[]ವಿಮೆ: ಅನಿಶ್ಚಿತ ನಷ್ಟ ಎಂಬ ಗಂಡಾಂತರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಒಂದು ರೀತಿಯ ಅಪಾಯ ನಿರ್ವಹಣೆಯ ಉಪಾಯವೇ ವಿಮೆ ಎಂದು ಕಾನೂನು ಮತ್ತು ಅರ್ಥಶಾಸ್ತ್ರ ಪರಿಗಣಿಸುತ್ತವೆ.ಗಡಾಂತರದಿಂದ ಸಂಭವಿಸುವ ನಷ್ಟವನ್ನು ಭರ್ತಿ ಮಾಡುವುದಕ್ಕಾಗಿ, ಪಾವತಿ ಮಾಡಿರುವ 'ಕಂತಿ'ನ ಮೊತ್ತದ ನ್ಯಾಯೋಚಿತ ವಿನಿಮಯವೇ ವಿಮೆ ಎಂದು ವಿಮೆಯನ್ನು ವಿವರಿಸಲಾಗಿದೆ.ಭಾರೀ ಪ್ರಮಾಣದ ಸಂಭವನೀಯ ವಿನಾಶಕಾರಿ ನಷ್ಟವನ್ನು ತಡೆಗಟ್ಟುವ ಉದ್ದೇಶದಿಂದ ಅನುಭವಿಸುವ ನಿಶ್ಚಿತವೂ, ಗೊತ್ತಿರುವಂಥದ್ದೂ ಆದ ಅಲ್ಪ ಪ್ರಮಾಣದ ನಷ್ಟವೆಂದೂ ಇದನ್ನು ಭಾವಿಸಬಹುದು. ವಿಮೆಗಾರ ಎಂದರೆ ವಿಮೆ ಸೇವೆಯನ್ನು ಒದಗಿಸುವ ಸಂಸ್ಥೆ. ವಿಮೆದಾರ ಅಥವಾ ಪಾಲಿಸಿದಾರ ಎಂದರೆ ವಿಮೆಯ ಸೌಲಭ್ಯವನ್ನು ಪಡೆದಿರುವ ವ್ಯಕ್ತಿ ಅಥವಾ ಘಟಕ. ಇಂತಿಷ್ಟು ಮೊತ್ತದ ವಿಮೆ ರಕ್ಷಣೆ ಪಡೆಯ ಬಯಸಿದಾಗ ಇಂತಿಷ್ಟು ಶುಲ್ಕ ತೆರಬೇಕು ಎಂದು ನಿರ್ಣಯಿಸುವ ಅಂಶವೇ ವಿಮಾ ದರ .ಇದೇ ವಿಮಾ ಪ್ರೀಮಿಯಂ (=ವಿಮಾ ಕಂತು) ಅಪಾಯ ನಿರ್ವಹಣೆಯು ಮೌಲ್ಯ ನಿರ್ಣಯ ಮತ್ತು ಅಪಾಯ ನಿಯಂತ್ರಣದ ನಡುವಿನ ಕಸರತ್ತು, ಇದು ವಿಭಿನ್ನವಾದ ಅಧ್ಯಯನ ಮತ್ತು ಪ್ರಯೋಗದ ಕ್ಷೇತ್ರವಾಗಿ ಹೊರಹೊಮ್ಮಿದೆ.

ವಿಮೆಯ ತತ್ವಗಳು ವಾಣಿಜ್ಯ ರೂಪದಲ್ಲಿ ವಿಮೆಯ ರಕ್ಷಣೆಗೆ ಒಳಗಾಗಬಲ್ಲ ಅಪಾಯಗಳು ವಿಶಿಷ್ಟವಾಗಿ ಏಳು ಸಾಮಾನ್ಯ ಗುಣಗಳನ್ನು ಹೊಂದಿವೆ

ಏಕರೂಪದ ಅಪಾಯಕ್ಕೆ ತುತ್ತಾಗುವಂಥ ಘಟಕಗಳು. ಅಧಿಕ ಸದಸ್ಯರಿರುವ ಸಂಸ್ಥೆಯಲ್ಲಿನ ವ್ಯಕ್ತಿಗಳಿಗೆ ನೀಡಲಾಗಿರುವ ವಿಮಾ ಪಾಲಿಸಿಗಳ ಸಂಖ್ಯೆಯದ್ದೇ ಸಿಂಹ ಪಾಲು. ಉದಾಹರಣೆಗೆ, 2004ರಲ್ಲಿ ಸುಮಾರು 175 ದಶಲಕ್ಷ ವಾಹನಗಳಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಾಹನ ವಿಮೆ ರಕ್ಷಣೆಯನ್ನು ಒದಗಿಸಲಾಗಿತ್ತು.[೨] ಏಕರೂಪದ ಅಪಾಯಕ್ಕೆ ತೆರೆದುಕೊಂಡಿರುವ ಘಟಕಗಳು ಹೆಚ್ಚಿದ್ದಷ್ಟೂ 'ಸಂಖ್ಯಾ ಬಲ ನಿಯಮ'ದ ಆಧಾರದ ಮೇಲೆ ದೊಡ್ಡ ಪ್ರಮಾಣದ ಕಾನೂನುವಿಮಾಗಾರರಿಗೆ ಹೆಚ್ಚು ಪ್ರಯೋಜನ. ಏಕೆಂದರೆ, ಇಂಥ ಘಟಕಗಳು ಹೆಚ್ಚಿದಾಗೆಲ್ಲ ನೈಜ ಫಲಿತಾಂಶಗಳು ಸಹ ನಿರೀಕ್ಷಿತ ಮಟ್ಟಕ್ಕೆ ಸನಿಹವಾಗುವ ಸಾಧ್ಯತೆಗಳೂ ಹೆಚ್ಚು. ಈ ಮಾನದಂಡಕ್ಕೆ ಅಪವಾದಗಳುಂಟು. ಲಾಯ್ಡ್ಸ್‌ ಆಫ್‌ ಲಂಡನ್‌ ನಟ-ನಟಿಯರ ಮತ್ತು ಕ್ರೀಡಾಪಟುಗಳ ಜೀವನ ಅಥವಾ ಆರೋಗ್ಯ ವಿಮೆ ಮಾಡುವುದರಲ್ಲಿ ಸುವಿಖ್ಯಾತ. ಉಪಗ್ರಹ ಉಡಾವಣೆ ಸಂದರ್ಭದಲ್ಲಿ ಅಪರೂಪಕ್ಕೆ ಎದುರಾಗಬಹುದಾದ ಘಟನೆಗಳ ಮೇಲೂ ವಿಮಾ ರಕ್ಷಣೆ ಒದಗಿಸುವುದುಂಟು. 'ಏಕರೂಪದ' ಅಪಾಯಕ್ಕೆ ಒಡ್ಡಿಕೊಳ್ಳದ ಘಟಕಗಳಿಲ್ಲದ ಬೃಹತ್ ವಾಣಿಜ್ಯ ಆಸ್ತಿಪಾಸ್ತಿಗಳ ಮೇಲೂ ವಿಶೇಷ ಪಾಲಿಸಿಗಳ ವಿಮೆ ಇಳಿಸಬಹುದಾಗಿದೆ. ಇಂಥ ಸನ್ನಿವೇಶ ಇರದೇ ಇದ್ದಾಗಲೂ ಈ ರೀತಿಯ ಅನೇಕ ಅಪಾಯಗಳನ್ನೂ ವಿಮಾ-ಯೋಗ್ಯವೆಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ.

U.S. Health Insurance Status - Under 65 yrs

ನಿರ್ದಿಷ್ಟ ನಷ್ಟ . ಗೊತ್ತಾದ ಸಮಯ ಮತ್ತು ಗೊತ್ತಾದ ಸ್ಥಳದಲ್ಲಿ, ಗೊತ್ತಾದ ಮೂಲದಿಂದ, ವಿಮಾದಾರರಿಗೆ ತತ್ತ್ವತಃ, ಉಂಟಾಗುವ ಕನಿಷ್ಠ ನಷ್ಟಕ್ಕೆ ಕಾರಣವಾಗುವ ಘಟನೆಯು ಸಂಭವಿಸುವುದುಂಟು. ಜೀವ ಮಿಮೆ ಪಾಲಿಸಿದಾರನೊಬ್ಬನ ನಿಧನ ಇದಕ್ಕೊಂದು ಉತ್ತಮ ಉದಾಹರಣೆ. ಅಗ್ನಿ ಆಕಸ್ಮಿಕ,ವಾಹನ ಅಪಘಾತ, ಮತ್ತು ಕಾರ್ಮಿಕರಿಗೆ ಸಂಭವಿಸುವ ಗಾಯ - ಇವೆಲ್ಲವೂ ಈ ಮಾನದಂಡದ ಅಡಿಯೇ ಬರುತ್ತದೆ. ಇತರೆ ನಷ್ಟಗಳು ಕೇವಲ ತಾತ್ವಿಕವಾಗಿ ನಿರ್ಧಾರವಾಗುವಂಥದ್ದು. ಉದಾಹರಣೆಗೆ, ಔದ್ಯೋಗಿಕ ರೋಗಗಳು ಯಾವುದೇ ವಿಶಿಷ್ಟ ಸಮಯ, ಸ್ಥಳ ಅಥವಾ ಕಾರಣಗಳಿಂದಾಗಿ ಹೀಗಾಗಿದೆ ಎಂದು ಗುರುತಿಸಲಾಗದಂತಹ ಹಾನಿಕಾರಕ ಸ್ಥಿತಿಗಿಳಿಯಲು ದೀರ್ಘಾವಧೀ ಅಪಾಯಕ್ಕೆ ತೆರೆದುಕೊಂಡಿರುವುದೇ ಕಾರಣವಾಗಿರಬಹುದು. ಸಾಕಷ್ಟು ಮಾಹಿತಿಯನ್ನು ಹೊಂದಿರುವ ವ್ಯಕ್ತಿಯು ನಷ್ಟ ಸಂಭವಿಸಿದ ಸಮಯ, ಸ್ಥಳ ಮತ್ತು ನಷ್ಟದ ಕಾರಣವನ್ನು ಪರಿಶೀಲಿಸಬಹುದು. ಆದ್ದರಿಂದ ಈ ಮೂರೂ ಮಾಹಿತಿ ಸಾಕಷ್ಟು ಸ್ಪಷ್ಟವಾಗಿರುವುದು ಅಪೇಕ್ಷಣೀಯ. ಆಕಸ್ಮಿಕ ನಷ್ಟ . ವಿಮೆಯ ಪರಿಹಾರ ಹಣಕ್ಕೆ ಬೇಡಿಕೆ ಸಲ್ಲಿಸಿದಾಗ, ಸಂಭವಿಸಿದ ಆಕಸ್ಮಿಕ ಅನುದ್ದೇಶಿತವಾಗಿರಬೇಕು, ಅಥವಾ ಕನಿಷ್ಠ ಪಕ್ಷ ಫಲಾನುಭವಿಯ ಕೈಮೀರಿದ ಆಕಸ್ಮಿಕ ಅದಾಗಿರಬೇಕು. ನಷ್ಟವು 'ಸುಸ್ಪಷ್ಟ'ವಾಗಿರಬೇಕು, ಅರ್ಥಾತ್‌, ವೆಚ್ಚಕ್ಕೆ ಅವಕಾಶ ಇರುವಂಥ ಘಟನೆಯಿಂದ ಮಾತ್ರ ಅದು ಸಂಭವಿಸಿರಬೇಕು. ಊಹಾತ್ಮಕ ಅಂಶಗಳನ್ನು ಹೊಂದಿರುವ ಘಟನೆಗಳನ್ನು ಸಾಮಾನ್ಯವಾಗಿ ವಿಮಾ-ಯೋಗ್ಯವೆಂದು ಪರಿಗಣಿಸಲಾಗದು.ವ್ಯವಹಾರದಲ್ಲಿನ ಭಯ ಇದಕ್ಕೊಂದು ಉದಾಹರಣೆ. ಭಾರೀ ನಷ್ಟ . ನಷ್ಟದ ಗಾತ್ರ ವಿಮಾದಾರನ ದೃಷ್ಟಿಯಲ್ಲಿ ಅರ್ಥಪೂರ್ಣವಾಗಿರಬೇಕು. ನಷ್ಟದ ನಿರೀಕ್ಷಿತ ವೆಚ್ಚಗಳು ಹಾಗೂ ವಿಮೆ ಪಾಲಿಸಿ ನೀಡುವಿಕೆ ಮತ್ತು ಆಡಳಿತಾತ್ಮಕಆಡಳಿತಾತ್ಮಕ ವೆಚ್ಚ, ನಷ್ಟಗಳ ಹೊಂದಾಣಿಕೆ,ಮತ್ತು ಪರಿಹಾರ ಬೇಡಿಕೆಯನ್ನು ಈಡೇರಿಸಲು ಬೇಕಾದ ಬಂಡವಾಳ ಪೂರೈಕೆ ಹಾಗೂ ಬೇಡಿಕೆ ಬಂದಾಗ ಪರಿಹಾರವನ್ನು ಈಡೇರಿಸಲು ಸಂಸ್ಥೆಗೆ ಇರುವ ತಾಕತ್ತಿನ ಭರವಸೆ ನೀಡಿಕೆ-ಈ ಎಲ್ಲವನ್ನೂ ವಿಮೆ ಕಂತು ಒಳಗೊಂಡಿದೆ. ನಿರೀಕ್ಷಿತ ನಷ್ಟ ವೆಚ್ಚದ ಗಾತ್ರ ಮೇಲೆ ಹೇಳಲಾದ ಸಣ್ಣ ಪುಟ್ಟ ನಷ್ಟಕ್ಕಿಂತ ಬಹುಪಟ್ಟು ದೊಡ್ಡದು. ಇಂಥ ವೆಚ್ಚಗಳಿಗೆ ಹೋಲಿಸಿದಾಗ, ಒದಗಿಸಲಾದ ರಕ್ಷಣೆಯ ಮೌಲ್ಯ ಅಧಿಕವಾಗಿ ಇರದಿದ್ದಲ್ಲಿ ಈ ವೆಚ್ಚಗಳನ್ನು ಕೊಳ್ಳುಗನ ಮೇಲೆ ಹೇರುವುದರಲ್ಲಿ ಏನೂ ಅರ್ಥವಿಲ್ಲ. ವಿಮಾ ಕಂತು . ವಿಮೆ ಇಳಿಸುವ ಘಟನಾವಳಿ ಭಾರೀ ವೆಚ್ಚದ್ದಾಗಿದ್ದರೆ,ಒದಗಿಸಲಾಗುವ ರಕ್ಷಣೆ ವಿಮಾ ಕಂತಿಗಿಂತಲೂ ಅಧಿಕವಾಗಿದ್ದ ಪಕ್ಷದಲ್ಲಿ, ನೀಡಿದರೂ ಕೂಡಾ ಯಾರೂ ವಿಮಾ ಸೇವೆಯನ್ನು ಕೊಳ್ಳಲು ಮುಂದಾಗದಿರುವ ಸಂಭವವುಂಟು. ವಿಮೆಕಂತು ವಿಮೆದಾರನಿಗೆ ಗಮನಾರ್ಹವಾಗಿ ಭಾರವಾಗದಂತಿರಬೇಕು ಮತ್ತು ಯಾವ ರೀತಿಯಿಂದಲೂ ಅದು ವಿಮೆದಾರನಿಗೆ ನಷ್ಟವನ್ನುಂಟು ಮಾಡದಂತಿರಬೇಕು ಎಂಬುದನ್ನು ಹಣಕಾಸು ಲೆಕ್ಕಪತ್ರ ವೃತ್ತಿ ನಿರತರು ಮಾನ್ಯಮಾಡುತ್ತಾರೆ. ನಷ್ಟಕ್ಕೆ ಆಸ್ಪದವೇ ಇಲ್ಲದಿದ್ದಲ್ಲಿ ಇಲ್ಲಿನ ಕೊಡುಕೊಳ್ಳುವಿಕೆ ವ್ಯವಹಾರಕ್ಕೆ ವಿಮೆಯ ರೂಪ ಇರುತ್ತದೆಯೇ ಹೊರತು ಸತ್ವ ಇರುವುದಿಲ್ಲ. (U.S. ಫೈನ್ಯಾನ್ಷಿಯಲ್‌ ಅಕೌಂಟಿಂಗ್‌ ಸ್ಟ್ಯಾಂಡರ್ರ್ಡ್ಸ್‌ ಬೋರ್ಡ್‌ ಸ್ತ್ಯಾಂಡರ್ಡ್‌ ನಂಬರ್‌ 113(=ಹಣಕಾಸು ಲೆಕ್ಕಶಾಸ್ತ್ರ ಗುಣಮಟ್ಟಗಳ ಮಂಡಳಿ ಗುಣಮಟ್ಟ ಸಂಖ್ಯೆ 113 ನೋಡಿ) ಲೆಕ್ಕ ಹಾಕಬಹುದಾದ ನಷ್ಟ . ಔಪಚಾರಿಕವಾಗಿ ಲೆಕ್ಕ ಹಾಕಲು ಆಗದಿದ್ದರೂ, ಕನಿಷ್ಠ ಪಕ್ಷ ಅಂದಾಜು ಮಾಡಬೇಕಾದ ಎರಡು ಅಂಶಗಳಿವೆ:ಒಂದು ನಷ್ಟದ ಸಂಭಾವ್ಯತೆ ಮತ್ತೊಂದು ದೇಖರೇಖೆಯ ವೆಚ್ಚ. ನಷ್ಟದ ಸಂಭಾವ್ಯತೆ ಲೆಕ್ಕಾಚಾರ ಸಾಮಾನ್ಯವಾಗಿ ಒಂದು ಅನುಭವಾತ್ಮಕ ಕಸರತ್ತು. ನಷ್ಟದ ಪುನರ್ವಶ್ಯದ ಖಚಿತ ವಸ್ತುನಿಷ್ಠ ಮೌಲ್ಯಮಾಪನವನ್ನು ಮಾಡಲು ವಿಮೆ ಪಾಲಿಸಿಯ ಜೊತೆಗೆ ನಷ್ಟದ ಸಾಕ್ಷ್ಯದೊಂದಿಗೆ ಆ ವಿಮೆ ಪಾಲಿಸಿಯಡಿ ವಿಮೆ ಹಣದ ಬೇಡಿಕೆಯನ್ನು ಸಲ್ಲಿಸುವ ವ್ಯಕ್ತಿಯ ಶಕ್ಯತೆಯನ್ನು ಅವಲಂಬಿಸಿದೆ. ವಿಮೆಯ ಇತಿಹಾಸ ಮಾನವನ ಸಾಮಾಜಿಕ ಬದುಕು ಮತ್ತು ವಿಮೆಯ ಸೌಕರ್ಯ ಏಕಕಾಲದಲ್ಲಿ ಅಸ್ತಿತ್ವಕ್ಕೆ ಬಂದವೆಂದು ಒಂದರ್ಥದಲ್ಲಿ ಹೇಳಬಹುದು. ಮಾನವ ಸಮಾಜದಲ್ಲಿ ಎರಡು ರೀತಿಯ ಆರ್ಥಿಕ ವ್ಯವಸ್ಥೆ ಗೋಚರಿಸುತ್ತದೆ. ಹಣ ಸಹಿತದ್ದೊಂದು (ಮಾರುಕಟ್ಟೆ, ದುಡ್ಡು, ಹಣಕಾಸಿನ ಸಂಸ್ಥೆಗಳು, ಇತ್ಯಾದಿ) ಮತ್ತು ಹಣ ರಹಿತದ್ದು ಇನ್ನೊಂದು. (ದುಡ್ಡು, ಮಾರುಕಟ್ಟೆ, ಹಣಕಾಸಿನ ಸಾಧನ ಇತ್ಯಾದಿಗಳಿಲ್ಲದ್ದು). ನೈಸರ್ಗಿಕ ಆರ್ಥಿಕತೆ ಎಂದೂ ಕರೆಯಲಾಗುವ ಎರಡನೆಯ ವಿಧಾನ ಮೊದಲನೆಯದಕ್ಕಿಂತಲೂ ಪ್ರಾಚೀನವಾದದ್ದು. ಇಂತಹ ಆರ್ಥಿಕತೆ ಮತ್ತು ಸಮುದಾಯದಲ್ಲಿ, ಜನರು ಪರಸ್ಪರ ಸಹಾಯ ಮಾಡಿಕೊಳ್ಳುವುದಲ್ಲೇ ವಿಮೆಯ ಒಂದು ರೂಪವೆಂದು ನಾವು ಕಾಣಬಹುದು. ಉದಾಹರಣೆಗೆ, ಮನೆಯೊಂದು ಸುಟ್ಟು ಹೋದ ಸಂದರ್ಭದಲ್ಲಿ ಸಮುದಾಯದ ಸದಸ್ಯರು ಹೊಸ ಮನೆಯ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದರು. ಅಕ್ಕದ ಮನೆಯವರಿಗೆ ಇದೇ ರೀತಿಯ ಅಪಘಾತವು ಸಂಭವಿಸಿದಲ್ಲಿ ಪಕ್ಕದ ಮನೆಯವರು ಸಹಾಯ ಮಾಡಲೇ ಬೇಕಿತ್ತು. ಇಲ್ಲದಿದ್ದರೆ ಮುಂದೆಂದಾದರೂ ಇಂಥ ಕಷ್ಟಕ್ಕೆ ಸಿಲುಕಿದರೆ ನೆರೆಯವರ ಸಹಾಯ ಅವರಿಗೆ ಖಂಡಿತ ಸಿಗುತ್ತಿರಲಿಲ್ಲ. ಹಣಸಹಿತದ ಆಧುನಿಕ ಆರ್ಥಿಕತೆ ಮತ್ತು ಅದರ ಸಾಧನಗಳು ವ್ಯಾಪಕವಾಗಿರದ ಕೆಲವು ದೇಶಗಳಲ್ಲಿ ಈ ರೀತಿಯ ವಿಮೆಯು ಇಂದಿನವರೆಗೂ ಉಳಿದುಕೊಂಡಿದೆ.


ಆಧುನಿಕ ರೀತಿಯ ವಿಮೆಯಲ್ಲಿ (ಅರ್ಥಾತ್‌ ಹಣ ಸಹಿತದ ಆಧುನಿಕ ಆರ್ಥಿಕತೆ, ಇದರಲ್ಲಿ ವಿಮೆಯು ಧನ ಗೋಲದ ಒಂದು ಭಾಗವಾಗಿರುತ್ತದೆ) ಅಪಾಯದ ವರ್ಗಾವಣೆ ಅಥವಾ ಭಾಗಿಯಾಗುವಿಕೆಯನ್ನು ಚೀನೀ ಮತ್ತು ಬೇಬಿಲೊನೀಯ ವರ್ತಕರು ಕ್ರಮವಾಗಿ ಮೂರನೆಯಮತ್ತು ಎರಡನೆಯ ಸಹಸ್ರಾಬ್ದ BCಯಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದರು.[೮] ಭೀಕರ ರಭಸದಿಂದ ಹರಿಯುವ ನದಿಯ ಮಾರ್ಗಗಳಲ್ಲಿ ಪ್ರಯಾಣಿಸುತ್ತಿದ್ದ ಚೀನೀ ವರ್ತಕರು, ನೌಕೆಯೊಂದು ಮುಳುಗಿದಾಗ ಸಂಭವಿಸುವಂತಹ ನಷ್ಟ ಕನಿಷ್ಠ ಮಟ್ಟದ್ದಾಗಿರಲಿ ಎಂದು ತಮ್ಮ ಸರಕನ್ನು ಹಲವು ನೌಕೆಗಳಲ್ಲಿ ಹಂಚುತ್ತಿದ್ದರು. ಬೇಬಿಲೊನಿಯನ್ನರು ಇದಕ್ಕಾಗಿ ಸೂತ್ರವೊಂದನ್ನು ಅಭಿವೃದ್ಧಿ ಪಡಿಸಿದ ಸಂಗತಿ ಪ್ರಖ್ಯಾತ ಸುಮಾರು 1750 BCಯಹಮ್ಮುರಬಿ ಸಂಹಿತೆಯಲ್ಲಿ ದಾಖಲಾಗಿದೆ.ಆರಂಭಿಕ ಮೆಡಿಟರೆನಿಯನ್‌ ನೌಕಾಯಾನ ಮಾರ್ಗದ ವರ್ತಕರು ಈ ಪದ್ಧತಿಯ ಸೂತ್ರವನ್ನು ಪಾಲಿಸುತ್ತಿದ್ದರು. ವರ್ತಕನೊಬ್ಬನು ತನ್ನ ಸರಕು ಸಾಗಾಣಿಕೆಗಾಗಿ ಸಾಲವನ್ನು ಪಡೆದಲ್ಲಿ, ಸಾಗಾಣಿಕೆಯು ದೋಚಿಕೆಯಾದಲ್ಲಿ ಅಥವಾ ಸಮುದ್ರದಲ್ಲಿ ಕಳೆದುಹೋದಲ್ಲಿ, ಸಾಲದಾತರ ಖಾತರಿಯೊಂದಿಗೆ ವಿನಿಮಯವಾಗಿ ಅವರು ಸಾಲದಾತರಿಗೆ ಹೆಚ್ಚುವರಿ ಮೊತ್ತವನ್ನು ನೀಡುತ್ತಿದ್ದರು.

ಪ್ರಾಚೀನ ಪರ್ಷಿಯಾದ ಅಚೆಮೆನಿಯನ್‌ ದೊರೆಗಳು ತಮ್ಮ ಪ್ರಜೆಗಳಿಗೆ ವಿಮೆ ಮಾಡಿಸುವುದರಲ್ಲಿ ಮೊದಲಿಗರು. ವಿಮೆಯ ಪ್ರಕ್ರಿಯೆಯನ್ನು ಸರ್ಕಾರೀ ನೋಟರಿ ಕಛೇರಿಗಳಲ್ಲಿ ನೋಂದಾಯಿಸುವುದರ ಮೂಲಕ ಅದನ್ನು ಅಧಿಕೃತಗೊಳಿಸಿದರು. ವಿಮೆಯ ಸಂಪ್ರದಾಯವನ್ನು ಪ್ರತಿ ವರ್ಷವೂ ನೌರೊಜ್‌ (ಇರಾನ್‌ ಹೊಸ ವರ್ಷ) ದಿನದಂದು ಆಚರಿಸಲಾಗುತ್ತಿತ್ತು. ವಿವಿಧ ಜನಾಂಗದ ಮುಖಂಡರು ಮತ್ತು ಇತರರು ಭಾಗವಹಿಸಲು ಇಚ್ಛಿಸಿ, ದೊರೆಗೆ ಉಡುಗೊರೆಗಳನ್ನು ಅರ್ಪಿಸುತ್ತಿದ್ದರು. ಅತಿ ಮುಖ್ಯ ಉಡುಗೊರೆಯನ್ನು ವಿಶೇಷ ಸಮಾರಂಭವೊಂದರಲ್ಲಿ ಅರ್ಪಿಸಲಾಗುತ್ತಿತ್ತು.10,000 ಡೆರಿಕ್ (ಅಚೆಮೆನಿಯನ್‌ ಚಿನ್ನದ ನಾಣ್ಯ)ಗಳಿಗೂ ಹೆಚ್ಚು ಮೌಲ್ಯವನ್ನುಳ್ಳ ಉಡುಗೊರೆಯಾಗಿದ್ದಲ್ಲಿ ಅದನ್ನು ಒಂದು ವಿಶೇಷ ಕಾರ್ಯಾಲಯದಲ್ಲಿ ನೋಂದಾಯಿಸಲಾಗುತ್ತಿತ್ತು. ಇಂತಹ ವಿಶೇಷ ಉಡುಗೊರೆಗಳನ್ನು ಅರ್ಪಿಸುವವರಿಗೆ ಇದು ಅನುಕೂಲಕರವಾಗಿತ್ತು. ಇತರರು ಅರ್ಪಿಸುತ್ತಿದ್ದ ಉಡುಗೊರೆಯ ಮೌಲ್ಯವನ್ನು ಆಸ್ಥಾನದ ಆಪ್ತರು ನ್ಯಾಯಯುತವಾಗಿ ಅಳೆಯುತ್ತಿದ್ದರು. ಹೀಗೆ ಮಾಡಲಾದ ಅಳತೆಗಳನ್ನು ವಿಶೇಷ ಕಾರ್ಯಾಲಯಗಳಲ್ಲಿ ನೋಂದಾಯಿಸಲಾಗುತ್ತಿತ್ತು.


ಉಡುಗೊರೆಯನ್ನು ನೀಡಿ ನೋಂದಾಯಿಸಿದವರು ಎಂದಾದರೂ ಸಂಕಟದಲ್ಲಿ ಸಿಲುಕಿದಾಗ,ದೊರೆ ಮತ್ತು ಆಸ್ಥಾನದ ಆಡಳಿತ ವರ್ಗ ಇವರಿಗೆ ನೆರವಿನ ಹಸ್ತ ಚಾಚುತ್ತಿತ್ತು. ಜಹೇಜ್‌ ಎಂಬ ಇತಿಹಾಸಕಾರ ಮತ್ತು ಬರಹಗಾರ, ಪ್ರಾಚೀನ ಇರಾನ್‌ ಬಗೆಗಿನ ಹಲವು ಗ್ರಂಥಗಳಲ್ಲೊಂದರಲ್ಲಿ ಹೀಗೆ ಬರೆದಿದ್ದಾನೆ: "ಉಡುಗೊರೆ ನೀಡಿದವನು ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ಗೃಹ ನಿರ್ಮಾಣಕ್ಕೆ ತೊಡಗಿದಾಗ, ಅಥವಾ ಒಂದು ಔತಣವನ್ನು ಏರ್ಪಡಿಸಲು, ಅಥವಾ ತಮ್ಮ ಮಕ್ಕಳ ವಿವಾಹ ಮಾಡಲು ಮುಂದಾದಾಗ ಅಥವಾ ಈ ಬಗೆಯ ಕಾರ್ಯಗಳನ್ನು ಮಾಡಲು ಇಚ್ಛಿಸಿದಾಗ, ಇದಕ್ಕೆ ಸಂಬಂಧ ಪಟ್ಟ ಆಸ್ಥಾನದ ಅಧಿಕಾರಿಯೊಬ್ಬನು ಈ ವ್ಯಕ್ತಿ ನೀಡಿದ ಉಡುಗೊರೆ ನೋಂದಣಿ ಮಾಡಲಾಗಿದೆಯಾ ಎಂಬುದನ್ನು ಪರಿಶೀಲಿಸುತ್ತಿದ್ದನು.ನೋಂದಾಯಿತ ಉಡುಗೊರೆಯ ಮೊತ್ತವು 10,000 ಡೆರಿಕ್‌ಗಳನ್ನು ಮೀರಿದ್ದಲ್ಲಿ, ಆತನು/ಆಕೆಯು ಅದರ ಎರಡರಷ್ಟು ಮೊತ್ತವನ್ನು ಪಡೆಯುಬಹುದಾಗಿತ್ತು.


ಸಾವಿರ ವರ್ಷಗಳ ನಂತರ, ರೋಡ್ಸ್‌ನ ನಿವಾಸಿಗಳು 'ಸಾಮಾನ್ಯ ಸರಾಸರಿ'ಎಂಬೊಂದು ಕಲ್ಪನೆಯನ್ನು ರೂಪಿಸಿದರು. ಸರಕು ಸಾಗಣೆಯಲ್ಲಿ ನಿತರಾದ ವರ್ತಕರು ಸಾಮೂಹಿಕ ಸಾಗಣೆಯಲ್ಲಿ ತೊಡಗಿದಾಗ ಸೂಕ್ತ ಪ್ರಮಾಣದಲ್ಲಿ ಭಾಗಿಸಲ್ಪಟ್ಟ ವಿಮಾ ಕಂತನ್ನು ನೀಡುತ್ತಿದ್ದರು; ಯಾವುದೇ ವರ್ತಕನ ಸರಕು ಬಿರುಗಾಳಿ ಸಿಕ್ಕಿಯೋ ಅಥವಾ ಮುಳುಗಡೆಯಾಗಿಯೋ ನಷ್ಟವಾದಲ್ಲಿ ಆ ವರ್ತಕನಿಗೆ ಆದ ನಷ್ಟ ಭರಿಸಲು ಈ ವಿಮಾ ಕಂತಿನ ಮೊತ್ತವನ್ನು ಬಳಸಲಾಗುತ್ತಿತ್ತು.


ಸುಮಾರು 600 ADಯಲ್ಲಿ ಗ್ರೀಕರು ಮತ್ತು ರೋಮನ್‌ರು ಆರೋಗ್ಯ ಮತ್ತು ಜೀವ ವಿಮೆಯ ಮೊದಲು ಪರಿಚಯಿಸಿದರು. ಅವರು ಆಗ "ಬೆನೆವೆಲೆಂಟ್‌ ಸೊಸೈಟೀಸ್‌"(=ಸಹಾಯಾರ್ಥ ಸಂಘ")ಎಂಬ ಪರಸ್ಪರ ಸಹಾಯ ಸಂಘಗಳನ್ನು ಸ್ಥಾಪಿಸಿದರು. ಇದು ಕುಟುಂಬಗಳ ಯೋಗಕ್ಷೇಮವನ್ನು ವಹಿಸಿ, ಸಾವು ಸಂಭವಿಸಿದಾಗ ಸದಸ್ಯರ ಅಂತ್ಯಕ್ರಿಯೆಯ ವೆಚ್ಚಗಳನ್ನು ಸಂದಾಯ ಮಾಡುತ್ತಿದ್ದವು. ಮಧ್ಯಕಾಲೀನ ಯುಗ ಇದೇ ರೀತಿಯ ಉದ್ದೇಶವನ್ನು ಮಧ್ಯ ಯುಗೀನ ಕಾಲದಲ್ಲಿನ ಪರಸ್ಪರ ಸಹಾಯ ಸಂಘಗಳು ಹೊತ್ತಿದ್ದವು. ಸರಕುಗಳಮೇಲೆ ವಿಮೆ ಇಳಿಸುವ ಅನೇಕ ಅಂಶಗಳನ್ನು ತಾಲ್ಮಡ್‌ನಲ್ಲಿ ನಮೂದಿಸಲಾಗಿದೆ. 17ನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡ್‌ನಲ್ಲಿ ವಿಮಾ ಸಂಸ್ಥೆ ಸ್ಥಾಪನೆಯಾಗುವುದಕ್ಕೂ ಮುಂಚೆ, 'ಸ್ನೇಹ ಸಂಘಗಳು" ಅಸ್ತಿತ್ವದಲ್ಲಿ ಇದ್ದವು. ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲೆಂಬ ಉದ್ದೇಶದಿಂದ ನಿಧಿಯೊಂದಕ್ಕೆ ಜನ ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದರು.


14ನೆಯ ಶತಮಾನದಲ್ಲಿ ಜಿನೊವಾದಲ್ಲಿ, ಸಾಲಗಳು ಮತ್ತು ಇತರೆ ಕರಾರುಗಳೊಂದಿಗೆ ಒಗ್ಗೂಡಿಸದ ವಿಮೆ ಪಾಲಿಸಿಗಳು ಸೇರಿ, ಪ್ರತ್ಯೇಕ ವಿಮಾ ಕರಾರುಗಳನ್ನು ಸೃಷ್ಟಿಸಲಾಯಿತು. ಇದೇ ರೀತಿ ಜಮೀನು ಆಸ್ತಿಪಾಸ್ತಿಯ ಭದ್ರತೆಯ ಬೆಂಬಲವನ್ನು ಹೊಂದಿರುವಂತಹ ವಿಮಾ ಸೌಕರ್ಯವೂ ಸೃಷ್ಟಿಯಾದವು. ಈ ಹೊಸ ವಿಮಾ ಕರಾರುಗಳು ಹೂಡಿಕೆ ಮತ್ತು ವಿಮೆಯ ಪ್ರತ್ಯೇಕತೆಗೆ ಅನುವು ಮಾಡಿತು. ಈ ರೀತಿಯ ಪ್ರತ್ಯೇಕತೆ ನೌಕಾಯಾನ ವಿಮೆಯಲ್ಲಿ ಬಹಳ ಉಪಯುಕ್ತವಾಯಿತು. ನವೋದಯೋತ್ತರ ಕಾಲದಯುರೋಪ್‌ನಲ್ಲಿ ವಿಮೆಯು ಇನ್ನಷ್ಟು ಅತ್ಯಾಧುನಿಕವಾಗಿ, ವಿಶಿಷ್ಟ ವೈವಿಧ್ಯಗಳೊಂದಿಗೆ ವಿಕಸನಗೊಂಡಿತು.


ಹದಿನೇಳನೆಯ ಶತಮಾನದ ಆರಂಭಿಕ ದಶಕಗಳಲ್ಲಿ ವಿಮೆಯ ಬೇರೆಬೇರೆ ರೂಪಗಳು ಲಂಡನ್‌ನಲ್ಲಿ ಅಭಿವೃದ್ಧಿಯಾದವು. ಉದಾಹರಣೆಗೆ, ರಾಬರ್ಟ್‌ ಹೇಮನ್‌ ಎಂಬ ಇಂಗ್ಲಿಷ್‌ ವಸಾಹತುದಾರನ ಉಯಿಲಿನಲ್ಲಿ ಲಂಡನ್‌ನ ಡಯೊಸಿಸನ್‌ ಚಾನ್ಸೆಲರ್‌ ಆರ್ಥರ್‌ ಡಕ್‌ ಅವರೊಂದಿಗೆ ತೆರೆಯಲಾದ ಎರಡು 'ವಿಮೆ ಪಾಲಿಸಿ'ಗಳನ್ನು ಉಲ್ಲೇಖಿಸುತ್ತದೆ.ಪ್ರತಿಯೊಂದರ ಮೌಲ್ಯವು £100 ಆಗಿದ್ದರ ಪೈಕಿ ಒಂದು ಹೇಮನ್‌ರ ಹಡಗು ಕ್ಷೇಮವಾಗಿ ಗಯಾನಾ ತಲುಪುವುದರ ಬಗ್ಗೆ ಮತ್ತು ಇನ್ನೊಂದು 'ನನ್ನ ಜೀವನದ ಬಗ್ಗೆ ಡಾ. ಆರ್ಥರ್‌ ಡ್ಯೂಕ್‌ ನೀಡಿರುವ ಒಂದು ನೂರು ಪೌಂಡ್‌ಗಳ ಭರವಸೆ"ಗೆ ಸಂಬಂಧಿಸಿದ್ದಾಗಿದೆ.. 1628ರ ನವೆಂಬರ್‌ 17ರಂದು ಹೇಮನ್‌ ಉಯಿಲಿಗೆ ಸಹಿ ಹಾಕಿ ಮುದ್ರೆಯೊತ್ತಿದ್ದರೂ ಅದನ್ನು 1633ರ ವರೆಗೂ ಸಾಬೀತುಪಡಿಸಿರಲಿಲ್ಲ.[೯] ಹದಿನೇಳನೆಯ ಶತಮಾನದ ಅಂತ್ಯದ ಹೊತ್ತಿಗೆ, ವಾಣಿಜ್ಯೋಮ ಕೇಂದ್ರವಾಗಿ ಬೆಳೆಯುತ್ತಿದ್ದ ಲಂಡನ್‌ ನಗರದಲ್ಲಿ ನೌಕಾ ವಿಮೆಗಾಗಿ ಬೇಡಿಕೆ ಏರಿತು.1680ರ ದಶಕದ ಉತ್ತರಾರ್ಧದಲ್ಲಿ, ಎಡ್ವರ್ಡ್‌ ಲಾಯ್ಡ್‌ ಒಂದು ಕಾಫಿ ಕೇಂದ್ರವನ್ನು ಆರಂಭಿಸಿದ. ಇದು ಹಡಗಿನ ಮಾಲೀಕರು, ಹಡಗಿನ ಕ್ಯಾಪ್ಟನ್‌ಗಳು ಮತ್ತು ವರ್ತಕರು ಪದೇಪದೇ ಸುಳಿದಾಡುವ ಜನಪ್ರಿಯರು ತಾಣವಾಯಿತು. ಹಾಗಾಗಿ, ಹಡಗಿನ ಮೂಲಕ ಸರಕು ಸಾಗಾಣಿಕೆ ವಿಶ್ವಸನೀಯ ವಾರ್ತೆಗಳಿಗಾಗಿ ಈ ಸ್ಥಳವು ಒಂದು ಪ್ರಮುಖ ಮೂಲವಾಯಿತು. ಸರಕು ಮತ್ತು ಹಡಗುಗಳಿಗೆ ವಿಮೆ ಇಳಿಸಲು ಬಯಸುವವರು ಮತ್ತು ಇಂಥ ಹೊಣೆ ಹೊರಲು ತಯಾರಿರುವ ಸಂಸ್ಥೆಗಳವರಿಗೆ ಭೇಟಿಯಾಗುವ ಸ್ಥಳವಾಗಿ ಮಾರ್ಪಟ್ಟಿತು. ಈಗ, ಲಾಯ್ಡ್ಸ್‌ ಆಫ್‌ ಲಂಡನ್‌ ಎಂಬ ಸಂಸ್ಥೆ ಕಡಲ ಮತ್ತು ಇತರೆ ವಿಶಿಷ್ಟ ರೀತಿಯ ವಿಮೆಗಳ ಮಾರುಕಟ್ಟೆಗಳ ಅಗ್ರಸ್ಥಾನದಲ್ಲಿದೆ. (ಇದು ವಿಮಾ ಸಂಸ್ಥೆಯಲ್ಲ ಎಂಬುದು ಗಮನಾರ್ಹ) ಆದರೆ ಇದು ಹೆಚ್ಚಾಗಿ ಚಾಲ್ತಿಯಲ್ಲಿರುವ ವಿಮಾ ವಿಧಾನಗಳಿಗಿಂತಲೂ ವಿಭಿನ್ನ ರೀತಿಯಲ್ಲಿ ಕಾರ್ಯವಹಿಸುತ್ತದೆ.


1666ರಲ್ಲಿ 13,200 ಮನೆಗಳನ್ನು ಸಾರಾಸಗಟಾಗಿ ಸುಟ್ಟುಹಾಕಿದ, ಲಂಡನ್‌ನಲ್ಲಿ ಸಂಭವಿಸಿದ ಘೋರ ಅಗ್ನಿ ಅನಾಹುತದಲ್ಲಿ ಈಗ ನಾವು ತಿಳಿದಿರುವಂತಹ ವಿಮೆಯ ಇತಿಹಾಸದ ಹೆಜ್ಜೆಗಳನ್ನು ಕಾಣ ಬಹುದು. ಈ ದುರಂತದ ಪರಿಣಾಮವಾಗಿ, ನಿಕಾಲಸ್‌ ಬಾರ್ಬನ್‌ ಕಟ್ಟಡಗಳನ್ನು ವಿಮೆ ಮಾಡಲು ಒಂದು ಕಾರ್ಯಾಲಯವನ್ನು ಸ್ಥಾಪಿಸಿದ. ಇಟ್ಟಿಗೆ ಮತ್ತು ಮರದ ಹಂದರದ ಮನೆಗಳ ಮೇಲೆ ವಿಮೆ ಇಳಿಸಲು, 1680ರಲ್ಲಿ ಆತನು 'ದಿ ಫೈರ್‌ ಆಫೀಸ್‌' ಎಂಬ ಇಂಗ್ಲೆಂಡ್‌ನ ಮೊಟ್ಟಮೊದಲ ಅಗ್ನಿ ವಿಮಾ ಸಂಸ್ಥೆಯನ್ನು ಸ್ಥಾಪಿಸಿದ.


ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮೊಟ್ಟಮೊದಲ ವಿಮಾ ಸಂಸ್ಥೆಯು ಅಗ್ನಿ ವಿಮೆಯ ವಿಮಾ ನಿರ್ವಹಣೆಯನ್ನು ಕೈಗೊಂಡು, 1732ರಲ್ಲಿ ದಕ್ಷಿಣ ಕ್ಯಾರೊಲಿನಾದ ಚಾರ್ಲ್ಸ್‌ಟೌನ್‌ (ಇಂದಿನ ಚಾರ್ಲ್ಸ್‌ಟನ್‌)ನಲ್ಲಿ ಸ್ಥಾಪನೆಯಾಯಿತ್ತು. ವಿಮೆಯ ರೀತಿ-ನೀತಿಗಳನ್ನು, ವಿಶೇಷವಾಗಿ ಬೆಂಕಿಯ ವಿರುದ್ಧದ ವಿಮೆಯನ್ನು ಸಾರ್ವಕಾಲಿಕ ವಿಮೆಯ ರೂಪದಲ್ಲಿ ಮಾಡಿಸುವುದರ ಮೂಲಕ ಬೆಂಜಮಿನ್‌ ಫ್ರಾಂಕ್ಲಿನ್‌ ವಿಮೆಯ ಜನಪ್ರಿಯತೆಯನ್ನು ಹೆಚ್ಚಿಸಿ ಪ್ರಮಾಣಿತಗೊಳಿಸಲು ನೆರವು ನೀಡಿದ. 1752ರಲ್ಲಿ 'ಅಗ್ನಿ-ನಷ್ಟ ಗೃಹ ವಿಮಾ ದೇಣಿಗೆ ಫಿಲಡೆಲ್ಫಿಯಾ ಸಂಸ್ಥೆಫಿಲಡೆಲ್ಫಿಯಾ ಕಾಂಟ್ರಿಬ್ಯೂಷನ್‌ಷಿಪ್‌ 'ಎಂಬ ಅಗ್ನಿ ಅನಾಹುತಗಳಿಂದಾಗಿ ಮನೆಗಳಿಗೆ ಒದಗಿಬಂದ ನಷ್ಟ ಭರಿಸುವ ವಿಮಾ ಸಂಸ್ಥೆ'ಯೊಂದನ್ನು ಸ್ಥಾಪಿಸಿದ. ಫ್ರಾಂಕ್ಲಿನ್‌ರ ಸಂಸ್ಥೆ ಅಗ್ನಿ ಅನಾಹುತ ತಡೆಯಲು ದೇಣಿಗೆ ನೀಡಿದ ಮೊದಲ ಸಂಸ್ಥೆ. ಕಟ್ಟಡಗಳಲ್ಲಿ ಸಂಭವಿಸಬಹುದಾದ ನಿಶ್ಚಿತ ಅಗ್ನಿ ಆಕಸ್ಮಿಕಗಳ ಬಗ್ಗೆ ಅವರ ಸಂಸ್ಥೆ ಎಚ್ಚರಿಸಿದ್ದಷ್ಟೇ ಅಲ್ಲ, ಮರದ ಮನೆಗಳಂತಹ ಬೆಂಕಿಯ ಅಪಾಯಕ್ಕೆ ಸುಲಭವಾಗಿ ತುತ್ತಾಗಬಹುದಾದ ಕಟ್ಟಡಗಳಗೆ ವಿಮಾ ಸೌಕರ್ಯ ಒದಗಿಸಲು ಅವರ ಸಂಸ್ಥೆ ನಿರಾಕರಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಮಾ ಉದ್ದಿಮೆಯ ನಿಯಂತ್ರಣವು ಅತಿಯಾದವಿಭಜನೆಗೆ ಒಳಗೊಂಡಿದ್ದು, ವೈಯಕ್ತಿಕ ರಾಜ್ಯ ವಿಮಾ ಇಲಾಖೆಯು ಅದರ ಪ್ರಾಥಮಿಕ ಜವಾಬ್ದಾರಿಯನ್ನು ಹೊತ್ತಿವೆ. ವಿಮಾ ಕ್ಷೇತ್ರ ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಕೇಂದ್ರೀಕೃತವಾಗಿದ್ದು, ರಾಜ್ಯ ವಿಮಾ ಆಯೋಗದವರು ವೈಯಕ್ತಿಕ ನಿಗಾ ನೀಡುತ್ತಾರೆ. ಕೆಲವೊಮ್ಮೆ ರಾಷ್ಟ್ರೀಯ ವಿಮಾ ಆಯೋಗದವರೊಂದಿಗೆ ಸಲಹೆ ಪಡೆದು ಕೆಲಸ ಮಾಡುವುದುಂಟು. ಇತ್ತೀಚೆಗಿನ ವರ್ಷಗಳಲ್ಲಿ, ರಾಜ್ಯ ಮತ್ತು ರಾಷ್ಟ್ರೀಯ ಬ್ಯಾಂಕ್‌ಗಳ ಉಸ್ತುವಾರಿ ಮಂಡಳಿಯ ರೀತಿಯಲ್ಲಿ, ವಿಮೆಗಾಗಿಯೂ ಸಹ ಉಭಯ ರಾಜ್ಯ ಮತ್ತು ಸಂಯುಕ್ತ ನಿಯಂತ್ರಣಾ ವ್ಯವಸ್ಥೆ (ಸಾಮಾನ್ಯವಾಗಿ ಐಚ್ಛಿಕ ಸಂಯುಕ್ತ ಸನ್ನದು (OFC)) ಸ್ಥಾಪನೆಗಾಗಿ ಕೆಲವರು ಕರೆ ನೀಡಿದ್ದಾರೆ. ವಿಮಾ ಸಂಸ್ಥೆಗಳು[ಬದಲಾಯಿಸಿ] ವಿಮಾ ಸಂಸ್ಥೆಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು:

ಜೀವ ವಿಮೆ ಸಂಸ್ಥೆಗಳು - ಇವು ಜೀವ ವಿಮೆ, ವರ್ಷಾಶನಗಳು ಮತ್ತು ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡುತ್ತವೆ. ಜೀವ-ವಿಮೆ ಹೊರತುಪಡಿಸಿ, ಸಾಮಾನ್ಯ ಅಥವಾ ಆಸ್ತಿಪಾಸ್ತಿ/ಅವಘಡ ವಿಮಾ ಸಂಸ್ಥೆಗಳು ಇತರೆ ವಿಮೆಗಳನ್ನು ಮಾರಾಟ ಮಾಡುತ್ತವೆ.

ಉಲೆಖಗಳು''''ದಪ್ಪಗಿನ ಅಕ್ಷರ [] [][]

  1. http://www.entrepreneur.com/encyclopedia/key-person-insurance
  2. http://www.entrepreneur.com/encyclopedia/key-person-insurance
  3. https://en.wikipedia.org/wiki/Key_person_insurance
  4. http://www.nfib.com/article/key-person-insurance-how-it-works-60628/