ಸದಸ್ಯ:Prajwal prem/ನನ್ನ ಪ್ರಯೋಗಪುಟ

ಬೇರು

ತನ್ನ ಮೂಲವ ಬಿಟ್ಟು, ಭೂ ಮಡಿಲಲಿ ಹೂತು, ತನ್ನೆಲ್ಲ ಕೈಗಳ ಚಾಚಿ, ನೀರ ಅರಸಿದೆ. ಬಿಡಿಮಣ್ಣು, ಬಂಡೆಯಿರಲಿ, ನೆರೆ-ಕ್ಷಾಮ, ಬಿರುಗಾಳಿಯಿರಲಿ, ಇಳೆಯೊಡಲ ಆಪ್ಪಿ ಹಿಡಿದು, ಆಳದ ಸತ್ಯವನು ಹುಡುಕಿದೆ.

ಸೃಷ್ಟಿಯ ಆಟವೆ ಹೀಗಿದೆ, ಬೆಳೆಯುವ ಹಾದಿಗೆ ಕತ್ತಲೆಯೇ ತುಂಬಿದೆ. ಸಪ್ತ ಲೋಕಗಳ ಹುಡುಕಿ, ಭುಮಿಯ ಹೊರೆಯ ಸಹಿಸಿ, ಒಳಿತನೆಲ್ಲಾ ಹೀರಿ ಕಳಿಸಿದೆ, ಮರವು ಮುಗಿಲ ಮೀರಿ ಬೆಳೆದಿದೆ.

ಮೇಲೇರಿದೆ ರೆಂಬೆ-ಕೊಂಬೆಗಳು. ಆಕಾಶದಿ ದಾರಿ ಹುಡುಕಿವೆ. ಬೆಳೆದ ಮರಕ್ಕೀಗ ಶೃಂಗಾರದ ಚಿಂತೆ, ಧರಿಸಿದೆ ಮುಡಿಯಲಿ ಹೂಗಳ ಕಂತೆ. ಹೀಗೊಂದು ದಿನ, ತಲೆಯತ್ತಿ ನಿಂತ ಮರವೊಂದು ಯಾವುದೊ ಕರಣಕ್ಕೆ ನೆಲಕಚ್ಚುವುದು, ಆದರೆ ಅದೇ ಬೇರಿಂದ ನಾಳೆ ಇನ್ನೊಂದು ಕುಡಿ ಚಿಗುರುವುದು.


ಬಾಳ ಪಟ

ನೆಲಮಹಡಿಯ ಕೋಣೆಗೆ ತಿಳಿನೀಲ ಚಪ್ಪರ; ಉಪ್ಪರಿಗೆಯ ಬಾಂದಳದಲಿ ನಮ್ಮ ಸಹೋದರ. ಮೇಲೇರಲು ಪಾವಟಿಗೆ ಇಲ್ಲ, ಕೆಳಗಿಳಿಯುವ ಬಯಕೆ ಆತನಿಗೂ ಇಲ್ಲ.

ಬಾಳ-ಭಾವನೆಗಳ ಬಣ್ಣದ ಹಾಳೆಯ ಮಡಚಿ, ಸೂಕ್ಷ್ಮ ಶ್ವಾಸದ ನೂಲನು ಕಟ್ಟಿ, ಮರ್ಕಟಮನದ ಬಾಲವ ನೆಟ್ಟು, ವಿಶ್ವ-ವಿಸ್ಮಯಗಳ ಚಿತ್ರದಿ ಪ್ರಶ್ನಿಸಿ, ಪಟವಾಗಿ ಗೆಳೆಯನ

ಜಡೆ ಎಳೆದ ಕಥೆ

ಐದನೆ ತರಗತಿಗೆ ನನ್ನ, ಒದುತ್ತಿದ್ದ ಕಾಂನ್ವೆಟ್ ಬಿಡಿಸಿ, ನನ್ನ ತಾಯಿ ಕೆಲಸ ಮಾಡುತ್ತಿದ್ದ ಶಾಲೆಗೆ ಸೇರಿಸಿದರು. ಎರಡು ವರುಷ ಸೆಪ್ಪೆಯಾಗಿದ್ದ ಶಾಲಾಜೀವನದಲ್ಲಿ ಗುಂಟೂರ್ ಮೆಣಸಿನಕಾಯಿಯಂತೆ ಬಂದಳು ಆಕೆ. ಏಳನೆ ತರಗತಿಯಲ್ಲಿ ಯಾವ ಪಠ್ಯದ ವಿಚಾರಗಳು ನನ್ನ ಮಸ್ತಿಷ್ಕಕ್ಕೆ ನಾಟದಾಗಿ, ಜೀವನದಲ್ಲಿ ಬೆಸತ್ತು, ಪ್ರತಿ ಸಂಜೆಯಂತೆ, ಅಮ್ಮ ಕೆಲಸ ಮುಗಿಸಿ ಹೊರಡುವವರೆಗೂ ಅಲ್ಲೆ ಆಟವಾಡಿ, ದಣಿದು, ಹೊರಡವ ಸಮಯವಾಗಿ, ಬ್ಯಾಗ್ ತರಲು ತರಗತಿಗೆ ಹೋದಾಗ, "ನಿನ್ನ ಕ್ಲಾಸ್ ಗೆ ಹೊಸ ಹುಡುಗಿ ಒಬ್ಬಳು ಸೇರಿದ್ದಾಳೆ" ಎಂದು ತಾಯಿ ಹೇಳಿ, "ಆಂದ್ರ ಇಂದ ಬಂದಿದ್ದಾಳೆ" ಎಂದರು. ನಾಲ್ಕು ಮನೆಗಳಿಂದ ಮಕ್ಕಳು ಬರುವ ನಮ್ಮಂತ ಪುಟ್ಟ ಶಾಲೆಗೆ ಎಲ್ಲಿಂದಲೋ ಬಂದ ಈಕೆ, ಮನುಜ ಕುಲಕ್ಕೆ ಹೊಂದುವ ಲಕ್ಷಣ ಹೊಂದಿರುವಳೊ ಎಂದು ನೋಡಲು ಕಾತುರನಾಗಿರಲು, ಶಾಲೆಯ ಹೊಸ್ತಿಲಲ್ಲಿ ಇರುವ ಆಫೀಸ್ ಕಛೇರಿಯಲ್ಲಿ ಗುಲಾಬಿ ಬಣ್ಣದ ಉಡುಗೆಯಲ್ಲಿ, ದಟ್ಟ ಜಡೆಯೊಂದು ಕಣ್ಣಿಗೆ ಬಿತ್ತು.