ಸದಸ್ಯ:Rachana.R/ನನ್ನ ಪ್ರಯೋಗಪುಟ/1

ಮಾರ್ಗರೇಟ್ ಕ್ಯಾವೆಂಡಿಷ್ ನ ಪೂರ್ಣ ಹೆಸರು ಮಾರ್ಗರೇಟ್ ಲ್ಯೂಕಾಸ್ ಕ್ಯಾವೆಂಡಿಷ್.ಮಾರ್ಗರೇಟ್ ಲ್ಯೂಕಾಸ್ ಕ್ಯಾವೆಂಡಿಷ್, ನ್ಯೂ ಕೆಸಲ್-ಆನ್-ಟೈನ್ ಡಚೆಸ್,೧೭ನೇ ಶತಮಾನದಲ್ಲಿ ಒರ್ವ ಇಂಗ್ಲೀಷಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬಳಾಗಿದ್ದರು.ಇವರು ತತ್ವಜ್ಞಾನಿ,ಕವಿಯಿತ್ರಿ,ವಿಜ್ಞಾನಿ,ವಿಜ್ಞಾನ-ಬರಹಗಾರ್ತಿ ಮತ್ತು ನಾಟಕಕಾರ್ತಿರಾಗಿದ್ದರು.ಇವರು ೧೬೨೩,ಯುನೈಟೆಡ್ ಕಿಂಗ್ಡಮ್ ನ ಕಾಲ್ಚೆಸ್ಟರ್ ನಲ್ಲಿ ಜನಿಸಿದರು.ಲ್ಯೂಕಾಸ್ ಅವರು ಸೇಂಟ್ ಜಾನ್ಸ್ ಅಬ್ಬೆ, ಎಸೆಕ್ಸ್ನಲ್ಲಿ ಜನಿಸಿದರು.ಇವರ ತಂದೆ ಥಾಮಸ್,ತಾಯಿ ಎಲಿಜಬೆತ್ ಲ್ಯೂಕಾಸ್. ಅನೇಕ ಮಹಿಳಾ ಬರಹಗಾರರು ಅನಾಮಧೇಯವಾಗಿ ಪ್ರಕಟಿಸಿದ ಸಮಯದಲ್ಲಿ ಕ್ಯಾವೆಂಡಿಷ್ ಆವರು ತಮ್ಮ ಹೆಸರಿನಲ್ಲಿಯೇ ಪ್ರಕಟಿಸಿದರು.ಇವರ ಬರಹವು ಲಿಂಗ,ಶಕ್ತಿ,ಶಿಷ್ಟಾಚಾರ,ವೈಜ್ಞಾನಿಕ ವಿಧಾನ ಮತ್ತು ತತ್ತ್ವಶಾಸ್ತ್ರವನ್ನು ಒಳಗೊಂಡಂತೆ ಅನೇಕ ವಿಷಯಗಳು ಬಗ್ಗೆ ತಿಳಿಸಿದೆ.

ಮಾರ್ಗರೇಟ್ ಕ್ಯಾವೆಂಡಿಷ್

ಕ್ಯಾವೆಂಡಿಷ್ ಕುಟುಂಬ

ಬದಲಾಯಿಸಿ
  ಕ್ಯಾವೆಂಡಿಷ್ ನ ತಂದೆ,ಥಾಮಸ್ ಲ್ಯೂಕಾಸ್,"ಒಂದು ಮಿ.ಬ್ರೂಕ್ಸ್" ಸಾವಿನ ಕಾರಣವಾಗಿ ದ್ವಂದ್ವಯುದ್ಧದ ನಂತರ ಗಡೀಪಾರು ಮಾಡಲಾಯಿತು.ಕಿಂಗ್ ಜೇಮ್ಸ್ ಎಂಬ ವ್ಯಕ್ತಿಯೂ ಥಾಮಸ್ ಲ್ಯೂಕಾಸ್ ರನ್ನು ಕ್ಷಮಿಸಿದ ಕಾರಣ ೧೬೦೩ ರಲ್ಲಿ ಇಂಗ್ಲೆಂಡ್ ಗೆ ಹಿಂದಿರುಗಿದನು.ಮಾರ್ಗರೇಟ್ ಕ್ಯಾವೆಂಡಿಷ್ ತನ್ನ ಕುಟುಂಬದ ಎಂಟು ಮಕ್ಕಳಲ್ಲಿ ಕಿರಿಯಳಾಗಿದ್ದಳು.ಆಕೆಯ ಪೋಷಕರು ಶ್ರೀಮಂತರಾಗಿದ್ದರೂ,ಅವರು ತಮ್ಮ ಮಕ್ಕಳ ಜೊತೆ ಸಂಪೂರ್ಣವಾಗಿ ಇರಲಿಲ್ಲ.ಅವರು ಕ್ಯಾವೆಂಡಿಷ್ ಳನ್ನು ಖಾಸಗಿಯಾಗಿ ಭೋಧಿಸಿದರು ಮತ್ತು ೧೬೪೨ ರಲ್ಲಿ ಆಕ್ಸ್ಫರ್ಡ್ ನಲ್ಲಿ ತನ್ನ ಸಹೋದರಿಯೊಂದಿಗೆ ವಾಸಿಸಲು ಕಳುಹಿಸಿದರು. ಕ್ಯಾವೆಂಡಿಷ್ ಹೆಚ್ಚು ಸಮಯ ತಮ್ಮ ಒಡಹುಟ್ಟಿದವರೊಂದಿಗೆ ಕಳೆದಿದ್ದರು ಎಂಬ ಅಂಶವು ದಾಖಲೆಯಲ್ಲಿ ನೋಡಬಹುದು.

ರಾಣಿ ಹೆನ್ರಿಯೆಟ್ಟಾ ಮಾರಿಯಾಗೆ ಗೌರವದ ಸೇವಕಿಯಾಗಿ ದಿನಗಳು

ಬದಲಾಯಿಸಿ
  ರಾಣಿ ಹೆನ್ರಿಯೆಟ್ಟಾ ಮಾರಿಯಾ ಆಕ್ಸ್ಫರ್ಡ್ನಲ್ಲಿದ್ದಾಗ,ಕ್ಯಾವೆಂಡಿಷ್ ಆಕೆಯ ತಾಯಿಯ ಬಳಿ ಮನವಿ ಮಾಡಿಕೊಂಡು,ರಾಣಿಗೆ ಗೌರವಾನ್ವಿತ ದಾಸಿಯಾಗಿರಲು(ಮೇಯ್ಡ್ ಆಫ್ ಆನರ್) ಇಚ್ಛಿಸುತ್ತಿದ್ದರು.ಕ್ಯಾವೆಂಡಿಷ್ ತನ್ನ ಗಡಿಪಾರುದ ನಂತರ ಕ್ವೀನ್ ಜೊತೆಯಲ್ಲಿ ಫ್ರಾನ್ಸ್ಗೆ ತೆರಳಿದರು.ಇದೇ ಮೊದಲ ಬಾರಿಗೆ ಕ್ಯಾವೆಂಡಿಷ್ ತನ್ನ ಕುಟುಂಬದಿಂದ ದೂರವಿದ್ದರು.ಆಕೆ ತನ್ನ ಒಡಹುಟ್ಟಿದವರ ಸಂಗದಲ್ಲಿ ಇದ್ದಾಗ ಬಹಳ ವಿಶ್ವಾಸದಿಂದ ಇರುತ್ತಿದರು,ಆದರೆ ಅಪರಿಚಿತರ ಮಧ್ಯೆ ಇರುವಾಗ ತುಂಬಾ ದುಃಖಿತದಿಂದ ಇರುತ್ತಿದ್ದರು ಎಂದು ದಾಖಲೆಗಳು ತಿಳಿಸುತ್ತವೆ,ಕ್ಯಾವೆಂಡಿಷ್ ಮೇಯ್ಡ್ ಆಫ್ ಆನರ್ ಆಗಿ ಇರಲು ವಿಷಾದಿಸುತ್ತಾ, ನ್ಯಾಯಾಲಯದಿಂದ ಹೊರಬರಲು ಬಯಸುತ್ತಿದ್ದರು.ಈ ವಿಷಯವನ್ನು ತನ್ನ ತಾಯಿಗೆ ತಿಳಿಸಿದರು.ಆಗ ಅವರ ತಾಯಿ ಎಲ್ಲರು ಅಪಹಾಸ್ಯ ಮಾಡುತ್ತಾರೆ ಎಂದು ಹೇಳಿ ಕ್ಯಾವೆಂಡಿಷ್ ನ ಮನವೊಲಿಸಿದರು.ಅವರು ತಾಯಿಯ ಮಾತನ್ನು ಕೇಳಿ,ಗೌರವಾನ್ವಿತ ದಾಸಿಯಾಗಿರು ಒಪ್ಪಿದರು.[]

ವೈವಾಹಿಕ ಜೀವನ

ಬದಲಾಯಿಸಿ
 ಕ್ಯಾವೆಂಡಿಷ್ ವಿಲಿಯಂ ಕ್ಯಾವೆಂಡಿಷ್ಳನ್ನು ಮದುವೆಯಾಗುವರೆಗೂ,ಎರಡು ವರ್ಷಗಳ ಕಾಲ ಮೇಯ್ಡ್ ಆಫ್ ಆನರ್ ಆಗಿಯೇ ಉಳಿದಳು.ವಿಲಿಯಂ ಕ್ಯಾವೆಂಡಿಷ್ ನಂತರ ಡ್ಯೂಕ್ ಆಗಿ ನೇಮಕಗೊಂಡನು.ಕ್ಯಾವೆಂಡಿಷ್ ತನ್ನ ಪತಿಯಲ್ಲಿದ್ದ ಕಠೋರತೆಯನ್ನು ಇಷ್ಟಪಟ್ಟಿದ್ದರು ಎಂಬುದು ಗಮನಿಸಬಹುದು. ಕ್ಯಾವೆಂಡಿಷ್ ಹೇಳುವುದೇನೆಂದರೆ,ಅವರು ಪ್ರೀತಿಸುತ್ತಿದ್ದ ಏಕೈಕ ವ್ಯಕ್ತಿ ವಿಲಿಯಂ ಆಗಿದ್ದು,ಅವರು ಯಾವುದೇ ಪ್ರಶಸ್ತಿ, ಸಂಪತ್ತು ಅಥವಾ ಅಧಿಕಾರಕ್ಕಾಗಿ ಅವರನ್ನು ಪ್ರೀತಿಸುತ್ತಿರಲ್ಲಿಲ್ಲ,ಆದರೆ ಅವರು ವಿಲಿಯಂನ ಅರ್ಹತೆ, ನ್ಯಾಯ, ಕೃತಜ್ಞತೆ, ಕರ್ತವ್ಯ ಮತ್ತು ನಿಷ್ಠೆಯನ್ನು ಪ್ರೀತಿಸುತ್ತಿದ್ದರು ಎಂದು ಪ್ರೀತಿಯಿಂದ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
 ಮದುವೆಯಾದ ಕೆಲವು ವರ್ಷಗಳ ನಂತರ,ಕ್ಯಾವೆಂಡಿಷ್ ಮತ್ತು ಅವರ ಗಂಡನ ಸಹೋದರ,ಸರ್ ಚಾರ್ಲ್ಸ್ ಕ್ಯಾವೆಂಡಿಷ್ ಅವರು ಇಂಗ್ಲೆಂಡ್ಗೆ ಹಿಂದಿರುಗಿದರು.ಅವರು ತನ್ನ ಪತಿಯ ಎಸ್ಟೇಟ್ ಮಾರಾಟ ಮಾಡಬೇಕೆಂದು ಪತಿಯನ್ನು ಕೇಳಿದಾಗ,ಅವನು ಮಾರಾಟದಿಂದ ತನ್ನ ಹೆಂಡತಿಯು ಪ್ರಯೋಜನ ಪಡೆಯಬಹುದೆಂದು ಭಾವಿಸುತ್ತಾ,ಮಾರಾಟಕ್ಕೆ ಒಪ್ಪಿಗೆಕೊಟನು.ಆದರೆ ಕ್ಯಾವೆಂಡಿಷ್ ಗೆ ಇದರಿಂದ ಯಾವುದೇ ಪ್ರಯೋಜನವೂ ಪಡೆಯಲಿಲ್ಲ. ಅನೇಕ ಮಹಿಳೆಯರು ನಿಧಿಗಾಗಿ ಅನೇಕ ಬಾರಿ ಅರ್ಜಿ ಸಲ್ಲಿಸಿದಾಗ,ಇವರು ಒಮ್ಮೆ ಮಾತ್ರ ಅರ್ಜಿ ಸಲ್ಲಿಸಿದರು.ಆದರೆ ಅವಳ ಅರ್ಜಿಯು ನಿರಾಕರಿಸಲಾಯಿತು.ಎಲ್ಲಾ ಪ್ರಯತ್ನಗಳು ವಿಫಲಗೊಂಡಾಗ,ಒಂದು ವರ್ಷದ ನಂತರ ಅವಳು ತನ್ನ ಪತಿಯೊಂದಿಗೆ ಮತ್ತೆ ಇಂಗ್ಲೆಂಡ್ ತೊರೆದರು.

ಕ್ಯಾವೆಂಡಿಷ್ ನ ಧಾರ್ಮಿಕ ನಂಬಿಕೆಗಳು

ಬದಲಾಯಿಸಿ
 ದೇವರ ಮತ್ತು ಧರ್ಮದ ಕುರಿತಾದ ಕ್ಯಾವೆಂಡಿಷ್ನ ದೃಷ್ಟಿಕೋನಗಳು ಸ್ವಲ್ಪಮಟ್ಟಿಗೆ ಅಸ್ಪಷ್ಟವಾಗಿಯೇ ಉಳಿದಿವೆ. ಅವರ ಬರಹಗಳಿಂದ,ಅವರು ಕ್ರಿಶ್ಚಿಯನ್ ಎಂದು ಸ್ಪಷ್ಟವಾಗುತ್ತದೆ. 

ಆದರೆ ಅವರು ತನ್ನ ಧಾರ್ಮಿಕ ದೃಷ್ಟಿಕೋನವನ್ನು ಸ್ಪಷ್ಟವಾಗಿ ತಿಳಿಸಲಿಲ್ಲ ಅಥವಾ ನೇರವಾಗಿ ದೇವರನ್ನು ನಂಬುತ್ತಾರೂ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.ಕ್ಯಾವೆಂಡಿಷ್ ದೇವರ ಅಸ್ತಿತ್ವವನ್ನು ಒಪ್ಪಿಕೊಂಡರು ಆದರೆ "ನೈಸರ್ಗಿಕ ಕಾರಣವು ಒಂದು ಅಪವಿತ್ರವಾದ ಕಲ್ಪನೆಯನ್ನು ಗ್ರಹಿಸುವ ಅಥವಾ ಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ."ನಾವು ದೇವರನ್ನು ಹೆಸರಿಸುವಾಗ, ನಾವು ವಿವರಿಸಲಾಗದ ಮತ್ತು ಗ್ರಹಿಸಲು ಸಾಧ್ಯವಾಗದವರಾಗಿರುತ್ತೇವೆ" ಎಂದು ಅವರು ವಾದಿಸಿದರು.

ಕ್ಯಾವೆಂಡಿಷ್ ಆತ್ಮಚರಿತ್ರೆ

ಬದಲಾಯಿಸಿ
  ಕ್ಯಾವೆಂಡಿಷ್ ತನ್ನ ಆತ್ಮಚರಿತೆಯನ್ನು ಎಟ್ರೂರಿಲೇಶನ್ ಆಫ್ ಮೈಬರ್ತ, ಬ್ರೀಡಿಂಗ್ ಅಂಡ್ ಲೈಫ್ ಅನ್ನು ಸಂಗ್ರಹಕ್ಕೆ ಸೇರಿಸಿದಂತೆ ನೇಚರ್ ಪಿಕ್ಚರ್ಸ ಎಂಬ ಪುಸ್ತಕವನ್ನು ೧೬೫೬ ರಲ್ಲಿ ಫಾನ್ಸಿಸ್ ಪೆನ್ಸಿಲ್ ಟುದ್ ಲೈಫ್ ಪ್ರಕಟಿಸಿತು. ಈ ಆತ್ಮಚರಿತ್ರೆಯೂ ಕ್ಯಾವೆಂಡಿಷ್ ನ ವಂಶಾವಳಿ, ಸಾಮಾಜಿಕ ಸ್ಥಾನಮಾನ,ಅದೃಷ್ಟ,ಬೆಳೆವಣಿಗೆ, ಶಿಕ್ಷಣ ಮತ್ತು ಮದುವೆಯನ್ನು ಸಂಬಂಧಿಸಿದಂತೆ ಬರೆಯಲಾಗಿದೆ.ಅದರಲ್ಲಿ ತಮ್ಮ ಗತಕಾಲದ ನಡವಳಿಕೆಯನ್ನು ವಿವರಿಸಿದಾರೆ ಮತ್ತು ಮಹತ್ವಾಕಾಂಕ್ಷೆಯ ವಿವರವನ್ನು ನೀಡಿದ್ದಾರೆ. ಕ್ಯಾವೆಂಡಿಷ್ ಇದರಲ್ಲಿ ರಾಜಕೀಯ ಮತ್ತು ವರ್ಗದ ಬಗ್ಗೆ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಕ್ಯಾವೆಂಡಿಷ್ನ ನಾಟಕಗಳು

ಬದಲಾಯಿಸಿ
  ಕ್ಯಾವೆಂಡಿಷ್ನ ನಾಟಕೀಯ ಕೃತಿಗಳ ಎರಡು ಸಂಪುಟಗಳನ್ನು ಮುದ್ರಿಸಲಾಯಿತು. ೧೬೬೨ರಲ್ಲಿ ಲಂಡನ್ ನ ಎ.ವಾರೆನ್ ಮುದ್ರಿಸಿದ ನಾಟಕಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ.ಲವ್ಸ್ ಅಡ್ವೆಂಚರ್ಸ್, ಹಲವಾರು ವಿಟ್ಗಳು,ಯೂತ್ಸ್ ಗ್ಲೋರಿ, ಮತ್ತು ಡೆತ್ಸ್ ಬ್ಯಾಂಕ್ವೆಟ್,ಲೇಡಿ ಕಂಪ್ಲೇಪ್ಷನ್,ವಿಟ್ಸ್ ಕ್ಯಾಬಲ್ ಮುಂತಾದವು.೧೬೬೮ ರಲ್ಲಿ ಲಂಡನ್ ನ ಅನ್ನಾ ಮ್ಯಾಕ್ಸ್ವೆಲ್ ಪ್ರಕಟಿಸಿದ ನಾಟಕಗಳೆಂದರೆ,ದಿ ಸೊಸೈಬಲ್ ಕಂಪ್ಯಾನಿಯನ್ಸ್,ಅಥವಾ ದ ಸ್ತ್ರೀ ವಿಟ್ಸ್, ಉಪಸ್ಥಿತಿ,ಸೀನ್ಸ್ (ದಿ ಪ್ರೆಸೆನ್ಸ್ನಿಂದ ಸಂಪಾದಿಸಲಾಗಿದೆ), ಬ್ರಿಡಲ್ಸ್, ಕಾನ್ವೆಂಟ್ ಆಫ್ ಪ್ಲೆಶರ್,ಎ ಪೀಸ್ ಆಫ್ ಎ ಪ್ಲೇ ಮುಂತಾದವು.[]

ಕ್ಯಾವೆಂಡಿಷ್ ಇತರ ಕೃತಿಗಳು

ಬದಲಾಯಿಸಿ
 ಕ್ಯಾವೆಂಡಿಷ್ ಫಿಲಾಸಫಿಕಲ್ ಲೆಟರ್ಸ್ ಸಂಗ್ರಹಣೆಯನ್ನು ೧೬೬೪ ರಲ್ಲಿ ಪ್ರಕಟಿಸಿದ್ದರು.ಆಕೆಯ ಸಂಗ್ರಹಣೆಯನ್ನು ಒರೇಶನ್ಸ್ ಎಂಬ ಶೀರ್ಷಿಕೆಯಲ್ಲಿ ೧೬೬೨ರಲ್ಲಿ ಪ್ರಕಟಿಸಿದ್ದರು.ಅವರ ಅನೇಕ ಕೃತಿಗಳು ನೈಸರ್ಗಿಕ ತತ್ತ್ವಶಾಸ್ತ್ರ, ಲಿಂಗ, ಶಕ್ತಿ ಮತ್ತು ನಡವಳಿಕೆಗಳಂತಹ ಸಮಸ್ಯೆಗಳನ್ನು ಉದ್ದೇಶಿಸಿವೆ.ಕ್ಯಾವೆಂಡಿಷ್ನ ನಾಟಕಗಳು ಅವರ ಜೀವಿತಾವಧಿಯಲ್ಲಿ ಎಂದಿಗೂ ನಟಿಸಲಿಲ್ಲ, ಆದರೆ ೧೬೬೮ರಲ್ಲಿ ದಿ ಕಾನ್ವೆಂಟ್ ಆಫ್ ಪ್ಲೆಷರ್ ಸೇರಿದಂತೆ ಹಲವು ನಾಟಕಗಳು ಪ್ರದರ್ಶಿಸಲು ಪ್ರಾರಂಭಿಸಿದರು. ಕ್ಯಾವೆಂಡಿಷ್ನ ಅನೇಕ ಕೃತಿಗಳಲ್ಲಿ  ಪತ್ರ, ಆದ್ಯತೆ, ಪೀಠಿಕೆ ಮತ್ತು ಸಂಚಿಕೆಗಳು ಹೊಂದಿವೆ. ಅದರಲ್ಲಿ ಅವರು ತನ್ನ ಕೆಲಸ, ತತ್ತ್ವಶಾಸ್ತ್ರ ಮತ್ತು ಮಹತ್ವಾಕಾಂಕ್ಷೆಯನ್ನು ಚರ್ಚಿಸುತ್ತಾ ಓದುಗರಿಗೆ ತನ್ನ ಬರವಣಿಗೆಯನ್ನು ಹೇಗೆ ಓದುವುದು ಮತ್ತು ಪ್ರತಿಕ್ರಿಯಿಸಬೇಕು ಎಂದು ಸೂಚಿಸಿದ್ದಾರೆ. ಕ್ಯಾವೆಂಡಿಷ್ನ ಬರವಣಿಗೆಯನ್ನು ಅದರ ಮೂಲ ಪ್ರಕಟಣೆಯ ಸಮಯದಿಂದ ಇಲ್ಲಿಯವರೆಗು ಟೀಕೆಗೊಳಗಾಗುತ್ತಲೇ ಬಂದಿದೆ.

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Margaret_Cavendish,_Duchess_of_Newcastle-upon-Tyne
  2. https://www.nottingham.ac.uk/manuscriptsandspecialcollections/collectionsindepth/family/newcastle/biographies/biographyofmargaretcavendish,duchessofnewcastleupontyne(c1623-1673).aspx