ಸದಸ್ಯ:Pooja Thodikana/ನನ್ನ ಪ್ರಯೋಗಪುಟ2

ಜಾನಪದ ಸಾಹಿತ್ಯ

 ಹಳ್ಳಿಯ ಜನರು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ವ್ಯಕ್ತಗೊಳಿಸಲು ಸುಂದರವಾದ ಮಾತುಗಳನ್ನು ಮತ್ತು ಗೀತೆಗಳನ್ನು ಬಳಸುತ್ತಿದ್ದರು. ಅವು ಜನರ ಬಾಯಿಂದ ಬಾಯಿಗೆ ನಿರಂತರವಾಗಿ ಹರಿಯುತ್ತಾ ಬಂದವು. ಅವು ಒಬ್ಬ ವ್ಯಕ್ತಿಯ ಕೃತಿಯಾಗದೆ ಸಮಷ್ಟಿಯ ಪ್ರತಿನಿಧಿಗಳಾದವು. ಇದನ್ನೇ 'ಜನಪದ ಸಾಹಿತ್ಯ' ಎನ್ನುತ್ತಾರೆ. ಆದಿಮಾನವ ತನ್ನ ಭಾವನೆಗಳನ್ನು ಹೇಳಲು ನಾದರೂಪದ ಗೀತೆಗಳನ್ನು ಬಳಸಿಕೊಳ್ಳುತ್ತಿದ್ದನು. ಇದೇ ಜನಪದ ಸಾಹಿತ್ಯದ ಮೂಲ ರೂಪ. 
  ಸಾಮಾನ್ಯ ಜನರಿಂದ ರಚಿಸಲಾದ ಸಾಹಿತ್ಯವೇ ಜನಪದ ಸಾಹಿತ್ಯ. ಜನರಲ್ಲಿ ಪ್ರಚಲಿತವಿರುವ ಕಥೆಗಳು, ಕಲ್ಪನೆಗಳು, ಪರಂಪರೆಗಳು, ಹಾಡುಗಳು ಇವೆಲ್ಲ ಜನಪದ ಸಾಹಿತ್ಯದಲ್ಲಿ ಸೇರಿರುವ ಸಂಗತಿಗಳು.

ಜಾನಪದ ಸಾಹಿತ್ಯದ ಪ್ರಕಾರಗಳು

ಬದಲಾಯಿಸಿ
  1. ಪಡೆನುಡಿಗಳು

ಜಾನಪದ ಸಾಹಿತ್ಯದಲ್ಲಿ ಸಾಮಾನ್ಯ ಜನರ ಜೀವನದ ಅನುಭವಗಳನ್ನು ಕಾಣಬಹುದು. ಇದು ಪದ್ಯದಲ್ಲಿಯೂ ಇರಬಹುದು ಅಥವಾ ಗದ್ಯದಲ್ಲಿಯೂ ಇರಬಹುದು.ಪಡೆನುಡಿಗಳ ಸೊಬಗು ಸುಂದರವಾದುದು.ಉದಾಹರಣೆಗೆ - 'ಬರಕ್ಕೆ ಬುತ್ತಿ ಕಟ್ಟಿದಂಗ'; 'ದಾನಾ ಕೊಟ್ಟ ಎತ್ತಿನ ಹಲ್ಲು ಎಣಿಸಿದಂತೆ'; 'ಬಂದ ದಾರಿಗೆ ಸುಂಕ ಇಲ್ಲ'; ಇತ್ಯಾದಿ

  1. ಗಾದೆಗಳು

ಗಾದೆಯ ಮಾತುಗಳು ಹಳ್ಳಿಗರ ಶಾಸ್ತ್ರಗಳಾಗಿವೆ. ಕನ್ನಡ ಭಾಷೆಯಲ್ಲಿ ಅನೇಕ ಗಾದೆಮಾತುಗಳಿವೆ. ರೇ.ಕಿಟಲ್ ಅವರು ಕೆಲ ಗಾದೆಗಳನ್ನು ಸಂಗ್ರಹಿಸಿ ಬೆಳಕಿಗೆ ತಂದವರಲ್ಲಿ ಒಬ್ಬರು. ಈ ಗಾದೆಗಳು ಜನ ಸಾಮಾನ್ಯರ ಲೋಕಾನುಭವ, ವಿನೋದ, ವಿಡಂಬನೆ, ವ್ಯಂಗ್ಯ ಮತ್ತು ಚಾತುರ್ಯವನ್ನು ತೋರಿಸುತ್ತವೆ. ನಿತ್ಯ ಜೀವನದಲ್ಲಿ ಬಳಸುವ ಕೆಲ ಉದಾಹರಣೆಗಳು - 'ರೋಣಿ ಮಳಿ ಬಿದ್ದರೆ ಓಣಿ ತುಂಬಾ ಜ್ವಾಳಾ' 'ಊರು ಸುಟ್ಟರೂ ಹನುಮಪ್ಪ ಹೊರಗೆ' 'ಅಡಿಕಿಗಿ ಹೋದ ಮಾನಾ ಆನೀ ಕೊಟ್ಟರೂ ಬರಾಕಿಲ್ಲ' ಇತ್ಯಾದಿ.

  1. ಒಗಟುಗಳು

ಒಗಟುಗಳೆಂದರೆ ಸಾಮಾನ್ಯವಾಗಿ ಸಾಂಕೇತಿಕವಾಗಿ, ಪರ್ಯಾಯ ಅರ್ಥ ಉಂಟಾಗುವಂತೆ ಬಣ್ಣಿಸಿ ಹೇಳುವ ಗದ್ಯ ರಚನೆಗಳು. ಒಗಟುಗಳನ್ನು ಒಡಪುಗಳೆಂದೂ ಕರೆಯುತ್ತಾರೆ. ಇವು ಆಕರ್ಷಕ ಮತ್ತು ವಿನೋದ ಪೂರ್ಣವಾಗಿರುತ್ತವೆ. ಉದಾಹರಣೆಗೆ - 'ಗಿಡ್ಡ ಪೋರ ಗೆಜ್ಜೀ ಕಟ್ಯಾನ'(ಉತ್ತರ : ಕಡಲೇಗಿಡ)

  1. ಜನಪದ ಕಥಾ ಸಾಹಿತ್ಯ

ಜಾನಪದ ಸಾಹಿತ್ಯದಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ಕಥೆಗಳು ಸಾಕಷ್ಟಿವೆ.