ಪ್ರತಿಭ ಕೆ

ನನ್ನ ಕುಟುಂಬ

ಬದಲಾಯಿಸಿ

ನನ್ನ ಹೆಸರು ಪ್ರತಿಭ.ನಾನು ಬೆಂಗಳೂರಿನಲ್ಲಿ ವಾಸಿಸುತಿದ್ದೇನೆ.ನಮ್ಮದು ಚಿಕ್ಕ ಸಂಸಾರ . ನಾನು, ನನ್ನ ತಂದೆ, ತಾಯಿ ಮತ್ತು ನನ್ನ ತಮ್ಮ ಇರುತ್ತೇವೆ. ನನ್ನ ತಂದೆಯ ಹೆಸರು ಕುಮಾರ್ .ನನ್ನ ತಂದೆ ಖಾಸಗಿ ಕಂಪನಿಯಲ್ಲಿ ಖರೀದಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ವಲರ್ಮತಿ ನನ್ನ ತಾಯಿಯ ಹೆಸರು .ಅವರು ಗೃಹಿಣಿಯಾಗಿದ್ದಾರೆ. ನನಗೆ ಒಬ್ಬ ತಮ್ಮನಿದ್ದಾನೆ , ಅವನ ಹೆಸರು ಬದ್ರಿ.ಅವನು ಕ್ರೈಸ್ಟ್ ಶಾಲೆಯಲ್ಲಿ ಆರನೇಯ ತರಗತಿಯಲ್ಲಿ ಓದುತ್ತಿದ್ದಾನೆ. . ನನ್ನ ಜೀವನದಲ್ಲಿ ಮುಖ್ಯವಾದ ಪಾತ್ರವೆಂದರೆ ನನ್ನ ತಂದೆ- ತಾಯಿ . ನನಗೆ ಅವರ ಮೇಲೆ ಅಪಾರವಾದ ಗೌರವ ಮತ್ತು ಪ್ರೀತಿ ಇದೆ. ಅವರಿಂದಲೇ ನಾನು ನನ್ನ ಜೀವನದಲ್ಲಿ ಸರಿಯಾದ ಮಾರ್ಗವನ್ನು ನೋಡಲು ಸಾಧ್ಯವಾಗಿದೆ.

ನಾನು ತರಬೇತಿ ಪಡೆದ ಸಂಸ್ಥೆಗಳು

ಬದಲಾಯಿಸಿ

ನಾನು ಕ್ರೈಸ್ಟ್ ಶಾಲೆ ಎನ್ನುವ ಆಂಗ್ಲ ಮಾಧಮದಲ್ಲಿ ಓದಿದೆ. ಮುಂದಿನ ವಿಧಾಭ್ಯಾಸವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮಾಡಿದೆ. ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್ಸಿ ಮಾಡುತಿದ್ದೇನೆ.

ಶಾಲೆಯ ದಿನಗಳು

ಬದಲಾಯಿಸಿ

ನಾನು ಶಾಲೆಯ ದಿನಗಳನ್ನು ಮರೆಯಲಾರೆ. ನನ್ನ ಶಾಲಾ ದಿನಗಳಲ್ಲಿ ಬಹಳಷ್ಟು ಶಿಕ್ಷಕರು ನನ್ನನ್ನು ಪ್ರೇರೇಪಿಸಿದ್ದಾರೆ. ನನಗೆ ಓದುವುದರಲ್ಲಿ ಮೊದಲು ಪ್ರೇರೇಪಿಸಿದ ಶಿಕ್ಷಕಿಯ ಹೆಸರು ಆರತಿ . ಅವರು ನನಗೆ ಆರನೇಯ ತರಗತಿಯ ಶಿಕ್ಷಕಿಯಾಗಿ ಶಾಲೆಗೆ ಸೇರಿದರು , ಹಾಗಾಗಿ ಅವರು ನಮಗೆ ಬಹಳ ಹತ್ತಿರವಾಗಿದ್ದರು. ನಮ್ಮನ್ನು ಅವರ ಮಿತ್ರರಾಗಿ ನೋಡುತ್ತಿದ್ದರು . ನನಗೂ ಹಾಗೂ ನನ್ನ ಸಹಪಾಠಿಯರಿಗೂ ಅವರೇ ಬಹಳ ಇಷ್ಟವಾದ ಶಿಕ್ಷಕಿಯಾಗಿದ್ದರು. ಅವರು ನಮ್ಮೆಲ್ಲರನ್ನು ಓದುವಕಡೆ ಮತ್ತು ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ಸಾಹ ತುಂಬಿಸಿದರು. ನಾನು ಹತ್ತನೇಯ ತರಗತಿಯಲ್ಲಿದ್ದಾಗ ವಿಜ್ನಾನ ಹೇಳಿಕೊಟ್ಟ ಶಿಕ್ಷಕಿಯು ನನ್ನನ್ನು ತುಂಬ ಪ್ರೇರೇಪಿಸಿದರು. ಅವರ ಹೆಸರು ಮಿಸಸ್.ಶೋಭಾ ರಾಜೀವ್. ಅವರು ನನಗೆ ವಿಜ್ನಾನದ ಬಗ್ಗೆ ಅಪಾರವಾಗಿ ಪ್ರೀತಿತೋರಿಸಲು ಕಾರಣವಾದರು. ನನಗೆ ಅವರು ಬಹಳ ಇಷ್ಟ . ಅವರು ಹೇಳಿಕೊಟ್ಟ ರೀತಿ ಮತ್ತು ಬರೆಯುತ್ತಿದ್ದ ಚಿತ್ರಗಳು ಈಗಲು ನೆನಪಿದೆ. ನಮ್ಮೆಲ್ಲರನ್ನು ತಮ್ಮ ಮಕ್ಕಳಾಗಿ ನೋಡಿಕೊಳುತ್ತಿದ್ದರು. ನಾನು ಕಾಲೇಜಿಗೆ ಹೋದ ಮೇಲೆ ಅವರನ್ನು ಮಾತನಾಡಿಸಿದಾಗ ಅವರು ಬಹಳಷ್ಟು ಸಂತೋಷಪಟ್ಟರು. ನಾನು ಶಾಲೆಯನ್ನು ಬಿಡುವ ಸಂದರ್ಭದಲ್ಲಿ ನಮಗೆ ರಾತ್ರಿ ಊಟವನ್ನು ಪ್ರಾಂಶುಪಾಲರು ಏರ್ಪಡಿಸಿದರು . ನನ್ನ ಸಹಪಾಠಿಯರೂ ಹಾಗು ನನ್ನ ಶಿಕ್ಷಕರ ಜೊತೆ ಊಟವನ್ನು ಮಾಡಿದ್ದನ್ನು ಮರೆಯಲಾರೆ. ಅದೆ ನನ್ನ ಶಿಕ್ಷಕರು ಹಾಗು ಸಹಪಾಠಿಯರು ಮಾಡಿದ ಮೊದಲನೇಯ ಹಾಗು ಕೊನೆಯ ರಾತ್ರಿ ಊಟವಾಗಿತ್ತು.ಹತ್ತನೇಯ ತರಗತಿಯನ್ನು ಮುಗಿಸಿದ ಮೇಲೆ ನಾನು ನನ್ನ ಕುಟುಂಬದ ಜೊತೆ ಮೈಸೂರಿಗೆ ಹೋದೆ. ಅಲ್ಲಿ ನಾವು ಚಾಮುಂಡಿ ಬೆಟ್ಟ , ಬಲಮುರಿ ಫಾಲ್ಸ್ ಎನ್ನಷ್ಟು ಜಾಗಗಳನ್ನು ನೋಡಿದೇವು. ನನಗೆ ಆದಿನ ಮರೆಯಲಾಗದ ಅನುಭವ.

ಕಾಲೇಜಿನ ದಿನಗಳು

ಬದಲಾಯಿಸಿ

ನನ್ನ ಕಾಲೇಜಿನ ಶಿಕ್ಷಕರು ನನ್ನನ್ನು ಜೀವಶಾಸ್ತ್ರದಲ್ಲಿ ಉತ್ಸಾಹ ತುಂಬಿಸಿದರು. ಮುಖ್ಯವಾಗಿ ನನಗೆ ಹೇಳಿಕೊಟ್ಟ ಶಿಕ್ಷಕರ ಹೆಸರು ಡಾ. ಶುಭಾಕರ್ . ಅವರು ಹೇಳಿಕೊಡುವ ವಿಧ ನನಗೆ ಸಂಪೂರ್ಣವಾಗಿ ಇಷ್ಟವಾಗಿತ್ತು. ಬಹುಶಃ ನಾನು ಈಗ ಬಿ.ಎಸ್ಸಿಯಲ್ಲಿ ಜೀವನಶಾಸ್ತ್ರದಲ್ಲಿ ಮುಂದುವರೆಯಲು ಅವರೇ ಕಾರಣವಾಗಿರಬಹುದು. ಅವರು ಜೀವನದ ಇನ್ನೊಂದು ರೂಪವನ್ನು ತೋರಿಸಿದರು. ಜೀವನವನ್ನು ಸುಲಭವಾಗಿ ನಡೆಸುವುದು ಹೇಗೆ ಎಂದು ಹೇಳಿಕೊಟ್ಟರು. ನನ್ನ ಕಾಲೇಜು ಮುಗಿದ ಮೇಲೆ ನಾವೆಲ್ಲರು ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿದ್ದವು.

ನನ್ನ ಇಷ್ಟಗಳು

ಬದಲಾಯಿಸಿ

ನಾನು ಒಬ್ಬ ಪರಿಸರ ಪ್ರೇಮಿ. ನನಗೆ ಪರಿಸರದಲ್ಲಿ ನಡೆಯುವ ವಿದ್ಯಮಾನವನ್ನು ನೋಡಲು ಇಷ್ಟ. ಅದರ ಹಿಂದಿರುವ ಕಾರಣವನ್ನು ತಿಳಿದುಕೊಳ್ಳುವ ಕುತೂಹಲ ಸದಾ ನನ್ನ ಬಳಿ ಇರುತ್ತದೆ. ನನಗೆ ಪ್ರಾಣಿಗಳೆಂದರೇ ಬಹಳ ಇಷ್ಟ. ನಮ್ಮ ಮನೆಯಲ್ಲಿ ಪುಟ್ಟ ನಾಯಿ ಮರಿ ಇದೆ. ಅದರ ಹೆಸರು ಪಪ್ಪಿ. ನನಗೆ ಅದರ ಮೇಲೆ ತುಂಬ ಪ್ರೀತಿ ಇದೆ. ನನ್ನ ಹವ್ಯಾಸಗಳೇನೆಂದರೆ ಸಂಗೀತವನ್ನು ಕೇಳಿಸಿಕೊಳ್ಳುವುದು , ಹಾಡುಗಳನ್ನು ಹಾಡುವುದು ಹಾಗು ಪುಸ್ತಕಗಳನ್ನು ಓದುವುದು . ನನಗೆ ಬಿಳಿ ಮತ್ತು ಕೆಂಪು ಬಣ್ಣ ಬಹಳ ಇಷ್ಟ.

ನನ್ನ ಮಿತ್ರರು

ಬದಲಾಯಿಸಿ

ನನ್ನ ಗುಂಪಿನಲ್ಲಿರುವ ಮಿತ್ರರ ಹೆಸರುಗಳೇನೆಂದರೆ ಭಾವನ, ಶ್ರೀ ರಕ್ಷ , ಶ್ರೀಶ, ರಾಘವೇಂದ್ರ, ನಿವೇದಿತ ಹಾಗು ಸಿಜಿ.ಇವರೆಲ್ಲರು ನನ್ನನ್ನು ಬಹಳಷ್ಟು ಪ್ರೋತ್ಸಾಹಿಸುತ್ತಾರೆ. ನನ್ನನ್ನು ಸದಾ ನಗುತ್ತ ನೋಡಲು ಇಚ್ಛಿಸುತ್ತಾರೆ .

 This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯ:
Prathiba 16
ಸದಸ್ಯರ ಚರ್ಚೆಪುಟ:
Prathiba 16