ಸದಸ್ಯ:Rahulshetty12/sandbox
ಮ್ಯಾಕ್ಸ್ ಪ್ಲಾಂಕ್;
ಮ್ಯಾಕ್ಸ್ ಪ್ಲಾಂಕ್' (೧೮೫೮-೧೯೪೭) ಜರ್ಮನಿಯ ಭೌತಶಾಸ್ತ್ರಜ್ಞ. ಕ್ವಾಂಟಮ್ ತತ್ವದ ಪ್ರತಿಪಾದಕ,ವಿಕಿರಣಶೀಲತೆಯ ನಿಯಮಗಳನ್ನು ನಿರೂಪಿಸಿದವರು.ಇವರು ಜರ್ಮನಿಯ ಕೀಲ್ ಪಟ್ಟಣದಲ್ಲಿ ಜನಿಸಿದರು.ಇವರಿಗೆ ೧೯೧೮ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.ಮ್ಯಾಕ್ಸ್ ಪ್ಲಾಂಕ್, ಪರಮಾಣುವನ್ನು ಜಗತ್ತಿಗೆ ಪರಿಚಯಿಸಿದ ಖ್ಯಾತ ವಿಜ್ಞಾನಿ. ಇವರು ೧೮೫೮, ಏಪ್ರಿಲ್ ೨೩ ರಂದು ಡೇನಿಪ್ ರೇವು ಕೀಲ್ ಎಂಬ ಪ್ರದೇಶದಲ್ಲಿ ಜನಿಸಿದರು. ಇವರ ತಂದೆ ತಾಯಿ ಮೂಲತಃ ಜರ್ಮನಿಯವರು. ಮ್ಯಾಕ್ಸ್ ಪ್ಲಾಂಕ್ ರ ತಂದೆ ನ್ಯಾಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಹೀಗಾಗಿ ಮುಂದೆ ಇವರ ತಂದೆಗೆ ವರ್ಗಾವಣೆ ಯಾದಾಗ ಕುಟುಂಬ ಸಮೇತ ಇವರು ಮ್ಯೂನಿಚ್ ಗೆ ಬರಬೇಕಾಯಿತು.ಗಣಿತ ವಿಷಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಮ್ಯಾಕ್ಸ್ ಪ್ಲಾಂಕ್, ಮುಂದೆ ಮ್ಯೂನಿಚ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದರು.