ಸದಸ್ಯ:Princeps linguae/ಪ್ರಮೇಯಶ್ಲೋಕ

ಪ್ರಮೇಯಶ್ಲೋಕ ಎಂದರೆ ದ್ವೈತಮತದ ಪ್ರಮುಖ ದಾರ್ಶನಿಕ ಶ್ರೀ ವ್ಯಾಸತೀರ್ಥರಿಂದ ರಚಿಸಿರುವ ಒಂದು ಶ್ಲೋಕ. ಈ ಶ್ಲೋಕವು ಶ್ರೀ ಮಧ್ವಾಚಾರ್ಯರು ಸಂಸ್ಥಾಪಿಸಿದ್ದ ದ್ವೈತವೇದಾಂತದ ಒಂಬತ್ತು ಮೂಲ ತತ್ತ್ವಗಳನ್ನು ವರ್ಣಿಸುತ್ತದೆ. []

ಶ್ಲೋಕದ ಒಳಪಿಡಿ

ಬದಲಾಯಿಸಿ

ಸಂಸ್ಕೃತದಲ್ಲಿ ರಚಿಸಿರುವ ಈ ಶ್ಲೋಕವನ್ನು ಕನ್ನಡಲಿಪಿಯಲ್ಲಿ ಕೆಳಗೆ ಕೊಡಲಾಗಿದೆ:

ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂ ಜಗತ್ತತ್ವತೋ

ಭೇದೋ ಜೀವಗಣಾ ಹರೇರನುಚರಾ ನೀಚೋಚ್ಚಭಾವಂ ಗತಾಃ |

ಮುಕ್ತಿರ್ನೈಜ ಸುಖಾನುಭೂತಿರಮಲ ಭಕ್ತಿಶ್ಚ ತತ್ಸಾಧನಂ

ಹ್ಯಕ್ಷಾದಿತ್ರಿತಯಂ ಪ್ರಮಾಣಮಖಿಲಾಮ್ನಾಯೈಕವೇದ್ಯೋ ಹರಿಃ ||


ದೇವನಾಗರಿಯಲ್ಲಿ:

श्रीमन्मध्वमते हरिः परतरः सत्यं

जीवगणा हरेरनुचराः नीचोच्चभावं गताः

मुक्तिर्नैजसुखानुभूतिरमला भक्तिश्च तत्साधनम्

प्रमाणमखिलाम्नायैकवेद्यो हरिः

ಈ ಶ್ಲೋಕವನ್ನು ಅಕ್ಷರಶಃ ಹೀಗೆ ಕನ್ನಡಿಸಬಹುದು:

  1. ಹರಿಃ ಪರತರಃ (ಹರಿ ಸರ್ವೋತ್ತಮ)
  2. ಸತ್ಯಂ ಜಗತ್ (ಜಗತ್ತು ಸತ್ಯ)
  3. ತತ್ತ್ವತೋ ಭೇದಃ (ಭೇದ ನಿಜವಾಗಲು ಇದೆ)
  4. ಜೀವಗಣಾಃ ಹರೇರನುಚರಾಃ (ಜೀವಿಗಳ ಗಣಗಳು ಹರಿಯ ಅನಚರಗಳು)
  5. ನೀಚೋಚ್ಚ ಭಾವಂಗತಾಃ (ಕೆಳಗಿನ ಹಾಗೂ ಮೇಲಿನ ಸ್ಥಿತಿಗಳಿಗೆ ಹೋಗುತ್ತಿವೆ)
  6. ಮುಕ್ತಿರ್ನೈಜಸುಖಾನುಭೂತಿಃ (ಮುಕ್ತಿ ತನ್ನದೇ ಸುಖದ ಅನುಭವ)
  7. ಅಮಲಾ ಭಕ್ತಿಶ್ಚ ತತ್ಸಾಧನಮ್ (ಮತ್ತು ಅಮತ ಭಕ್ತಿ ಅದರ ಸಾಧನೆ)
  8. ಹ್ಯಕ್ಷಾದಿತ್ರಿತ್ಯಂ ಪ್ರಮಾಣಮ್ (ಪ್ರತ್ಯಕ್ಷದಿಂದ ಪ್ರಾರಂಭವಾಗುವ ತ್ರಯವು ಪ್ರಮಾಣವಾಗಿದೆ)
  9. ಅಖಿಲಾನಾಯೈಕವೇದ್ಯೋ ಹರಿಃ (ಎಲ್ಲಾ ಆಗಮಗಳಿಂದ ಒಂದೇ ತಿಳಿಯಬೇಕಾದುದು ಹರಿ)

ಉಲ್ಲೇಖಗಳು

ಬದಲಾಯಿಸಿ
  1. The Nine Tenets of Vedanta

[[ವರ್ಗ:ದ್ವೈತ]] [[ವರ್ಗ:ಹಿಂದೂ ಧರ್ಮ]] [[ವರ್ಗ:ಹಿಂದೂ ಧರ್ಮದ ಇತಿಹಾಸ]]