ಗೊಬ್ಬರದ ಬಳಕೆ ಬದಲಾಯಿಸಿ

ಸಸಿಗಳಿಗೆ ನೆಟ್ಟ ಎರಡನೇ ವರ್ಷದಿಂದ ರಾಸಾಯನಿಕ ಗೊಬ್ಬರಗಳನ್ನು ಕೊಡುವುದು ಉತ್ತಮ.ಎರಡನೇ ವರ್ಷ ಪ್ರತಿ ಗಿಡಕ್ಕೆ ೬೦:೬೦:೬೦:ಗ್ರಾಂ;ಮೂರನೆಯ ವರ್ಷ ೧೨೦:೧೨೦:೧೨೦:ಗ್ರಾಂ;ಹಾಗೂ ನಾಲ್ಕನೆಯ ವರ್ಷ ಮತ್ತು ನಂತರ ೨೫೦:೨೫೦:೨೫೦:ಗ್ರಾಂ ಸಾರಜನಕ ,ರಂಜಕ,ಪೊಟ್ಯಾಶ್ ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು.ಗೊಬ್ಬರವನ್ನು ಮುಂಗಾರುಮಳೆ ಕಡಿಮೆಯಾದ ನಂತರ ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಗಿಡದ ಸುತ್ತಲು ಎರಡರಿಂದ ಮೂರು ಅಡಿ ಪಾತಿಯಲ್ಲಿ ಒದಗಿಸುವುದು ಸೂಕ್ತ.

ಇಳುವರಿ ಬದಲಾಯಿಸಿ

ಹೆಚ್ಚು ಇಳುವರಿ ಕೊಡುವ ತಳಿಗಳ ಉಪಯೋಗ,ಸಮತೋಲನ ಗೊಬ್ಬರದ ಹಾಗು ಸಕಾಲದಲ್ಲಿ ಸಸ್ಯ ಸಂರಕ್ಷಣೆ ಕ್ರಮಗಳನ್ನು ಅನುಸರಿಸಿದರೆ ೫ ನೇ ವರ್ಷದಿಂದ ಪ್ರತಿ ಮರದಲ್ಲಿ ೩ರಿಂದ ೫ಕಿಲೋ ಇಳವರಿಯನ್ನ ಪಡೆಯಬಹುದು.ಇದರಿಂದ ಒಂದು ಕಿಲೋ ಬೀಜಕ್ಕೆ ಕನಿಷ್ಟ ೧೦ರೂ.ನಂತೆ ದೊರಕಿದರೂ ಮರಕ್ಕೆ ೩೦ರಿಂದ ೫೦ರೂಪಾಯಿಗಳ ಆದಾಯ ಸಿಗುತ್ತದೆ.