ಬಸವರಾಜ ದು‌ರ್ಗ     


ಬಸವರಾಜ ಕೋಟೆಯು, ಕರಾವಳಿ ಬಂದರಿನ ಅರಬ್ಬಿ ಸಮುದ್ರದಲ್ಲಿ ಹಸಿರಿನ ಕೋಟೆಯ ಸ್ಪಾಟ್ ದ್ವೀಪ ಎಂದು ಹೆಸರು ವಾಸಿಯಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿದೆ. ನಾವು ದೋಣಿಗಳು,ಅಥವಾ ಓಡದ ಮೂಲಕ ಈ ದ್ವೀಪವನ್ನು ತಲುಪಬಹುದು.ಈ ದ್ವೀಪವು ಶರಾವತಿ ನದಿಯಿಂದ ಕೇವಲ 4 ಕಿ.ಮಿ ಹಾಗು ಹೊನ್ನಾವರದಿಂದ 3 ಕಿ.ಮಿ ದೂರದಲ್ಲಿದೆ.ಪಾವಿನಕುರುವ ಗ್ರಾಮದ ನೌಕಾಯಾನದ ನೆರವಿನಿಂದ ಕೇವಲ ಹದಿನೈದು ನಿಮಿಷದ ದಾರಿ. ದ್ವೀಪದ ಆಗ್ನೇಯ ಭಾಗದಲ್ಲಿ ಕಲ್ಲುಗಳಿಂದ ಮಾಡಿದ ವಾಸ್ತುಶಿಲ್ಪದ ಪ್ರವೇಶ ದ್ವಾರವಿದೆ. ಈ ದ್ವೀಪವು ಸಮುದ್ರ ನಗರದಿಂದ ಸುಮಾರು 45 ಮಿ ಹಾಗು 19 ಹೆಕ್ಟೇರ್ ಎತ್ತರದಲ್ಲಿದೆ. ಈ ದ್ವೀಪದ ತುತ್ತತುದಿಯು ಒಣ ಹುಲ್ಲು ಮತ್ತು ಸಾಕಷ್ಟು ಮರಗಳನ್ನು ಒಳಗೊಂಡಿದೆ.ಈ ದ್ವೀಪದಲ್ಲಿ ತಾಜ ಸಿಹಿ ನೀರಿನ ಬಾವಿಗಳನ್ನು ಕಾಣಬಹುದು.