ಪರಿಚಯ......

ನನ್ನ ಹೆಸರು ರಶ್ಮಿ. ನಾನು ಹುಟ್ಟಿದ್ದು ಹೈದೆರಾಬಾದ್ ನಗರದಲ್ಲಿ . ನನ್ನ ಪ್ರಾಥಮಿಕ ಶಿಕ್ಷಣ ಬೆಂಗಳೂರು, ಡೆಹೆಲಿ, ಹಾಗೂ ಕೂಶಾಲನಗರ್ ನಲ್ಲಿ ಆಗಿದೆ. ನಾನು ನನ್ನ ಪ್ರೌಢ ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದೆ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಅಲೊಯ್ಸಿಉಸ್ ಕಾಲೇಜಿನಲ್ಲಿ ಮುಗಿಸಿದ್ದೀನಿ. ಪ್ರಸ್ತುತ ನನ್ನ ಪದವಿ ಶಿಕ್ಷಣವನ್ನು ಅದೇ ಕಾಲೇಜಿನಲ್ಲಿ ಪಡೆಯುತ್ತಿದ್ದೇನೆ.

ಹವ್ಯಾಸಗಳು......

ನಾನು ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದೇನೆ. ನನಗೆ ಪುಸ್ತಕ ಓದುವ ಹವ್ಯಾಸವಿದೆ. ನನಗೆ ಹೊಸ ಪ್ರದೇಶಗಳನ್ನು ಸುತ್ತುವುದೆಂದರೆ ಬಹಳ ಇಷ್ಟವಾಗುತ್ತದೆ. ಹಾಗೂ ತರಾವರಿಯ ತಿಂಡಿಗಳನ್ನು ತಿನ್ನುವುದೆಂದರೆ ನನಗೆ ಇಷ್ಟ.


ನನ್ನ ಪದವಿ ಶಿಕ್ಷಣ ಮುಗಿದ ನಂತರ ನಾನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಪಡೆಯಬೇಕು ಎಂದಿದ್ದೇನೆ. ನನ್ನ ತಂದೆ ತಾಯಿಗೆ ನಾನು ಒಬ್ಬಳೇ ಮಗಳು. ನನ್ನ ತಾಯಿ ಗೃಹಿಣಿ ಮತ್ತು ನನ್ನ ತಂದೆ ಬ್ಯಾಂಕೀನಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾನು ನನ್ನ ಕನಸನ್ನು ನನಸಾಗಿಸುವಲ್ಲಿ ಪರಿಶ್ರಮ ಪಡುತ್ತೇನೆ.

ಇದು ನನ್ನ ಕಿರುಪರಿಚಯ.....