ನಾವು ಸೇವಿಸುವ ಗಾಳಿ,ನೀರು,ಆಹಾರ ಮುಂತಾದವುಗಳಲ್ಲಿ ಅನಪೇಕ್ಷಿತ ಬದಲಾವಣೆಗಳು ಉಂಟಾಗುವುದನ್ನು ಮಾಲಿನ್ಯ ಎನ್ನುತ್ತೇವೆ. ನಾವು ಅನೇಕ ಬಗೆಯ ಮಾಲಿನ್ಯಗಳನ್ನು ಕಾಣುತ್ತೇವೆ. ಮಾಲಿನ್ಯಕ್ಕೆ ಕಾರಣ ಮಲಿನಕಾರಿಗಳು.ಮಲಿನಕಾರಿಗಳ ಕಾರ್ಯ ಮತ್ತು ಲಕ್ಷಣಗಳ ಆಧಾರದ ಮೇಲೆ ಅನೇಕ ಬಗೆಯ ಮಾಲಿನ್ಯಗಳನ್ನು ವಿಂಗಡಿಸಲಾಗಿದೆ,ಅವುಗಳು ಈಕೆಳಗಿನಂತೆ ಹೆಸರಿಸಲಾಗಿದೆ.

  1. ವಾಯು ಮಾಲಿನ್ಯ
  2. ಜಲ ಮಾಲಿನ್ಯ
  3. ಆಹಾರ ಮಾಲಿನ್ಯ
  4. ಭೂ ಮಾಲಿನ್ಯ
  5. ಶಬ್ದ ಮಾಲಿನ್ಯ
  6. ವಿಕಿರಣ ಮಾಲಿನ್ಯ

ವಾಯುಮಾಲಿನ್ಯ

ಬದಲಾಯಿಸಿ

ಮೇಲೆ ಸೂಚಿಸಿದ ಮಾಲಿನ್ಯಗಳಲ್ಲಿ ಅತ್ಯಂತ ಹೆಚ್ಚು ದುಷ್ಪರಿಣಾಮವನ್ನುಂಟು ಮಾಡುವುದು ವಾಯುಮಾಲಿನ್ಯ.ವಾಯುಮಾಲಿನ್ಯಕ್ಕೆ ಕಾರಣ ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯಗಳು,ವಾಹನಗಳಿಂದ ಹೊರಸೂಸುವ ಹೊಗೆ,ಇಂಧನಗಳ ದಹನದಿಂದ ಹೊರಬರುವ ಅನಿಲಗಳು,ಕಾಡ್ಗಿಚ್ಚು,ಭೂಕಂಪಗಳು,ಜ್ವಾಲಾಮುಖಿಗಳು,ಕೃಷಿಗೆ ಉಪಯೇಗಿಸುವ ರಾಸಾಯನಿಕಗಳು,ಧೂಮಪಾನ ಸೇವನೆ,ಬಯಲಿನಲ್ಲಿ ಮಲಮೂತ್ರ ವಿಸರ್ಜನೆ ಇತ್ಯಾದಿಗಳು.

ವಾಯು ಮಾಲಿನ್ಯದ ದುಷ್ಪರಿಣಾಮಗಳು. ವಾಯು ಮಲಿನಕಾರಿಗಳಿಂದ ಅನೇಕಬಗೆಯ ರಾಸಾಯನಿಕಗಳು ಪರಿಸರಕ್ಕೆ ಬಿಡುಗಡೆ ಆಗುತ್ತವೆ.ಅವುಗಳಲ್ಲಿ,ಇಂಗಾಲದ ಮೋನಾಕ್ಸ್ಯೆಡ್,ಇಂಗಾಲದ ಡ್ಯೆಯಾಕ್ಸ್ಯೆಡ್,ಗಂಧಕದ ಆಕ್ಷ್ಯೆಡ್ಗಳು,ಸಾರಜನಕದ ಆಕ್ಸ್ಯೆಡೆಗಳು,ಹೈಡ್ರೂಕಾರ್ಬನ್ಗಳು ಮಂತಾದವುಗಳು. ಮೇಲೆ ಸೂಚಿಸಿದ ರಾಸಾಯನಿಕಗಳಿಂದ,ಉಂಟಾಗುವ ಪರಿಣಾಮಗಳು ಈಕೆಳಗಿನಂತಿವೆ.

  • ಆಮ್ಲಮಳೆ ಮತ್ತು ಇತರ ರಾಸಾಯನಿಕಗಳಿಂದ ಐತಿಹಾಸಿಕ ಕಟ್ಡಡಗಳು ಬೂದುಬಣಕ್ಕೆ ಬದಲಾಗಿವೆ,ಇದರಿಂದ ಅವುಗಳ ಅಂದ ಹಾಳಾಗಿದೆ.
  • ಸಸ್ಯಗಳ ಬೆಳವಣಿಗೆ ಮತ್ತು ಫಲಗಳ ಮೇಲೆ ಅಡ್ಡ ಪರಿಣಾಮಗಳು.
  • ಮಾನವರಿಗೆ ಕಾನ್ಸರ್ ಮತ್ತು ಶ್ವಾಸಕೋಸಗಳಿಗೆ ಸಂಬಂದಿಸಿದ ಕಾಯಿಲೆಗಳು.
  • ಓಜೋನ್ ಪದರದಲ್ಲಿ ರಂದ್ರಗಳು,ಇದರಿಂದ ಶಕ್ತಿಯತವಾದ ನೇರಳಾತೀತ ಕಿರಣಗಳು ನೇರವಾಗಿ ಬೂಮಿಗೆ ತಲುಪಿ,ಜೀವಿಗಳ ಮೇಲೆ ಅಡ್ಡ ಪರಿಣಾಮಗಳು.
  • ಹಸಿರು ಮನೆ ಪರಿಣಾಮ-ಇದರಿಂದ ದ್ರುವ ಪ್ರದೇಶಗಳು ಕರಗುತ್ತವೆ
  • ಜಾಗತಿಕ ಭೂತಾಪಮಾನ ಹೆಚ್ಚಾಗುತ್ತದೆ-ಗಾಳಿ,ನೀರು,ಭೂಮಿಯ ಉಷ್ಣತೆ ಹೆಚ್ಚಾಗಿ ಜೀವಿಗಳು ಬದುಕಲು ತುಂಬಾ ತೂಂದರೆ ಆಗುತ್ತದೆ.
  • ಅರಣ್ಯಗಳ ನಾಶ-ಇದರಿಂದ ಶುದ್ದವಾದ ಗಾಳಿಯ ಕೊರತೆ ಮತ್ತು ಅಶುದ್ದ ವಾದ ಗಾಳಿಯ ಹೆಚ್ಚಳ.

ವಾಯಮಾಲಿನ್ಯದ ನಿಯಂತ್ರಣ

ಬದಲಾಯಿಸಿ
  • ಅರಣ್ಯಗಳ ಸಂರಕ್ಷಣೆ ಮತ್ತು ಅಭಿವೃದ್ದಿ
  • ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯಗಳನ್ನು ಸಂಶ್ಲೇಷಿಸಿ ವಾತಾವರಣಕ್ಕೆ ಬಿಡುಗಡೆ ಮಾಡುವುದು.
  • ವಾಹನಗಳಲ್ಲಿ ಇಂದನದ ಬಳಿಕೆ ಕಡಿಮೆ ಮಾಡಿ ಬ್ಯಾಟರಿಗಳನ್ನು ಅಳವಡಿಸುವುದು.
  • ಕೈಷಿಗೆ ರಾಸಾಯನಿಕ ಗಬ್ಬರಗಳ ಬದಲಾಗಿ ಹೆಚ್ಚು ಸಾವಯವ ಗೊಬ್ಬರಗಳನ್ನು ಉಪಯೋಗಿಸುವುದು.
  • ವಾಯ ಮಾಲಿನ್ಯ ನಿಯಂತ್ರಣ ಕಾನೂನನ್ನು ಕಟ್ಟು ನಿಟ್ಟಾಗಿ ಪಾಲಿಸುವುದು.
  • ಹೆಚ್ಚು ಹೆಚ್ಚು ಸಸ್ಯಗಳನ್ನು ಮತ್ತು ಮರಗಳನ್ನು ಬೆಳಸುವುದು.
  • ವಾಯ ಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೈತಿಯನ್ನು ಮೂಡಿಸುವುದು.