ಸದಸ್ಯ:Rajeshwari Belal/ನನ್ನ ಪ್ರಯೋಗಪುಟ 4

ಎಲ್ಲರೊಳಗೊಂದಾಗು ಮಂಕುತಿಮ್ಮಕೃತಕ ಆಭರಣಗಳು ಬದಲಾಯಿಸಿ

ಕೃತಕ ಆಭರಣಗಳು ಬದಲಾಯಿಸಿ

ಆಭರಣಗಳು ಮನುಷ್ಯನ ಅಲಂಕರಣ ಸಾಮಾಗ್ರಿಗಳಲ್ಲಿ ಒಂದು. ಇತ್ತೀಚೆಗೆ ಹೆಣ್ಣು ಮಕ್ಕಳು, ಮಹಿಳೆಯರು ಚಿನ್ನ, ಬೆಳ್ಳಿ, ವಜ್ರ-ವೈಡೂರ್ಯಗಳಿಂದ ತಯಾರಿಸಲ್ಪಟ್ಟ ಆಭರಣಗಳಿಗಿಂತ ಕೃತಕ ಆಭರಣಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಕಿವಿಯೋಲೆ, ಉಂಗುರ, ಕಂಠಸರಗಳು ವಿಶೇಷವಾಗಿ ಕಂಗೊಳಿಸುತ್ತದೆ.

ಹೆಣ್ಣು ಮಕ್ಕಳು ತೊಡುವ ಉಡುಗೆಗೆ ಬೇಕಾದ ರೀತಿಯಲ್ಲಿ ವಿವಿಧ ವಿನ್ಯಾಸಗಳ ಮ್ಯಾಚಿಂಗ್ ಸರಗಳನ್ನು ಕಡಿಮೆ ದರದಲ್ಲಿ ಪಡೆಯಬೇಕಾದರೆ ಕೃತಕ ಆಭರಣಗಳನ್ನೇ ಖರೀದಿಸಬೇಕಾಗುತ್ತದೆ. ಇದರಿಂದ ಮಹಿಳೆಯರು ಇಂದು ತಮ್ಮ ಎಲ್ಲಾ ಡ್ರೆಸ್‍ಗೆ ಮ್ಯಾಚಿಂಗ್ ಕಲ್ಲರ್ ಹೊಂದಿರುವ ಬಗೆಬಗೆಯ ಕೃತಕ ಆಭರಣಗಳನ್ನು, ಸರಗಳನ್ನು ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೆಣ್ಣು ಮಕ್ಕಳನ್ನು ಆಕರ್ಷಿಸಲು ವಿವಿಧ ವಿನ್ಯಾಸಗಳೊಂದಿಗೆ ಪ್ರತಿ ವರ್ಷ ಬೇರೆ ಶೈಲಿಯ ಕೃತಕ ಆಭರಣಗಳು ಕಣ್ಮನ ಸೆಳೆಯುತ್ತದೆ. ಕಾಲೇಜಿನಲ್ಲಿ ಕಾರ್ಯಕ್ರಮಗಳಿರುವ ಸಂದರ್ಭದಲ್ಲಿ ವಿಶೇಷವಾಗಿ ಫ್ಯಾನ್ಸಿ ಮಳಿಗೆಗಳಿಗೆ ಹುಡುಗಿಯರು ಲಗ್ಗೆ ಇಡುವುದು ಸಾಮಾನ್ಯ. ಇತ್ತೀಚೆಗೆ ಇತರ ಕಾರ್ಯಕ್ರಮಗಳಿಗೂ ಭಾಗವಹಿಸಲಿದ್ದರೂ ಕೃತಕ ಆಭರಣಗಳನ್ನು ಧರಿಸುತ್ತಾರೆ. ಆಭರಣಗಳ ಕಡೆ ಹೆಣ್ಣು ಮಕ್ಕಳ ಗಮನ ತಾನಾಗಿಯೇ ಬೀಳುತ್ತದೆ. ಕಾಲೇಜಿಗೆ ದಿನ ತೊಡುವ ಉಡುಗೆಗಳಿಗೂ ವಿವಿಧ ಬಗೆಯ ಸಿಂಪಲ್ ಆಗಿರುವ ಕಿವಿಯೋಲೆಗಳು, ಜೀನ್ಸ್ ತೊಡುವಾಗ ಸ್ಟೈಲಿಶ್ ಕಾಣುವ ಸರಗಳನ್ನು ಕಾಲೇಜು ಕುವರಿಯರು ಧರಿಸುವುದನ್ನು ಕಾಣಬಹುದು.

ಆ್ಯಂಟಿಕ್ ಆಭರಣಗಳು ಬದಲಾಯಿಸಿ

ಇಂದಿನ ಮಹಿಳೆಯರು ತಮ್ಮ ಉಡುಗೆ – ತೊಡುಗೆಯಲ್ಲಿ ಪರ್ಫೆಕ್ಷನ್‍ನನ್ನು ಬಯಸುತ್ತಾರೆ. ಉಡುಗೆ ಎಂದಾಗ ಕೇವಲ ಬಟ್ಟೆ, ಸೀರೆ, ಡ್ರೆಸ್ ಅಷ್ಟಕ್ಕೇ ಪ್ರಾಮುಖ್ಯ ನೀಡಿದರೆ ಸಾಲದು. ಬದಲಾಗುತ್ತಿರುವ ಫ್ಯಾಶನ್ ಜಗತ್ತಿನಲ್ಲಿ ಅಪಡೇಟ್ ಅವಶ್ಯಕವಾಗಿರುತ್ತದೆ. ತಮ್ಮದೆ ಆದ ಸ್ಟೈಲ್ ಸ್ಟೇಟ್‍ಮೆಂಟ್‍ನ್ನು ಸೃಷ್ಟಿಸಲು ಹೆಣ್ಣು ಇಚ್ಛಿಸುತ್ತಾಳೆ. ಆದ್ದರಿಂದ ಬಟ್ಟೆಗೆ ಸರಿಹೊಂದುವ ಸ್ಯಾಂಡಲ್ಸ್, ಮೇಕಪ್, ವಿವಿಧ ವಿನ್ಯಾಸದ ಆಭರಣಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಬಂಗಾರದ ಆಭರಣಗಳಿಗಿಂತ ಹೆಚ್ಚು ಟ್ರೆಂಡಿಯಾಗಿರುವ ಆಭರಣಗಳೇ ಈ ಆ್ಯಂಟಿಕ್ ಆಭರಣಗಳು. ಈ ಆಭರಣಗಳು ಇಂದಿನ ದಿನಗಳಲ್ಲಿ ಬಂಗಾರವನ್ನೂ ನಾಚಿಸುವಂಥ ಮಾದರಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಂದರ್ಭಕ್ಕೆ ತಕ್ಕಂತೆ ಆಭರಣ ಧರಿಸಿದಾಗ ಉಡುಗೆಯ ಅಂದವನ್ನು ಹೆಚ್ಚಿಸಲು ಕಾರಣವಾಗುತ್ತದೆ.

ಆ್ಯಂಟಿಕ್ ಆಭರಣಗಳಲ್ಲಿ ಹಲವಾರು ವಿಧಗಳಿವೆ. ಬಂಜಾರ ಜ್ಯುವೆಲ್ಲರಿಗಳು, ಟ್ರೈಬಲ್‍ಗಳು ಮಾದರಿಯ ಆ್ಯಂಟಿಕ್ ಜ್ಯವೆಲ್ಲರಿಗಳು, ಸಿಂಪಲ್ ಆ್ಯಂಟಿಕ್ ಜ್ಯುವೆಲ್ಲರಿಗಳು ಹೀಗೆ ಹಲವಾರು ಮಾದರಿಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಕೆಲವು ಬಗೆಯ ಆಭರಣಗಳಲ್ಲಿ ಕಲ್ಲರ್ ಆಯ್ಕೆ ಇರುತ್ತದೆ. ಆದ್ದರಿಂದ ಡ್ರೆಸ್‍ಗಳಿಗೆ ಮ್ಯಾಚಿಂಗ್ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಿವಿಯೋಲೆಗಳು, ಪೆಂಡೆಂಟ್ ಸೆಟ್ಟುಗಳು, ನೆಕ್ ಪೀಸುಗಳು, ಬಳೆಗಳು, ಕಡಗಗಳು, ಆಂಕ್ಲೆಟ್ಟುಗಳು ಹೀಗೆ ಎಲ್ಲಾ ಬಗೆಯ ಆಭರಣಗಳು ಲಭ್ಯವಿದ್ದು ಇವುಗಳು ಟ್ರೆಂಡಿಯಾಗಿರುತ್ತದೆ.

ಮಾಡರ್ನ್ ಡ್ರೆಸ್ಸುಗಳಿಗೆ ಸಿಂಪಲ್ ಆಗಿರುವ ಆಭರಣಗಳ ಆಯ್ಕೆ ಸೂಕ್ತವಾಗಿರುತ್ತದೆ. ಎಥಿಕ್ ಡ್ರೆಸ್ಸುಗಳಿಗೆ ಗ್ರ್ಯಾಂಡ್ ಲುಕ್ ನೀಡುವಂತಹ ಮಾದರಿಯ ಆಭರಣಗಳನ್ನು ಆಯ್ದುಕೊಂಡರೆ ನೋಡಲು ಆಕರ್ಷಣೀಯವಾಗಿರುತ್ತದೆ. ಸೀರೆಗಳಿಗೆ, ಲೆಹಾಂಗಾಗಳಿಗೆ, ಲಾಂಗ್ ಸ್ಕರ್ಟುಗಳಿಗೆ, ಅನಾರ್ಕಲಿ ಚೂಡಿದಾರುಗಳಿಗೆ ಇನ್ನುತ್ತರ ಎಥಿಕ್ ಡ್ರೆಸ್ಸುಗಳಿಗೆ ಹೊಂದುವಂತಹ ಆಭರಣಗಳು ಲಭ್ಯವಿದೆ. ವೆಸ್ಟರ್ನ್ ವೇರುಗಳಾದ ಜೀನ್ಸ್ ಪ್ಯಾಂಟ್ ಮತ್ತು ಟಾಪುಗಳು, ಗೌನುಗಳು, ಫ್ರಾಕುಗಳು, ಮಿನಿಸ್ಕರ್ಟುಗಳು ಇನ್ನಿತ್ತರ ಡ್ರೆಸ್ಸುಗಳಿಗೂ ಮ್ಯಾಚ್ ಆಗುವಂತಹ ಆಭರಣಗಳು ದೊರೆಯುತ್ತದೆ. ಈ ಆಭರಣಗಳ ಆಯ್ಕೆಗಳಲ್ಲಿ ವಯಸ್ಸಿನ ಮಿತಿ ಇರುವುದಿಲ್ಲ. ಈ ಆಭರಣಗಳು ಬಂಗಾರದಷ್ಟು ದುಬಾರಿಯಲ್ಲದ ಕಾರಣ ಕೈಗೆಟುಕುವ ಬೆಲೆಯಲ್ಲಿಯೇ ಸಿಗುತ್ತದೆ.

ರೇಷ್ಮೆ ದಾರದ ಆಭರಣಗಳು ಬದಲಾಯಿಸಿ

ಇತ್ತಿಚೀನ ದಿನಗಳಲ್ಲಿ ಬದಲಾಗುತ್ತಿರುವ ಕಾಲಘಟ್ಟಗಳಲ್ಲಿ ಆಧುನಿಕ ಸೌಂದರ್ಯ ಲೋಕಕ್ಕೆ ತೆರೆದುಕೊಳ್ಳುವ ಮನಸ್ಸುಗಳು ಅಗ್ಗವಾಗಿ ಸಿಗುವ ಈ ರೀತಿಯ ಆಭರಣಗಳಿಗೆ ಮೊರೆಹೋಗುತ್ತಿವೆ. ಮಾಡರ್ನ್ ಜಗತ್ತಿಗೆ ಕಾಲಿಟ್ಟಾಗ ಮನುಷ್ಯನ ಸಹಜ ಆಸೆಯಂತೆ ಅಲಂಕಾರಿಕ ಆಭರಣಗಳು ಹೆಚ್ಚಾಗಿ ಹೆಣ್ಣು ಮಕ್ಕಳ ಮನ ಸೆಳೆಯುವುದು ಸರ್ವೇ ಸಾಮಾನ್ಯವಾಗಿದೆ. ಇದು ಫ್ಯಾಶನ್ ಯುಗ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಯುಗದಲ್ಲಿ ಹಕ್ಕಿಯಂತೆ ಹಾರಡುವ ರೆಕ್ಕೆ ಪುಕ್ಕದ ಆಭರಣಗಳ ಟ್ರೆಂಡ್ ಕೂಡ ಹೆಚ್ಚಿದೆ. ನಾನಾ ರೀತಿಯ ಪಕ್ಷಿಗಳ ಉದುರಿದ ರೆಕ್ಕೆ ಪುಕ್ಕದಿಂದ ತಯಾರಿಸಲಾಗುವ ಫೆದರ್ ಆಕ್ಸಸರೀಸ್ ಕಾಲೇಜು ಯುವತಿಯರ ಮನ ಗೆದ್ದಿದೆ. ಫ್ಯಾಶನ್ ಜಗತ್ತಿನಲ್ಲಿ ಕಾಲಕ್ಕೆ ತಕ್ಕಂತೆ ಮಹಿಳೆಯರ ಹೊಸ ಹೊಸ ಆಲೋಚನೆಗೆ ತಕ್ಕಂತೆ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ನಾನಾ ರೀತಿಯ ನವ-ನವೀನ ವಿನ್ಯಾಸದ ಆಭರಣಗಳು ಮಾರುಕಟ್ಟೆಗಲ್ಲಿ ಚಾಲ್ತಿಗೆ ಬರುತ್ತಿರುತ್ತದೆ. ಆದರಲ್ಲಿಯೂ ಮನಸೆಳೆಯುವ ಆಭರಣ ವಿನ್ಯಾಸಗಳ ಆಕರ್ಷಣೆಗೆ ಒಳಗಾಗದವರೇ ಇಲ್ಲ. ಇನ್ನೊಂದು ವಿಶೇಷವಾದ ಆಭರಣವೆಂದರೆ ಅದು ರೇಷ್ಮೇ ನೂಲಿನಿಂದ ತಯಾರಿಸಿದ ಆಭರಣಗಳು ಪ್ರಸ್ತುತ ಫ್ಯಾಶನ್ ಲೋಕದ ಹೊಸ ಆಕರ್ಷಣೆಯಾಗಿದೆ. ಬಣ್ಣ ಬಣ್ಣದ ರೇಷ್ಮೆ ದಾರದ ಆಭರಣಗಳು ಚಿನ್ನಕ್ಕಿಂತ ಅಂದವಾಗಿ ಮನಸ್ಸನ್ನು ಚಂಚಲಗೊಳಿಸುತ್ತದೆ. ಕಿವಿಯಲ್ಲಿ ಮಿಂಚುವ ಕಿವಿಯೋಲೆ, ಕುತ್ತಿಗೆಗೆ ಜಗಮಗಿಸುವ ನೆಕ್ಲೆಸ್, ಕೈಗೆ ಬಣ್ಣ ಬಣ್ಣದ ಬಳೆ ಹೆಣ್ಣು ಮಕ್ಕಳಲ್ಲಿ ಕಾಣಬಹುದು.

ಈ ರೀತಿಯ ಆಭರಣಗಳಿಗೆ ಹೆಚ್ಚಿನ ಬೇಡಿಕೆಗಳಿರುವುದರಿಂದ ಯಥೇಚ್ಚವಾಗಿ ಇದರ ಮಳಿಗೆಗೆಗಳು ಇಂದು ಅಧಿಕ ಸಂಖ್ಯೆಯಲ್ಲಿ ಆರಂಭಗೊಳ್ಳುತ್ತಿದೆ. ಅಲ್ಲದೆ ಹೆಣ್ಣು ಮಕ್ಕಳು ಇಂತಹ ಆಭರಣಗಳ ತಯಾರಿಕೆಯಲ್ಲೂ ವಿಶೇಷವಾಗಿ ಆಸಕ್ತಿ ವಹಿಸುತ್ತಿದ್ದಾರೆ. ಇದರ ತರಬೇತಿಗಾಗಿಯೇ ಪ್ರತ್ಯೇಕ ಕೇಂದ್ರಗಳು ಇವೆ. ಆಸಕ್ತಿ ಇರುವ ಹೆಣ್ಣು ಮಕ್ಕಳಿಗೆ ಇವುಗಳಿಂದ ಬಹಳ ಉಪಯೋಗವಾಗುತ್ತದೆ. ಪ್ರತಿಯೊಂದು ಆಭರಣಗಳು ಕೂಡ ವಿವಿಧ ಬೆಲೆಗಳನ್ನು ಹೊಂದಿರುತ್ತದೆ. ಕಡಿಮೆ ದರದಲ್ಲಿ ಬೇಕಾದ ವಿನ್ಯಾಸದ ಆಭರಣಗಳನ್ನು ಪಡೆಯಬಹುದು. ಇಂತಹ ಆಭರಣಗಳನ್ನು ಹೆಣ್ಣು ಮಕ್ಕಳನ್ನು ಸುಂದರವಾಗಿ ಕಾಣಿಸುತ್ತದೆ. ಜೊತೆಗೆ ನೋಡಲು ಸಂಪ್ರದಾಯವಾಗಿ ಇರುತ್ತದೆ. ಬಣ್ಣ ಬಣ್ಣದ ಈ ಕೃತಕ ಆಭರಣಗಳಿಗೆ ಹೆಣ್ಣು ಮಕ್ಕಳು ಹಾಗೂ ಯುವತಿಯರು ಬಹಳ ವೇಗವಾಗಿ ಮಾರು ಹೋಗುತ್ತಾರೆ.

ಬಗೆ ಬಗೆಯ ಆಕ್ಸೆಸರಿಗಳು ಬದಲಾಯಿಸಿ

ಯೌವ್ವನ ತುಳುಕುವ ಸುಂದರ, ಸುಂದರಿಯರು ನಗರ ಜೀವನವನ್ನು ಇಷ್ಟಪಡುವುದರಿಂದ ಪ್ರತಿದಿನ ಫ್ಯಾಶನ್ ಲೋಕಕ್ಕೆ ಬಹಳ ಬೇಗನೇ ಅಪ್ಡೇಟ್ ಆಗುತ್ತಾರೆ. ಮಹಿಳೆಯರಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸದಾವರವರೆಗೂ ತಮಗೆ ಇಷ್ಟವಾಗುವಂತಹ ಬೇರೆ ಬೇರೆಯ ಆಕ್ಸೆಸರಿಗಳನ್ನು ತಮ್ಮ ಉಡುಪುಗಳಿಗೆ ಹೊಂದುವಂತೆ ಇಷ್ಟಪಟ್ಟು ಧರಿಸುತ್ತಾರೆ. ಹೊಸ ಮಾದರಿಯ ಆಭರಣಗಳನ್ನು ಖರೀದಿಸುವುದೇ ಸಂತೋಷ. ಮರದಿಂದ ತಯಾರಿಸಿರೋ ಬಗೆ ಬಗೆಯ ಅಲಂಕಾರ ಸಾಮಗ್ರಿಗಳಿಗೆ ಈಗ ಹೆಚ್ಚು ಡಿಮ್ಯಾಂಡ್. ಕಾಲೇಜು ಹುಡಿಗಿಯರಿಗೆ ಇದೇ ಫೆವರಿಟ್ ಆಗಿರುತ್ತದೆ. ಕತ್ತಿನಲ್ಲಿ ಎದ್ದು ಕಾಣಿಸೋ ಮರದ ನೆಕ್‍ಪೀಸ್, ಕಿವಿಯ ಓಲೆಗಳು, ಕೈಗಳಿಗೂ ಸೂಕ್ಷ್ಮ ಕೆತ್ತನೆಯ ಮರದ ಆಭರಣಗಳು ಇಮದು ಮಳಿಗೆಗಳಲ್ಲಿ ಲಭ್ಯವಿದೆ.

ಮಣ್ಣಿನಿಂದಲೂ ಆಭರಣಗಳ ತಯಾರಿ ಬದಲಾಯಿಸಿ

ಮಹಿಳೆಯರು ಬ್ರ್ಯಾಂಡೆಡ್ ಚಿನ್ನ ಅಥವಾ ಡಿಸೈನರ್ ಆಭರಣಗಳನ್ನು ಹಾಕಿದರೆ ಮಾತ್ರ ಚೆನ್ನಾಗಿ ಕಾಣುತ್ತಾರೆ ಎಂಬುದು ಇಲ್ಲ. ಸಿಂಪಲ್ ಆದ ಆಭರಣಗಳನ್ನು ಧರಿಸಿದರೂ ಹೆಣ್ಣಿಗೆ ಡೀಸೆಂಟ್ ಹಾಗೂ ಗ್ರ್ಯಾಂಡ್ ಲುಕ್ ನೀಡುತ್ತದೆ. ಟೆರಾಕೋಟದಿಂದ ಮಾಡುವ ಆಭರಣಗಳು ಇತ್ತೀಚೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಿಕೊಳ್ಳುತ್ತಿದ್ದು, ಹೊಸ ವಿನ್ಯಾಸಗಳಲ್ಲಿ ಎಲ್ಲ ಫ್ಯಾನ್ಸಿ ಸ್ಟೋರ್, ಆಭರಣಗಳ ಅಂಗಡಿಗಳಿಗೂ ಲಗ್ಗೆ ಇಟ್ಟಿವೆ. ಮಣ್ಣಿನಿಂದ ಮಾಡಿದ ಟೆರಾಕೋಟ್ ಆಭರಣಗಳು ಕಾಟನ್ ಡ್ರೆಸ್. ಸೀರೆಗೆ ಅಂದವಾಗಿ ಕಾಣುತ್ತದೆ. ತೆಳುವಾದ ದಾರಕ್ಕೆ ಮಣ್ಣಿನ ಕಸೂತಿಯಿರುವ ಪೆಂಡೆಂಟ್ ಹಾಕಿದರೆ ಸರಿಯಾಗಿ ಮ್ಯಾಷ್ ಆಗುತ್ತದೆ. ಮಣ್ಣಿನ ಮಣಿಗಳನ್ನು ಪೋಣಿಸಿದ ಗಿಡ್ಡನೆಯ ಸರ ಕಾಟನ್ ಸೀರೆಗಳಿಗೆ ಹೊಂದುವ ಬಣ್ಣದ ಸೂಕ್ತವಾಗಿರುವ ಸರಗಳು ಕೂಡ ಲಭ್ಯ ಇರುತ್ತದೆ. ಆಧುನಿಕ ಟ್ರೆಂಡ್‍ಗೆ ಬೇಕಾದ ಸ್ಟೋನ್, ಕುಂದನ್ ವರ್ಕ್‍ನ ಜ್ಯುವೆಲ್ಲರಿಗಳು ಮಳಿಗೆಗಳಲ್ಲಿ ದೊರೆಯುತ್ತದೆ.

ದಿನದಿಂದ ದಿನಕ್ಕೆ ಫ್ಯಾಶನ್ ಲೋಕ ಬದಲಾಗುತ್ತಲೇ ಇರುತ್ತದೆ. ಹೊಸ ಹೊಸ ಮಾದರಿಯ ಆಭರಣಗಳ ಪ್ರಯೋಗಗಳು ಹೆಣ್ಣು ಮಕ್ಕಳ ಮನಸೆಳೆಯುತ್ತಿದೆ. ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು, ಹೊಸ ಲುಕ್‍ನಲ್ಲಿ ಕಾಣಲು ಇಂತವುಗಳಿಗೆ ಮಾರುಹೋಗುವುದು ಸಾಮಾನ್ಯವಾಗಿರುತ್ತದೆ.

ಉಲ್ಲೇಖ

1. https://www.indiamart.com/proddetail/artificial-jewellery-6315573848.html

2. https://mugilahakki.wordpress.com

3. vijayavani.net

4. www.ensuddi.com

5. kn.m.wikipedia.org

6. https://vijaykarnataka.indiatimes.com

7. https://www.udayavani.com