ್ಪಾದನೆಗೆ ಬಹಳ ಮುಖ್ಯ. ಇದು ಒಳ ಮೆಂಬರೇನಿನಲ್ಲಿರುವ ATP ಸಿಂಥೇಸ್‌ ಜೊತೆಗೆ ಕೂಡಿ ATP ಯನ್ನು ಉತ್ಪಾದಿಸುತ್ತದೆ. ಮಾಟ್ರಿಕ್ಸ್‌, ಅತಿ ಹೆಚ್ಚು ಸಾರಿಕೃತವಾದ ನೂರಾರು ಎಂಜೈಮುಗಳ ಮಿಶ್ರಣ, ಮೈಟೊಕಾಂಡ್ರಿಯದ ವಿಶೇಷ ರೈಬೊಸೋಮ್‌,tRNA ಮತ್ತು ಮೈಟೊಕಾಂಡ್ರಿಯದ DNA ಜೀನೊಮಿನ ಹಲವಾರು ಪ್ರತಿಗಳನ್ನು ಹೊಂದಿರುತ್ತದೆ. ಈ ಎಂಜೈಮುಗಳ ಮುಖ್ಯ ಕ್ರಿಯೆಗಳೆಂದರೆ ಪೈರೊವೇಟ್ ಮತ್ತು ಮೇದಾಮ್ಲಗಳ (ಫ್ಯಾಟಿ ಆಸಿಡ್)‌ ಅಕ್ಸಿಡೀಕರಣ ಮತ್ತು ಸಿಟ್ರಿಕ್‌ ಆಸಿಡ್‌ ಸೈಕಲ್‌ (ಸಿಟ್ರಿಕ್‌ ಆಮ್ಲದ ರಚನೆಯಾಗುವ ಸರಣಿ)‌.

ಮೈಟೊಕಾಂಡ್ರಿಯ ತಮ್ಮದೆ ಆದ ಜೆನಿಟಿಕ್‌ (ಅನುವಂಶಿಕ) ಅಂಶವನ್ನು ಹೊಂದಿರುತ್ತದೆ. ಅಲ್ಲದೇ ಇವು ತಮ್ಮದೆ ಆದ RNA ಗಳನ್ನು ಮತ್ತು ಪ್ರೋಟೀನ್‌ಗಳನ್ನು ಉತ್ಪಾದಿಸುತ್ತವೆ. (ಪ್ರೋಟೀನ್‌ ಬೈಯೊಸಿಂಥೆಸಿಸ್‌ ಯನ್ನು ನೋಡಿ ). ಪ್ರಕಟವಾಗಿರುವ ಮನುಷ್ಯರ ಮೈಟೊಕಾಂಡ್ರಿಯದ DNA ಸರಣಿಯಲ್ಲಿ 16,569 ಬೇಸ್‌ ಪೇರ್‌ಗಳನ್ನು, 37 ಎನ್‌ಕೋಡಿಂಗ್‌ ಜೀನ್‌ಗಳನ್ನು(ವಂಶವಾಹಿ) ತೋರಿಸಿತು: 22 tRNA, 2 rRNA, ಮತ್ತು 13 ಪೆಪ್ಟೈಡ್‌ ಜೀನ್‌ಗಳನ್ನು ಹೊಂದಿದೆ.[೧೭] ಮನುಷ್ಯರಲ್ಲಿರುವ 13 ಮೈಟೊಕಾಂಡ್ರಿಯದ ಪೆಪ್‌ಟೈಡ್‌ಗಳು , ಅತಿಥೇಯ ಜೀವಕೋಶದ ನ್ಯೂಕ್ಲಿಯಸ್‌ನಲ್ಲಿರುವ ಜೀನ್‌ಗಳಿಂದ ಎನ್‌ಕೋಡ್‌ ಮಾಡಲಾಗುವ ಪ್ರೋಟೀನ್‌ಗಳ ಜೊತೆಯಲ್ಲಿ ಮೈಟೊಕಾಂಡ್ರಿಯದ ಒಳ ಮೆಂಬರೇನ್‌ ಜೊತೆಯಲ್ಲಿ ಬೆಸೆದುಕೊಂಡಿರುತ್ತದೆ.