ಸದಸ್ಯ:Prapti 1940360/ನನ್ನ ಪ್ರಯೋಗಪುಟ
ಪ್ರಾಪ್ತಿ ವಿಕಾಸ ನಾಯಕ
ಬದಲಾಯಿಸಿನನ್ನ ಹೆಸರು ಪ್ರಾಪ್ತಿ ವಿಕಾಸ ನಾಯಕ.ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡೀ ಎಂದು ಅಂಕೋಲಾ ಕರೆಸಿಕೊಂಡಿದೆ.ದಿನಕರ ದೇಸಾಯಿಯವರು ವರ್ಣಿಸಿ ಬರೆದಿರುವಂತೆ ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು ನಡು ಮಧ್ಯದಲ್ಲಿ ಅಡಕೆ ತೆಂಗುಗಳ ಮಡಲು, ಸಿರಿಗನ್ನಡದ ಚಪ್ಪರ ನನ್ನ ಊರು ಅಂಕೋಲಾ.
೨೫ ಮಾರ್ಚ್ ೨೦೦೧ರಲ್ಲಿ ಅಂಕೋಲಾದಲ್ಲಿ ನಾನು ಜನಿಸಿದೆ.ನನ್ನ ತಂದೆ ವಿಕಾಸ ನಾಯಕ ಹಾಗು ತಾಯಿ ಮಾಲಾ. ನನ್ನ ತಮ್ಮ ಪ್ರಚೇತ.ನಾವು ತಂದೆಯ ಉದ್ಯೋಗದ ನಿಮಿತ್ತ ಹುಟ್ಟೂರನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸಿಸುತಿದ್ದೇನೆ.
ವಿದ್ಯಾಭ್ಯಾಸ
ಬದಲಾಯಿಸಿಮನೆಯೇ ಮೊದಲ ಪಾಠಶಾಲೆಯೆಂಬಂತೆ,ನಾಲ್ಕು ವರ್ಷ ಆಗುವ ತನಕ ಅಮ್ಮನಿಂದಲೆ ಕಥೆ ಮತ್ತು ಹಾಡುಗಳನ್ನು ಕಲಿತೆ.೨೦೦೫ರಿಂದ ೨೦೦೬ರರವರೆಗೆ ನಾನು ಆರ್.ಎನ್.ಎಸ್ ವಿದ್ಯಾನಿಕೇತನದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪಡೆದೆ.ನಂತರ ಒಂದನೆ ತರಗತಿಗೆ ಸುಂದರ ಪರಿಸರ ಹೊಂದಿರುವ , ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವಂತ ಶ್ರೀ ವಾಣಿ ವಿದ್ಯಾ ಕೇಂದ್ರ ಸೇರಿಕೊಂಡೆ. ಒಳ್ಳೆಯ ಗುರುಗಳ ಅಡಿಯಲ್ಲಿ ಒಂದರಿಂದ ಹತ್ತನೆ ತರಗತಿಯವರೆಗು ಉತ್ತಮ ಶ್ರೆಣಿಯಲ್ಲಿ ತೇರ್ಗಡೆಯಗುತ್ತ ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದೆ.ಶಾಲೆಯಲ್ಲಿರು ವಿಜ್ಞಾನ ವನ, ರಾಕ್ ಗಾರ್ಡನ್,ಲತಾವನ, ಮಿನಿ ಫಾರೆಸ್ಟ ಎಲ್ಲವೂ ಉತ್ತಮ ಕಲಿಕೆಯ ವಾತಾವರಣವನ್ನು ಕಲ್ಪಿಸಿದ್ದವು. ಶಿಕ್ಷಕರ ಪ್ರೋತ್ಸಾಹದಿಂದ ನನ್ನಲ್ಲಿ ಹೆಚ್ಚು ಶ್ರಮಪಟ್ಟು ಓದಬೇಕೆಂಬ ಛಲ ಮೂಡಿತು. ಬಾಲ್ಯದಿಂದಲೂ ಶಾಂತ ಪ್ರವೃತ್ತಿಯವಳಾದ ನಾನು ಶಾಲೆಯಲ್ಲಿ ಆಯೋಜಿಸುತ್ತಿದ್ದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ.ಅನೇಕ ರಸಪ್ರಶ್ನೆ , ಪ್ರಬಂಧ ಸ್ಪರ್ಧೆಗಳಲ್ಲಿ ಭಾಹಗವಹಿಸಿ ಬಹುಮಾನಗಳನ್ನು ಗಳಿಸಿದ್ದೇನೆ. ನನಗೆ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳುವುದು ಬಹಳ ಇಷ್ಟ. ಹಲವಾರು ಗುಂಪು ಚಟುವಟಿಕೆಗಳಲ್ಲಿ ನಾಯಕತ್ವದಿಂದ ಕೆಲಸವನ್ನು ನಿರ್ವಹಿಸುತ್ತಿದ್ದೆ.ಶಾಲೆಯಲ್ಲಿನ ಹಸಿರು ಮನೆಯ ಕ್ಯಾಪ್ಟನ್ ಕೂಡ ಆಗಿದ್ದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿಯನ್ನು ಕೂಡ ಶ್ರೀ ವಾಣಿ ವಿದ್ಯಾ ಕೇಂದ್ರ ಕಾಲೇಜಿನಲ್ಲೇ ಮುಗಿಸಿದೆ.ಪ್ರಸ್ತುತ ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿಎಸ್ ಸಿ ಓದುತ್ತಿದ್ದೇನೆ.ಮುಂದೆ ಭೌತಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡು ಹೆಚ್ಚಿನ
ವ್ಯಾಸಂಗ ಮಾಡಬೇಕೆಂಬ ಗುರಿಯಿದೆ.
ನನ್ನ ಪರಿಚಯ
ಬದಲಾಯಿಸಿನನ್ನ ಜೀವನದ ಮೂರು ಪ್ರಬಲವಾದ ಸ್ತಂಭ ಎಂದರೆ ಅದು ನನ್ನ ತಾಯಿ , ತಂದೆ ಹಾಗು ನನ್ನ ಗುರುಗಳು. ನಾನು ಯಾವುದೇ ನೋವಿನಲ್ಲಿದ್ದರು ಮೊದಲಿಗೆ ನೆನಪಾಗುವುದು ಅಮ್ಮ. 'ಅಮ್ಮ'
ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿಯೂ ಇಲ್ಲ. ಅಮ್ಮನ ಮಡಿಲಲ್ಲಿ ಸಿಕ್ಕುವ ಸಮಾಧಾನ ಬೇರೆಲ್ಲೂ ಸಿಗದು.ಅಮ್ಮ ನನಗೆ ಯಾವಾಗಲೂ ಏಟು ಹಾಕಿ ಪಾಠ ಕಲಿಸುವರೆಂದು ಕೋಪಗೊಳ್ಳುತ್ತಿದ್ದೆ ಆದರೆ ಈಗ ಅರ್ಥವಾಯಿತು, ಅದು ಕೇವಲ ನನ್ನನ್ನು ಸುಂದರ ಮೂರ್ತಿಯಾಗಿಸಲೆಂದು, ಇದರಲ್ಲಿ ಅವರ ಪ್ರೀತಿ ಅಡಗಿದೆಯೆಂದು. ಅಮ್ಮ ನನಗೆಂದು ಮಾಡಿದ ಅಡುಗೆಯ ರುಚಿಯೋ ಸ್ವರ್ಗಕ್ಕೆ ಸಮಾನ. ಅಂತೆಯೇ ನನ್ನ ತಂದೆಯೂ ಕೂಡ ಎಲ್ಲಿಯೇ ಇದ್ದರು ಸದಾ ನನ್ನ ಸುಖ ಸೌಲಭ್ಯಗಳ ಕುರಿತೆ ಚಿಂತಿಸುವರು, ಸದಾ ಮುಂದೆ ಸಾಗಲು ಪ್ರೇರೇಪಿಸುವರು. ತನಗೆ ಹೆಗಲು ನೋವಿದ್ದರು ನನ್ನನ್ನು ಹೆಗಲ ಮೇಲೆ ಹೊತ್ತು ಊರು ಕೇರಿಯಲ್ಲಿ ಸುತ್ತಿದ ವ್ಯಕ್ತಿ, ನನ್ನ ಪ್ರೀತಿಯ ಅಪ್ಪ. ಅಪ್ಪನಿಗೆ ನಾನು ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ತರದಿದ್ದರು ಅಷ್ಟು ಬೇಸರವಾಗುವುದಿಲ್ಲ ಆದರೆ ತಪ್ಪಿಯೂ ಏನಾದರು ನನ್ನ ನಡೆ ನುಡಿ ಸರಿಯಿಲ್ಲದಿದ್ದರೆ ಬಹಳ ಕೋಪಿಸಿಕೊಳ್ಳುವರು.ನನ್ನ ತಂದೆ ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವರು. 'ಶಿಸ್ತು ಸಫಲತೆಯ ಮುಖ್ಯ ಅಂಗ' ಎಂದೇ ನಮಗೆ ಕಲಿಸಿರುವರು.ಇನ್ನು ನನ್ನ ಗುರುಗಳು, ಅಂಧಕಾರದಿಂದ ಹೊರತಂದು ನನ್ನನ್ನು ಹೊಸ ಜಗತ್ತಿಗೆ ಪರಿಚಯಿಸಿದ ಗಣ್ಯರು. ಜ್ಞಾನ ಸಂಪತ್ತನ್ನು ಅರಿಯುವ ಮಾರ್ಗವನ್ನು ತಿಲಿಸಿಕೊಟ್ಟವರು.ನನ್ನಲ್ಲಿ ಆತ್ಮಾಭಿಮಾನ ಮತ್ತು ಆತ್ಮವಿಶ್ವಾಸವನ್ನು ತುಂಬಿದವರು.ಅದರಲ್ಲೂ ನನಗೆ ದೇಶಭಕ್ತಿಯ ಹೊಸ ರೀತಿಯನ್ನು ತೋರಿಸಿಕೊಟ್ಟ ಕನ್ನಡ ಶಿಕ್ಷಕಿ ಬಹಳ ಇಷ್ಟ.ಇವರೆಲ್ಲರದ್ದು ನಿಸ್ವಾರ್ಥ ಪ್ರೇಮ.
ಈ ಎಲ್ಲದರ ನಡುವೆ ನನ್ನ ಮೋಜು-ಮಸ್ತಿಯ ಜೊತೆಗಾರ, ನನ್ನ ತಮ್ಮ ಪ್ರಚೇತ. ನಾವಿಬ್ಬರು ಕಾಲು ಕೈ ಕಿತ್ತು ಹೋಗುವ ಹಾಗೆ ಜಗಳವಾಡಿದರೂ, ನಮ್ಮಿಬ್ಬರ ನಡುವೆ ಯಾರಿಗೂ ಬರಲು ಬಿಡುವುದಿಲ್ಲಾ. ನಮ್ಮದೊಂದು ಕಿತಾಪತಿಯ ಅನ್ಯೋನ್ಯ ಜೋಡಿ.ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ ಎಂಬಂತೆ ನನ್ನ ಗೆಳೆಯರು ಸದಾ ನನ್ನ ಪ್ರೋತ್ಸಾಹಿಸುತ್ತ, ನಾನು ಸದಾ ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವರು. ಅಷ್ಟೇ ಅಲ್ಲದೆ ಕಷ್ಟಯೆಂದರೆ ನನ್ನ ಬೆನ್ನೆಲುಬಾಗಿ ನಿಲ್ಲುವರು, ಅದೇ ಗೆಳೆಯರು ನನ್ನ ಗೆಲುವನ್ನು ತಮ್ಮ ಗೆಲುವೆಂದೇ ಭಾವಿಸಿ ನನಗಿಂತ ಹೆಚ್ಚು ಸಂಭ್ರಮಿಸುವರು.ಇಂತಹ ಗೆಳೆಯರನ್ನು ಪಡೆದಿರುವುದು ನನ್ನ ಅದೃಷ್ಟ.ನನಗೆ ನನ್ನ ಗೆಳೆಯರೊಂದಿಗೆ ಪ್ರವಾಸ ಕೈಗೊಳ್ಳುವುದು ಬಹಳ ಇಷ್ಟ.ಅದೊಂದು ನಮ್ಮದೇಯಾದ ನಿಗೂಢ ಲೋಕ . ಗೆಳೆಯರೆಂದ ಮೇಲೆ ಪರಸ್ಪರ ಚಿಕ್ಕ ಪುಟ್ಟ ಮತಭೇದ ಉಂಟಾಗುವುದು ಸರ್ವೇಸಾಮಾನ್ಯ, ಆದರೂ ಇವು ನಮ್ಮ ಅಗಾಧ ಸ್ನೇಹವನ್ನು ಮುರಿಯಲು ಸಾಧ್ಯವಿಲ್ಲ. ಸ್ನೇಹದ ಕಡಲಿನ ಪಯಣಿಗರಾದ ನಾವು ದಡ ತಲುಪೇ ತಲುಪುತ್ತೇವೆ ಎಂದು ನಂಬಿದ್ದೇವೆ.
ಹವ್ಯಾಸ
ಬದಲಾಯಿಸಿಈಗ ನನ್ನ ಹವ್ಯಾಸದ ಪಟ್ಟಿಯನ್ನು ನೋಡೋಣವೆ? ನನಗೆ ಚಿಕ್ಕವಳಾಗಿದ್ದಾಗಿಂದಲು ಪ್ರಪಂಚವು ಒಂದು ವಿಚಿತ್ರದಂತೆ ಕಾಣುತಿತ್ತು. ಬಾನಲ್ಲಿ ಮೂಡುವ ಕಾಮನಬಿಲ್ಲು, ನನ್ನ ಪ್ರೀತಿಯ ಅತಿ ವೇಗದ ವಿಮಾನಗಳು ಎಲ್ಲವು ವಿಸ್ಮಯಕಾರಿಯಗಿ ಕಾಣುತ್ತಿದ್ದವು. ನನಗೆ ಪೌರಾಣಿಕ ಕಥೆಗಳು ಕೂಡ ಇಷ್ಟ. ಕಾರ್ಟೂನ್ ಗಳು ಸಹ ನನ್ನ ಬಾಲ್ಯದ ಮುಖ್ಯ ಸಂಗಾತಿಗಳು. ಹೀಗೆ ಬೆಳೆಯುತ್ತ ಬೆಳೆಯುತ್ತ ಜನರೊಡನೆ ಬೆರೆಯುತ್ತ , ನನ್ನಲ್ಲೋಂದು ಹೊಸ ಹವ್ಯಾಸ ಮೂಡಿತು. ಅದೇನೆಂದರೆ ಪುಸ್ತಕಗಳನ್ನು ಓದುವುದು. ಮುಂದೆ ಖಗೋಳ ವಿಜ್ಞಾನದಲ್ಲಿ ಆಸಕ್ತಿ ಮೂಡಿ ಬೆಂಗಳೂರಿನ ನೆಹರು ತಾರಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯವು ನನ್ನ ಅಚ್ಚುಮೆಚ್ಚಿನ ತಾಣಗಳು. ಆಟೋಟಗಳಲ್ಲಿ ಭಾಗವಹಿಸದಿದ್ದರು , ಅದರ ಕುರಿತು ಮಾಹಿತಿ ಸಂಗ್ರಹಿಸುವುದು ನನ್ನ ಅತಿ ದೊಡ್ಡ ಹವ್ಯಾಸ.ಅದರಲ್ಲೂ ಕ್ರಿಕೆಟ್ ಎಂದರೆ ಪಂಚಪ್ರಾಣ. ರಜಾ ದಿನಗಳಲ್ಲಿ ಊರಿಗೆ ಹೋಗಿ ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ನನ್ನ ಸಹೋದರರ ಜೊತೆ ಆಟವಾಡುವುದು ಹೊಸ ಚೈತನ್ಯವನ್ನು ಮೂಡಿಸುತ್ತದೆ.ಇದು ನನ್ನ ಬಾಳಿನ ಒಂದು ಪುಟ್ಟ ಕಿಟಕಿ.
ನನ್ನ ಜೀವನದ ಆದರ್ಶ ಪ್ರುರುಷರಾದ ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್ ಅವರು ಹೆಳಿದಂತೆ " ಸೂರ್ಯನಂತೆ ಪ್ರಜ್ವಲಿಸಲು ಅದರಂತೆ ಉರಿಯುವುದು ಮುಖ್ಯ". ಆದ್ದರಿಂದ ಶ್ರಮಪಟ್ಟು ಕೆಲಸಮಾಡಿ ಗುರಿ ಮುಟ್ಟುವತನಕ ನಿಲ್ಲದಿರುವುದು ನನ್ನ ಬದುಕಿನ ಏಕೈಕ ಧ್ಯೇಯ. ಯವ್ವನದ ಹೊಸ ಉತ್ಸಾಹ ಮತ್ತು ಸ್ಫೂರ್ತಿಯಿಂದ ಉತ್ತಮ ನಾಗರಿಕಳಾಗಿ ದೇಶಕ್ಕೆ ಕೀರ್ತಿ ತರಬೇಕೆಂಬ ಆಸೆ ನನ್ನದು.