ಸದಸ್ಯ:Rajanikantha Y K/ನನ್ನ ಪ್ರಯೋಗಪುಟ
ಇದು ಮೊದಲಿಗೆ ಮಲೇಶಿಯಾ ಪೂರ್ವ ಮತ್ತು ಪೆಸಿಪಿಕ್ ದ್ವೀಪಗಳಲ್ಲಿ ಕಂಡು ಬಂದಿವೆ. ಈ ಕೇತಕಿ ಸಸ್ಯವನ್ನು ಸ್ವಾಡೀ ಪಾಕೇನಸನ್ . 1774 ರಲ್ಲಿ ಪ್ಯಾಂಡನೀಸಸ್ ಪರಿಚಯಿಸಿದನು. ಈ ಒಂದು ಸಸ್ಯವು ಕೇತಕಿ ಕುಟುಂಬಕ್ಕೆ ಸೇರಿದ್ದಾಗಿದೆ.
ಸಸ್ಯದ ಬೆಳವಣಿಗೆ
ಬದಲಾಯಿಸಿಇವುಗಳು ಸಾಮಾನ್ಯವಾಗಿ ಕಡಿಮೆ ಭೂ ಮಣ್ಣಿನಲ್ಲಿ ಸಮುದ್ರಗಳ ಹತ್ತಿರ ಹೆಚ್ಚಾಗಿ ಬೆಳೆಯುತ್ತಾರೆ. ಇದೊಂದು ಸಣ್ಣ ಮರ ಅಂದರೆ 13 ರಿಂದ 46 ಅಡಿ ಉದ್ದ ಇರುತ್ತದೆ. ಇದು ಒಂದೇ ಉದ್ದದಲ್ಲಿ ಕಂದು ಬಣ್ಣದ ವೃತ್ತಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಇವುಗಳ ಬೆಳವಣಿಗೆ 4 ರಿಂದ 8 ಮೀಟರ್ಗಳಾಗಿರುತ್ತವೆ. ಇದರ ಬೇರಿನ ಸಹಾಯದಿಂದ ನೀಳಾವಾದ ಒಂದೇ ಕಾಂಡದೊಂದಿಗೆ ಮೇಲೆ ರೆಂಬೆ ಕೊಂಬೆಗಳು ಒಳಗೊಂಡಿರುತ್ತದೆ. ಕೇತಕಿ ಇದರಲ್ಲಿ ಹೂಗಳು ಸಹ ಬಿಡುತ್ತದೆ. ಇದರಲ್ಲಿ ಗಂಡು ಮತ್ತು ಹೆಣ್ಣು ಎರಡೂ ರೀತಿಯಲ್ಲಿ ಒಳಗೊಂಡಿರುತ್ತದೆ. ಈ ಗಂಡು ಹೂಗಳು ಚಿಕ್ಕದಾಗಿಯೂ ಹಾಗೂ ಒಂದೇ ಒಂದು ದಿನ ಜೀವಿತವಾಗಿರುತ್ತದೆ. ಹೂಗಳು ಹೂಗುಚ್ಚದಂತೆ ಒಂದು ಅಡಿಯವರೆಗೆ ಬೆಳೆÉಯುತ್ತದೆ ಹಾಗೂ ಸುವಾಸನೆ ಭರಿತವಾಗಿರುತ್ತದೆ. ಈ ಒಂದು ಜಾತಿಯ ಹಣ್ಣುಗಳು ಅನಾನಸ್ ಹಣ್ಣಿನ ರೀತಿಯ ಇರುತ್ತದೆ. ಈ ಹಣ್ಣುಗಳು 4 ರಿಂದ 20 ಸೆ.ಮೀ ಅಂಡಾಕಾರದಲ್ಲಿರುತ್ತದೆ. ಈ ಹಣ್ಣುಗಳ ಮೇಲೆ ತೊಗಟೆ ರೀತಿಯ ಕವಚ ಹೊದಿಕೆಯಾಗಿರುತ್ತದೆ. ಹಳದಿ, ಕೇಸರಿ ಹಾಗೂ ಕೆಂಪು , ಹಸಿರು ಬಣ್ಣದಿಂದ ಕೂಡಿರುತ್ತದೆ. ಇದರಲ್ಲಿ ಬೆಳೆಗಳು ಕಾಣಬಹುದು. ಈ ಜಾತಿಯ ಎಲೆಗಳು ಸಾಮಾನ್ಯವಾಗಿ 90 ರಿಂದ 150 ಇಂಚು ಉದ್ದವಾಗಿರುತ್ತದೆ. ಎಲೆಗಳು ನೋಡಲು ಅಂಚು ಅಂಚಾಗಿರುತ್ತದೆ. ಕೊಂಬೆಗಳು ಕೊನೆಯ ಭಾಗದಲ್ಲಿ ಎಲೆಗಳು ಇರುತ್ತದೆ.