ನನ್ನ ಹೆಸರು ಪೂಜಾ.ಆರ್. ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ನನ್ನ ಶಾಲಾ ವಿದ್ಯಾಭ್ಯಾಸವನ್ನು ಅರವಿಂದ್ ಶಾಲೆಯಲ್ಲಿ ಮುಗಿಸಿದೆ. ಪದವಿ ಪೂರ್ವ ಶಿಕ್ಷಣವನ್ನು ಶಿರಡಿ ಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ. ನನ್ನ ತಂದೆಯ ಹೆಸರು ಎಂ.ರಾಮಚಂದ್ರ. ನನ್ನ ತಾಯಿಯ ಹೆಸರು. ಸುಮಿತ್ರ. ನನ್ನ ತಾಯಿ ಯೋಗ ಶಿಕ್ಷಕಿ, ಅವರಲ್ಲಿ ಇರುವ ಅನೇಕ ಗುಣಗಳು ನನ್ನ ಜೀವನದ ಪಾಠವಾಗಿರುತ್ತದೆ. ನನಗೆ ಚೈತ್ರ ಎಂಬ ಅಕ್ಕ ಮತ್ತು ಶ್ರೀನಿವಾಸ ಎಂಬ ತಮ್ಮ ಇದ್ದಾರೆ. ನನ್ನ ಯಶಸ್ಸನ್ನು ಬಯಸುವವರು. ನಾನು ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ಶೇಕಡ ೮೫% ಅಂಕಗಳನ್ನು ಗಳಿಸಿರುತ್ತೇನೆ. ಹಾಗಾಗಿ ಕಾಲೇಜು ವತಿಯಿಂದ ಸನ್ಮಾನ ಮತ್ತು ಪುರಸ್ಕಾರವನ್ನು ಮಾಡಿದರು. ನಾನು ಶಾಲಾ ದಿನಗಳಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿ ಸಾರಿಯೂ ಪ್ರಥಮ ಸ್ಥಾನ ಪಡೆದಿರುತ್ತೇನೆ ಹಾಗೂ ಕ್ರೀಡಾ ವಿಭಾಗದಲ್ಲಿ ಹೆಚ್ಚು ಗುರುತಿಸಿಕೊಳ್ಳುವ ವಿದ್ಯಾರ್ಥಿಯಾಗಿದೆ.

ನಾನು ದ್ವಿತೀಯ ಪಿಯುಸಿ ಮುಗಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಕ್ರ್ಸೈಸ್ಟ್ ವಿಶ್ವ ವಿದ್ಯಾಲಯಕ್ಕೆ ನನ್ನ ತಂದೆ-ತಾಯಿಗಳ ಕೋರಿಕೆ ಮೇರೆಗೆ ಬಿ.ಕಾಂ ಪ್ರವೇಶ ಪಡೆದಿರುತ್ತೇನೆ. ನಾನು ಮಿಟೇಜ್ ಕಾರ್ಯಕ್ರಮದಲ್ಲಿ ಮಡಿಕೆ ಕಲಾಕೃತಿಯಲ್ಲಿ ಭಾಗವಹಿಸಿ ಪ್ರಶಂಸೆ ಅರ್ಹನಾಗಿರುತ್ತೇನೆ. ತಾವು ನೀಡಿರುವ ಕನ್ನಡ ಸಿ.ಐ.ಎ ಪ್ರಾಯೋಗಿಕ ಕಾರ್ಯಯೋಜನೆ ನನಗೆ ತುಂಬಾ ಉಪಯೋಗವಾಗಿದೆ ಜೊತೆಗೆ ಕನ್ನಡ ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಸಹಾವಾಯಿತು. ಬಿಡುವ ಸಮಯದಲ್ಲಿ ಮನೆಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತೇನೆ ಮತ್ತು ಸ್ನೇಹಿತರ ಜೊತೆ ವಿಷಯಗಳ ವಿರ್ಮಶೆಯನ್ನು ಹಂಚಿಕೊಳ್ಳುತ್ತೇನೆ. ನನಗೆ ಆಟ, ಚಿತ್ರಕಲೆ, ಪತ್ರಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತೇನೆ. ನಾನು ಮುಂದಿನ ವಿದ್ಯಾಭ್ಯಾಸವನ್ನು ಪಡೆದ ನಂತರ ಯಾವುದಾದರೂ ಎಂ.ಎನ್.ಸಿ ಕಂಪನಿಯಲ್ಲಿ ಕೆಲಸ ಮಾಡಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿ ಸಹಾಯ ಮಾಡಬೇಕೆಂದುಕೊಂಡಿರುತ್ತೇನೆ, ಆದರೆ ನನ್ನ ತಂದೆಗೆ ಬ್ಯಾಂಕಿನಲ್ಲಿ ಕೆಲಸ ಮಾಡಬೇಕೆಂಬ ಆಸೆ.

ನಾನು ಡಾಟ್.ನೇಟ್ ಕೋರ್ಸ್ ಮುಗಿಸಿದ್ದು, ಈಗ ಚೈನ್ನಿಸ್ ಭಾಷೆ ಕಲಿಯಲು ಸರ್ಟಿಫೀಕೇಟ್ ಕೋರ್ಸ್ ಕಲಿಯುತ್ತಿದ್ದೇನೆ.

ಸ್ನೇಹ, ಸಹನೆ, ತ್ಯಾಗ, ಸಹಬಾಳ್ವೆ, ಸಂಯಮವಿದ್ದರೆ ಸಾಧನೆ ಕಟ್ಟಿಟ ಬುತ್ತಿ.