ಸದಸ್ಯ:Patrick antony1/sandbox
ನನ್ನ ಹೆಸರು ಪ್ಯಾಟ್ರಿಕ್ ಆಂಟೊನಿ ತಾವ್ರೊ. ಮಂಗಳೂರಿನ ವೆಲೆನ್ಸಿಯಾ ನಿವಾಸಿ, ಸ್ಟ್ಯಾನಿ ತಾವ್ರೊ ಮತ್ತು ಸಿಲ್ವಿಯಾ ತಾವ್ರೊ ನನ್ನ ತಂದೆ ತಾಯಿ. ನಗರ ಪ್ರದೇಶವಾದ ಮಂಗಳೂರಿನಲ್ಲಿ ಹುಟ್ಟಿ ಬೆಳೆದ ನನ್ನದು ವಿಲಾಸಿ ಜೀವನವೆಂದೇ ಹೇಳಬಹುದು. ಇದ್ದುದರಲ್ಲಿ ಹೆಚ್ಚು ಸುಖಪಡಲು ಬಯಸುವ ನಾನು, ನನ್ನಿಷ್ಟದ ಕೆಲಸಗಳನ್ನು ಮಾಡಲು ಹಿಂಜರಿಯುವುದಿಲ್ಲ. ನನ್ನ ಪ್ರಾಥಮಿಕ ಶಿಕ್ಷಣವನ್ನು ನಗರದ ಖಾಸಗಿ ಕಾಲೇಜೊಂದರಲ್ಲಿ ಮುಗಿಸಿದ ನಾನು, ಹೈಸ್ಕೂಲ್ ಶಿಕ್ಚಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದೆ. ಹಾಕಿ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ. ಸದ್ಯ ಮಂಗಳೂರಿನ ಅಲೋಶಿಯಸ್ ಕಾಲೇಜಿಲ್ಲಿ ಪದವಿ ಶಿಕ್ಷಣ ಗಳಿಸುತ್ತಿದ್ದು, ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿದ್ದೇನೆ.