ತ್ರಿವೇಣಿ ಸಂಗಮ ಎಂದರೆ ಮೂರು ನದಿಗಳು ಸೇರುವ ಸ್ಥಳ ಎಂದು ಅರ್ಥ. ತಿರುಮಕೂಡಲು ನರಸೀಪುರದಲ್ಲಿ ನಾವು ಕಾಣಬಹುದಾದ ಸಂಗಮವು ನಮ್ಮ ದಕ್ಷಿಣ ಭರತದ ಒಂದು ಪ್ರಮುಖ ಸಂಗಮ ಎಂದರೆ ತಪ್ಪಾಗಲಾರದು. ಈ ತ್ರಿವೇಣಿ ಸಂಗಮದಲ್ಲಿ ಮೂರು ಪ್ರಮುಖ ನದಿಗಳು ಸೇರುತ್ತವೆ, ಇವು ಯಾವುದು ಎಂದರೆ ಕಾವೇರಿ, ಕಪಿಲಾ ಹಾಗು ಸ್ಪಟಿಕ ಸರೋವರ. ಕರ್ನಾಟಕದ ಪ್ರಮುಖ ನದಿಯಾದ ಕಾವೇರಿಯು ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಮಲೆಗಳ ಮಧ್ಯದಿಂದ ಮೈಸೂರನ್ನು ತಲುಪುತ್ತದೆ, ನಂತರ ತಿರುಮಕೂದಲಿನ ಈ ಪುಣ್ಯಸ್ಥಳದಲ್ಲಿ ಸಂಗಮಿಸಿ ನಂತರ ಕೃಷ್ಣಗಿರಿಯ ಮೂಲಕ ತಮಿಳುನಾಡು ಸೇರುತ್ತದೆ. ಕಾವೇರಿಯು ಒಂದೆಡೆಯಿಂದ ಈ ಸ್ಥಳಕ್ಕೆ ಬಂದರೆ, ಕಪಿಲಾ ನದಿ ಇನೊಂದೆಡೆಯಿಂದ ಈ ಸ್ಥಳ ತಲುಪುತ್ತದೆ. ಮೂರು ನದಿಗಳಲ್ಲ್ಲಿ ಒಂದಾದ ಸ್ಪಟಿಕ ಸರೋವರವು ಗುಪ್ತಗಾಮಿನಿ. ಗುಪ್ತಗಾಮಿನಿ ಎಂದರೆ ಈ ನದಿಯು ಮನವನ ಕಣ್ಣಿಗೆ ಗೋಚರವಾಗುವುದಿಲ್ಲ. ಈ ಸಂಗಮದ ಒಂದೆಡೆ ಒಂದು ರಸ್ತೆಯಷ್ಟಿರುವ ತಿರುಮಕೂಡಲು ಇದ್ದರೆ, ಮತ್ತೊಂದು ದಡದಲ್ಲಿ ನರಸೀಪುರ ಊರನ್ನು ನಾವು ಕಾಣಬಹುದು. ಈ ಊರು ನರಸೀಪುರ ತಾಲೂಕು ಮೈಸೂರು ಜಿಲ್ಲೆಗೆ ಸೇರಿದೆ. ತಿರುಮಕೂಡಲು ನರಸೀಪುರದ ಈ ಪವಿತ್ರ ತ್ರಿವೇಣಿ ಸಂಗಮವು ಮೈಸೂರಿನಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿದೆ.

ಸ್ಥಳ ಮಹಿಮೆ

ಬದಲಾಯಿಸಿ

ಈ ತ್ರಿವೇಣಿ ಸಂಗಮದ ಬಳಿ ಒಂದು ಬೃಂದಾವನವಿದೆ. ಇದು ವ್ಯಾಸರಾಜ ಪೀಠದ ಗುರುಗಳಾದ ಶ್ರೀ ಶೇಷಚಂದ್ರಿಕಾಚಾರ್ಯರ ಬೃಂದಾವನ. ಇದನ್ನು ಹದಿನೈದನೆಯ ಶತನಮಾನದಲ್ಲಿ ಅಧಿಷ್ಠಾನಗೊಳಿಸಲಾಯಿತು ಎಂದು ಹೇಳಲಗಿದೆ. ಅಲ್ಲಿ ಅವರು ಸಮಾಧಿಯಾಗಿದ್ದಾರೆ. ಈ ಸಮಾಧಿಯು ಟಿಪ್ಪು ಸುಲ್ತಾನರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ. ಅದರ ಪಕ್ಕದಲ್ಲಿ ಉತ್ತರಕ್ಕೆ ಬ್ರಹ್ಮಾಶ್ವತ್ಥವಿದೆ. ಈ ಬ್ರಹ್ಮಾಶ್ವತ್ಥದಲ್ಲಿ ನೂರಾರು ಜನ ನಾಗಪ್ರತಿಷ್ಠೆಗಳನ್ನು ಮಾಡಿದ್ದಾರೆ. ಎಷ್ಟು ಮಂದಿ ಭಕ್ತಾದಿಗಳನ್ನು ತಮ್ಮ ಹರಕೆಯನ್ನು ಪೂರೈಸಿಕೊಳ್ಳಲು ಇಲ್ಲಿ ಬಂದು ನಾಗಪ್ರತಿಷ್ಠೆ ಮಾಡಿಸುತ್ತಾರೆ. ಈ ಜಾಗಕ್ಕೆ ಹೊಂದೆಕೊಂಡಂತೆಯೇ ಉತ್ತರದಲ್ಲಿ ಶೃಂಗೇರಿಯ ಜಗದ್ದುರುಗಳಾದ ಶ್ರೀ ದ್ವಿತೀಯ ಚಂದ್ರಶೇಖರ ಭರತಿ ಅವರ ಅಧಿಷ್ಠಾನ ಸಹ ಇದೆ. ವೈಷ್ಣವ ಸಂಪ್ರದಾಯದಲ್ಲಿ ಸಮಾಧಿಯ ಮೇಲೆ ಬೃಂದಾವನ ಕಟ್ಟುತ್ತಾರೆ ಹಾಗು ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯದಲ್ಲಿ ಸಮಾಧಿಯನ್ನು ಕಟ್ಟಿ ಅದರ ಮೇಲೆ ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸುತ್ತಾರೆ ಎಂದು ಹೇಳಲಾಗಿದೆ. ಈ ಸಂಗಮವು ಎಂತಹ ಪುಣ್ಯ ಸ್ಥಳವೆಂದರೆ, ಇಲ್ಲಿನ ನದಿಯಲ್ಲಿ ಮಿಂದರೆ ಪುಣ್ಯ ಲಭಿಸುವುದು ಎಂಬ ಮಾತಿದೆ. ತಿರುಮಕೂಡಲಿನ ಈ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ, ಅಲ್ಲಿರುವ ಎಲ್ಲಾ ದೇವರುಗಳ ದರ್ಶನ ಮಾಡಿದರೆ, ಶ್ರೀ ಕ್ಷೇತ್ರ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ವಿಶ್ವನಥನ ದರ್ಶನ ಮಡಿದಾಗ ಲಭಿಸುವ ಪುಣ್ಯಕ್ಕಿಂತ ಒಂದು ಗುಲಗಂಜಿ ತೂಕ ಹೆಚ್ಚು ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ. ಅಂತಹ ಪುಣ್ಯ ಸಂಗಮ ಸ್ಥಳ ಈ ತಿರುಮಕೂಡಲು ನರಸೀಪುರ.

ಶ್ರೀ ಅಗಸ್ತ್ಯೇಶ್ವರ ದೇವಾಲಯದ ಇತಿಹಾಸ

ಬದಲಾಯಿಸಿ

ತಿರುಮಕೂಡಲಿನಲ್ಲಿ ನಾವು ಪ್ರಸಿದ್ಧ ದೇವಲಯವಾದ ಶ್ರೀ ಅಗಸ್ತ್ಯೇಶ್ವರ ದೇವಾಲಯವನ್ನು ಕಾಣಬಹುದು. ಪುರಾಣದ ಪ್ರಕಾರ ಇದನ್ನು ಮಹಾರತ್ಮರಾದ ಶ್ರೀ ಅಗಸ್ತ್ಯ ಋಷಿಗಳು ಪ್ರತಿಷ್ಠಾಪಿಸಿದ್ದಾರೆ. ಈ ತ್ರಿವೇಣಿ ಸಂಗಮವು ಎಷ್ಟು ಪುಣ್ಯ ಸ್ಥಳವೆಂದರೆ ಒಮ್ಮೆ ಅಗಸ್ತ್ಯ ಋಷಿಗಳು ಈ ದಾರಿಯಲ್ಲಿ ಚಲಿಸುತ್ತಿದ್ದಾಗ ಈ ಪ್ರದೇಶ್ದಲ್ಲಿ ನಿಲ್ಲುತ್ತಾರೆ. ಇಲ್ಲಿನ ನದಿಗಳು ಸೇರುವ ಸಂಗಮವನ್ನು ಕಂಡು ಈ ಸ್ಥಳ ಬಹಳ ಪುಣ್ಯ ಪವಿತ್ರ ಸ್ಥಳವೆಂದು ಅರಿಯತ್ತಾರೆ. ಹೀಗೆ ಈ ಪುಣ್ಯ ಸ್ಥಳದಲ್ಲಿ ಈಶ್ವರ ಲಿಂಗವೊಂದನ್ನು ಸ್ಥಾಪಿಸಬೇಕೆಂದು ನಿರ್ಧರಿಸುತ್ತಾರೆ. ಹೀಗೆ ನಿರ್ಧರಿಸಿದಾಗ ಅವರು ಲಿಂಗವನ್ನು ಎಲ್ಲಿಂದ ತರಬೇಕೆಂದು ಯೋಚಿಸುತ್ತಾರೆ. ಆಗ ಅವರಿಗೆ ಪವನಪುತ್ರ ಹನುಮಂತನ ನೆನಪಾಗುತ್ತದೆ. ಅವರು ನೆನಸಿಕೊಂಡಾಗ ಹನುಮಂತನು ಅವರ ಬಳಿ ಪ್ರತ್ಯಕ್ಷನಾಗುತ್ತಾನೆ. ಆಗ ಅಗಸ್ತ್ಯರು ಈ ಸ್ಥಳದ ಬಗ್ಗೆ ವಿವರಿಸಿ, ಅವರ ಯೋಜನೆಯ ಕುರಿತು ತಿಳಿಸುತ್ತಾರೆ. ಅಗಸ್ತ್ಯರು ಹನುಮಂತನಿಗೆ ಶ್ರೀ ಕ್ಷೇತ್ರ ಕಾಶಿಗೆ ಹೋಗಿ ಶಿವ ಲಿಂಗವನ್ನು ತರುವಂತೆ ಆದೇಶಿಸುತ್ತಾರೆ. ಆಗ ಅಗಸ್ತ್ಯರ ಆದೇಶದಂತೆ ಶ್ರೀ ಕ್ಷೇತ್ರ ಕಾಶಿಗೆ ಹೋದ ಹನುಮಂತನು ಪವಿತ್ರ ಗಂಗೆಯಲ್ಲಿ ಮಿಂದು ಲಿಂಗವೊಂದನ್ನು ಹುಡುಕುತ್ತಾನೆ. ಆಗ ಅವನಿಗೆ ಒಂದು ಶಿವ ಲಿಂಗವು ದೊರೆಯುತ್ತದೆ. ಮಹಾ ಪರಾಕ್ರಮಿಯಾದ ಹನುಮಂತನಿಗೆ ಆ ಲಿಂಗವು ಗಾತ್ರದಲ್ಲಿ ಬಹಳ ಚಿಕ್ಕದೆಂಬ ಭಾವನೆ ಮೂಡುತ್ತದೆ. ಆದರೂ ವಿಧಿಯಿಲ್ಲದೆ ಅದೇ ಲಿಂಗವನ್ನು ತರುತ್ತಾನೆ. ಇತ್ತ ಅಗಸ್ತ್ಯ ಋಷಿಗಳು ಹನುಮಂತನಿಗಗಿ ಕಾಯುತ್ತಿರುತ್ತಾರೆ. ನಂತರ ಅಗಸ್ತ್ಯ ಋಷಿಗಳು ಲಿಂಗ ಪ್ರತಿಷ್ಠಾಪಿಸಲು ಶುಭ ಮುಹೂರ್ತ ಮಿಂಚಿ ಹೋಗುತ್ತದೆ ಎಂದು ಭಾವಿಸಿ ಸೈಕತ ಲಿಂಗವನ್ನು ತಿರುಮಕೂಡಲಿನ ಅಂದರೆ ತ್ರಿವೇಣಿ ಸಂಗಮದ ದಡದಲ್ಲಿ ಪ್ರತಿಷ್ಠಾಪಿಸುತ್ತಾರೆ. ಸೈಕತ ಲಿಂಗ ಎಂದರೆ ಮರಳಿನಿಂದ ಮಾಡಿದ ಲಿಂಗ ಎಂದು ಅರ್ಥ.