ಸದಸ್ಯ:Rakshitha 2/ನನ್ನ ಪ್ರಯೋಗಪುಟ

ಎಂ ಆರ್ ಪೂವಮ್ಮ

ಬದಲಾಯಿಸಿ
 
ಎಂ ಆರ್ ಪೂವಮ್ಮ (ಜನನ ೫ ಜೂನ್ ೧೯೯೦)

ಮಾಚೆಟ್ಟಿರಾ ರಾಜು ಪೂವಮ್ಮ (ಜನನ ೫ ಜೂನ್ ೧೯೯೦) ಒಬ್ಬ ಭಾರತೀಯ ಓಟಗಾರ್ತಿ, ೪೦೦ಮೀಟರ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಾಳೆ. ಅವರು ೨೦೦೮ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು.ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ತನ್ನ ಕೊಡುಗೆಗಳಿಗಾಗಿ೨೦೧೫ರಲ್ಲಿ ಅರ್ಜುನ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.

ಪೂವಮ್ಮ ಎಂ ಜಿ ರಾಜು ೫ ಜೂನ್ ೧೯೯೦ರಲ್ಲಿ ಜನಿಸಿದರು.ಮಂಗಳೂರಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮತ್ತು ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಮಂಗಳೂರು ಎನ್.ಡಿ ಕಾಲೇಜ್ ಆಫ್ ಬಿಸಿನೆಸ್ ಮಾನೇಜ್ ಮೆಂಟಿನಿಂದ ವ್ಯವಹಾರ ನಿರ್ವಹಣೆಯಲ್ಲಿ ಪದವಿಯನ್ನು ಪಡೆದರು.[೧]


  • ವೃತ್ತಿ ಜೀವನ*

ಪೂವಮ್ಮರವರು ೨೦೦೮ರ ಬೀಜಿಂಗ್ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದು ಪ್ರಸ್ತುತ ೪೦೦ಮೀಟರ್ ವಿಭಾಗದಲ್ಲಿ ಏಷ್ಯಾದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ೨೦೦೮ರ ಯುಥ್ ಕಾಮನ್ ವೆಲ್ತ್ ಕ್ರೀಡಾಕೂಟ ಮತ್ತು ೪*೪೦೦ಮೀಟರ್ ವಿಭಾಗದಲ್ಲಿ ನಡೆದ ೪೦೦ ಮೀಟರ್ ಪಂದ್ಯಾವಳಿಯಲ್ಲಿ ಅವರು ಸಿಲ್ವರ್ ಪ್ರಶಸ್ತಿಯನ್ನು ಗೆದ್ದರು. ೨೦೧೧ರಲ್ಲಿ ಕೊಲ್ಕತ್ತಾದಲ್ಲಿ ಅವರು ಓಪನ್ ನ್ಯಾಷನಲ್ಸ್ ನಲ್ಲಿ ಮೊದಲಬಾರಿಗೆ ನಿಂತಾಗ ಆಕೆಯ ಅದೃಷ್ಟ ಕುಲಾಯಿಸಿಯಿತು. ಆಕೆಯು ತನ್ನ ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯವಾಯಿತು.

ಪ್ರಶಸ್ತಿಗಳು

ಬದಲಾಯಿಸಿ

ಪೂವಮ್ಮರವರು ೨೦೧೨ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಎರಡು ಏಷ್ಯನ್ ಗ್ರ್ಯಾಂಡ್ ಫಿಕ್ಸ್ ನಲ್ಲಿ ಎರಡು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದುಕೊಂಡರು. ಅವರು ಬ್ಯಾಂಕಾಕ್‌ನಲ್ಲಿ ೨೦೧೩ ಏಷ್ಯನ್ ಗ್ರ್ಯಾಂಡ್ ಫ್ರಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದರು[೨].

ವಿಶೇಷ ಸಾಧನೆಗಳು

ಬದಲಾಯಿಸಿ
  • ಕ್ರೀಡಾ ಸಾಧನೆ*

ಆಕೆಯು ೫೨.೭೫ ಸೆಕೆಂಡುಗಳ ವೇಗದ ಸಮಯವನ್ನು ತೆಗೆದುಕೊಂಡು ೨೦೧೩ರಲ್ಲಿ ಭಾರತದಲ್ಲಿ ಪಟಿಯಾಲದ ಫೆಡರೇಷನ್ ಕಪ್‌ನಲ್ಲಿ ಮೊದಲ ಸ್ಥಾನವನ್ನು ಪಡೆದರು. ಪೂವಮ್ಮರವರು ಮಾಸ್ಕೋ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ೨೦೧೩ರಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ೪*೪೦೦ ಮೀಟರ್ ರಿಲೇ ತಂಡದಲ್ಲಿ ಭಾಗವಹಿಸಿದ್ದರು. ಕೌರ್ ಮತ್ತು ಪ್ರಿಯಾಂಕಾ ಪವಾರ್ ಅವರ ೨೦೧೪ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ೪*೪೦೦ಮೀಟರ್ ರಿಲೇನಲ್ಲಿ ಅವರು ಚಿನ್ನದ ಪದಕವನ್ನು ಪಡೆದರು[೩].

ಉಲ್ಲೇಖಗಳು

ಬದಲಾಯಿಸಿ

<reference/>

  1. http://www.veethi.com/india-people/m._r._poovamma-profile-9409-15.htm
  2. https://currentaffairs.gktoday.in/m-r-poovamma-babita-kumari-conferred-arjuna-awar...
  3. http://www.dnaindia.com/sports/report-asian-athletics-championship-despite-absence-of-big-names-india-s-achievement-is-truly-noteworthy-2497373