https://commons.wikimedia.org/wiki/File:Chloroform-chemical.png
https://commons.wikimedia.org/wiki/Category:Chloroform

ಕ್ಲೋರೋಫಾರಂ

ಕ್ಲೋರೋಫಾರಂ ಅಥವಾ ಟ್ರ್ಯೆಕ್ಲೋರೋ ಮಿಥೇನ್, ಇದು ಒಂದು ಇಂಗಾಲದ ಸಾವಯವ ಸಂಯುಕ್ತ ವಾಗಿದ್ದು ಇದರ ಅಣು ಸೂತ್ರ CHcl3 .ಇದು ಬಣ್ಣ ರಹಿತ ವಾಗಿದ್ದು,ಸಿಹಿಯಾದ ವಾಸನೆಯನ್ನು ಹೊಂದಿರುವ ಸಾಂದ್ರತೆಯ ದ್ರವ ವಾಗಿದೆ.

ರಚನೆ:- ಕ್ಲೋರೋಫಾರಂ ನ ಒಂದು ಅಣುವಿನಲ್ಲಿ, ಒಂದು ಅಣುವಿಮಲ್ಲಿ- ಒಂದು ಇಂಗಾಲ, ಒಂದು ಜಲಜನಕ ಮತ್ತು ಮೂರು ಕ್ಲೋರಿನ್ ನ ಪರಮಾಣುಗಳಿವೆ.ಒಂದು ಮಿಥೇನಿನ ( CH4) ಅಣುವಿನಲ್ಲಿನ ನಾಲ್ಕು ಜಲಜನಕಗಳಲ್ಲಿ,ಮೂರು ಜಲಜನಕಗಳ ಸ್ತಾನದಲ್ಲಿ ಮೂರು ಕ್ಲೋರಿನ್ ಪರಮಾಣುಗಳು ಜೋಡಿಸಲ್ಪಟ್ಟಿವೆ.ಆದ್ದರಿಂದ ಇದು ಟೆಟ್ರಾಹೈಡ್ರಲ್ ರಚನೆಯನ್ನು ಹೊಂದಿದೆ.

ದೊರೆಯುವಿಕೆ:- ಇದು ಹೆಚ್ಚಿನ ಪ್ರಮಾಣದಲ್ಲಿ ಸ್ವಾಭಾವಿಕವಾಗಿ ನಿಸರ್ಗದಲ್ಲಿ ಉತ್ಪತ್ತಿಯಾಗುವಂತಾದ್ದು ಮತ್ತು ಸಮುದ್ರ ಕಳೆಗಳಿಂದ ನೀರಿನಲ್ಲಿ ಹಾಗೂ ಶಿಲೇದ್ರಗಳಿಂದ ಮಣ‍್ಣಿನಲ್ಲಿ []ಉತ್ಪತ್ತಿ ಮಾಡಬಹುದು.ಭೂಮಿಯಲ್ಲಿ ೬,೬೦,೦೦೦ ಟನ್ಗಳಷ್ಟು ಕ್ಲೋರೋಫಾರಂ ಉತ್ಪತ್ತಿಯಾಗಿದ್ದು, ಶೇಕಡ ೯೦ ರಷ್ಟು ಸ್ವಾಭಾವಿಕವಾಗಿ ಪರಿಸರದಲ್ಲಿ ಉತ್ಪತ್ತಿ ಆಗುತ್ತದೆ

ಉತ್ಪಾದನೆ:- ಕೈಗಾರಿಕೆಗಳಲ್ಲಿ ಕ್ಲೋರೋಫಾರಂ ಅನ್ನು ಕ್ಲೋರಿನ್ ಮತ್ತು ಕ್ಲೋರೋಮಿಥೇನ್ ಅಥವಾ ಮಿಥೇನಿನ ಮಿಶ್ರಣವನ್ನು ೪೦೦-೫೦೦ ಡಿಗ್ರಿ ಷೆಲ್ಸಿಯಸ್ ನಲ್ಲಿ ಕ್ಲೋರಿನೀಕರಣ ಮಾಡುವುದರಿಂದ ಹಾಲೋಜನೀಕರಣದಿಂದ) CHcl3 ಕ್ಲೋರೋಫಾರಂ ಅನ್ನು ಉತ್ಪತ್ತಿ ಮಾಡಬಹುದು.

            CH4+cl2 →CH3cl+Hcl
            CH3cl+cl2→CH2cl+Hcl
            CH2cl+cl2 → CHcl3+Hcl
ಕ್ಲೋರೋಫಾರಂನ ಮುಂದುವರಿದ ಕ್ಲೋರಿನೀಕರಣ ದಿಂದ ಕಾರ್ಬನ್ ಟೆಡ್ರಾಕ್ಲೋರೈಡ್ ಆಗುತ್ತದೆ. (Ccl4)
           CHcl3+cl2 →Ccl4 + Hcl
ಕ್ಲೋರಿನೀಕರಣ ದಿಂದ ಉಂಟಾದ ಕ್ಲೋರೋಫಾರಂ ಮತ್ತು ಇತರ ಮಿಶ್ರಣದ ಘಟಕಗಳನ್ನು ಅಂಶೀಯ ಭಟ್ಟಿ ಇಳುಸುವಿಕೆ ಯಿಂದ ಬೇರ್ಪಡಿಸ ಬಹುದು.

ಉಪಯೋಗಗಳು:-

  • ಟೆಪ್ಲಾನಿನ ತಯಾರಿಕೆಯಲ್ಲಿ ( ಪಾಲಿಟೆಟ್ರಾಫ್ಲೋರೋಇತಲೀನ್ ) ಉಪಯೋಗಿಸುತ್ತಾರೆ.
  • ಕೊಬ್ಬು, ಎಣ್ಣೆ ,ರಬ್ಬರ್ ,ಆಲ್ಕಲಾಯ್ಡ್ಗಗಳು ಮೇಣ ಮುಂತಾವುಗಳನ್ನು ಕರಗಿಸಲು ದ್ರಾವಕವಾಗಿ ಉಪಯೋಗಿಸುತ್ತಾರೆ.
  • ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅನಸ್ತೇಷಿಯವಾಗಿ ಉಪಯೂಗಿಸುತ್ತಾರೆ.

ಕ್ಲೋರೋಫಾರಂ ಅನ್ನು ಸೂಕ್ತವಾಗಿ ಬಳಸದೇ ಇದ್ದಾಗ ಉಂಗಬಹುದಾದ ತೊಂದರೆಗಳು.[೧]

  • ನುಂಗುವುದರಿಂದ ವಿಷವಾಗಿ ಪರಿಣಮಿಸುತ್ತದೆ.
  • ಚರ್ಮದ ತುರಿಕೆ ಅಥವಾ ಅಲರ್ಜಿ ಉಂಟಾಗುತ್ತದೆ.
  • ಕಣ‍್ಣಿನ ಉರಿಯೂತ ಅಥವಾ ಅಲರ್ಜಿ
  • ಕ್ಯಾನ್ಸರ್ ಬರುವ ಸಾದ್ಯತೆ.
  • ಗರ್ಭದಲ್ಲಿರುವ ಹುಟ್ಟುವ ಮಗುವಿಗೆ ತೊಂದರೆ.
  • ಅತಿಯಾದ ಸೇವನೆಯಿಂದ ಅಂಗಾಂಗಗಳಿಗೆ ಊನತೆ.

ಬಳಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು.

  • ಕ್ಲೋರೋಫಾರಂ ಉಪಯೋಗಿಸುವ ಮನ್ನ ಕೊಟ್ಟಂತಹ ಸೂಚನೆಗಳನ್ನು ಓದಿಕೊಳ‍್ಳಬೇಕು.
  • ಸೂಚನೆಗಳನ್ನು ಓದಿಕೊಂಡ ನಂತರ ಸೂಕ್ತವಾಗಿ ಬಳಸ ಬೇಕು.
  • ಧೋಳು, ಹೊಗೆ, ಅನಿಲ, ಆವಿ, ಮಂಜು ಮುಂತಾದವುಗಳನ್ನು ಉಸಿರಾಡುವುದನ್ನು ನಿಯಂತ್ರಿಸಬೇಕ
  • ಉಪಯೋಗಿಸಿದನಂತರ ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳಬೇಕು.
  • ಉಪಯೋಗಿಸುವಾಗ ತಿನ್ನುವುದು ಮತ್ತು ಕುಡಿಉವುದು ಮಾದಬಾರದು.
  • ಉಪಯೋಗಿಸುವಾಗ ಹೊರಗಿನ ಗಾಳಿ ಸಾಕಷ್ಟು ಇರುವಹಾಗೆನೋಟಡಿಕೊಳ್ಳಬೇಕು.

ರೆಫರೆನ್ಸ;

  1. Cappelletti, M. (2012). "Microbial degradation of chloroform". Applied Microbiology and Biotechnology. 96 (6): 1936. doi:10.1007/s00253-012-4494-1.