ಸದಸ್ಯ:Praajna G/ನನ್ನ ಪ್ರಯೋಗಪುಟ8

ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಕಾರ್ಕಳ ತಾಲೂಕಿನಲ್ಲಿರುವ ಒಂದು ದೇವಸ್ಥಾನ. ಇದು ಕಾರ್ಕಳ-ಹಿರಿಯಡ್ಕ-ಉಡುಪಿ ರಸ್ತೆಯಲ್ಲಿಯ ಗುಡ್ಡೆ ಅಂಗಡಿ ಎಂಬಲ್ಲಿಂದ ಸುಮಾರು ಮೂರುವರೆ ಕಿ. ಮೀ. ದೂರದಲ್ಲಿದೆ.

ಇತಿಹಾಸ ಬದಲಾಯಿಸಿ

ಅಲ್ಲಿಯ ನಂಬಿಕೆಯ ಪ್ರಕಾರ ಶಿವನ ಆರಾಧನೆಯಲ್ಲಿ ನಿರತರಾಗಿ ಸಿದ್ಧಿಹೊಂದಿದ ಅಡಕತ್ತಾಯ ಎಂಬ ತಪಸ್ವಿಯು ಶಿವನ ಗಣಗಳೊಂದಿಗೆ ಬಂದು ಕಣಂಜಾರುವಿನಲ್ಲಿ ಶಿವನ ದೇವಾಲಯವನ್ನು ನಿರ್ಮಿಸಿ ಅಲ್ಲಿ ಅವನ ಅಸಂಖ್ಯ ಗಣಗಳನ್ನು ನೆಲೆಗೊಳಿಸಿದನು. ನಂದಳಿಕೆ, ಕವತ್ತಾರು, ಹಿರಿಯಡ್ಕ ಮುಂತಾದ ೬೪ ಅಡಕಗಳಲ್ಲಿ ಈ ತಪಸ್ವಿ ಶಿವಾಲಯಗಳನ್ನು ನಿರ್ಮಿಸಿ ಅಲ್ಲಿ ಅವನ ಗಣಗಳನ್ನು ನೆಲೆಗೊಳಿಸಿದನು ಎಂಬ ನಂಬಿಕೆ ಇದೆ.

ದೇವರ ಬಗ್ಗೆ ಬದಲಾಯಿಸಿ

ಇಲ್ಲಿಯ ಪ್ರಧಾನ ಆರಾಧ್ಯದೇವ ಬ್ರಹ್ಮಲಿಂಗೇಶ್ವರ. ಇಲ್ಲಿ ಶಿವನ ಲಿಂಗ ಮತ್ತು ಚತುರ್ಮುಖ ಬ್ರಹ್ಮನ ವಿಗ್ರಹ ಇದೆ.