ಸದಸ್ಯ:Ramyashri.Dondole/sandbox2
ಆಂಜನಯ್ಯನ ವೇಷ
ಬದಲಾಯಿಸಿಮನರಂಜನೆಯ ಕುಣಿತಗಳ ಸಾಲಿನಲ್ಲಿ ಬರುವ ಒಂದು ಕಲೆ ' ಆಂಜನಯ್ಯನ ವೇಷ '. 'ಆಂಜನೇಯ' ನ ವೇಷ ಹೋಗಿ ಹಳ್ಳಿಗರ ಮಾತಿನಲ್ಲಿ ' ಆಂಜನಯ್ಯ'ನ ವೇಷವಾಗಿದೆ! ತಲೆಗೆ ಕಿರೀಟ, ಮುಖಕ್ಕೆ ಕಪ್ಪು ಮಿಶ್ರಿತ ನೀಲಿ ಬಣ್ಣ, ಮೈಗೆಲ್ಲಾ ಹಸಿರು ಬಣ್ಣ, ಮೂತಿಗೆ ಕೆಂಪು ಬಣ್ಣ, ಎದೆಗೆ ಪದಕ, ಹೂವಿನ ಹಾರ, ತೊಡಲು ಒಂದು ಚಡ್ಡಿ, ಹಿಂಬಾಗದಲ್ಲಿ ನೇತಾಡುವ ಒಂದು ಬಾಲ, ಹಣೆಗೆ ಕೈಗೆ ಹಾಗೂ ತೋಳಿನ ಮೇಲೆ ನಾಮ,ಕಾಲಿಗೆ ಗೆಜ್ಜೆ, ಕೈಗೆ ಹಾಗೂ ತೋಳುಗಳಿಗೆ (ರಟ್ಟೆಗಳಿಗೆ) ಮಣಿಸರ ಇವಿಷ್ಟು ಆಂಜನಯ್ಯನ ವೇಷಭೂಷಣ. ಎಡಗೈಯಲ್ಲಿ ಗಂಟೆ, ಬಲಗೈಯಲ್ಲಿ ಬಿದಿರಿನಿಂದ ಇಲ್ಲವೆ ತಗಡಿನಿಂದ ತಯಾರು ಮಾಡಿದ ಗದೆ ಇರುತ್ತದೆ. ನಾಟಕದ ಆಂಜನೇಯನ ಪಾತ್ರವೇ ಆಂಜನಯ್ಯನ ವೇಷವಾಗಿ ಮನರಂಜಿಸುತ್ತದೆ. ಹಳ್ಳಿಯ ಹಬ್ಬಗಳು ಮತ್ತು ಜಾತ್ರೆ ಉತ್ಸವಗಳಲ್ಲಿ ವಿಶೇಷವಾಗಿ ಮೊಹರಂ ಮತ್ತು ಶ್ರೀರಾಮನವಮಿಯ ಸಂದರ್ಭದಲ್ಲಿ ಹಳ್ಳಿಯ ವಿಶಾಲವಾದ ಬಯಲ