ಕೃಷಿ ವಾಣೆಜ್ಯಿಕರಣ


೬)ಸೆಣಬು ಬೆಳೆಯ ವಾಣಿಜ್ಯೀಕರಣ

ಯೂರೊಪಿನಲಿ ಕೈಗಾರಿಕೀಕರಣದಿ೦ದಾಗಿ ಸಿದ್ದ ವಸ್ತುಗಳನ್ನು ಪ್ಯಕ್ ಮಾಡಲು ಸೆನಬಿನ ಚೀಲಗಳಿಗೆ ಬೇಡಿಕೆ ಹೆಚ್ಚಿತು. ಭಾರತೀತಯ ರಿ೦ದ ಕ೦ಡುಕೊ೦ಡ ಇದರ ಬಳಕೆ ೧೭೯೧ರಲ್ಲಿ  ಲ೦ಡನ್ನಿನಲ್ಲಿ ಆರ೦ಭವಾಯಿತು.ಕ್ರಮೆಣ ಚೀನಾ,ಸಿಂಗಪೊರ ,ಅಮೆರಿಕಗಳಲ್ಲು ಅದರ ಬಳಕೆ ಹೆಚ್ಚಿತು. ಇಂಗ್ಲೆಂಡಿನ ಡಂಡೀ ಎಂಬಲ್ಲಿ ಮೊಟ್ಟ ಮೊದಲ ಸೆಣಬು ಕಾಖಾ೯ನೆಯನ್ನು ೧೮೩೮ರಲ್ಲಿ ಆರಂಭಿಸಲಾಯಿತು. ಅಲ್ಲಿವರೆಗೂ ಕೈಮಗ್ಗದಲಿ ತಯಾರಾದ ಗೋಣಿ ಚೀಲಗಳನ್ನು ಬಳಸಲಾಗುತ್ತಿದ್ದಿತು.ಅನಂತರ ಸೆಣಬಿನ ಭೆಡಿಕೆ ಹೆಚದಂತೆ ಭತ್ತ ಬೆಳೆಯುವ ಭೂಮಿಗಳಲ್ಲಿ ಕೂಡ ಸೆಣಬು ಬೆಲೆಯಲು ಆರಂಭಿಸಲಾಯಿತು. ಇದರಿಂದ ೧೮೬೯ರ ದಶಕದಲ್ಲಿ ಸೆಣಬಿನ ಉತ್ಪಾದನೆ ದ್ವಿಗುಣಗಿಂಡಿತು.೧೮೯೦ರ ವೇಳೆಗೆ ಸುಮಾರು ೫ ಕೋಟಿ ರೂಪಾಯಿಗಳ ಸೆಣ್ಬನ್ನು ಉತ್ವಾದಿಸಲಾಯಿತು.ಕ್ರಮೆಣ ಇದರ ರಫ್ತು ದಕ್ಷಿಣ ಅಮೆರಿಕ, ಜಮ೯ನಿ ದೆಶಗಳಿಗೂ ಕೂಡ ವಿಸ್ತರಿಸಿತು.
    
  == ಕೃಷಿ ವಾಣಿಜ್ಯೀಕರಣದಿಂದುಂಟಾದ ಪರಿಣಾಮಗಳು ==

೧) ಕೃಷಿಯನ್ನು ವಾಣೆಜ್ಯಿಕರಣಗೊಳಿಸಲಾಗಿ ಅವುಗಳನ್ನು ಇಂಗ್ಲಿಂಡಿಗೆ ಹಡಗಿನ ಮೂಲಕ ಸಾಗಿಸಲು ರಸ್ತೆ ,ರೈಲ್ವೆಗಳನ್ನು ಅಬಿವೃದ್ಧಿ ಪಡಿಸಬೇಕಾಯಿತು. ಈ ದಿಸೆಯಲ್ಲಿ ೧೮೬೯ರ ವೇಳೆಗೆ ಸುಮಾರು ೫೦೦೦ ಮೈಲುಗಳಷ್ಟು ರೈಲು ಮಾಗ೯ ನಿಮಾ೯ಣ ಮಾಡಿ ಅದರ ಬದಿಯಲ್ಲಿ ಬರುವ ಹಳ್ಳಿಗಳನ್ನು ಸಂಪಕಿ೯ಸಲಾಯಿತು. ಹಾಗಾಗಿ ದಕ್ಷಿಣ ಭಾರತದಲ್ಲಿ ಹತ್ತಿಯನ್ನು ಹೆಚ್ಚು ಬೆಳೆಯಲು ಒತ್ತಾಯ ಹೇರಲಾಯಿತು .ಹತ್ತಿ ಬೆಳೆಗಾರರಿಗೆ ಸಾಲ ಸೌಲಭ್ಯಗಳನ್ನು ಬ್ಯ್ಂಕ್ ಮ್ಮುಲಕವಲ್ಲದೆ ಸ್ದಳೀಯ ಲೇವಾದೇವಿಗಾರರು ಹಾಗು ಗ್ರಾಮೀಣ ಸಾಹಕಾರರು ,ಷರಾಫರು ,ಮಹಾಜನರು ನೀಡುವಂತೆ ಪ್ರೋತ್ಸ್ ಹಿಸಲಾಯಿತು.ಇದರಿಂದಾಗಿ ಆಹಾರ ಧಾನ್ಯಗಳನ್ನು ಬೆಳೆಯುವ ಬದಲು ಹತ್ತಿಯನ್ನು ಬೆಳೆಯಲಾರಂಭಿಸಿದರು.ಮೇಲಾಗಿ ದಕ್ಷಿಣ ಭಾರತದ ಬಹುಭಾಗ ಕಪ್ಪು ಮಣ್ಣಿನಿಂದ ಕೂಡಿದ್ದು ಹತ್ತಿ ಬೆಳೆಗೆ ಉತ್ಕ್ರುಷ್ಟವಾಗಿದ್ದಿತು .ಅಲ್ಲದೆ ಇದಕ್ಕೆ ಹೆಚ್ಚಿನ ಮಳೆಯ ಅವಶ್ಯಕತೆಯೂ ಇರಲಿಲ್ಲ ,ಇದರಿಂದ ರೈತರು ಲೇವಾದೇವಿ ಗಾರರು ಹೆಚ್ಚು ಹಣಗಳಿಸುವಂತಾಯಿತು.

೨) ಬ್ರಿಟಿಷರ ಆಜ್ಜೆಪಾಲಿಸದವರು , ಬಂಧನ ಸೆರಮನೆವಾಸ ,ಛಡಿಏಟು, ದನಕರುಗಳ ಹರಾಜು,ಹುಲ್ಲು ಬಣವೆಗಳಿಗೆ ಬೆಂಕಿ ಸ್ಪಷ೯,ಮನೆ ಜಫಿ ಹಾಗೂ ಅದರ ನಾಶ, ರೈತರ ಹೆಂಡತಿ ಮಕ್ಕಳಿಗೆ ಹಿಂಸೆ ಇತ್ಯಾದಿ ಶಿಕ್ಷೆಗಳನ್ನೂ ಅನುಭವಿಸಬೇಕಾಯಿತು.ಇಂಥ ಕೃತ್ಯಗಳನ್ನು ಎಸಗಲು ಜಾಡಿಗೆ ಗೂಂಡಾಗಳನ್ನು ನೇಮಿಸಿಕೂಳ್ಳಲಾಗಿದ್ದಿತು.ಇವರನ್ನು ಲಾಟಿಯಾಲರೆಂದು ಕರೆಯಲಾಗುತ್ತಿದ್ದಿತು.ಏಕೆಂದರೆ ಅವರು ಲಾಟಿಧಾರಿಗಳಾಗಿಯೇ ಹಸ್ತು ಹೂಡೆಯುತ್ತಿದ್ದರು. ಇವೆಲ್ಲಾ ಕಾರಣಗಳಿಂದಾಗಿ ಆಹಾರ ಧಾನ್ಯಗಳ ಉತಾದನೆ ಮೊದಲಿಗಿಂತ ಶೇ .೨೫ಕ್ಕೆ ಇಳಿದರೆ ವಾಣಿಜ್ಯ ಬೆಳೆಗಳ ಉತ್ವಾದನೆ ಮೊದಲಿಗಿಂತ ಶೇ ೭೫ರಷ್ಟು ಹೆಚ್ಚಿತು.ಇದನ್ನು ಕಲೊನಿಯಲ್ ಎಕಾನಮಿ ಅಥವ ವಸಾಹತು ಆಥಿ೯ಕ ವಾಣಿಜ್ಯೇಕರಣ ಎಂದು ಕರೆಯಲಾಗಿದೆ.

೩) ವಾಣಿಜ್ಯ ಬೆಳೆಗಳನ್ನು ಪ್ರೊತ್ಸಾಹಿಸಲು ಬ್ರಿಟಿಷರು ವಿದೇಶಿ ಬಂಡವಾಳವನ್ನು ಭಾರತಕ್ಕೆ ಹರಿಸಿದರು. ಅದು ವಶೇಷವಗಿ ಅವರಿಗೆ ಬೇಕಾಗಿದ್ದ ಕಚ್ಛಾ ವಸ್ತುಗಳು ದೊರೆಯುವ ಸ್ಥಳಗಳಿಂದ ಅವುಗಳನ್ನು ಬಂದರಗಳಿಗೆ ಸುಗಮವಾಗಿ ಸಾಗಿಸಬೇಕಿದ್ದ ಕಡೆಗಲಲ್ಲಿ ರಸ್ತ ಮತ್ತು ರೈಲ್ವೆ ಸಾರಿಗೆ,ಸಂಪಕ೯,ನೀರಾವರಿ ಒದಗಿಸುವಲ್ಲಿ ವಿನಿಯೇಗವಾಯಿತು.ಅದು ಸಾರಿಗೆ ಸಂಪಕ೯ದಲ್ಲಿ ಕ್ರಾಂತಿಗೆ ದಾರಿ ಮಾಡಿತು.

೪) ಮಾರುಕಟ್ಟೆಗಳ ಸೌಲಭ್ಯ ಕಲ್ಫದಲು ಕ್ರಮಕೈಗೊಳ್ಳಲಾಯಿತು.ಹಾಗಾಗಿ ರೈತರು ತಮ್ಮ ಬೆಳೆಗಳನ್ನು ಬಿಕರಿ ಮಾಡುವುದು ಸುಲಭ ಸಾಧ್ಯವಾಯಿತಾದರೂ ಆವಸ್ತುಗಳ ಬೆಲೆ ನಿಷ್ಕಷ೯ ಮಾಡುವ ಅಧಿಕಾರ ರೈತರಿಗಿರಲಿಲ್ಲ. ಬ್ರಿಟಿಷರು ನಿಧ೯ತಿಸಿದ ಮೌಲ್ಯಕ್ಕೆ ಮಾರಾಟ ಮಾಡಬೇಕಿದ್ದಿತು.

೫) ಭಾರತ,ಬ್ರಿಟಿಷ್ ಪರಮಾಧಿಪತ್ಯದ ಒಂದು ಭಾಗವಾಗಿದ್ದು ವಾಹತು ನೀತಿಗೆ ಬದ್ದವಾಗಿ ತಾಯ್ನಾಡಿನ ಬೇಕು ಬೇಡಗಳನ್ನು ಪೂರೈಸುವ ಸಾಧನ ಮಾತ್ರವಾಗಿದ್ದಿತು.ಹಾಗಾಗಿಅವರು ನಿದೆ೯ಶಿಸಿದ ಬೆಳೆಗಳನ್ನು ಮಾತ್ರ ಬೆಳೆಯಬೇಕಿದ್ದಿತು.

೬) ಕೃಷಿಯಲ್ಲಿ ಸುಧಾರಿತ ಬೇಸಾಯ ಪರಿಚಯಿಸಲಾಯಿತು.ಹಾಗಾಗಿ ಉತ್ಫಾದನೆಯಲ್ಲಿ ಏರಿಕೆ ಕಂಡುಬಂದಿತು.ಪರಿಣಾಮವಾಗಿ ಜಮೀನ್ದಾರರು ಕೂಡ ಉಳಿಕೆ ಭೂಮಿಗಳಲ್ಲಿ ಕೃಷಿ ವಾಣಿಜ್ಯೀಕರಣವನ್ನು ಬೆಂಬಲಿಸಿ ಅಧಿಕ ಲಾಭ ಗಳಿಸಲಾರಂಭಿಸಿದರು.ವಿರೊಧಿಸಿದ ರೈತರನ್ನು ಜಮೀನುಗಳಿಂದ ಹೊರ ಹಾಕಲಾಯಿತು.

೭) ಹಣ ಮರಪಾವತಿ ಸುಲಭಸಾದ್ಯವಿದ್ದರಿಂದ ನಗದು ಬೆಳೆ ನಷ್ತಕ್ಕೆ ಸಾಲ ನೀಡಲು ಲೇವಾದೇವಿಗಾರರು ಕೂಡ ಮುಂದೆ ಬಂದರು.ಕಂದಾಯವನ್ನು ನಗದು ರೂಪದಲ್ಲಿ ಕೊಡಬೇಕಿದ್ದರಿಂದ ರೈತರಿಗೂ ನಗದಿನ ಅವಶ್ಯ್ ಒದಗಿ ಬಂದಿತು. ಇದು ಕೂಡ ಕೃಷಿ ವಾಣಿಜ್ಯೇಕರಣಗೊಳಿಸುವಲ್ಲಿ ಪ್ರಮುಖ ಅಂಶವಾಗಿ ಪರಿಣಮಿಸಿತು.

೮) ಒಟ್ಟಿನಲ್ಲಿ ವಾಣಿಜ್ಯ ಬೆಕೆಗಳ ಕಡೆ ಹೆಚ್ಚು ಗಮನ ಹರಿಸಲಾಗಿ ಆಹಾರ ಧಾನ್ಯಗಳ ಉತ್ಪಾದನೆ ಕುಸಿಯಿತು. ಆಹಾರ ಧಾನ್ಯಗಳ ಅಭಾವ ತಲೆದೋರಿತು.ಕಾಳಸಂತೆಕೋರರ ಹಾವಳಿ ವಿಪರೀತವಾಗಿ ಕ್ಷಾಮದಿಂದ ಬಡವರ ಬದುಕು ದುರ್ಬರವಾಯಿತು.


ಪಾಟ್ನಾ ಪರಗಣದ ಮುಸ್ಲಿಂ ರೈತರ ದಂಗೆ - ಬಂಗಾಳ -- ೧೮೭೩

ಬದಲಾಯಿಸಿ
ಬಂಗಾಳ ಪ್ರಾಂತದ ಪಾಬ್ನಾಪಗ೯ಣದ ರೈತರು ೧೮೭೩ರಲ್ಲಿ ಹಿಂದೂ ಲೇವಾದೇವಿ ಗಾರರ ಶೊಷಣೆಯ ವರುದ್ದ ಎದ್ದರು. ಆಗ ಶೊಷೀತ ರೈತರು ಡ್ರಮ್ಮು,ನಗಾರಿ ಸಹಿತ ಎಮ್ಮೆ ಕೊಂಬಿನ ಕಹಳೆಯೂದುತ್ತ ರಾತ್ರಿ ವೇಳೆ ಪಂಜಿನ ಮೆರವಣಿಹೆ ಹೊರಟು ಹಳ್ಳಿ ಹಳ್ಳಿಗಳಲ್ಲಿ ಕ್ರಾಂತಿಯ ಕಹಳೆ ಉದಿದರು. ಇದರ ಪ್ರಭಾವದಲ್ಲಿ ಡಾಕಾ,ತ್ರಿಪುರ, ಬೋಗುರ, ಫರೀದ್ಪುರ,ರಾಜ್ ಶಾಹಿ ಜಿಲ್ಲೆಗಳಲ್ಲು ರೈತರ ಚಳುವಳಿ ತಲೆ ಎತ್ತಿತು.ಅವರ ಬೇಡಿಕೆಗಳು --

೧) ಅನ್ಯಾಯದ ಶುಲ್ಕಗಳ ರದ್ಧತಿ ೨) ಭೂಗಂದಾಯದಲ್ಲಿ ನ್ಯಾಯಬದ್ಧ ಇಖಿಕೆ ೩) ಸ್ಥಳೀಯ ಹಿಂದೂ ಜಮೀನ್ದಾರರ ಶೋಷಣೆಗಿನ್ನ ಬ್ರಿಟಿಷರ ಆಳ್ವಿಕೆಯೇ ಅವರಿಗೆ ಮೇಲೆನಿಸಿತ್ತು.ಏಕೆಂದರೆಅಂದಿನ ಬಂಗಾಳದ ಲೆಫ್ಟಿನೆಂಟ್ ಗವನ೯ರ್ ಕ್ಯಾಂಪ್ ಬೆಲ್ ರೈತರ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದನು. ೪) ಬಂಗಾಳದ ಜಮೀನ್ದಾರರು ಬ್ರಿಟಿಷ್ ಇಂಡಿಯನ್ ಅಸೋಸಿಯೇಷನ್ ರಚಿಸಿಕೊಂಡು ರೈತರ ಚ್ಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಅವರ ನಾಯಕರು. ಈಶ್ವರ್ ಚಂದ್ರರಾಯ್ ,ಶಂಬೂಪಾಲ್, ದ್ವಿಜೇಂದ್ರನಾಥ ಟ್ಯಾಗೂರ್, ಮುಸ್ಲಿಮ್ ಜಮೀನ್ದಾರ್ ಖುದಿಮುಲ್ಲಾ ಮೊದಲಾದವರು.ಇವರು ರೈತರ ಅನ್ಯಾಯದ ಬೇಡಿಕೆಗಳ ಚಳುವಳಿಯನ್ನು ಹತ್ತಿಕ್ಕಲು ಸರಕಾರದ ಮೇಲೆ ಒತ್ತಾಯ ತಂದರು.

ಇವರ ಪರಿಣಾಮವಾಗಿ ೧೮೮೫ರಲ್ಲಿ ಟೆನ್ ನ್ಸಿ ಆಕ್ಟ್ ಜಾರಿಗೊಳಿಸಲಾಯಿತು.ಇದರಿಂದ ಭೂಮಾಲಿಕರಿಗೆ ಹಕ್ಕು ಪತ್ರಗಳು ದೊರೆತು ಗುತ್ತಿಗೆದಾರರು ಮತ್ತು ಕೊಲಿಗಾರರಿಗೆ ಭೂ ಒಡೆತನದ ಹಕ್ಕಿಲ್ಲವೆಂದು ನಿಧ೯ರಿಸಲಾಯಿತು. ಇದರಿಂದ ರ್ಯ್ತರು ಜಮೀನ್ದಾರರ ಶೋಷಣಿಯಿಂದ ಮುಕ್ತರಾಗಲೇ ಇಲ್ಲ.