ಸದಸ್ಯ:Rahul reddy1540
ವಯಕ್ತಿಕ ಜೀವನ
ಬದಲಾಯಿಸಿರಾಹುಲ್ ಪ್ರವೀಣ್ ಎಮ್ ಆದ ನಾನು ಸವಿತ.ಎಮ್ ಹಾಗು ಮೋಹನ್ ದಂಪತಿರವರ ಮಗನಾಗಿದ್ದೇನೆ. ನನ್ನ ಜನನ ೧೯೯೭ರ ಜನವರಿ ೩ರಂದು ಬೆಂಗಳೂರಿನಲ್ಲಿ ಆಯಿತು. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್.ಸಿ ವ್ಯಾಸಾಂಗ ಮಾಡುತ್ತಿದ್ದೇನೆ. ನನಗೆ ಜೀವಶಾಸ್ತ್ರವೆಂದರೆ ಬಲು ಇಷ್ಟ ಆದ್ದರಿಂದ ನಾನು ಬಯೋಟೆಕ್ನಾಲಜಿ ಓದುತ್ತಿದ್ದೇನೆ. ನಾನು ಹುಟ್ಟಿದ್ದು, ಬೆಳದದ್ದು ಮತ್ತು ವ್ಯಾಸಾಂಗ ಮಾಡುತ್ತಿರುವುದು ಬೆಂಗಳೂರಿನಲ್ಲಿಯೇ. ನನಗೆ ಜೀಸಸ್ ನ ಮಾತುಗಳಲ್ಲಿ ಬಲು ನಂಬಿಕೆ ಇದೆ. ನನಗೆ ಕಬಡ್ಡಿ ಆಟ ಆಡುವುದೆಂದರೆ ಇಷ್ಟ. ನಾನು ಬೀದಿನಾಟಕಗಳಿಗೆ ಹಾಡಗಳನ್ನು ಸಹ ಬರೆಯುತ್ತೇನೆ.
ವಿಧ್ಯಾಭ್ಯಾಸ
ಬದಲಾಯಿಸಿನಾನು ಹತ್ತನೇ ತರಗತಿಯಲ್ಲಿ ಶಾಲೆಗೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಗೊಂಡು ತಾಲ್ಲೂಕಿಗೆ ಎರಡನೇ ದರ್ಜೆಯಲ್ಲಿ ಉತ್ತೀರ್ಣಗೊಂಡಿರುತ್ತೇನೆ. ಮತ್ತು ನನಗೆ ನಮ್ಮ ಊರಿನ ಎಂ. ಎಲ್. ಎ ಯಿಂದ ಪ್ರಶಸ್ತಿಯನ್ನು ಪಡೆದು ಕೊಂಡಿರುತ್ತೇನೆ. ನನಗೆ ಗಾಜಿನ ಚಿತ್ತಾರಗಳನ್ನು ಬಿಡಿಸುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದು ದ್ವಿತೀಯ ಪಿ.ಯು.ಸಿ.ಯಲ್ಲಿ ನನಗೆ ಗಾಜಿನ ಚಿತ್ತಾರಗಳ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತೇನೆ. ನನಗೆ ನಟನೆಯ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಇದ್ದು, ನಾನು ಯಕ್ಷಗಾನ ಪಾಶ್ಚಾತ್ಯ ನೃತ್ಯ ಮುಂತಾದವುಗಳಲ್ಲಿ ಭಾಗವಹಿಸಿ ಪ್ರಶಂಸೆಯ ಪತ್ರಗಳನ್ನು ಪಡೆದಿರುತ್ತೇನೆ.ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನನಗೆ ಇತರ ಚಟುವಟಿಕೆಗಳಿಗೆ ಬಹಳ ಓಳ್ಳೆಯ ವೇದಿಕೆಯನ್ನು ಹೊಂದಿದ್ದು ನನ್ನ ಪ್ರತಿಭೆಯನ್ನು ವ್ಯಕ್ತ ಪಡಿಸಲು ಒಳ್ಳೆಯ ವೇದಿಕೆಯಾಗಿದೆ.
ಇಷ್ಟವಾದ ಚಟುವಟಿಕೆ
ಬದಲಾಯಿಸಿನಾನು ಕಳೆದ ಒಂದು ವರ್ಷದಿಂದ ಸಿ.ಎಸ್.ಎ ಎಂಬ ಎನ್.ಜಿ.ಒ ಅಲ್ಲಿ ಸದಸ್ಯತ್ವವನ್ನು ಹೊಂದಿ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ನಾನು ಸಿ.ಎಸ್.ಎ ವತಿಯಿಂದ ತಿಂಗಳಿಗೆ ಸುಮಾರು ಎರಡು ಬೀದಿ ನಾಟಕಗಳನ್ನು ಮಾಡುತ್ತೇನೆ. ಓದುವುದರ ಜೊತೆಗೆ ನಾನು ಬೀದಿನಾಟಕಗಳಿಗೆ ಕಥೆ ಮತ್ತು ಹಾಡುಗಳನ್ನು ಬರೆಯುತ್ತೇನೆ. ಇದು ನನಗೆ ಬಹಳ ಸಂತೋಷವನ್ನು ತಂದು ಕೊಟ್ಟಿದೆ. ಪ್ರಸ್ತುತ ನಾನು ನಾನು ಓದುತ್ತಿರುವ ಬಯೋಟೆಕ್ನಾಲಜಿ ವಿಷಯದಲ್ಲಿ ಸಂಶೋಧನೆಯ ವಿಷಯವನ್ನು ಹುಡುಕುತ್ತಿದ್ದೇನೆ. ==ಪ್ರವಾಸ==ನಾನು ಸಿ.ಎಸ್.ಎ. ವತಿಯಿಂದ ೨೦೧೫ ರ ಅಕ್ಟೋಬರ್ ತಿಂಗಳಿನಲ್ಲಿ ಶಿವಕಾಶಿಗೆ ಹೋಗಿ ಅಲ್ಲಿ ಸಮಾಜ ಸೇವೆ ಚಟುವಟಿಕೆಗಳನ್ನು ನಡೆಸಿ ಪ್ರಶಂಸೆ ಪತ್ರವನ್ನು ಪಡೆದಿದ್ದೇನೆ. ಈ ರೀತಿಯಾದ್ ಸಮಾಜಸೇವೆ ಹಾಗೂ ಓದು ನನ್ನ ಜೀವನವನ್ನು ಸಂತೃಪ್ತಿಗೊಳಿಸಿದೆ. ಅಲ್ಲಿ ಸಿ.ಎಸ್.ಐ. ಎಂಬ ಕ್ರೈಸ್ತ ಎನ್.ಜಿ.ಒ. ನಡೆಸುವ ಅನಾಥಾಶ್ರಮಕ್ಕೆ ಹೋಗಿ ಅಲ್ಲಿನ ಜನರ ಸ್ಥಿತಿಗತಿಗಳನ್ನು ನೋಡಿ ತಿಳಿದು ಪಟ್ಟಿ ಮಾಡಿ ಕಾಲೇಜಿಗೆ ತಲುಪಿಸಿದೆವು. ಶಿವಕಾಶಿಯಲ್ಲಿರುವ ಬೆಲ್ ಎಂಬ ಪ್ರಿಂಟಿಂಗ್ ಪ್ರೆಸ್ ಕಂಪನಿಗೆ ಹೋಗಿ ಕಂಪನಿಯ ಕೆಲಸ ಕಾರ್ಯ ನಿರ್ವಾಹಣೆಯ ಬಗ್ಗೆ ತಿಳಿದುಕೊಂಡು, ಹಾಗೆ ಆ ಕಂಪೆನಿಯ ಎಮ್.ಡಿ. ಯ ಜೊತೆಗೆ ಮಾತನಾಡಿ ಬಡ ಮಕ್ಕಳಿಗೆ ಸಹಾಯ ಮಾಡಲು ಹಣದ ಸಹಾಯವನ್ನು ಪಡೆದೆವು. ಶಿವಕಾಶಿಯ ಹಳ್ಳಿಗಾಡಿನ ಪ್ರದೇಶದಲ್ಲಿರುವ ಮೆಡೋಸ್ ಶಾಲೆಗೆ ಹೋಗಿ ನಾಲ್ಕು ದಿವಸ ತಂಗಿದ್ದೆವು ಅಲ್ಲಿ ಆ ಮಕ್ಕಳಿಗೆ ಇಂಗ್ಲೀಷ್ ಮಾತನಾಡುವುದನ್ನು ಕಲಿಸಿ, ಹಾಗೆ ಅನೇಕ ಚಟುವಟಿಕೆಗಳನ್ನು ಮಾಡಿದೆವು. ಇದರ ಜೊತೆಗೆ ಸಾಮಾಜಿಕ ಜಾಗ್ರತಿಯ ವಿಷಯದ ಬಗ್ಗೆ ಆ ಹಳ್ಳಿಯ ಜನಕ್ಕೆಅರಿವು ಮೂಡಿಸುವಲ್ಲಿ ಯಶಸ್ವಿಯಾದೆವು.
This user is a member of WikiProject Education in India |