ಸದಸ್ಯ:Praveenks1910485/ನನ್ನ ಪ್ರಯೋಗಪುಟ


ಕಳೆಂಜದ ಶ್ರೀ ಉಮಾಮಹೇಶ್ವರ ದೇವಸ್ಥಾನ ಬದಲಾಯಿಸಿ

ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವೆ ಪಸರಿಸಿದೆ ಈ ತುಳುನಾಡಿನ ಕಳೆಂಜ.

 
ಶ್ರೀ ಉಮಾಮಹೇಶ್ವರ ದೇವಸ್ಥಾನ

ಸಾವಿರಾರು ದೈವ ದೇವತೆಗಳ ನೆಲೆವೀಡು. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಕಳೆಂಜಕ್ಕೆ 25 ಕಿ. ಮೀ. ಮತ್ತುಕಕ್ಕಿಂಜೆ., ಗಂಡಿಬಾಗಿಲು, ಮಿಯಾರು, ಚಾರ್ಮಾಡಿ ಮುಂತಾದ ಸ್ಥಳಗಳಿಗೆ ಹೋಗಬೇಕ್ಕೆಂದಿದ್ದರೆ ಕಳೆಂಜವನ್ನುಸೇರಿಕೊಂಡೆ ಹೋಗಬೆಕ್ಕಾದೀತು. ಆದರೆ ಈಗ ಎಲ್ಲಾ ರೀತಿಯಲ್ಲೂ ಬೇಕಾದ ಬೆಳವಣಿಗೆಗಳು ಅದ್ದುದ್ದರಿಂದ ಕಳೆಂಜ ಮತ್ತು ದೇವಸ್ಥಾನಕ್ಕೆ ಬೆಕ್ಕಾದಷ್ಟು ಪ್ರಾಮುಖ್ಯತೆಯನ್ನು ಯಾರೂ ನೀಡುತ್ತಿಲ್ಲ. ಉತ್ತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಮತ್ತು ಉದಯ ಪರ್ವತ ಶ್ರೇಣಿ, ಪಶಿಮಕ್ಕೆ ಕಲ್ಬಾರ್ ಬೆಟ್ಟಗಳು, ದಕ್ಸಿಣಕ್ಕೆ ಕುಮಾರಪರ್ವತ, ಕೋಟೆಬಾಗಿಲು ಗುಡ್ಡಗಳ ಸಾಲು. ಒಟ್ಟಾರೆಯಾಗಿ ಪ್ರಕೃತಿಯೇ ಮೈವೆತ್ತಿ ನಿಂತಹ ಪ್ರದೇಶ ಕಳೆಂಜ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಕಳೆಂಜ ಎಂಬ ಈ ಪ್ರದೇಶದ ವೈಶಿಷ್ಟ್ಯವೇನೆಂದರೆ ಇಲ್ಲಿ ಎಲ್ಲಾ ಜಾತಿ ಮತದವರು ಒಗ್ಗಟ್ಟಿನಿಂದ ಬಾಳುವ ಒಂದು ಪ್ರದೇಶ ಹಾಗೂ ಯಾವುದೇ ರೀತಿಯ ಕೆಟ್ಟಹವಯಸಗಳು ಕಂಡುಬರದ ಒಂದು ಶಾಂತ ವಾತಾವರಣದಿಂದ ಕೂಡಿದೆ.

ಇತಿಹಾಸ

ಪ್ರಾರಂಭ ಕಾಲದಿಂದಲೇ ಬಯಲು ಸೀಮೆ ಮತ್ತು ತುಳುನಾಡನ್ನು ಸಂಪರ್ಕ್ಕಿಸುವ ದಾರಿಯೊಂದು ಇಲ್ಲಿದೆ. ಈ

ದಾರಿಯನ್ನು ಅಚ್ಚುಕಟ್ಟಾಗಿ ಕಲ್ಲಿನಿಂದ ದ ಕಟ್ಟಿರುವುದನ್ನು ಕಾಣಬಹುದು. ತುಳುನಾಡಿನಿಂದ ಬಯಲುಸೀಮೆಗೆ

ಅಂತಯೇ ಬಯಲುಸೀಮೆಯಿಂದ ತುಳುನಾಡಿಗೆ ಕುದುರೆ ಅಥವಾ ಎತುಗಳ ಮೇಲೆ ಸಾಮಾನು, ಜೀವನಾವಶ್ಯಕ

ವಸ್ತುಗಳನ್ನು ಸಾಗಿಸುತ್ತಿದ್ದರು ಎಂಬುದಕ್ಕೆ ಅಲ್ಲಲ್ಲಿ ಕಾಣುವ ಕೋಟೆಗಳು, ವಿಶ್ರಾಂತಿಯ ಸ್ಥಳಗಳು,

ಸಾಮಾನುಗಳನ್ನು ಏರಿಸಿ ಇಳಿಸುವ ಬಯಲುಗಳು, ಅದಲ್ಲಿ ಹೊಂದಿಕೊಂಡಿರುವ ಸ್ಥಳನಾಮಗಳು ಸಾಕ್ಷಿಯನ್ನು

ಹೇಳುತ್ತಿದೆ. ಈಗಲೂ ಕಳೆಂಜದ ಸಮೀಪದ ಕಾಡುಗಳ, ನದಿದಂಡೆಗಳ, ವಿಶಾಲಬಯಲುಗಳ್ಳಲ್ಲಿರುವ ದೊಡ್ಡ ದೊಡ್ಡ

ಪಂಚಾಂಗಗಳು, ಗದ್ದೆಗಳ ಕುರುಹುಗಳು, ತೆಂಗಿನಮರ ಗಾತ್ರದ ವೀಳ್ಯದೆಲೆ ಬಳ್ಳಿಗಳು, ಕಡೆಯುವಂತೆ ಕಲ್ಲುಗಳು,

ನೀರಾವರಿಗಾಗಿ ನಾಲೆಗಳಿರುವ ಕೆರೆಗಳು ಅಚ್ಚರಿ ಹುಟ್ಟಿಸುತ್ತಿವೆ.

ಶ್ರೀ ಉಮಾಮಹೇಶ್ವರ ದೇವಸ್ಥಾನ

ಶ್ರೀ ಉಮಾಮಹೇಶ್ವರ ದೇವಸ್ಥಾನದ ನಂದೀ ಮಂಟಪದ ಪಶ್ಚಿಮ ದ್ವಾರದ ಮೇಲೆ ‘ಪಾರುಪತ್ಯಗಾರ

ಹಲಸುನಾಡು ವಿಶ್ವೇಶ್ವರಯ್ಯನ ಮುಖಾಂತರ ಶರವರೀ ಸಂವತ್ಸರದ ಕಾರ್ತಿಕಶುದ್ಧ ಒಂದರಲ್ಲು ರಂಗಮಂಟಪದ

ಕೆಲಸ ಮುಗಿದಿದೆ’ ಎಂದು ಶಿಲಾಲೇಖವಿದೆ. ಇದರ ಆಯಾ ಗಜಾಪುಷ್ಟಕ್ಕರದಲ್ಲಿದ್ದು, ನವರಂಗಮುಖ

ಮಂಟಪಗಳಿಂದ ಕೂಡಿದೆ. ದೇವಾಲಯದ ಹಿಂಬದಿಯಲ್ಲಿ ಗೋಡೆಯಲ್ಲಿರುವ ಬಿಲ್ಲು, ಬಾಣ, ಸಿಂಹ, ಚಿಗುರುಬಳ್ಳಿ,

ತಿನ್ನುತಿರುವ ನವಿಲು ಹಾಗೂ ಇನ್ನೂ ಅನೇಕ ಚಿತ್ರಗಳು ಆಕರ್ಷಕವಾಗಿದೆ. ದೇವಾಕಯಕ್ಕಿಂತ ಸ್ವಲ್ಪ ದೂರದಲ್ಲಿ

ಮಹಾಕಾಳಿ ಗುಡಿ ಇದೆ. ಇಲ್ಲಿನ ಇತರ ಮೂರ್ತಿಗಳು ಮತ್ತು ಶಿಲಪ್ಪಗಳನ್ನು ಬೇರೆ ಬೇರೆ ಭಾಜಕರು ಕಟ್ಟಿಸಿ

ಪೂಜಾವಿನಿಯೋಗಗಳ ಬಗ್ಗೆ ಉಂಬಳಿ ಹಾಕಿಸಿ ಕಿತಿರಬೇಕ್ಕೆಂದು ಹೇಳಲಾಗುತಿದೆ. ಈ ಕ್ಷೇತ್ರವು ಉಳಿದ

ಸ್ಥಳಗಲ್ಲಿರುವಂತೆ ಮೊದಲು ಅಭ್ರಹ್ಮಣ್ಯವಾಗಿತೆಂತು ಇಲ್ಲಿನ ಕೆಲವು ಧಾಖಲೆಗಳಿಂದ ತಿಳಿದುಬರುತ್ತದೆ.

ವಿಶೇಷ ಆಚರಣೆಗಳು

ಈ ದೇವಸ್ಥಾನದಲ್ಲಿ ಶಿವರಾತ್ರಿಯನ್ನು ಮೂರು ದಿನಗಳ ಆಚರಣೆಯಾಗಿ ಕೊಂಡಾಡಲಾಗುತ್ತದೆ. ಇಲ್ಲಿನ

ಸೂತಮುತ್ತಲಿನ ಎಲ್ಲಾ ದೇವಸ್ಥಾನಗಳಿಂದ ಶರ್ಮದರ್ಶಿಗಳು ಬಂದು ಪೂಜೆಯನ್ನು ನೆರವೇರಿಸುತ್ತಾರೆ. ಭಕ್ತರು

ತಮ್ಮಲ್ಲಿರುವ ಶಿವನ ಮೇಲಿರುವ ಭಕ್ತಿಯನ್ನು ತೋರಿಸಲು ಒಂದು ದಿನ ಪೂರ್ತಿ ದೇವಸ್ಥಾನದಲ್ಲಿ ಕಳೆಯುವುದು

ಅದೇರೀತಿ ಹರಕೆ ಕಾಣಿಕೆಗಳನ್ನು ಸಲ್ಲಿಸುವುದು ಮುಂತಾದ ಭಕ್ತಕ್ರಿಯ್ತ್ಯಗಳಲ್ಲಿ ಮುಳುಗಿರುತ್ತಾರೆ. ಎಲ್ಲಾ ವಿದದ

ಆಚರಣೆಗಳನ್ನು ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ ಅದೇರೀತಿಯಲ್ಲಿ ಈ ಉತ್ಸವದ ಸಮಯದಲ್ಲೂ ಎಲ್ಲಾ

ಮತದವರು ಬಂದು ಭಾಗವಹಿಸುವುದು ಮೇಲೆ ಸೂಚಿಸಿದಂತೆ ಒಂದು ಒಗ್ಗಟ್ಟನ್ನು ಸೂಚಿಸುತ್ತದೆ.

ವೃಷಭ ಸಂಕ್ರಮಣದ ಮುನ್ನಾದಿನದಿಂದ ಏಳು ದಿನಗಳ ಕಾಲ ಧ್ವಜಾರಿಹಣದೊಂದಿಗೆ ಪ್ರಾರಂಭವಾಗುವ

ವರ್ಷಾವಧಿ ಜಾತ್ರೆಯು ಕುರೊಮ್ಥೋಯಾನೋ ಎಂದು ಜನಜನಿತವಾಗಿದೆ.ಇದು ತುಳುನಾಡಿನ ದೇವಸ್ಥಾನಗಳ

ಜಾತ್ರೆಗಳ್ಲಲಿಯೇ ಕಡೆಯ ಜಾತ್ರೆಯಾಗಿದೆ.ಈ ಜಾತ್ರೆಯಲ್ಲಿ ದರ್ಶನ ಬಲಿ, ರಥೋತ್ಸವ ನಂತರ ಸುಮಾರು ಒಂದು

ಮೈಲಿ ದೂರದಲ್ಲಿರುವ ಬಟ್ಯಲ್ ಎಂಬಲ್ಲಿ ಅವಭ್ರತ ಉತ್ಸವವು ನಡೆಯುವುದು. ದ್ವಜಾರೋಹಣದ ಮರುದಿನ ದೇವರ

ಮೂಲಸ್ಥಾನವಾದ ಕುಮಾರಗುಡ್ಡೆ ಎಂಬಲ್ಲಿ ಓಂದು ದಿನದ ಜಾತ್ರೆ ಮತ್ತು ಭೂತಗಳ ನೇಮಗಳು

ನಡೆಯುವುದು.ಅದೇ ದಿನ ರಾತ್ರಿಯಲ್ಲಿ ದೇವಳದ ಬಾಗಿಲಲ್ಲಿ ಮತ್ತು ರಥಬೀದಿಯಲ್ಲಿ ಮರುದಿನ ಬೆಳಗಿನವರೆಗೆ

ಹಕವಾರು ದೈವಗಳ ನೇಮಗಳು ನಡೆಯುವುದು.

ಇಲ್ಲಿನ ಒಂದು ಪ್ರಮುಖ ವಿಶೇಷತೆಯೇನೆಂದರೆ ದೇವಸ್ಥಾನದ ಹಿಂಭಾಗದಲ್ಲಿ ಪ್ರವಹಿಸುವ ಮೈರಾರ್ ನದಿಯು

ಬೆಳ್ತಂಗಡಿ ತಾಲೂಕಿನ ಬೋಲ್ಮ್ಯಾನರ್ ದೇವರಮನೇ ಎಂಬ ಊರಿನ ಸಮೀಪದ ಹುಲ್ಲು ಮಲೆಯಲ್ಲಿ ಉದ್ಭವಿಸಿದೆ.

ಗೋಮುಖದ ಶಿಲಾಕೃತಿಯೊಳಗಿಂದ ಈ ನದಿ ಹತ್ತಿಗರಿಯುತ್ತಿರುವುದರಿಂದ ಇದಕ್ಕೆ ಮೈರಾರ್ ಎಂಬ ಹೆಸರು

ಬಂದಿದೆ ಎಂದು ಹೇಳಲಾಗುತ್ತದೆ.ಒಂದು ಕಾಲಘಟ್ಟದಲ್ಲಿ ಈ ನದಿಯಲ್ಲಿ ಮೀನುಗಳ ಮಲ್ತ್ಸ್ಯ ತೀರ್ಥವಿತ್ತು.

ನನಂತರದಲ್ಲಿ ಜನರ ಆಸೆಯಿಂದಾಗಿ ಅದು ಇಲ್ಲದಂತಾಯಿತು ಎಂದೂ ಹೇಳಲಾಗುತ್ತಿದೆ.

ಉಲ್ಲೇಖಗಳು:

<r>https://www.citationmachine.net/bibliographies/81e02dce-084c-4ceb-b11c-22c3cb956b7a</r>