ಸದಸ್ಯ:Prathiksha Shetty/sandbox
ಗರ್ಭಧಾರಣೆಯ ಅವಧಿಯಲ್ಲಿ ಆಹಾರ ಕ್ರಮ ಹಾಲು ಮತ್ತು ಹಾಲಿನ ಉತ್ಪನ್ನಗಳು ಕೆನೆ ರಹಿತ ಹಾಲು ಮೊಸರು, ಮಜ್ಜಿಗೆ, ಪನ್ನೀರ್ ಈ ಆಹಾರಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ ೧೨ ವಿಶೇಷ ಪ್ರಮಾಣದಲ್ಲಿರುತ್ತದೆ. ಧಾನ್ಯಗಳು ಒಂದು ವೇಳೆ ನೀವು ಮಾಂಸಹಾರ ಸೇವಿಸುವುದಿಲ್ಲವಾದರೆ ಆಗ ಪ್ರೋಟಿನಿನ ಮೂಲಗಳಾದ ಧಾನ್ಯಗಳು ಬೆಳೆಗಳು ಮತ್ತು ಬೀಜಗಳನ್ನು ಹೆಚ್ಚು ಹೆಚ್ಚು ಸೇವಿಸಿ ಸಸ್ಯಹಾರಿಗಳಿಗೆ ಅವರ ದಿನ ನಿತ್ಯದ ಅವಶ್ಯಕತೆಯನ್ನು ಪೂರೈಸಲು ೪೫ ಗ್ರಾಂ ನಷ್ಟು ಬೀಜಗಳು ಮತ್ತು ೩೦ ಗ್ರಾಂ ನಷ್ಟು ಧಾನ್ಯಗಳನ್ನು ಸೇವಿಸಬೇಕು. ಹಣ್ಣು ಮತ್ತು ತರಕಾರಿಗಳಿಂದ ವಿಟಮಿನ್ ಖನಿಜಾಂಶ ಮತ್ತು ನಾರಿಂಶಗಳನ್ನು ಒದಗಿಸುತ್ತದೆ ಮಾಂಸಹಾರ ಮತ್ತು ಮೀನಿನಿಂದ ಸಾಂದ್ರ ಪ್ರೋಟಿನ್ ಅಂಶ ಒದಗಿಸುತ್ತದೆ ವಿಶೇಷವಾಗಿ ನೀರು ಮತ್ತು ತಾಜ ಹಣ್ಣಿನ ರಸವನ್ನು ಸೇವಿಸುದನ್ನು ಮರೆಯಬೇಡಿ. ಶುದ್ಧವಾಗಿ ಕುದಿಸಿದ ಮತ್ತು ಶೋಸಿದ ನೀರನ್ನು ಕುಡಿಯಿರಿ ಹೊರಗೆ ಹೋಗುವಾಗ ನಿಮಗೆಂದೇ ನೀರಿನ ಬಾಟಲಿಯನ್ನು ಒಯ್ಯಿರಿ. ಪ್ಯಾಕ್ ಮಾಡಿರುವ ಜ್ಯೂಸ್ ಗಳನ್ನು ಸೆಕ್ಕರೆ ಅಂಶ ವಿಶೇಷವಾಗಿರುವುದರಿಂದ ಈ ಪಾನೀಯಗಳನ್ನು ಬಳಸಬಾರದು.ತುಪ್ಪ ಬೆಣ್ಣೆ ಮತ್ತು ತೆಂಗಿನ ಹಾಲು ಇವುಗಳಲ್ಲಿ ವಿಶೇಷ ಪ್ರಮಾಣದ ಕೊಬ್ಬು ಇರುತ್ತದೆ. ನೀವು ಗರ್ಭಿಣಿಯಾಗಿರುವಾಗ ಬಿಸ್ಕಟ್, ಕೇಕ್ ಮತ್ತು ಸ್ವಿಟ್ಸ್ ಗಳಿಂದ ಅದಷ್ಟು ದೂರವಿರಿ. ಸಕ್ಕರೆ ಮತ್ತು ಸಿಹಿ ತಿನಿಸುಗಳು ಹಲ್ಲಿನ ತೊಂದರೆಗಳ ಅಪಾಯವನ್ನು ಹೆಚ್ಚಿಸುತ್ತದೆ.ಕೊಬ್ಬು ಮತ್ತು ಕೊಬ್ಬಿನಿಂದ ಕೂಡಿರುವ ಆಹಾರಗಳನ್ನು ಈ ಅವಧಿಯಲ್ಲಿ ದೂರವಿಡಿ. ಲಿವರ್ ಮತ್ತು ಲಿವರಿನ ಉತ್ಪನ್ನಗಳನ್ನು ಸೇವಿಸಬಾರದು ಲಿವರ್ ನಲ್ಲಿ ವಿಟಮಿನ್ ವಿಶೇಷ ಪ್ರಮಾಣದಲ್ಲಿದೆ ಎಂಬುದು ನಿಜ. ಆದರೆ ಅಧಿಕ ವಿಟಮಿನ್ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಒಳೆಯದಲ್ಲ, ನಿಮಗೆ ಯಾವುದೇ ರೀತಿಯ ಕಾಯಿಲೆಗಳ ಹಿನ್ನಲೆ ಇದ್ದಲ್ಲಿ ನೆಲಗಡಲೆ ಮತ್ತು ಅದರ ಉತ್ಪನ್ನಗಳನ್ನು ಸೇವಿಸಬೇಡಿ ಹಣ್ಣು ತರಕಾರಿಗಳು ಇವುಗಳಿಂದ ಬರುವ ಪರೋಪಜೀವಿ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ ತರಕಾರಿಗಳನ್ನು ಸೇವಿಸುವ ಮೊದಲು ಚೆನ್ನಾಗಿ ತೊಳೆಯಿರಿ. ನೀವು ಗರ್ಭಿಣಿ ಅವಧಿಯಲ್ಲಿ ಬಳಸುವ ಹಾಲು ಬ್ಯಾಕ್ಟರಿಯಾ ರಹಿತವಾಗಿದೆ ಎಂದು ಖಚಿತಗೊಳಿಸಿ ಹಸಿ ಮೊಟ್ಟೆಯನ್ನು ಸೇವಿಸಬಾರದು. ಗರ್ಭಧಾರಣಾ ಅವಧಿಯೆನ್ನುವುದು ಒಬ್ಬ ಮಹಿಳೆಯ ಜೀವನದ ಅತ್ಯಂತ ಕಾಲಮಾನ. ಇದು ಮಹಿಳೆಯ ಶರೀರದಲ್ಲಿ ಮನೋದೈಹಿಕ ಬದಲಾವಣೆಗಳನ್ನು ಉಂಟುಮಾಡುವ ಅವಧಿ,