ಸದಸ್ಯ:Pooja sweets/sandbox
ದೊಕ್ಕಲು ಮಕ್ಕಳು
ದೊಕ್ಕಲು ಮಕ್ಕಳು ನಮ್ಮ ನಾಡಿನ ಸಂಸ್ಕ್ರತಿಯ ಭಾಗವಾಗಿದ್ದಾರೆ. ಅದರಲ್ಲಿಯೂ ಹಳೇ ಬೇರು, ಮೂಲ ವಾಗಿದೆ ."ನಮದು ಬಹು ಸಂಸ್ಕ್ರತಿಗಳ ದೇಶ ,ಸಂಸ್ಕ್ರತಿ ಎನ್ನುವುದೇ ಉಪ ಸಂಸ್ಕ್ರತಿಗಳ ಒಂದು ಒಕ್ಕೂಟ " ಎಂಬ ಅಭಿಪ್ರಾಯವು ಇಲ್ಲಿ ತುಂಬಾ ಗಮನಿಸುವಂತಹದು. ದೊಕ್ಕಲು ಮಕ್ಕಳದು ಅಲೆಮಾರಿ ಜನ ಸಮುದಾಯ ಜನ ಸಂಖ್ಯೆ ತುಂಬಾ ಕಡಿಮೆ. ವಿರಳವಾಗಿ ಅಲ್ಲಲ್ಲಿ ನೆಲೆ ನಿಂತಿರುವರು.
ಈಗೀಗ ಈ ಸಮುದಾಯವು ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಲ್ಲಿದೆ. ಹಾಗೆ ಆಧುನಿಕತೆಗೆ ಒಡ್ಡಿಕೊಂಡು ತನ್ನತನವನ್ನು ಕಳೆದುಕೊಳ್ಳುವುದರೊಳಗಾಗಿ ಈ ಸಮುದಾಯದ ಮೂಲ ಹಾಗು ಸಾಧ್ಯವಿದ್ದಷ್ಟು ಸಮಗ್ರವಾದ ಸ್ವರೂಪವನ್ನು ದಾಖಲಿಸಲಾಗಿದೆ. ಇದೇ ಈ ಅಧ್ಯಾಯನದ ಉದ್ದೇಶವಾಗಿದೆ. ಇನ್ನು ಈ ಅಧ್ಯಾಯನದ ವ್ಯಾಪ್ತಿ ಎರಡು ನೆಲೆಯಾಗಿದೆ. ಒಂದು ವಿಷಯ ಸಂಗ್ರಹ ಹಾಗು ಸಮೀಕ್ಷಾ ಕಾರ್ಯಕ್ಕೆ ಸಂಬಂಧ ಪಟ್ಟ ವ್ಯಾಪ್ತಿ ಇನ್ನೊಂದು ಸಂಗ್ರಹಿಸಿಕೊಂಡ ವಿಷಯವನ್ನು ಒಂದು ಕ್ರಮಕ್ಕೆ ಒಳಪಡಿಸಿಕೊಂಡ ಬಗೆಗಿನ ವ್ಯಾಪ್ತಿ. ಅವುಗಳನ್ನು ಹೀಗೆ ವಿವರಿಸಬಹುದು.ದೊಕ್ಕಲು ಮಕ್ಕಳು ಕುರಿತಾದ ಪ್ರಸ್ತುತ ಅಧ್ಯಾಯನಕ್ಕಾಗಿ ಕೈಕೊಂಡ ವಿಷಯ ಸಂಗ್ರಹ ಹಾಗು ಸಮೀಕ್ಷಾ ಕಾರ್ಯವು ಕರ್ನಾಟಕದ ಹನ್ನೊಂದು ಜಿಲ್ಲೆಗಳು. ಆ ಹನ್ನೊಂದು ಜಿಲ್ಲೆಗಳು ದೊಕ್ಕಲು ಮಕ್ಕಳು ಕರ್ನಾಟಕದಲ್ಲಿ ನೆಲೆಸಿರುವ ಸ್ಥಿರವಾದ ನೆಲೆಗಳಾಗಿವೆ. ದೊಕ್ಕಲು ಮಕ್ಕಳು ನೆಲೆಸಿರುವ ತಾಣಗಳು ಮಾದಿಗರ ಜನಸಂಖ್ಯೆ ದಟ್ಟವಾಗಿರುವ ಪ್ರದೇಶಗಳೇ ಆಗಿವೆ. ಮಾದಿಗ ಜನಾಂಗವಿಲ್ಲದಲ್ಲಿ ದೊಕ್ಕಲು ಮಕ್ಕಳು ನೆಲೆಸಿಲ್ಲದಿರುವುದೂ ಕಂಡು ಬಂದಿದೆ. ಹೀಗೆ ದೊಕ್ಕಲು ಮಕ್ಕಳಿರುವ , ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲಿನ ಹಟ್ಟಿಗಳಲ್ಲಿ , ಬಿಡಾರಗಳಲ್ಲಿ ಕ್ಷೇತ್ರ ಕಾರ್ಯ ಕೈಕೊಳ್ಳಲಾಗಿದೆ. ಇದಲ್ಲದೆ, ಆಂಧ್ರಪ್ರದೇಶದ ಹೈದ್ರಾಬಾದ್, ಕರ್ನೂಲ್, ವನಪರ್ತಿ ಮುಂತಾದ ಕಡೆಗಳಲ್ಲಿಯೂ ಕ್ಷೇತ್ರ ಕಾರ್ಯ ಕೈಕೊಳ್ಳಲಾಗಿದೆ. ಇನು ವಿಷಯ ಸಂಗ್ರಹಣೆಗಾಗಿ ದೊಕ್ಕಲು ಮಕ್ಕಳ ಇಡೀ ಬದುಕನ್ನು, ಬದುಕಿನ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕ್ರುತಿಕ ಪದರುಗಳನ್ನು ಬಿಚ್ಚಿ ತೋರಿಸಬಲ್ಲ ಸ್ಥಳವಾದ ಪ್ರಶ್ನಾವಳಿಯನ್ನು ಸಿದ್ದಪಡಿಸಿಕ್ಕೊಂಡು ,ಅದಕ್ಕೆ ಸಂಬಂಧಿಸಿದಂತೆ ದೊಕ್ಕಲು ಮಕ್ಕಳ ಹಾಗು ಮಾದಿಗರ ಉತ್ತರ - ಹೇಳಿಕೆಗಳನ್ನು ಕ್ಯಾಸೆಟ್ ಗಳಲ್ಲಿ ತುಂಬಿಕೊಳ್ಳಲಾಗಿದೆ . ಕರ್ನಾಟಕ, ಆಂಧ್ರಪ್ರದೇಶ, ಹಾಗೂ ಮಹಾರಾಷ್ಟ್ರ ಗಡಿಭಾಗದಲ್ಲಿ ನೆಲೆಸಿರುವ ದೊಕ್ಕಲು ಮಕ್ಕಳ ಮಾಹಿತಿಗಳು ಪರಸ್ಪರ ಹೋಲುತ್ತಿರುವುದೊಂದು ವಿಶೇಷವಾಗಿದೆ.
ಹೀಗೆ ವ್ಯಾಪಕವಾಗಿ ಕೈಕ್ಕೊಂಡ ಸಮೀಕ್ಷೆಯಲ್ಲಿ ಸಂಗ್ರಹಿಸಿಕ್ಕೊಂಡ ವಿಷಯಗಳನ್ನು ಒಟ್ಟು ಹನ್ನೆರಡು ಅಧ್ಯಯನಗಳ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ. ಅವುಗಳ ಸಂಕ್ಷೇಪವಾದ ಪರಿಚಯವನ್ನಿಲ್ಲಿ ಕೊಡಬಹುದು.
ಅಧ್ಯಾಯ ಒಂದರಲ್ಲಿ ದೊಕ್ಕಲು ಮಕ್ಕಳ ಅಧ್ಯಾಯನದ ಉದ್ದೇಶ ಮತ್ತು ವ್ಯಾಪ್ತಿಯ ಬಗೆಗೆ ವಿವರವಾಗಿ ಚರ್ಚಿಸಲಾಗಿದೆ. ಈತನಕ ಆಳವಾಗಿ ಇರುವ ಕುರಿತಾಗಿ ಅಧ್ಯಾಯನ ನಡೆದಿರುವುದಿಲ್ಲವೆಂಬ ಅಂಶ ಮನಗೊಂಡು , ಈ ದೆಸೆಯಲ್ಲಿ ಇಂಥದೊಂದು ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ ಕರ್ನಾಟಕ , ಆಂಧ್ರಪ್ರದೇಶ, ಮಹಾರಾಷ್ಟ್ರ ಗಡಿಭಾಗದಲ್ಲಿ ಪೂರ್ಣ ಸಮೀಕ್ಷೆಯನ್ನೂ ಕೈಕ್ಕೊಂಡು, ಈ ಜನಸಮುದಾಯದ ಸ್ವರೂಪವನ್ನೂ ದಾಖಲಿಸಲಾಗಿದೆ . ದೊಕ್ಕಲು ಮಕ್ಕಳನ್ನು ಕುರಿತು ಇದುವರೆಗಿನ ಅಧ್ಯಾಯನ ಕುರಿತಂತೆ ಅಧ್ಯಾಯ ಎರಡರಾಲ್ಲಿ ಚರ್ಚಿಸಲಾಗಿದೆ. ಈ ತನಕ ಜನಸಮುದಾಯದ ಸ್ವರೂಪವನ್ನು ದಾಖಲಿಸಲಾಗಿದೆ.
ದೊಕ್ಕಲು ಮಕ್ಕಳನ್ನು ಕುರಿತು ಅಧ್ಯಯನ ಕುರಿತಂತೆ ಅಧ್ಯಾಯ ಎರಡರಲ್ಲಿ ಚರ್ಚಿಸಲಾಗಿದೆ. ಈ ತನಕ ಈ ಜನಸಮುದಾಯದ ಬಗೆಗೆ ಸಮಗ್ರವಾಗಿ ಹಾಗೂ ಆಳವಾಗಿ ಅಧ್ಯಯನ ನಡೆಸಿರುವುದಿಲ್ಲ. ದೊಕ್ಕಲು ಮಕ್ಕಳನ್ನು ಕುರಿತಂತೆ ಜನಾಂಗಿಕ ಅಧ್ಯಯನ ಹಾಗೂ ಗೆಜೆಟಿಯರ್ಗಳಲ್ಲಿನ ನೇರ ಹಾಗೂ ಪ್ರಾಸಂಗಿಕ ಪರಿಶಿಲನೆ, ದಾಖಲೆಗಳ ವಿವರಗಳನ್ನು ಪರಿಶಿಲಿಸಿದ್ದರೆ.
ಹಾಗೆಯೇ ಡಾ. ಅರವಿಂದ ಮಾಲಗತೀ, ಎಲ್ಲಪ್ಪ ಕೆಕೆಪುರ ಅವರು ಲೇಖಣಾಘಾಳನ್ನು ಉಪಸಂಸ್ಕ್ರುತಿಗಳ ಅಧ್ಯಯನ ಯೋಜನೆಯ ಅಡಿಯಲ್ಲಿ ಪ್ರಕಟಗೊಂಡ ಶ್ರೀ ಚೆಲುವರಾಜ ಅವರು ”ದಕ್ಕಲಿಗರ ಸಂಸ್ಕ್ರುತಿ” ಹೆಸರಿನ ಕೃತಿಯನ್ನು ”ಕರ್ನಾಟಕದ ಹೆಳವರು: ಒಂದು ಜನಪದೀಯ ಅದ್ಯಯನ” ಮಹಾಪ್ರಬಂಧದ ( ಹರಿಲಾಲ್ ಕೆ, ಪವಾರ ) ಒಂದು ಭಾಗವಾಗಿ ಬರುವ ವಿಷಯ ಸಾಮಾಗ್ರಿಯನ್ನು ಇಲ್ಲಿ ಲಕ್ಷಿಸಲ್ಲಾಗಿದೆ. ಅದ್ಯಯ ಮೂರು ’ದೊಕ್ಕಲು ಮಕ್ಕಳ ಮೂಲ’ ಕುರಿತು ಇಲ್ಲಿ ವಿವೇಚಿಸಲಾಗಿದೆ. ಇತರೆ ಜನಸಮುದಾಯದವರಂತೆಯೇ ಇವರೂ ತಮ್ಮ ಮೂಲದ ಬಗೆಗೆ ಉತ್ಟ್ರೇಕ್ಷೆ ಭಾವುಕತೆ ರುಪದ ಸಂಗತಿಗಲನ್ನು ಹೇಳುತ್ತಾರೆ. ತಮ್ಮ ಮೂಲವು , ಋಷಿ ,ದೇವಾಂಶ ಸಂಭೂತವೆಂದು ಹೆಗ್ಗಳಿಕೆ ಉಳ್ಳವರಾಗಿದದ್ದಾರೆ. ಈ ಹಿನ್ನೆಲೆಯಲ್ಲಿ ದೊಕ್ಕಲು ಮಕ್ಕಳ ವಿಷಯವಗಿ ಕೇಳಿ ಬರುವ ೧.ಪೌರಣಿಕ , ೨.ಸಾಮಾಜಿಕ , ೩.ಐತಿಹಾಸಿಕ ಅಂಶಗಳನ್ನು ಸಂಗ್ರಹಿಸಿ ವಿವೇಚಿಸಲಾಗಿದೆ ಮತ್ತು ದೊಕ್ಕಲು ಮಕ್ಕಳು ಮೂಲ ಕುರಿತು ಸಂಭವ್ಯನಿರ್ಣಯಕ್ಕೆ ಬರಲಗಿದೆ. ಅಂತೆಯೇ ಅದ್ಯಾಯ ನಾಲ್ಕರಲ್ಲಿ ದೊಕ್ಕಲು ಮಕ್ಕಳ ಮೂಲ ನೆಲೆಗಳು ಕುರಿತು ವಿವರವಾಗಿ ಅದ್ಯಾಯನ ಮಾಡಲಾಗಿದೆ. ಈಗೀಗ ಇವರು ಒಂದೆಡೆ ಖಾಯಂ ಆಗಿ ನೆಲೆಸಿರುವ ನೆಲೆಗಳನ್ನು, ನೆಲೆಸಿದ ಸ್ತಳಗಳಿಂದ ತಾತ್ಪೂರ್ತಿಕವಾಗಿ ಕೇರಿಗಳ ಮೇಲೆ ಹೋಗಿ ಕೇರಿಯಿಂದ ಮಾರು ದೂರದಲ್ಲಿ ಬಿಡಾರ ಹೂದುವ ಪರಿಯನ್ನು ಪ್ರಸ್ತಾಪಿಸಲಾಗಿದೆಯಲ್ಲದೆ, ಅವರ ವೃತಿ, ಪ್ರವೃತ್, ಆಹಾರ, ವಿಹಾರ, ಪಾನೀಯ ವೇಷಭೂಷಣಗಳನ್ನು ಅವರ ಮೂಲ ನೆಲೆಗಳಲ್ಲಿನ ಕಟ್ಟೆಮನೆಯ ಮಹತ್ವವನ್ನು ಇಲ್ಲಿ ಚರ್ಚಿಸಲಗಿದೆ. ದೊಕ್ಕಲು ಮಕ್ಕಳ ಗೋತ್ರಗಳು ಎಂಬ ಐದನೆಯ ಅಧ್ಯಾಯದಲ್ಲಿ ಇವರಲ್ಲಿನ ಮುಖ್ಯವಾದ ೧೨ ಗೋತ್ರ ಹಾಗೂ ಉಪಗೋತ್ರಗಲನ್ನು ಕುರಿತು ಹೇಳಲಾಗಿದೆ. ಇನ್ನು ಅಧ್ಯಾಯ ಆರರಲ್ಲಿ ದೊಕ್ಕಲು ಮಕ್ಕಳ ಸಂಸ್ಕಾರಗಳು ಕುರಿತು ವಿವೇಚಿಸಲಾಗಿದೆ. ಇಲ್ಲಿ ಇವರ ಜನನ ಮೊದಲ್ಗೊಂಡು ಮರಣದವರೆಗೂ ನಡೆಯಿಸಲಾಗುವ ಸಂಸ್ಕಾರ ವಿವರಗಳನ್ನು ಕೊಡಮಾಡಿದೆ. ಅಧ್ಯಾಯ ಏಳರಲ್ಲಿ ಕರ್ನಾಟಕ, ಆಂದ್ರಗಳ ಕೆಲವು ಪ್ರದೇಶಗಳಲ್ಲಿ ಖಾಯಂ ಆಗಿ ವಾಸಿಸತೊಡಗಿದ ದೊಕ್ಕಲು ಮಕ್ಕಳ ಹಬ್ಬ ಹರಿದಿನಗಳನ್ನು ಕೇರಿ ಹಬ್ಬ ಹಾಗು ಊರ ಹಬ್ಬ ಎಂದು ವಿಂಗಡಿಸಿಕೊಂಡು ಆಯಾ ಹಬ್ಬಗಲ ಆಚರಣೆ ಕುರಿತು ವಿವರವಾಗಿ ಹೇಳಲಾಗಿದೆ.
ಆಧ್ಯಾಯ ಎಂಟರಲ್ಲಿ ದೊಕ್ಕಲು ಮಕ್ಕಳಲ್ಲಿ ವ್ಯಾಪಕವಾಗಿ ಹರದಿಕೊಂಡಿರುವ ನ್ಂಬಿಕೆ ಶಕುನಗಳ ಬಗೆಗೆ ವಿಷಯ ಸಂಗ್ರಹಿಸಿ, ಅವುಗಳನ್ನು ಒಂದು ಕ್ರಮಕೆ ಒಳಪದಿಸಿ ಇಲ್ಲಿ ವಿವರಿಸಲಾಗಿದೆ.
ದೊಕ್ಕಲು ಮಕ್ಕಳ ಕಲೆ ರಂಜನೆ ಇತ್ಯಾದಿ ಕುರಿತು ಅದ್ಯಯ ಒಂಭತ್ತರಲ್ಲಿ ವಿವರಿಸಲಾಗಿದೆ. ಈ ಜನಸಮುದಾಯವು ಉಳಿಸಿಕೊಂದು ಬಂದಿರುವ ಕಿನ್ನುರಿ ನುಡಿಸುವ ನವಿಲು ಕುಣಿಸುವ ಇತ್ಯಾದಿ ಕಲೆಗಳನ್ನು ಕುರಿತು ಇಲ್ಲಿ ವಿವೇಚಿಸಲಾಗಿದೆ. ಇವುಗಳನ್ನು ಮಧ್ಯಮವಾಗಿಟ್ಟುಕೊಂದು ಕತೆ , ಹಾಡು ಇತ್ಯಾದಿಗಳನು ವ್ಯಕ್ತಪದಿಸುವುದುಂಟು. ಅದರಂತೆ ಹಚ್ಚೆ ಸಂಪ್ರದಾಯ ಕಲೆ ಇವರಲ್ಲಿ ಇನ್ನೂ ಜೀವಂತ ಕಲೆಯಗಿ ಉಳಿದುಕೊಂಡು ಬಂದಿರುವುದನ್ನು ವಿವೇಚಿಸಲಾಗಿದೆ.
--Pooja sweets (talk) ೧೩:೫೨, ೩೧ ಜನವರಿ ೨೦೧೪ (UTC)