ಸದಸ್ಯ:Rashmi1510164
ನನ್ನ ಹೆಸರು ರಶ್ಮಿ. ನಾನು ಹುಟ್ಟಿದ್ದು ಬೆಳೆದದ್ದು ಎಲ್ಲಾ ಹಾಸನ ಎಂಬ ಚಿಕ್ಕ ಗ್ರಾಮದಲ್ಲಿ. ನಾನು ನನ್ನ ವಿದ್ಯಾಭ್ಯಾಸ ದ್ವಿತೀಯ ಪಿಯುಸಿ ತನಕ ನನ್ನ ಊರಾದ ಹಾಸನದಲ್ಲೇ ಮಾಡಿದೆ. ನಾನು ಕ್ರೈಸ್ಟ್ ಯೂನಿವರ್ಸಿಟಿ ಎಂಬ ಒಳ್ಳೆಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಹಂಬಲ ಹತ್ತನೇ ತರಗತಿಯಿಂದಲೇ ಕನಸನ್ನು ಕಾಣತೊಡಗಿದೆ. ನನ್ನ ತಂದೆ ತಾಯಿಯು ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದುದರಿಂದ ನಾನು ನನ್ನ ಕನಸನ್ನು ನನಸು ಮಾಡಿಕೊಳ್ಳಲು ಚೆನ್ನಾಗಿ ಓದ ತೊಡಗಿದೆ. ನಾನು ಕಷ್ಟಪಟ್ಟು ಓದಿ ಮಾಡಿದ ಪ್ರಯತ್ನಕ್ಕೆ ನನಗೆ ದ್ವಿತೀಯ ಪಿಯುಸಿನಲ್ಲಿ ಶೇಕಡ ೯೪% ರಷ್ಟು ಅಂಕವನ್ನು ಪಡೆದು ಡಿಸ್ಟಿಂಶನ್ ಪಡೆದು ಪಾಸಾದೆ. ಇದರಿಂದ ನಾನು ನನ್ನ ತಂದೆ ತಾಯಿಯು ಎಲ್ಲರೂ ಬಹಳ ಸಂತೋಷಪಟ್ಟರು. ನಾನು ಒಳ್ಳೆಯ ಅಂಕ ಪಡೆದು ಪಾಸಾದರಿಂದ ಅಪ್ಪ ನನ್ನ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡಲು ಊರಾಚೆ ಕಳುಹಿಸಲು ನಿರ್ಥರಿಸಿದರು. ಹೀಗೆ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಸೇರ್ಪಡೆಗೊಂಡೆನು. ನನಗೆ ಬಹಳ ಸಂತೋಷವಾದರೂ ನನ್ನ ಮನಸ್ಸಿನ ಒಂದು ಕೊನೆಯಲ್ಲಿ ಅಪ್ಪ ಅಮ್ಮ ಗೆಳತಿಯರು ಅಮ್ಮ ಮಾಡುವ ವಿವಿಥ ಆಹಾರ ಪದಾರ್ಥಗಳು ಎಲ್ಲವನ್ನು ಬಿಟ್ಟು ಹೋಗಬೇಕೆಂಬ ಒಂದು ರೀತಿಯ ಬೇಸರ ಮೂಡಿತ್ತು. ಆದರೆ ನಾನು ಅದನೆಲ್ಲವನ್ನು ಮರೆತು ಹೊಸ ಬದುಕು,ವಿದ್ಯಾಭ್ಯಾಸದ ದೃಷ್ಟಿಯಿಂದ ಬೆಂಗಳೂರು ಎಂಬ ಮಹಾನಗರಕ್ಕೆ ಹೆಜ್ಜೆ ಹಾಕಿದೆ.
ಬೆಂಗಳೂರಿನಷ್ಟು ದೊಡ್ಡದಲ್ಲದ ಒಂದು ಚಿಕ್ಕ ಗ್ರಾಮದವಳಾದ ನಾನು ಹೊಸ ಕಾಲೇಜು , ಸ್ನೇಹಿತರು,ವಾತಾವರಣ ಹೇಗಿರುತ್ತದೋ ಎಂಬ ಕುತೂಹಲದಲ್ಲಿದ್ದೆ. ಕಾಲೇಜಿನ ಮೊದಲ ದಿನ ನನಗೆ ಬಹಳ ಭಯವಾಗಿತ್ತು ಏಕೆಂದರೆ ಈ ನಗರಕ್ಕೆ ಹೊಸಬಳಾದ ನಾನು ಅಲ್ಲಿ ಪರಿಚಯವಿದ್ದವರಾರೂ ಇರಲಿಲ್ಲ.ಅಕ್ಕಪಕ್ಕದಲ್ಲಿದ್ದ ಎಲ್ಲರೂ ತಮ್ಮ ತಮ್ಮ ಸ್ನೇಹಿತರ ಗುಂಪು ತಂದೆ ತಾಯಿಯ ಜೊತೆ ನಿಂತು ಅವರ ಪಾಡಿಗೆ ಅವರು ಮಾತಾಡುತ್ತಿದ್ದರು. ಹೀಗೆ ನಾನು ಯಾರೂ ಜೊತೆಯಿಲ್ಲದೆ ಒಬ್ಬಂಟಿಯಾಗಿ ನಿಂತಿದ್ದೆ. ನಂತರ ಕಾಲೇಜಿನ ಕಾರ್ಯಕ್ರಮಗಳು ಮುಗಿದ ನಂತರ ನಮ್ಮ ನಮ್ಮ ತರಗತಿಗಳಿಗೆ ಕರೆಗದುಕೊಂಡು ಹೋದರು. ಈ ರೀತಿ ಕಾಲೇಜಿನ ಮೊದಲನೆಯ ದಿನ ನನಗೆ ಬೇಸರವಾಗಿ ಕಳೆದುಹೋದರೂ ಮುಂದೆ ಸರಿಹೋಗುತ್ತದೆಂದು ಸಮಾಧಾನ ಮಾಡಿಕೊಂಡು ಮರುಗಿದೆನು. ದಿನ ಕಳೆದಂತೆ ನಾನು ತರಗತಿಯ ಎಲ್ಲರ ಜೊತೆ ಮಾತನಾಡತೊಡಗಿದೆ. ಈಗ ನನಗೆ ಎಲ್ಲರೂ ಸ್ನೇಹಿತರು. ಅದರ ಜೊತೆ ನನ್ನ ವಿದ್ಯಾಭ್ಯಾಸವು ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ.
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace: