ಸದಸ್ಯ:Rashik Nastie/sandbox
ವಿದ್ಯೆ ಎಂಬ ಸಂಪತ್ತು:
ವಿದ್ಯೆಯು ಪ್ರತಿಯೊಬ್ಬ ಮಾನವನಿಗೂ ಅತ್ಯವಶ್ಯಕವಾದ ಒಂದು ಶ್ರೇಷ್ಠ ಸಂಪತ್ತು. ಒಬ್ಬ ವ್ಯಕ್ತಿಯು ಎಷ್ಟೇ ಸಂಪತ್ತನ್ನು ಹೊಂದಿರಲಿ, ಅವನಿಗೆ ವಿದ್ಯೆಯಿಲ್ಲದಿದ್ದರೆ ಅವನು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹುಲ್ಲಿಗೆ ಸಮಾನನಾಗುತ್ತಾನೆ. ಒಬ್ಬ ಮಾನವನು ಅತಿಯಾದ ಸೌಂದರ್ಯ, ಯೌವನ, ಸಂಪತ್ತನ್ನು ಹೊಂದಿರಬಹುದು. ಅದೇ ರೀತಿ ಶ್ರೇಷ್ಠ ಮತ್ತು ಪ್ರಸಿದ್ಧವಾದ ಕುಲದಲ್ಲಿ ಜನಿಸಿರಬಹುದು. ಆದರೆ ಅವನಿಗೆ ವಿದ್ಯೆಯಿಲ್ಲಿವೆಂದಾದರೆ,ಅವನು ಸುಗಂಧವನ್ನು ಹೊಂದಿರದ, ಪ್ರಯೋಜನಕ್ಕೆ ಬಾರದ ಪಾಲಾಶ ಮರದ ಹೂವಿನಂತೆ ಅಪ್ರಯೋಜಕನಾಗುತ್ತಾನೆ.