ಸದಸ್ಯ:Rakshitha v d/ನನ್ನ ಪ್ರಯೋಗಪುಟ
ದೇವ ಇದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ದೇವಚಳ್ಳ ಗ್ರಾಮದಲ್ಲಿರುವ ಒಂದು ಪುಟ್ಟ ಹಳ್ಳಿಯಾಗಿದೆ.
ಇತಿಹಾಸ
ಬದಲಾಯಿಸಿಈ ಊರು ತನ್ನದೆ ಆದಂತಹ ಐತಿಹ್ಯವನ್ನು ಹೊಂದಿದೆ.ಈ ಊರಿನಲ್ಲಿ ಬಹಳ ಹಿಂದಿನ ಕಾಲದಲ್ಲಿ ಜೈನಧರ್ಮದ ಜನರು ವಾಸವಿದ್ದರು. ಅವರು ಈಶ್ವರ ದೇವರ ಆರಾಧಕರಾಗದ್ದರಿಂದ ಈಶ್ವರ ದೇವರ ಸಣ್ಣದಾದ ಪ್ರತಿಷ್ಟೆಯನ್ನು ಮಾಡಿ ದೇವತಾರಾಧನೆ ಮಾಡಿಕೊಂಡಿದ್ದರು.ಹೀಗಿರುವಾಗ ಪೂಜೆಗೋಸ್ಕರ ಒಂದು ಬ್ರಾಹ್ಮಣ ಕುಟುಂಬವೊಂದನ್ನು ನೇಮಿಸಿದ್ದರು.ಕಾಲಕ್ರಮೇಣವಾಗಿ ಆ ಜೈನರು ಜಾಗ ಮತ್ತು ದೇವಾಲಯವನ್ನು ಬ್ರಾಹ್ಮಣರಿಗೆ ವಹಿಸಿಕೊಟ್ಟು ಹೋದರು.ಆ ಬ್ರಾಹ್ಮಣ ಕುಟುಂಬದವರು ದೇವರ ಪೂಜೆಯನ್ನು ಮಾಡುತ್ತಾ ಇದ್ದರು.ತದನಂತರ ಆ ಕುಟುಂಬ ಅಳಿದು ಹೋಗುತ್ತದೆ. ನಂತರ ಅಲ್ಲಿದ್ದಂತಹ ದೇವರ ವಿಗ್ರಹಗಳೆಲ್ಲ ಮಣ್ಣು ಪಾಲಾಗಿ ಹೋಗುತ್ತದೆ.ಕೆಲವು ಕಾಲಗಳ ನಂತರ ಅಲ್ಲಿನ ಜನರು ಸ್ಥಳಸಾನಿಧ್ಯದ ಬಗ್ಗೆ ಚಿಂತನೆ ಮಾಡಿದಾಗ ಅದರ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ.ಆದರೆ ಆ ಸ್ಥಳದಲ್ಲಿ ದೇವರ ಪ್ರತಿಷ್ಠೆ ಇದೆ ಎಂದು ನಂಬಿ ಈ ಸ್ಥಳಕ್ಕೆ ದೇವ ಹೆಸರು ಬರುತ್ತದೆ.ಈಗ ಈ ಹೆಸರು ಜನಜನಿತವಾಗಿದೆ.
ಸುತ್ತಮುತ್ತಲಿನ ಹಳ್ಳಿಗಳು
ಬದಲಾಯಿಸಿದಂಡಿನ ಮನೆ ಮಡಪ್ಪಾಡಿ ಮಾವಿನಕಟ್ಟೆ ದೇವ ಚಳ್ಳ
ಕೃಷಿಗಳು
ಬದಲಾಯಿಸಿಅಡಿಕೆ ತೆಂಗು ಕರಿಮೆಣಸು ಬಾಳೆ
ಶಿಕ್ಷಣಸಂಸ್ಥೆ
ಬದಲಾಯಿಸಿಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದೇವ
ಮಾತನಾಡುವ ಭಾಷೆಗಳು
ಬದಲಾಯಿಸಿಕನ್ನಡ ಅರೆಭಾಷೆ ತುಳು