ಆಲೂಗಡ್ಡೆ ಸಲಾಡ್

(ಸದಸ್ಯ:Praajna G/ಆಲೂಗಡ್ಡೆ ಸಲಾಡ್ ಇಂದ ಪುನರ್ನಿರ್ದೇಶಿತ)

ಆಲೂಗಡ್ಡೆ ಸಲಾಡ್ ಬೇಯಿಸಿದ ಆಲೂಗಡ್ಡೆಯಿಂದ ತಯಾರಿಸಿದ ಸಲಾಡ್ ಆಗಿದೆ. ಇದು ಸಾಮಾನ್ಯವಾಗಿ ಡ್ರೆಸ್ಸಿಂಗ್ ಮತ್ತು ಬೇಯಿಸಿದ ಮೊಟ್ಟೆಗಳು ಮತ್ತು ಹಸಿ ತರಕಾರಿಗಳಂತಹ ವಿವಿಧ ಪದಾರ್ಥಗಳನ್ನು ಒಳಗೊಂಡಿರುತ್ತದೆ.

ಆಲೂಗಡ್ಡೆ ಸಲಾಡ್
ಮೂಲ
ಮೂಲ ಸ್ಥಳಜರ್ಮನಿ
ವಿವರಗಳು
ನಮೂನೆಸಲಾಡ್
ಬಡಿಸುವಾಗ ಬೇಕಾದ ಉಷ್ಣತೆತಂಪು( ಕೆಲವು ಬಿಸಿ)
ಮುಖ್ಯ ಘಟಕಾಂಶ(ಗಳು)ಆಲೂಗಡ್ಡೆ

ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಇದನ್ನು ಸಾಮಾನ್ಯವಾಗಿ ಸೈಡ್ ಡಿಶ್ ಎಂದು ಪರಿಗಣಿಸಲಾಗಿದೆ.

ಇತಿಹಾಸ ಮತ್ತು ವಿಧಗಳು

ಬದಲಾಯಿಸಿ

ಆಲೂಗಡ್ಡೆ ಸಲಾಡ್ ಜರ್ಮನಿಯಲ್ಲಿ ಹುಟ್ಟಿಕೊಂಡಿದೆ ಎಂದು ವ್ಯಾಪಕವಾಗಿ ನಂಬಲಾದ ಇದು ಹೆಚ್ಚಾಗಿ ಯುರೋಪ್, ಯುನೈಟೆಡ್ ಸ್ಟೇಟ್ಸ್ ಮತ್ತು ಏಷ್ಯಾದಾದ್ಯಂತ ಹರಡಿದೆ. [] [] ಹತ್ತೊಂಬತ್ತನೇ ಶತಮಾನದಲ್ಲಿ ಜರ್ಮನ್ ಮತ್ತು ಇತರ ಯುರೋಪಿಯನ್ ವಲಸಿಗರ ಮೂಲಕ ಯು. ಎಸ್. ಗೆ ತಂದ ಪಾಕವಿಧಾನಗಳಿಂದ ಅಮೇರಿಕನ್ ಆಲೂಗಡ್ಡೆ ಸಲಾಡ್ ಹುಟ್ಟಿಕೊಂಡಿದೆ. [] []

ಅಮೇರಿಕನ್ ಶೈಲಿಯ ಆಲೂಗಡ್ಡೆ ಸಲಾಡ್ ಅನ್ನು ತಂಪು ಅಥವಾ ಕೋಣೆಯ ಉಷ್ಣಾಂಶದಲ್ಲಿ ನೀಡಲಾಗುತ್ತದೆ. ಪದಾರ್ಥಗಳಲ್ಲಿ ಸಾಮಾನ್ಯವಾಗಿ ಮೇಯನೇಸ್ ಅಥವಾ ಕಂಪೇರೆಬಲ್ ಸಬ್ಸ್ಟಿಟ್ಯೂಟ್ ( ಮೊಸರು ಅಥವಾ ಹುಳಿ ಕ್ರೀಮ್ ), ಗಿಡಮೂಲಿಕೆಗಳು ಮತ್ತು ಹಸಿ ತರಕಾರಿಗಳು ( ಈರುಳ್ಳಿ ಮತ್ತು ಸೆಲರಿ ಮುಂತಾದವು) ಸೇರಿವೆ. [] ಜರ್ಮನ್ ಶೈಲಿಯ ಆಲೂಗಡ್ಡೆ ಸಲಾಡ್ ಅನ್ನು ಬೆಚ್ಚಗೆ ಅಥವಾ ಕೋಣೆಯ ಉಷ್ಣಾಂಶದಲ್ಲಿ ನೀಡಲಾಗುತ್ತದೆ. ಇದನ್ನು ವಿನೈಗ್ರೆಟ್ ( ಕ್ರೀಮೀ ಮೇಯನೇಸ್ ಆಧಾರಿತ ಡ್ರೆಸ್ಸಿಂಗ್‌ನ ಬದಲಿಗೆ) ನಿಂದ ತಯಾರಿಸಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ಬೇಕನ್ ಅನ್ನು ಒಳಗೊಂಡಿರುತ್ತದೆ. [] ಏಷ್ಯನ್-ಶೈಲಿಯ ಆಲೂಗಡ್ಡೆ ಸಲಾಡ್ ಅಮೇರಿಕನ್-ಶೈಲಿಯ ಆಲೂಗಡ್ಡೆ ಸಲಾಡ್ ಅನ್ನು ಹೋಲುತ್ತದೆ, ಆದರೆ ಅದು ಸಿಹಿಯಾದ ಮತ್ತು ಮೊಟ್ಟೆಯ ರುಚಿಯನ್ನು ಹೊಂದಿರುತ್ತದೆ.

ಅಮೇರಿಕನ್ ಆಲೂಗಡ್ಡೆ ಸಲಾಡ್

ಬದಲಾಯಿಸಿ

ಈಗ ತಿಳಿದಿರುವ ಹಾಗೆ ಅಮೇರಿಕನ್ ಆಲೂಗಡ್ಡೆ ಸಲಾಡ್‌ನ ಪಾಕವಿಧಾನಗಳು ೧೯ ನೇ ಶತಮಾನದ ಮಧ್ಯಭಾಗ ಅಥವಾ ೧೮೦೦ರರ ದಶಕದ ಮಧ್ಯಭಾಗದಲ್ಲಿ ಯುರೋಪಿಯನ್ ವಸಾಹತುಗಾರರಿಂದ ಯು. ಎಸ್. ಗೆ ಪರಿಚಯಿಸಲ್ಪಟ್ಟಿತು. ಇದು ಜರ್ಮನ್ ಪಾಕಪದ್ಧತಿಯಲ್ಲಿ ಬೇರೂರಿದೆ. [] ಮುಂಚಿನ ಅಮೇರಿಕನ್ ಆಲೂಗಡ್ಡೆ ಸಲಾಡ್ ಅನ್ನು ಬೇಯಿಸಿದ ಆಲೂಗಡ್ಡೆಯಿಂದ ತಯಾರಿಸಲಾಗುತ್ತಿತ್ತು ಮತ್ತು ಅದನ್ನು ಸಾಮಾನ್ಯವಾಗಿ ಎಣ್ಣೆ, ವಿನೆಗರ್ ಮತ್ತು ಗಿಡಮೂಲಿಕೆಗಳಿಂದ ಡ್ರೆಸ್ಸಿಂಗ್ ಮಾಡಲಾಗುತ್ತಿತ್ತು. []

ಜಪಾನೀಸ್ ಆಲೂಗಡ್ಡೆ ಸಲಾಡ್

ಬದಲಾಯಿಸಿ
 
ಜಪಾನೀಸ್ ಶೈಲಿಯ ಪೊಟೆಸರ

ಜಪಾನ್‌ನಲ್ಲಿ ಆಲೂಗಡ್ಡೆ ಸಲಾಡ್‌‌ಅನ್ನು ಪೊಟೆಸರ (ಅಥವಾ ಪೊಟೆಸಾಲಾポテサラ) ಎಂದು ಕರೆಯಲಾಗುತ್ತದೆ. ಇದು ಆಲೂಗಡ್ಡೆ ಸಲಾಡ್ ಪದಾರ್ಥಗಳೊಂದಿಗೆ ( ಬೇಯಿಸಿ ಹಿಸುಕಿದ ಆಲೂಗಡ್ಡೆ, ಬೇಯಿಸಿದ ಮೊಟ್ಟೆಗಳು), ತರಕಾರಿಗಳು (ಸೌತೆಕಾಯಿ, ಈರುಳ್ಳಿ, ಕ್ಯಾರೆಟ್) ಮತ್ತು ಮೇಯನೇಸ್ ಡ್ರೆಸ್ಸಿಂಗ್‌ನ ಜೊತೆಗೆ ಬೆರೆಸಿದ ಹ್ಯಾಮ್, ರೈಸ್ ವಿನೆಗರ್ ಮತ್ತು ಕರಾಶಿ ಸಾಸಿವೆಗಳನ್ನು ಹೊಂದಿದೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "» Potato Salad: History". www.guampedia.com (in ಅಮೆರಿಕನ್ ಇಂಗ್ಲಿಷ್). Archived from the original on 30 ಅಕ್ಟೋಬರ್ 2019. Retrieved 6 March 2017.{{cite web}}: CS1 maint: bot: original URL status unknown (link),
  2. ೨.೦ ೨.೧ Olver, Lynne. "The Food Timeline: history notes--salad". The Food Timeline. Archived from the original on 2020-04-08.
  3. "American Potato Salad Recipe". kraftrecipes.com. Retrieved 6 March 2017.
  4. "German Potato Salad".
  5. Russo, Susan (10 June 2009). "Rethinking Potato Salad". NPR.
  6. Russo, Susan (10 June 2009). "Rethinking Potato Salad". NPR.