ಸದಸ್ಯ:Prema guru/ನನ್ನ ಪ್ರಯೋಗಪುಟ

ಕವಳಿ ಬದಲಾಯಿಸಿ

ಕವಳಿ ಪಶ್ಚಿಮ ಘಟ್ಟದ ಕಾಡುಹಣ್ಣುಗಳಲ್ಲಿ ಇದು ಒಂದು. ಈ ಕಾಡುಹಣ್ಣುಗಳಲ್ಲಿರುವ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು ಮುಖ್ಯ ಕಾರಣ. ಜೀವಸತ್ವಗಳು,ಶರ್ಕರಪಿಷ್ಟಗಳು,ಸಸಾರಜನಕ,ಕೊಬ್ಬು,ಖನಿಜಾಂಶ ಹೀಗೆ ಮನುಕುಲಕ್ಕೆ ಅತ್ಯಾವಶ್ಯಕವಾದ ಆಹಾರಾಂಶಗಳ ಗಣಿ ಈ ಸ್ವಾದಿಷ್ಟ ಫಲಗಳು ದೊರಕಿಸಿಕೊಡುತ್ತವೆ. ಈ ಹಣ್ಣುಗಳನ್ನು ಕರಂಡವ, ಕಬಳಿಗಿಡ ಎಂತಲೂ ಕರೆಯುತ್ತಾರೆ.[೧] ಇತರೆ ಭಾಷೆಗಳಲ್ಲಿ, ಹಿಂದಿ:ಕರೌಂದ ಸಂಸ್ಕ್ರತ: ಕರಮರ್ದ,ಅವಿಘ್ನ ತೆಲುಗು:ವಕೆ ತಮಿಳು:ಕಲಕ್ಕಾಯ್

ಸಸ್ಯಶಾಸ್ತ್ರೀಯ ವಿಂಗಡಣಿ ಬದಲಾಯಿಸಿ

ಕ್ಯಾರಿಸ್ಸ ಕರಂಡಾಸ್(carissa carandas L.C.congesta)

‍=ಕುಟುಂಬ= ಬದಲಾಯಿಸಿ

ಅಪೋಸೈನೇಸಿ(Apocynaceae)

ಹಣ್ಣಾಗುವ ಕಾಲ ಬದಲಾಯಿಸಿ

ಕವಳಿ ಹಣ್ಣುಗಳು ಸುಮಾರು ಎಪ್ರಿಲ್-ಜೂನ್ ಹಣ್ಣಾಗುತ್ತವೆ.

ಪೌಷ್ಟಿಕಾಂಶ ಮತ್ತು ಆಹಾರ ಪದಾರ್ಥಗಳು ಬದಲಾಯಿಸಿ

ಈ ಹಣ್ಣುಗಳಲ್ಲಿರುವ ಪೌಷ್ಟಿಕಾಂಶಗಳು ಶರ್ಕರಪಿಷ್ಟ,ಪ್ರೊಟೀನ್,ಕೊಬ್ಬ್ಸು,ಸುಣ್ಣ,ರಂಜಕ,ಕಬ್ಬಿಣ.ಕಾಯಿಯಿಂದ ಉಪ್ಪಿನಕಾಯಿ,ಚಟ್ನಿ,ಸಾಂಬಾರ್,ಹಣ್ಣಿನಿಂದ ಜ್ಯೂಸ್,ಜೆಲ್ಲಿ,ಸಿರಪ್ ಮತ್ತು ತಂಪು ಪಾನೀಯಗಳಲ್ಲಿ ಕೂಡ ಬಳಸುತ್ತಾರೆ.

ಔಷಧಿಯ ಗುಣಗಳು ಬದಲಾಯಿಸಿ

ವಾಂತಿ,ಯಕ್ರತ್ತಿನ ತೊಂದರೆ,ಹೊಟ್ಟೆನೋವು,ಹೃದಯದ ಕಾಯಿಲೆಗಳಿಗೆ ಕವಳಿಹಣ್ಣಿನ ಔಷಧಿ. ಕಾಯಿಯ ರಸದಿಂದ ಅಜೀರ್ಣ ನಿವಾರಣೆ.ಎಲೆಯ ರಸ ಮತ್ತು ತೊಗಟೆಯ ಕಷಾಯ ಜ್ವರಕ್ಕೆ ಗುಣಕಾರಿ. ಹೊಟ್ಟೆಹುಣ್ಣು,ಬಾಯಿಹುಣ್ಣು ಮತ್ತು ತುರಿಕೆಗೆ ಬೇರಿನ ಉಪಯೋಗವಾಗುತ್ತದೆ. ಚರ್ಮ ಹದಗೊಳಿಸಲು ಮತ್ತು ಬಣ್ಣ ಹಾಕಲು ಕಾಯಿ ಬಳಸುತ್ತಾರೆ. ಭಾರತದಲ್ಲಿ ಹುಟ್ಟಿ ಬೆಳೆದ ಈ ಗಿಡಗಳು ಸುಮಾರು ೩-೫ ಮೀಟರ್ ಎತ್ತರವಾಗಿವೆ. ಹೊಳೆಯುವ ಹಸಿರೆಲೆಗಳ ಮುಳ್ಳು ಪೊದೆ.ಎಲೆ,ಕಾಯಿ ಕಿತ್ತರೆ ಬಿಳಿ ಅಂಟುದ್ರವ ಸೂಸುವಿಕೆ. ಕೆಂಪು ಬಣ್ಣದ ಎಳೆ ಕಾಯಿ ಬಲಿತಾಗ ಹಸಿರು ಬಣ್ಣಕ್ಕೆ ತಿರುಗುತ್ತದೆ. ಗೋಲಿಯಾಕಾರದ,ಕಪ್ಪು ಬಣ್ಣದ ಕಳಿತ ಹಣ್ಣು ಹುಳಿಮಿಶ್ರಿತ ಸಿಹಿ. ಸಮುದ್ರಮಟ್ಟದಿಂದ ಹಿಮಾಲಯದವರೆಗೆ ಮರುಳುಗಾಡು,ಗುಡ್ಡಬೆಟ್ಟ,ಪಾಳುಜಮೀನಿನಲ್ಲಿ ಬೆಳೆಯಬಲ್ಲ ದಾಡಸಿ ಸಸ್ಯ. ಇದು ಒಂದು ಬೀಜದಿಂದ ಸಸ್ಯಾಭಿವೃಧ್ದಿಯಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. ಪಶ್ಚಿಮ ಘಟ್ಟದ ಕಾಡು ಹಣ್ಣುಗಳು, ಸಂಗ್ರಹ ಮತ್ತು ಸಂಪಾದನೆ - ಶ್ರೀವಿನಾಯಕ ಭಟ್,ನರೂರು,ಡಾ.ಅನಿಲ್ ಅಬ್ಬಿ,ಬೆಂಗಳೂರು.