ಸದಸ್ಯ:Rakshitha kakunje/sandbox
ಆತ್ಮ ವಿಶ್ವಾಸ ಮಾನವನಿಗೆ ದೈವದತ್ತವಾದ ಆಸ್ತಿಗಳಲ್ಲಿ ಅವನಲ್ಲೇ ನೆಲೆಸಿರುವ ಆತ್ಮ ವಿಶ್ವಾಸವು ಬಹಳ ಅಮೂಲ್ಯವಾದ ಆಸ್ತಿ. ಇದನ್ನು ಬೆಳೆಸಿ ಪೋಷಿಸಿ ಉನ್ನತ ದಾರಿಯಲ್ಲಿ ಕೊಂಡೊಯ್ದರೆ, ಅದೂ ನಮ್ಮನ್ನೂ ಇನ್ನೂ ಉತ್ತಮ ಸ್ಥಿತಿಗೆ ಮುಟ್ಟಿಸುತ್ತದೆ. ವಿಶ್ವಾಸ ಎಂಬ ಶಬ್ದಕ್ಕೆ ಅನೇಕ ಅರ್ಥಗಳುಂಟು. ನಂಬುಗೆ, ಪ್ರೀತಿ, ವಾತ್ಸಲ್ಯ, ಪ್ರಾಮಾಣಿಕತೆ ಅಡಗಿದೆ. ಈ ಶಬ್ದದಲ್ಲಿ ಯಾರಿಗಾದರೂ ಯಾರಲ್ಲಾದರೂ ವಿಶ್ವಾಸವಿದೆ ಎಂದಾಗ, ಅವರಿಗೆ ಈ ಎಲ್ಲಾ ಭಾವನೆಗಳಿಗೂ ಉತ್ತರ ದೊರಕಿದೆ ಎಂದೇ ಅರ್ಥ. ಒಂದು ಜವಾಬ್ದಾರಿಯಾದ ಕಾರ್ಯಭಾರವನ್ನು ವಹಿಸುವಾಗ, ಒಬ್ಬರಿಗೊಬ್ಬರಲ್ಲಿ ವಿಶ್ವಾಸವಿದ್ದರೆ ಮಾತ್ರ ಸಾಧ್ಯ. ಕಾರ್ಯಭಾರವನ್ನು ತೆಗೆದುಕೊಳ್ಳುವ ವ್ಯಕ್ತಿ ಹಿಂಜರಿಯಬಹುದು. ಆಗ ಕೊಡುವವ'ಹೆದರಬೇಡ.ನೀನು ಇದನ್ನು ಮಾಡಲು ಖಂದತಾಸಾದ್ಯ.ನನಗ ನಿನ್ನಲ್ಲಿ ವಿಶ್ವಾಸವಿದೆ' ಎಂದು ಧೈರ್ಯ, ವಿಶ್ವಾಸವೆಲ್ಲವನ್ನು ತುಂಬುವುದು ತಿಳಿದಿಲ್ಲವೇ! ವಿಶ್ವಾಸಾರ್ಹನಾದ ವ್ಯಕ್ತಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಉಪಕಾರಿಯಾಗುತ್ತಾನೆ. ಎಲ್ಲರ ನಂಬಿಗೆಗೆ ಪಾತ್ರನಾಗಿ ತಾನು ಉಪಕೃತನಾಗುತ್ತಾನೆ. ವಿಶ್ವಾಸ ಘಾತುಕನಾದವನು ಎಲ್ಲೆಡೆಯಲ್ಲಿಯೂ ಎಲ್ಲರಿಂದಲೂ ತಿರಸ್ಕ್ರತನಾಗುತ್ತಾನೆ.