ಸದಸ್ಯ:Ranjithgowdank/ನನ್ನ ಪ್ರಯೋಗಪುಟ

ಗೋರಂಟಿ (ಮದರಂಗಿ)

ಬದಲಾಯಿಸಿ

ವರ್ಣನೆ

ಬದಲಾಯಿಸಿ

ಮುಳ್ಳುಗಳಿಂದ ಕೂಡಿದ ಪೊದೆ ಸಣ್ಣ ಗಾತ್ರದ ಮರವಾಗಿಯೂ ಸಹ ಬೆಳೆಯುತ್ತದೆ. ರೆಂಬೆಗಳು ನೀಳವಾಗಿ ಬೆಳೆಯುವುದು, ಮತ್ತು ಕವಲಿನ ತುದಿಯಲ್ಲಿ ಕೆಂಪು ಬಣ್ಣದ ಕುಡಿ ಇರುವುದು, ಎಲೆಗಳು ಚಿಕ್ಕವು ಹಸಿರು ಮತ್ತು ಪರಸ್ಪರ ಅಭಿಮುಖವಾಗಿರುವುವು, ಬಲಿತ ರೆಂಬೆಗಳ ತುದಿಯಲ್ಲಿ ಪುಷ್ಪ ಗುಚ್ಚಗಳು ಇರುವುವು, ಚಿಕ್ಕ ಚಿಕ್ಕ ಹೂಗಳು ಬಿಳಿಯ ಅಥವಾ ತಿಳಿಯ ಗುಲಾಬಿ ಬಣ್ಣ ಹೂಂದಿರುವುವು. ಮೊಗ್ಗುಗಳು ಗುಂಡಾಗಿ ಗುಂಪಾಗಿ ಇರುವುವು. ಹೂವುಗಳು ಸುವಾಸನೆಯಿಂದ ಕೂಡಿರುತ್ತವೆ. ಕಾಯಿ ಚಿಕ್ಕದು ಮತ್ತು ಬಲಿತ ಕಾಯಿಯಲ್ಲಿ ಹೆಚ್ಚು ಗಟ್ಟಿಯಾದ ಬೀಜಗಳು ಇರುವುವು, ಅಂತ್ಯಾರಂಭಿ ಹೊಗೊಂಚಲ್ಲು ಮಕರಂದಭರಿತವಾಗಿರುವುದು. ವರ್ಷದ ಬಹುಕಾಲ ಹೂ ಕಾಯಿ ಬಿಡುವುದು. ಹೆಣ್ಣು ಮಕ್ಕಳು ಇದರ ಎಲೆಗಳನ್ನು ನೀರಿನಲ್ಲಿ ಅರೆದು ಕೈ ಕಾಲುಗಳಿಗೆ ಚಿತ್ರಾಕಾರವಾಗಿ ಹಚ್ಚುವರು. ತೊಳೆದ ಮೇಲೆ ಕೆಂಪು ರಂಗೇರಿ ಹೆಚ್ಚು ಸೌಂದರ್ಯವನ್ನು ಕೊಡುವುದು, ಹಿರಿಯರು ತಲೆ ಮತ್ತು ಗಡ್ಡಗಳಿಗೆ ಹಚ್ಚಿ ಬಿಳಿಕೂದಲು ಕೆಂಪಾಗುವಂತೆ ಮಾಡುತ್ತಾರೆ. ಮದುವೆಗಳಲ್ಲಿ ಹೆಣ್ಣಿಗೆ ಮೆಹಂದಿ ಹಚ್ಚುವ ಸಂಪ್ರದಾಯವಿದೆ, ಇದು ಶುಭ ಸೂಚಕವೂ ಮತ್ತು ಮನ ಮೋಹಕವೂ ಆಗಿದೆ.

ಸರಳ ಚಿಕಿತ್ಸೆಗಳು

ಬದಲಾಯಿಸಿ

ಅಂಗೈ ಅಂಗಾಲು ಉರಿ

ಬದಲಾಯಿಸಿ

ಹಸಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆಹುಳಿ ಸೇರಿಸಿ ಚೆನ್ನಾಗಿ ಮಸೆದು ಅಂಗೈ ಅಂಗಾಲುಗಳೀಗೆ ಲೇಪಿಸುವುದು.

ತಲೆಯಲ್ಲಿ ಹೇನು ಮತ್ತು ಸೀರು ನಿವಾರಣೆಗೆ

ಬದಲಾಯಿಸಿ

ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು 2ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದು. (ಅಥವಾ) ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರಿಸಿ ತಲೆ ಕೂದಲಿಗೆ ಹಚ್ಚುವುದು. ಇದರಿಂದ ಹೇನುಗಳು, ಸೀರುಗಳು ನಾಶವಾಗುವುವು.

ಬಿಳಿ ಕೂದಲು ಕಪ್ಪಾಗಲು (ಬಾಲನೆರೆ)

ಬದಲಾಯಿಸಿ

ಒಂದು ಹಿಡಿ ಹಸೀ ಗೋರಂಟಿ ಕಾಯಿಗಳನ್ನು ನುಣ್ಣಗೆ ಅರೆದು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಚತುರಾಂಷ ಕಷಾಯ ಮಾಡುವುದು. ಚೆನ್ನಾಗಿ ಪಕ್ವವಾಗಿರುವ 25 ಗ್ರಾಂ ನೀಲಿ ದ್ರಾಕ್ಷಿಯನ್ನು ತಂದು ಬೀಜಗಳನ್ನು ಬೇರ್ಪಡಿಸಿ ನುಣ್ಣಗೆ ರುಬ್ಬಿ ಮೇಲಿನ ಕಷಾಯಕ್ಕೆ ಸೇರಿಸುವುದು. ನಂತರ ಒಂದು ಬಟ್ಟಲು ಈ ಕಷಾಯಕ್ಕೆ ಕಾದಾರಿದ ನೀರು ಸ್ವಲ್ಪ ಸೇರಿಸಿ ಕೂದಲಿಗೆ ಹಚ್ಚುವುದು. ಬೆಳಿಗ್ಗೆ ಸೀಗೆಕಾಯಿ ಹಾಕಿ ಬಿಸಿ ನೀರಿನ ಸ್ನಾನ ಮಾಡುವುದು. ಹೀಗೆ ಮೂರು ನಾಲ್ಕು ತಿಂಗಳ ಉಪಚಾರದಿಂದ ಸಫಲತೆ ದೊರೆಯುವುದು.

ಕಾಮಾಲೆಯಲ್ಲಿ

ಬದಲಾಯಿಸಿ

ಎರಡು ಹಿಡಿ ಹಸಿ ಗೋಎಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ರಾತ್ರಿ ನೆನೆ ಹಾಕುವುದು, ಬೆಳಿಗ್ಗೆ ಈ ನೀರನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ವೇಳೆ 7 ದಿನಗಳು ಕುಡಿಯುವುದು.

ಮೂಲವ್ಯಾಧಿಯಲ್ಲಿ

ಬದಲಾಯಿಸಿ

ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ತೆಳು ಬಟ್ಟೆಯಲ್ಲಿ ಸೋಸಿ ರಸ ತೆಗೆಯಿರಿ, ಅರ್ಧ ಟೀ ಚಮಚ ರಸಕ್ಕೆ ಎರಡು ಚಿಟಿಕೆ ಸುಟ್ಟಬಿಗಾರದ ಪುಡಿ ಸೇರಿಸಿ ಬೆಳಿಗ್ಗೆ ಒಂದೇ ವೇಳೆ ಸೇವಿಸುವುದು.

ತಲೆ ಸುತ್ತು

ಬದಲಾಯಿಸಿ

ಎರಡು ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಒಂದು ಟೀ ಚಮಚ ಶುದ್ಧ ಜೇನಿನಲ್ಲಿ ಮಿಶ್ರ ಮಾಡಿ ಸೇವಿಸುವುದು.

ಹಲ್ಲು ನೋವು ಮತ್ತು ಹುಳುಕು ಹಲ್ಲಿನಲ್ಲಿ

ಬದಲಾಯಿಸಿ

ಹಸಿ ಗೋಎಂಟಿ ಸೂಪ್ಪನ್ನು ಜಜ್ಜಿ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಡುವುದು, ರಸವನ್ನು ಆಗಾಗ್ಗೆ ಉಗುಳುತ್ತಿರುವುದು.

ಬೆವರು ಸೆಲೆ

ಬದಲಾಯಿಸಿ

ಒಂದು ಹಿಡಿ ಹಸಿ ಗೋರಂಟಿ ಎಲೆಗಳನ್ನು ತಂದು ಚೆನ್ನಾಗಿ ಕುಟ್ಟಿ ಶುಭ್ರವಾದ ಬಟ್ಟೆಯಲ್ಲಿ ಸೋಸಿ ಚೆನ್ನಾಗಿದೆ ರಸ ತೆಗೆಯುವುದು, ಈ ರಸವನ್ನು ಬೆವರು ಸೆಲೆಗೆ ಹಚ್ಚುವುದು.

ಗಜಕರ್ಣ, ಹುಳುಕಡ್ಡಿ ಮತ್ತು ದದ್ದುಗಳಿಗೆ

ಬದಲಾಯಿಸಿ

ಮೊದಲು ಗಾಯ ಇರುವು ಕಡೆ ಒರಟು ಬಟ್ಟೆಯಿಂದ ಸ್ವಲ್ಪ ಉಜ್ಜುವುದು. 20ಗ್ರಾಂ ಗೋರಂಟಿ ಬೀಜಗಳನ್ನು ಗಟ್ಟಿ ಮೊಸತಿನಲ್ಲಿ 3ದಿನ ನೆನೆಹಾಕುವುದು, ಮೂರು ದಿನಗಳ ನಂತರ ಈ ಬೀಜಗಳನ್ನು ಚೆನ್ನಾಗಿ ರುಬ್ಬಿ ಲೇಪಿಸುವುದು. 2ಗ್ರಾಂ ಬೀಜಗಳ ಚೂರ್ಣವನ್ನು ಕಾದಾರಿದ ನೀರಿನಲ್ಲಿ ಹೊಟ್ಟೆಗೆ ಕೊಡುವುದು.

ಬಿಳಿ ತೊನ್ನು ಮತ್ತಿತರ ಚರ್ಮ ವ್ಯಾಧಿಗಳಿಗೆ

ಬದಲಾಯಿಸಿ

ಈ ಮೂಲಿಕೆಯಲ್ಲಿ ರಕ್ತ ಶುದ್ದಿ ಮಾಡುವ ಗುಣವಿದೆ, 10ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಹೀಗೆ ನಲವತ್ತು ದಿವಸ, ಒಂದು ಟೀ ಚಮಚ ಗೋರಂಟಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು ಹೊರಗೆ ಲೇಪಿಸುವುದು, ಸ್ವಲ್ಪ ಶ್ರೀಗಂಧವನ್ನು ನೀರಿನಲ್ಲಿ ತೇದು ನೀರಿನಲ್ಲಿ (ಒಂದು ಬಟ್ಟಲು) ಕದಡಿ ಸೇವಿಸುವುದು.