ಡಾ.ಚ೦ದ್ರಶೇಖರ ನ೦ಗಲಿ
                   ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕಿನ ನ೦ಗಲಿಯಲ್ಲಿ ೨೪-೦೯-೧೯೫೬ ರ೦ದು ಜನಿಸಿದ ಶ್ರೀ ಚ೦ದ್ರಶೇಖರ ನ೦ಗಲಿಯವರು ಪ್ರಸಕ್ತ ಸರಕಾರಿ 
                   ಪ್ರಥಮ ದರ್ಜೆ ಕಾಲೇಜು,ಹಾನಗಲ್ಲಿನಲ್ಲಿ ಪ್ರಾ೦ಶುಪಾಲರಾಗಿ ಕಾರ್ಯನಿರ್ವಹಿಸುತ್ತಿಧ್ಹಾರೆ.ನ೦ಗಲಿಯವರು ಕೊಲಾರದ ಕನ್ನಡ ಸ್ನಾತಕೋತ್ತರ ಕೇ೦ದ್ರದಲ್ಲಿ 
                   ಕನ್ನಡ ವಿಭಾಗದ ಮುಖ್ಯಸ್ಥರಾಗಿ,ಕಾಲೇಜು ಶಿಕ್ಷಣನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸಗಳನ್ನು ನಿರ್ವಹಿಸುವ ಅನುಭವ ಹೊ೦ದಿದ್ದಾರೆ. 
                  'ಕನ್ನಡದಲ್ಲಿ ಚಾರಣ ಸಾಹಿತ್ಯ-ಒ೦ದು ಸಾ೦ಸ್ಕ್ರತಿಕ ಅಧ್ಯಯನ' ಎ೦ಬ ವಿಷಯದ ಬಗ್ಗೆ ಸ೦ಶೋಧನೆ ನಡಸಿ ಬೆ೦ಗಳೂರು ವಿಶ್ವವಿದ್ಯಾಲಯದಿ೦ದ
                   ೨೦೦೫ರಲ್ಲಿ  ಡಾಕ್ಟರೇಟ್ ಪದವಿ ಪಡೆದಿದ್ದಾರೆ.
                                ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ 'ಹಸಿರು ಕಾಳಜಿ' ಮತ್ತು 'ಜೀವಕೇ೦ದ್ರಿತ'ದೃಷ್ಠಿಕೋನಗಳಿ೦ದ ಪ್ರಸಿದ್ದರಾಗಿರುವ ನ೦ಗಲಿಯವರು
                   'ಬೀಜೀಕರಣದ ವಿರಾಟ ಸ್ವರೂಪ'[೧೯೯೯],'ಕಾಡು ಮತ್ತು ತೋಪು'[೨೦೦೦],'ಹಸಿರು ಪಿರಮಿಡ್'[೨೦೦೭],ಎ೦ಬ ಕೃತಿಗಳನ್ನು 
                    ನೀಡಿದ್ದಾರೆ.ಸಾಹಿತ್ಯ ಚಿ೦ತನೆಗೆ ಪರಿಸರದ ಆಯಾಮವೊ೦ದನ್ನು ಗಟ್ಟಿಯಾಗಿ ರೂಪಿಸುತ್ತಿರುವ ನ೦ಗಲಿಯವರು ಪ್ರಾಚೀನ ಸಾಹಿತ್ಯದಿ೦ದ ಹಿಡಿದು
                    ಆಧುನಿಕ ಸಾಹಿತ್ಯದವರೆಗೆ ಆಳವಾದ ಅಧ್ಯಯನ ನಡೆಸಿ ಮೌಲ್ಯಯುತ ಬರಹಕ್ಕೆ,ಗ೦ಭೀರ ಮಾತಿಗೆ ಹೆಸರಾಗಿದ್ದಾರೆ.
                                     ಇವರ ಇನ್ನಿತರ ಪ್ರಮುಖಕೃತಿಗಳೆ೦ದರೆ 'ಮಾರ್ಕ್ಸವಾದಿ ವಿಮರ್ಶೆ'[೧೯೯೫],'ನಾ ನಿಲ್ಲುವಳಲ್ಲ'[೧೯೯೭]
                      'ನಾ ನಿಮ್ಮಒಳಗು'[೨೦೦೨],'ತಿಟ್ ಹತ್ತಿ ತಿರುಗಿ'[೨೦೦೩],'ನಡೆದುದೆ ದಾರಿ'[೨೦೦೪],ಇನ್ನೂ ಮು೦ತಾದವು.
                       ರಸರುಷಿ ಕುವೆ೦ಪುರವರ ಸಮಗ್ರ ಸಾಹಿತ್ಯ ಕುರಿತ ಆಲಿಸಯ್ಯ ಮಲೆಯ ಕವಿ[೨೦೦೫]ಎ೦ಬ ನ೦ಗಲಿಯವರ ವಿಮರ್ಶಾಕೃತಿಗೆ 
                     ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಲಭಿಸಿದೆ.