ಸದಸ್ಯ:Raghavendra Prasd Meda/sandbox
ಈಗೀನ ಪೀಳಿಗೆಯಲ್ಲಿ ಪೇಪರ್, ಕಾದಂಬರಿಗಳನ್ನು ಓದುವ ಅಭ್ಯಾಸ ಕಡಮೆಯಾಗುತ್ತಿದೆ. ಟಿವಿ, ಕಂಪ್ಯೂಟರ್, ವೀಡಿಯೊ ಗೇಮ್, ಇಂಟರ್ ನೆಟ್ ಹೀಗೆ ಮನರಂಜನೆ ಮತ್ತು ಮಾಹಿತಿಗೆ ನಾನಾ ಸಾಧನಗಳು ಇರುವಾಗ ದೊಡ್ಡ ಪುಸ್ತಕಗಳನ್ನು ಗಂಟೆ ಗಟ್ಟಲೆ ಓದುವುದು ಯಾರು ಅನ್ನುವ ಉದಾಸೀನ ಹೆಚ್ಚಿನವರಲ್ಲಿ ಬಂದು ಬಿಟ್ಟಿದೆ. ಆದರೆ ಒಂದು ವಿಷಯ ನೆನೆಪಿಟ್ಟುಕೊಳ್ಳಿ. ಓದುವ ಅಭ್ಯಾಸವನ್ನು ಬಿಟ್ಟರೆ ಅನೇಕ ಪ್ರಯೋಜನಗಳಿಂದ ವಂಚಿತರಾಗುತ್ತೇವೆ. ಓದುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಲು ಇದನ್ನು ಓದಿ:
- ಮೆದುಳಿಗೆ ವ್ಯಾಯಾಮ: ಓದುವಾಗ ಮೆದುಳು ಓದಿದನ್ನು ಅರ್ಥೈಸಿಕೊಳ್ಳುತ್ತಾ, ಕಲ್ಪನೆ ಮಾಡುತ್ತಾ ಹೋಗುತ್ತದೆ. ಇದರಿಂದ ಮೆದುಳಿಗೆ ಹೆಚ್ಚಿನ ಕೆಲಸ ಬೀಳುವುದರಿಂದ ಅದರ ಸಾಮರ್ಥ್ಯ ಹೆಚ್ಚಾಗುವುದು. ಇದರಿಂದ ಮೆದುಳಿಗೆ ಉತ್ತಮ ರೀತಿಯ ವ್ಯಾಯಾಮ ಉಂಟಾಗುತ್ತದೆ.
- ಮನಸ್ಸಿಗೆ ತೃಪ್ತಿ: ಕತೆಪುಸ್ತಕಗಳನ್ನು ಓದುತ್ತಾ ಹೋಗುವಾಗ ವಾಸ್ತವನ್ನು ಮರೆತು ಕಾಲ್ಪನಿಕ ಲೋಕದಲ್ಲಿರುತ್ತವೆ. ಕತೆಯಲ್ಲಿರುವ ಪಾತ್ರಗಳನ್ನು ಮನಸ್ಸು ಆನಂದಿಸುತ್ತದೆ. ಅನೇಕ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತದೆ. ಇದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ.
- ಕಲ್ಪನಾ ಸಾಮರ್ಥ್ಯ ಹೆಚ್ಚುತ್ತದೆ: ಓದುವಾಗ ಅದರ ಬಗ್ಗೆ ಚಿತ್ರಿಸಿಕೊಳ್ಳುವುದರಿಂದ ಕಲ್ಪನಾ ಸಾಮರ್ಥ್ಯ ಹೆಚ್ಚಾಗುತ್ತದೆ. ಆದರೆ ಟಿವಿ ನೋಡಿದಾಗ ಅದರಲ್ಲಿರುವ ಚಿತ್ರಗಳನ್ನು ನೋಡುತ್ತಾ ಕಲ್ಪನೆಯನ್ನು ಮಾಡಿಕೊಳ್ಳುವುದಿಲ್ಲ.
- ದೂರದೃಷ್ಟಿತ್ವ: ಪುಸ್ತಕ ಓದುವುದರಿಂದ ಜೀವನದದಲ್ಲಿ ಅನೇಕ ವಿಷಯಗಳ ಬಗ್ಗೆ ತಿಳಿಯಬಹುದು. ಇವು ನಿಜ ಜೀವನದಲ್ಲಿ ನಿರ್ಧಾರಗಳನ್ನು ತೆಗೆಯಲು ಸಹಾಯ ಮಾಡುತ್ತದೆ.
- ಜ್ಞಾನಾಭಿವೃದ್ಧಿ ಹೆಚ್ಚಾಗುತ್ತದೆ: ಜ್ಞಾನ ವ್ಯಕ್ತಿಗೆ ಉತ್ತಮ ವ್ಯಕ್ತಿತ್ವ ಕೊಡುತ್ತದೆ. ಉತ್ತಮವಾದ ಜ್ಞಾನ ಪಡೆಯ ಬೇಕೆಂದರೆ ಓದಬೇಕು.
- ವಾಗ್ಮಿ: ಉತ್ಮವಾದ ವಾಗ್ಮಿ ಅನಿಸಿಕೊಳ್ಳಬೇಕಾದರೆ ಅವನು ತುಂಬಾ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿರಬೇಕು.
- ಜೀವಿಸುವ ಕಲೆ: ಅನೇಕ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದಿದರೆ ಅದು ನಮಗೆ ಬದುಕಲು ಮಾರ್ಗದರ್ಶನ ನೀಡುತ್ತದೆ. ಆದ್ದರಿಂದಲೆ ಪುಸ್ತಕಗಳು ಜೀವನದ ಅತ್ಯುತ್ತವಾದ ಸಂಗತಿಗಳಾಗಿವೆ.
- ಸಂಸ್ಕೃತಿ: ಪುಸ್ತಕ ಓದುವುದರಿಂದ ತರ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬಹುದು. ಟಿವಿಯಲ್ಲಿ ಅಥವಾ ನೆಟ್ ನಲ್ಲಿ ನಡಿದರೆ ತುಂಬಾ ಕಾಲ ತಲೆಯಲ್ಲಿ ಉಳಿಯುವುದಿಲ್ಲ. ಆದರೆ ಓದಿದರೆ ಅದು ಮರೆಯುವುದು ತುಂಬಾ ವಿರಳ. ಇದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದು.
ಅಹಂ(ಈಗೋ)
ಮನುಷ್ಯ ವ್ಯಕ್ತಿತ್ವ ಅನ್ನುವುದು ಅತ್ಯಂತ ಸಂಕೀರ್ಣ ಅದನ್ನು ಅರ್ಥಮಾಡಿಕೊಳ್ಳುವುದು ಸಹ ಅಷ್ಟೆ ಕಷ್ಟಕರವಾದದ್ದು . ವ್ಯಕ್ತಿಗಳ ನಡುವೆ ನಡೆಯುವ ಸಂವಹನ ಕ್ರಿಯೆಯ ವಿಶ್ಲೇಷಣೆ ಆಧಾರದ ಮೇಲೆ, ಮನೋ ವಿಜ್ಞಾನಿಗಳು ಈ ವ್ಯಕ್ತಿತ್ವಗಳನ್ನು ಗ್ರಹಿಸಲು ಪ್ರಯತ್ನ ಪಡುತ್ತಾರೆ. ಈ ಮನುಷ್ಯರ ನಡುವಿನ ಸಂವಹನ ಕ್ರಿಯೆ ಯಾವುದೇ ರೂಪದಲ್ಲಿರಬಹುದು, ಅದು ಮಾತು ಕತೆಯ ರೂಪ, ಬರವಣಿಗೆಯ ರೂಪ, ಭಾವನೆಗಳನ್ನು ವ್ಯಕ್ತಪಡಿಸುವ ಯಾವುದೇ ರೂಪದ ಸಂವಹನ ವ್ಯಕ್ತಿತ್ವ ವಿಶ್ಲೇಷಣೆಗೆ ನೆರವಾಗುತ್ತದೆ.
ವ್ಯಕ್ತಿತ್ವಗಳ ಮನಗಳ ಅರಿವಿಕೆಯ ಈ ಜ್ಞಾನ ಎಲ್ಲ ರೂಪದಲ್ಲು ಸಹ ಒಳ್ಳೆಯದೇ ಇದು ನಮ್ಮ ಮನಸಿನ ಸ್ಥಿಥಿಯನ್ನು ನಾವೆ ತಿಳಿಯಲು, ಬೇರೆಯವರ ಮನಸಿಕ ಸ್ಸ್ಥಿತಿಗತಿಗಳನ್ನು ನಿರ್ದರಿಸಲು ಸಹಾಯಕವಾಗಿದ್ದು, ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗಿದೆ. ಹಾಗೆ ಮನುಷ್ಯನ ಮನಸ್ಸಿನ ನಡುವೆ ಇರುವ ದೂರವನ್ನು ಕಡಿಮೆಗೊಳಿಸಿ ಮನಸ್ಸನ್ನು ತಿಳಿಗೊಳಿಸಲು ಸಹ ಸಹಾಯಕವೆನಿಸುವುದು.
ಈ ವಿಶ್ಲೇಷಣೆಯಂತೆ ಪ್ರತಿ ಮನುಷ್ಯನ ಮನಸಿಕ ಸ್ಸ್ಥಿತಿಯನ್ನು ಮೂರು ಆಯಾಮಗಳಲ್ಲಿ ಗುರುತಿಸಬಹುದು
- ತಂದೆಯ ಭಾವ (ಪೇರೆಂಟ್ ಈಗೋ)
- ಸಮಸ್ಥಿಥಿ ಭಾವ (ಅಡಲ್ಟ್ ಈಗೋ)
- ಶಿಶು ಭಾವ (ಚೈಲ್ಡ್ ಈಗೋ)
ಈ ಭಾವಗಳ ಅರ್ಥ ಮನುಷ್ಯನೊಬ್ಬ ಸದಾ ಒಂದೆ ಭಾವದಲ್ಲಿರುವನೆಂಬ ಅರ್ಥವಲ್ಲ, ನಮ್ಮೆಲ್ಲರ ಮನಸು , ಮಾತುಕತೆ, ನಡೆನುಡಿಗಳು ಸದಾ ಈ ಮೂರು ಭಾವಗಳ ಸುತ್ತಲೆ ಸುತ್ತುತ್ತಿರುತ್ತದೆ. ಎಲ್ಲರ ಮನಗಳು ಈ ಮೂರು ಆಯಾಮಗಳಲ್ಲಿದ್ದು ವ್ಯಕ್ತಿತ್ವಗಳ ನಡುವಿನ ಮನಸ್ಸಿನ, ಹೊರಗಿನ ಸಂವಹನ ಕ್ರಿಯೆ ನಡೆದಿರುತ್ತದೆ. ಕೆಲವೊಮ್ಮೆ ಇಬ್ಬರು ವ್ಯಕ್ತಿಗಳ ನಡುವಿನ ಮಾತುಕತೆ ಒಂದೆ ಭಾವದಲ್ಲಿರದೆ, ಎಲ್ಲ ಮೂರು ಭಾವಗಳನ್ನು ಒಳಗೊಂಡಿದ್ದು, ಇಬ್ಬರ ನಡುವಿನ ಸಂವಹನ, ಸಂಪರ್ಕ ನಡೆಯುತ್ತದೆ.
ತಂದೆಯಭಾವ (ಪೇರೆಂಟ್ ಈಗೋ)
ಇದನ್ನು ಬೇಕಾದಲ್ಲಿ ತಾಯಿಯ ಭಾವ ಎಂದು ಕರೆಯಬಹುದು. ಈ ಭಾವ ನಮ್ಮನ್ನು ಹೊರಗಿನಿಂದ ಪ್ರೇರೆಪಿಸಿದ ಭಾಗ, ಇದು ನಮ್ಮ ಸ್ವಂತ ಚಿಂತನೆಯಾಗದೆ, ಚಿಕ್ಕ ವಯಸ್ಸಿನಿಂದ ನಮ್ಮ ತಂದೆ ತಾಯಿ ದೊಡ್ಡವರು ಇವರನ್ನೆಲ್ಲ ನೋಡಿ, ನಮಗರಿವಿಲ್ಲದೆ ಕಲಿತ ಭಾವವಾಗಿರುತ್ತದೆ. ಈ ತಂದೆಯ ಭಾವವು ತೀಕ್ಷ್ಣವಾಗಿದ್ದು, ನಮ್ಮ ಮನಸ್ಸ್ಸ್ಸನ್ನು ಹೊರಗಿನಿಂದ ಹೊಕ್ಕ ಅಭಿಪ್ರಾಯಗಳಿಂದ ರೂಪಿಸಿಕೊಂಡ, ನಮ್ಮ ನಡೆ ನುಡಿಗಳನ್ನು ನಿಯಂತ್ರಿಸುವ ಭಾವ . ಕೆಲವು ಮಾತುಗಳು : ನಿನಗೆ ಎಂದಿಗು ಸಾದ್ಯವಿಲ್ಲ, ನೀನು ಇದನ್ನು ಮಾಡಲಾರೆ, ಅದನ್ನು ಮಾಡಬೇಡ, ಹಾಗಲ್ಲ ಈ ರೀತಿ ನಾನು ಹೇಳಿದಂತೆ ಮಾಡು ---- ಇಂತಹ ವಾಕ್ಯಗಳೆಲ್ಲ ತಂದೆ ಭಾವದ ರೂಪಕ.
ಇನ್ನೊಂದು ತರಹದ ತಂದೆಭಾವ : "ಈ ಕೆಲಸ ಮುಗಿಸುವ ವರೆಗೂ ಯಾರು ಹೊರಹೋಗಬಾರದು" , ಇಲ್ಲಿ ಆಜ್ಞೆಯನ್ನು ಅಧಿಕಾರವನ್ನು ಗುರುತಿಸಬಹುದು. ನನ್ನ ಮಾತೆ ಕೇಳಬೇಕೆಂಬ ಭಾವ. ಅನುನಯದ ತಂದೆಭಾವ: "ಈ ಕೆಲಸ ನಿನ್ನಿಂದ ಆಗದು ಬಿಡು, ನಾನು ಮಾಡಿಕೊಳ್ಳುವೆ" , ಈ ಭಾವ ಮಗುವನ್ನು ಹಾಳು ಮಾಡಬಲ್ಲದು, ಇದು ಗುಣಾತ್ಮಕ ಕ್ರಿಯೆಯಾಗಿದ್ದು, ವ್ಯಕ್ತಿಯನ್ನು ಹೇಡಿಯನ್ನಾಗಿಸಬಲ್ಲದು.
ಸಮಸ್ಸ್ಥಿತಿ ಭಾವ : ಈ ಭಾವ ಸಹ ಹೊರಗಿನಿಂದ ಕಲಿತ್ತಿದ್ದಾಗಿದ್ದು, ಮನಸ್ಸು ಸದಾ ತರ್ಕ, ಸಾಧ್ಯತೆಗಳನ್ನು ಕುರಿತಿದ್ದಾಗಿದ್ದು, ಎದುರಿಗಿರುವರ ಮನಸ್ಸ್ಸ್ಸನ್ನು ಅರಿತು ಮಾತನಾಡುವ ಸ್ವಭಾವವಾಗಿದೆ, ಪ್ರತಿ ವಿಷಯ ಅರಿತುಕೊಂಡು ನಡೆಯನ್ನು ರೂಪಿಸಿಕೊಳ್ಳುವ ಸ್ವಭಾವ ಇರುತ್ತದೆ. ಸದಾ ಏಕೆ ಏನು ಹೇಗೆ ಯಾರು ಎಲ್ಲಿ , ಯಾವಾಗ , ಯಾವ ರೀತಿ ಈ ರೀತಿಯ ಪ್ರಶ್ನೆಗಳು ಹಾಗು ತರ್ಕಬದ್ದ ಉತ್ತರಗಳಿಂದ ರೂಪಿಸಿಕೊಳ್ಳುವ ವ್ಯಕ್ತಿತ್ವವಾಗಿರುತ್ತದೆ.
ಶಿಶುಭಾವ : ಅತ್ಯಂತ ತೀವ್ರವಾದ ಚಿಂತನೆಗಳು, ಭಾವ ಇದರ ವಿಶೇಷ , ಅಳು ನಗು ಕೋಪ ಸಂತಸ ಕಾಡುವ ಕೀಳುಭಾವ ಇವೆಲ್ಲ ಶಿಶುಭಾವದ ಪ್ರತೀಕ. ಶಿಶುಭಾವ ಪೂರ್ಣ ಒಳಗಿನಿಂದ ಮೂಡುವ ಭಾವವಾಗಿದ್ದು, ಈ ಭಾವಗಳು ತೀವ್ರವಾದಗ ಮನುಷ್ಯನ ನಡುವಳಿಕೆ ಸಾಮಾನ್ಯವೆನಿಸುವದಿಲ್ಲ.
- ಸಹಜ ಶಿಶು: ಇದು ಅತ್ಯಂತ ಶಕ್ತಿಶಾಲಿ ಭಾವ, ಸದಾ ಕುತೂಹಲ, ಶಕ್ತಿಬರಿತ, ಒಳಹೊಕ್ಕು ನೋಡುವ ಸ್ವಭಾವ ಇಂತವೆಲ್ಲ ಎದ್ದು ಕಾಣುತ್ತವೆ, ಶಿಶು ಸ್ವಭಾವ ಜಾಗೃತವಾಗಿದ್ದಲ್ಲಿ ಬದುಕಿನ ಬಗ್ಗೆ ಸದಾ ಉತ್ಸಾಹ ಕುತೂಹಲವಿರುತ್ತದೆ.
- ಪ್ರೇರಿತ ಶಿಶುಭಾವ: ಮನಸ್ಸು ಸದಾ ಸಹಜ ಶಿಶುವಿನ ಭಾವದಲ್ಲಿರುವುದು ಕಷ್ಟಕರ, ಹಾಗಾಗಿ ಬಲವಂತವಾಗಿ ಕೆಲವೊಮ್ಮೆ ಶಿಶು ಸ್ವಭಾವವನ್ನು ಆರೋಪಿಸಿಕೊಳ್ಳುವುದು ಇದೆ. ನಮಗಿಂತ ಹೆಚ್ಚು ಶಕ್ತಿವಂತರನ್ನು ಅಧಿಕಾರಸ್ತರನ್ನು ಕಂಡಾಗ ಕೆಲವೊಮ್ಮೆ ಅನುನಯದಿಂದ ನಡೆಯುತ್ತ, ಆಗಲಿ, ಥಾಂಕ್ಸ್, ಸಾರಿ, ಇಂತವೆಲ್ಲ ಹೇಳುತ್ತ ನಡೆಯುವ ಸ್ವಭಾವ.
- ಬುದ್ಧಿವಂತ ಶಿಶು : ಇದು ಸ್ವಭಾವದ ಆರನೆ ಇಂದ್ರೀಯದಂತೆ ಕೆಲಸ ಮಾಡುತ್ತದೆ, ಉದಾಹರಣೆ: ವ್ಯಕ್ತಿಯನ್ನು ನೋಡುವಾಗಲೆ ಇವನು ಒಳ್ಳೆಯವನು ಅಥವಾ ಕೆಟ್ಟವನ್ನು ಎಂದು ನಿರ್ದರಿಸುವುದು, ನನಗೆ ಕಪ್ಪು ಇಷ್ಟವಿಲ್ಲ ಎನ್ನುವುದು ಇಂತವೆಲ್ಲ ಬುದ್ದಿವಂತ ಶಿಶುವಿನ ಕೆಲಸ.
ವ್ಯಕ್ತಿತ್ವದಲ್ಲಿನ ಪ್ರಧಾನ ಭಾವವನ್ನು ಗುರುತಿಸಲು ಈ ಅಂಶಗಳು ನೆರವಾಗಬಹುದು.