thumbnail thumbnail

ಆಹಾರ ಸರಪಳಿ ಬದಲಾಯಿಸಿ

ನಮ್ಮ ಸುತ್ತ ಮುತ್ತಲಿನ ವಾತಾವರಣವನ್ನು ಪರಿಸರ ಎನ್ನುತ್ತೇವೆ. ಜೀವಿಗಳ ಪ್ರಚೋದನೆಗಳು ಪ್ರತಿಕ್ರಿಯೆಗಳು ಮತ್ತು ಇತರ ಎಲ್ಲಾ ಚಟುವಟಿಕೆಗಳು ನಡಿಯುವ ಸ್ತಳವೆ ಪರಿಸರ.ಪರಿಸರದಲ್ಲಿ ಅನೇಕ ಬಗೆಯ ಜೀವಿಗಳಿವೆ. ಉ.ದಾ.-ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು, ಕೀಟಗಳು ಮತ್ತು ಸೂಕ್ಷ್ಮಾಣು ಜೀವಿಗಳು. ಪರಿಸರದಲ್ಲಿ ಜೀವಿಗಳು ತಮ್ಮ ಆಹಾರಕ್ಕಾಗಿ ಒಂದನ್ನೊಂದು ಅವಲಂಬಿಸಿವೆ. ಇದರಿಂದ ಆಹಾರ ಸರಪಳಿ ಉಂಟಾಗುತ್ತದೆ,ಈ ಆಹಾರ ಸರಪಳಿಗಳಿಂದ ಪರಿಸರ ಸಮಸ್ತಿತಿಯಲ್ಲಿರುತ್ತದೆ.ಆದ್ದರಿಂದ ಪರಿಸರ ಸಮಸ್ತಿತಿಯಲ್ಲಿ ಆಹಾರ ಸರಪಳಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

==ಆಹರ ಸರಪಳಿ:==-ಪರಿಸರದಲ್ಲಿ ಜೀವಿಗಳು ತಮ್ಮ ಆಹಾರಕ್ಕಾಗಿ ಒಂದನ್ನೊಂದು ಅವಲಂಬಿಸಿವೆ.ಒಂದು ಜೀವಿ ಮತ್ತೊಂದು ಜೀವಿಯನ್ನು ತಿಂದು ಬದುಕಿ ಉಳಿಯತ್ತದೆ ಮತ್ತು ಆಹಾರ ಒಂದು ಜೀವಿಯಿಂದ ಮತ್ತೊಮದು ಜೀವಿಗೆ ವರ್ಗಾಯಿಸಲ್ಪಟ್ಟು ಒಂದು ಸರಪಳಿ ಉಂಟಾಗುತ್ತದೆ. ಹೀಗೆ ಆಹಾರ ಒಂದು ಜೀವಿ ಇಂದ ಮತ್ತೊಂದು ಜೀವಿಗೆ ವರ್ಗಾಯಿಸಲ್ಪಡುವುದರಿಮದ ಉಂಟಾದ ಸರಪಳಿಗೆ ಆಹಾರ ಸರಪಳಿ ಎನ್ನುತ್ತಾರೆ.

==ಆಹಾರ ಸರಪಳಿಯ ಪ್ರಮುಖ ಘಟಕಗಳು:==*ಉತ್ಪಾದಕ ಜೀವಿಗಳು (ಸಸ್ಯಗಳು)

                                                       *ಸಸ್ಯಾಹಾರಿಗಳು-ಮೊದಲನೆಯ ಹಂತದ ಬಳಿಕೆ ದಾರ ಜೀವಿಗಳು
                                                       *ಮಾಂಸಾಹಾರಿಗಳು-ಎರಡನೆಹಂತದ ಬಳಿಕೆ ದಾರ ಜೀವಿಗಳಿಂದ ಉನ್ನತ ಹಂತದ ಬಳಿಕೆ ದಾರ ಜೀವಿಗಳು

==ಆಹಾರ ಸರಪಳಿಯ ರಚನೆ==:-ಯಾವುದೇ ರೀತಿಯ ಆಹಾರ ಸರಪಳಿಯು, ಪ್ರಾರಂಭವಾಗುವುದು ಉತ್ಪಾದಕ ಜೀವಿಗಳಿಂದ. ಆಹಾರವನ್ನು ಉತ್ಪಾದಿಸುವ ಪ್ರತಿಯೊಂದು ಸಸ್ಯವೂ ಉತ್ಪಾದಕ ಜೀವಿಯಾಗಿದೆ. ಸಸ್ಯಗಳು ಮತ್ತು ಸಸ್ಯಗಳ ಉತ್ಪನ್ನಗಳನ್ನು ತಿನ್ನುವ ಜೀವಿಗಳನ್ನು ಸಸ್ಯಾಹಾರಿಗಳು ಅಥವಾ ಮೊದಲನೆ ಹಂತದ ಬಳಕೆದಾರ ಜೀವಿಗಳು ಎನ್ನುತ್ತಾರೆ. ಸಸ್ಯಾಹಾರಿಗಳು ಅಥವಾ ಮೊದಲನೆ ಹಂತದ ಬಳಕೆ ದಾರ ಜಿವಿಗಳು ಎನ್ನುತ್ತಾರೆ.ಸಸ್ಯಾಹಾರಿಗಳನ್ನು ತಿನ್ನುವ ಜೀವಿಗಳನ್ನು ಮಾಂಸಾಹಾರಿಗಳೆನ್ನುತ್ತಾರೆ ಅಥವಾ ಎರಡನೆ ಹಂತದ ಬಳಕೆ ದಾರ ಜೀವಿಗಲಳು ಎನ್ನುತ್ತಾರೆ. ಹೀಗೆ ಎರಡನೆ ಹಂತದ ಮಾಂಸಾಹಾರಿ ಜೀವಿಗಳಿಂದ ಮುಂದುವರಿದು,ಮೂರನೆ ಹಂತ,ನಾಲ್ಕನೆ ಹಂತ ನಂತರದಲ್ಲಿ ಉನ್ನತ ಮಾಮಸಾಹಾರ ಜೀವಿಇಂದ ಕೊನೆಗೊಳ್ಳುತ್ತದೆ. ಈ ರೀತಿಯಲ್ಲಿ ಆಹಾರ ಸರಪಳಿಯು ಉತ್ಪಾದಕ ಜೀವಿಗಳಿಂದ ಪ್ರಾರಂಭವಾಗಿ, ಸಸ್ಯಾಹಾರಿಗಳು,ಮಾಂಸಾಹಾರಿಗಳ ವಿವಿಧ ಹಂತಗಳ್ಳಿ ಮುಂದು ವರಿದು ಉನ್ನತ ಮಾಂಸಾಹಾರಿ ಯಲ್ಲಿ ಕೊನೆಗೊಳ್ಳುತ್ತದೆ.

 

ಚಿತ್ರದಲ್ಲಿ ತೋರಿಸಿದಂತೆ ನಾವು ಇಲ್ಲಿ ಎರಡು ಆಹಾರ ಸರಪಳಿಗಳನ್ನು ಕಾಣುತ್ತೇವೆ ಮೊದಲನೆಯ ಆಹಾರ ಸರಪಳಿ:-ಸಸ್ಯಗಳು-ಕೀಟಗಳು-ಕಪ್ಪೆ-ಹಾವು-ಹದ್ದು ಸಸ್ಯಗಳನ್ನು ಕೀಟಗಳು ತಿನ್ನುತ್ತವೆ,ಕೀಟಗಳನ್ನು ಕಪ್ಪೆ ತಿನ್ನುತ್ತದೆ, ಕಪ್ಪೆಯನ್ನು ಹಾವು ತಿನ್ನುತ್ತದೆ, ಹಾವನ್ನು ಹದ್ಧು ತಿನ್ನುತ್ತದೆ ಎರಡನೆ ಆಹಾರ ಸರಪಳಿ:- ಜಲಸಸ್ಯಗಳು-ಕೀಟಗಳು-ಸಣ್ಣ ಮೀನು-ದೊಡ್ಡ ಮೀನು-ಷಾರ್ಕ ಮೀನು ನೀರಿನಲ್ಲಿ ಆಹಾರ ಸರಪಣಿ-ಜಲ ಸಸ್ಯಗಳನ್ನು,ಕೀಟಗಳು ತಿನ್ನುತ್ತವೆ, ಕೀಟಗಳನ್ನು ಸಣ್ಣ ಮೀನುಗಳು ತಿನ್ನುತ್ತವೆ, ಸಣ್ಣ ಮೀನುಗಳನ್ನು ದೊಡ್ಡ ಮೀನು ತಿನ್ನುತ್ತದೆ, ದೊಡ್ಡ ಮೀನ್ನು ಷಾರ್ಕ ಮೀನು ತಿನ್ನುತ್ತದೆ,

ಆಹಾರ ಸರಪಳಿಗಳ ಬಗೆಗಳು ಬದಲಾಯಿಸಿ

ಆಹಾರ ಸರಪಳಿಗಳಲ್ಲಿ ಎರಡು ಬಗೆಗಳನ್ನು ಕಾಣುತ್ತೇವೆ:- *ಸಾಧಾರಣ ಆಹಾರ ಸರಪಳಿ

                                                            * ಪರೋಪಜೀವಿಗಳ ಆಹಾರ ಸರಪಳಿ

ಸಾಧಾರಣ ಆಹಾರ ಸರಪಳಿ ಬಗ್ಗೆ ಈಗಾಗಲೆ ತಿಳಿದಿದ್ದೇವೆ, ಇದು ಉತ್ಪಾದಕ ಜೀವಿಇಂದ ಆರಂಭ ವಾಗಿ ಉನ್ನತ ಹಂತದ ಬಳಕೆ ದಾರ ಜೀವಿಯಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿ ಉತ್ಪಾದಕ ಜೀವಿಗಳ ಸಂಖ್ಯೆ ಹೆಚ್ಚಾಗಿದ್ದು ಬಳಕೆ ದಾರಿ ಜೀವಿಗಳ ಸಂಖ್ಯೆ ಕಡಿಮೆ ಇರುತ್ತದೆ. ಪರೋಪಜೀವಿಗಳ ಆಹಾರ ಸರಪಳಿಯಲ್ಲಿಯೂ ಸಹ ಉತ್ಪಾದಕ ಜೀವಿಇಂದ ಆರಂಭವಾಗಿ, ಉನ್ನತ ಹಂತದ ಬಳಕೆ ದಾರ ಜೀವಿಯಲ್ಲಿ ಕೊನೆಗೊಳ್ಳುತ್ತದೆ. ಆದರೆ ಇಲ್ಲಿ ಉತ್ಪಾದಕ ಜೀವಿಗಳ ಸಂಖ್ಯೆ ಕಡಿಮೆ ಇದ್ದು ಬಳಕೆ ದಾರ ಜೀವಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ,ಪರೋಪಜೀವಿಗಳ ಆಹಾರಸರಪಳಿ ಯಾವಾಗಲೂ ತಲೆ ಕೆಳಗಾಗಿರುತ್ತದೆ.

ಆಹಾರ ಜಾಲ ಬದಲಾಯಿಸಿ

ಆಹಾರ ಸರಪಳಿ ಗಳಲ್ಲಿನ ಘಟಕಗಳನ್ನು ಪೋಷಣಾ ಸ್ತರಗಳೆನ್ನುತ್ತಾರೆ.ಅನೇಕ ಆಹಾರ ಸರಪಳಿಗಳಲ್ಲಿ , ಪೋಷಣಾಸ್ತರಗಳು ಒಂದಕ್ಕೊಂದು ಸಂಪರ್ಕವನ್ನುಹೊಂದಿರುತ್ತವೆ ಇದರಿಂದ ಅನೇಕ ಆಹಾರ ಸರಪಳನ್ನು ಒಳಗೊಂಡ ಜಾಲ ಉಂಟಾಗುತ್ತದೆ, ಇದನ್ನು ಆಹಅರ ಜಾಲ ಎನ್ನುತ್ತಾರೆ,

 

ಆಹಾರ ಪಿರಮಿಡ್ ಗಳು ಬದಲಾಯಿಸಿ

ಆಹಾರ ಸರಪಳಿಗಳಲ್ಲಿನ ಪೋಷಣಾ ಸ್ತರಗಳನ್ನು, ಒಂದರ ಮೇಲೆ ಒಂದರಂತೆ ಜೋಡಿಸಿದಾಗ ಒಂದು ಪಿರಮಿಡ್ ರಚನೆ ಆಗುತ್ತದೆ,ಇದನ್ನು ಆಹಾರ ಪಿರಮಿಡ್ thumbnail ಎನ್ನುತ್ತಾರೆ,ಪರೋಪಜೀವಿಗಳಲ್ಲಿ ಆಹಾರ ಪಿರಮಿಡ್ ತಲೆ ಕೆಳಗಾಗಿರುತ್ತದೆ.