thumb

ಜನನ ಮತ್ತು ಜೀವನ ಶೈಲಿ ಬದಲಾಯಿಸಿ

ಅಜ್ಮೇರ್ ಸಿಂಗ್:

ಪಂಜಾಬಿನ ಸಂಗ್ರೂರ್ ಜಿಲ್ಲೆಯ ಕುಪ್ ಕಲಾನ್ ಗ್ರಾಮದಲ್ಲಿ ಕಾರ್ತಾರ್ ಸಿಂಗ್ ಔಲಾಖ್ ಮತ್ತು ಬಚ್ಚನ್ ಕೌರ್ ಔಲಾಖಿನ ಜಾಟ್ ಸಿಖ್ ರೈತರ ಕುಟುಂಬದಲ್ಲಿ ಅವರು ಜನಿಸಿದರು.

ಅಜ್ಮೀರ್ ಅವರು ಓಟಗಾರನಾಗಿ ಭಾರತ ತಂಡದ ಪರ ಭಾಗವಹಿಸಿದರು.

ಅವರು ಫ಼ೆಬ್ರವರಿ ೧ ೧೯೪೦ರಲ್ಲಿ ಜನಿಸಿದರು.

ಅವರು ಬಹಳ ವಿನಮ್ರ ಆರಂಭದಿಂದ ಬಂದ ಸ್ವಯಂ ನಿರ್ಮಿತ ವ್ಯಕ್ತಿಯಾಗಿದ್ದರು. thumb ಒಬ್ಬ ಸಮರ್ಥ ನಿರ್ವಾಹಕರು, ಒಬ್ಬ ಮಹಾನ್ ತರಬೇತುದಾರ ಮತ್ತು ಶಿಕ್ಷಕ, ಭಾವೋದ್ರಿಕ್ತ ಮಾರ್ಗದರ್ಶಿ, ಕಟ್ಟುನಿಟ್ಟಾದ ಶಿಸ್ತುಪಾಲನಾಧಿಕಾರಿಯಗಿದ್ದರು.

ಶಿಕ್ಷಣ ಬದಲಾಯಿಸಿ

thumb ಅವರು ಶಾಲೆಗೆ , ಪಕ್ಕದ ಊರದಾ ರೊಹಿರಗೆ ಹೊಗ ಬೆಕಾಗಿತ್ತು, ಅವರು ಬರಿಗಾಲಿನಲ್ಲಿ ೨ ಮೈಲು ನೆಡೆದು, ದಿನ ನಿತ್ಯ ಓಡಾಡುತ್ತಿದ್ದರು.

ಅವರು ಶಾಲೆಯಿಂದ ಬಂದು ಮನೆ ಕೆಲಸಗಳಲ್ಲಿ ಸಹಯ ಮಾಡಿ, ರಾತ್ರಿಯಲ್ಲಿ ವಿದ್ಯುತ್ತಿಲ್ಲದ ಕಾರಣ ಅವರು ದೀಪದ ಬಲಿ ಕೂತು ಓದುತ್ತಿದ್ದರು.

೧೯೬೪ರಿನ ಬೇಸಿಗೆ ಒಲಿಂಪಿಕ್ಸಿನಲ್ಲಿ ಸ್ಪರ್ಧಿಸಿದ ಭಾರತೀಯ ಓಟಗಾರರಾಗಿದ್ದರು.

ಅವರು ಮಾಲೆರ್ಕೋಟ್ಲಾ ಸರ್ಕಾರಿ ಕಾಲೇಜಿನಿಂದ ಪದವಿಯನ್ನು ಪಡೆದರು ಮತ್ತು ನಂತರ ಗ್ವಾಲಿಯರ್ನ ಲಕ್ಷ್ಮಿಬಾಯಿ ರಾಷ್ಟ್ರೀಯ ಕಾಲೇಜಿನ ಶಾರೀರಿಕ ಶಿಕ್ಷಣದ (ಬ್ಯಾಚುಲರ್ ಆಫ್ ಫಿಸಿಕಲ್ ಎಜ್ಯುಕೇಷನ್ ಪದವಿಯನ್ನು ಪಡೆದರು.

ಭೌತಿಕ ಶಿಕ್ಷಣದಲ್ಲಿ ಪಿ ಹೆಚ್ ಡಿ ಪದವಿ ಹೊಂದಿರುವ ಏಕೈಕ ಭಾರತೀಯ ವ್ಯಕ್ತಿ ಅಜ್ಮೇರ್ ಸಿಂಗ್. ಅವರಿಗೆ ಸರ್ಕಾರದಿಂದ ಅರ್ಜುನ ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ.

ಹುದ್ದೆಗಳು ಮತ್ತು ಭಾಗವಹಿಸಿದ ಸ್ಪರ್ಧೆಗಳು ಬದಲಾಯಿಸಿ

ಅವರು ಲಕ್ಷ್ಮಿಬಾಯಿ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್ನ ಉಪಕುಲಪತಿಯಾಗಿಯೂ ಇದ್ದರು

ಅವರು ೧೯೬೪ ರ ಟೋಕಿಯೋ ಒಲಿಂಪಿಕ್ಸಿನಲ್ಲಿ ಭಾಗವಹಿಸಿದ್ದರು ಎರಡು ವರ್ಷಗಳ ನಂತರ ಬ್ಯಾಂಕಾಂಕಿನಲ್ಲಿ ನಡೆದ ೧೯೬೬ ರ ಏಷ್ಯನ್ ಕ್ರೀಡಾಕೂಟದಲ್ಲಿ ಅವರು ೪೦೦ ಮೀಟರುಗಳಲ್ಲಿ ಚಿನ್ನವನ್ನು ಮತ್ತು ೨೦೦ ಮೀಟರುಗಳಲ್ಲಿ ಬೆಳ್ಳಿಯನ್ನು ಗೆದ್ದಿದ್ದರು.

ಅವರು ಚಂಡೀಘಡದಲ್ಲಿ ೨೬ ಜನವರಿ ೨೦೧೦ ರ ಬೆಳಗ್ಗೆ ೭೦ರ ಹರೆಯದಲ್ಲಿ ಮೃತಪಟ್ಟರು ಮತ್ತು ಅವರ ಹೆಂಡತಿ, ಇಬ್ಬರು ಪುತ್ರರು ಮತ್ತು ಮೊಮ್ಮಕ್ಕಳನ್ನು ಬಿಟ್ಟು ಅಗಲಿದರು.

ಉಲ್ಲೆಖಗಳು ಬದಲಾಯಿಸಿ

https://www.sports-reference.com/olympics/athletes/si/ajmer-singh-2.html

http://2.bp.blogspot.com/_oQyz1sQbo-o/S2AgRGg_R6I/AAAAAAAAFi4/2vFPOO1Dm6U/s1600-h/scan0011.jpg

http://sportswire4u.blogspot.com/2010/01/by-sportswire4u.html?view=mosaic