ಸದಸ್ಯ:POOJA.G.GOWDA/ನನ್ನ ಪ್ರಯೋಗಪುಟ

ತುಕ್ಕು ಹಿಡಿಯದ ಉಕ್ಕು-ಉಪಯೋಗದ ವಿವಿಧ ಮುಖಗಳು:-

ತುಕ್ಕು ಹಿಡಿಯದ ಉಕ್ಕು ಅಥವಾ ಸ್ಟೈನ್ ಲೆಸ್ ಸ್ಟೀಲ್ ಉಕ್ಕಿನ ಜಂಗು ಕ್ರಿಯೆಯನ್ನು ತಟಸ್ಥಗೊಳಿಸಲು ತಯಾರಿಸಿರುವ ಮಿಶ್ರಲೋಹ. ಕಬ್ಬಿಣ ಮತ್ತು ಉಕ್ಕಿನ ಮೇಲ್ಮೈಯ ಪರಿಸರದೊಂದಿಗೆ ರಾಸಾಯನಿಕ ಕ್ರಿಯೆ ಹೊಂದಿ ಕಬ್ಬಿಣದ ಆಕ್ಸೈಡುಗಳನ್ನೊಳಗೊಂಡ ತುಕ್ಕುವಿನಿಂದ ಆವರಿಸಿದ್ದರೂ ಈ ತುಕ್ಕು ಉಕ್ಕನ್ನು ಕ್ಷೀಣಿಸುವ ಕ್ರಿಯೆಯಿಂದ ರಕ್ಷಿಸಲಾರದು. ತುಕ್ಕು ನಿರೋಧಕತೆಗಾಗಿ ಕಬ್ಬಿಣವನ್ನು ೧೨ ಶೇಕಡ ಕ್ರೋಮಿಯಂ ಲೋಹದೊಂದಿಗೆ ಮಿಶ್ರ ಮಾಡಿದಾಗ ಸ್ಟೈನ್ ಲೆಸ್ ಸ್ಟೀಲ್ ದೊರೆಯುತ್ತದೆ. ಈ ಮಿಶ್ರ ಲೊಹವು ಹೊಳಪಿನ ನೋಟದೊಂದಿಗೆ ಉತ್ತಮ ಯಾಂತ್ರಿಕ ಗುಣಮಟ್ಟವನ್ನು ಹೊಂದಿರುತ್ತದೆ. ಮೇಲ್ಮೈಯ ಮೇಲೆ ವಾತಾವರಣದೊಂದಿಗೆ ರಾಸಾಯನಿಕ ಕ್ರಿಯೆಯಿಂದ ನಿರ್ಮಾಣವಾಗುವ ತೆಳ್ಳಗಿನ ಜಟಿಲ ದೃಢ ಆವರಣವೊಂದು ಮಿಶ್ರ ಲೋಹವನ್ನು ರಕ್ಷಿಸುವ ಗುಣವು ಸ್ಟೈನ್ಲೆಸ್ ಸ್ಟೀಲ್ ನ ವೈಶಿಷ್ಟವಾಗಿದೆ. ಈ ಪದರು ಅತಿ ತೆಳ್ಳಗೆ ಪಾರದರ್ಶಕ ಹಾಗೂ ದೃಷ್ಟಿಗೆ ಅಗೋಚರವಾಗಿದ್ದು, ಇದರ ರಚನಾ ಸೂತ್ರವು ಕಬ್ಬಿಣ ಮತ್ತು ಕ್ರೋಮಿಯಂಗಳನ್ನೊಳಗೊಂಡ 'ಸ್ಪಿನೆಲ್' ಎಂದು ಕರೆಯಲ್ಪಟ್ಟು, ತುಕ್ಕು ನಿರೋಧಕತೆಗೆ ಖ್ಯಾತಿ ಪಡೆದಿದೆ.

ತುಕ್ಕು ಹಿಡಿಯದ ಉಕ್ಕುಗಳಲ್ಲಿ ಅನೇಕ ಮಾದರಿಗಳಿದ್ದು, ಮುಖ್ಯವಾಗಿ ೫ ವಿಭಾಗಗಳನ್ನು ಗುರುತಿಸಬಹುದು.

೧) ಫೆರೈಟಿಕ್ ಸ್ಟೈನ್ ಲೆಸ್ ಸ್ಟೀಲ್:- ಈ ತರಹದ ಮಿಶ್ರಲೋಹಗಳೊಂದಿಗೆ ೧೫-೩೦ ಶೇಕಡ ಕ್ರೋಮಿಯಂ ಕೂಡಿಸಿ ತಯಾರಿಸಲಾಗುತ್ತದೆ. ಇದರಲ್ಲಿ ನಿಕ್ಕೆಲ್ ನ ಅಂಶವು ಬಹು ಕಡಿಮೆ ಇದ್ದು ಕಾಂತೀಯ ಗುಣ ಹೊಂದಿದೆ. ಈ ಮಿಶ್ರ ಲೋಹಗಳ ಬಳಕೆ ರಾಸಾಯನಿಕ ಔದ್ಯೋಗಿಕ ಕ್ಷೇತ್ರಗಳಲ್ಲಿ ಅಧಿಕ. ಕಟ್ಟಡ ನಿರ್ಮಾಣದಲ್ಲಿ ಮೇಲ್ಛಾವಣಿಗಳಿಗೂ, ಬಾಗಿಲುಕಿಟಕಿಗಳ ಚೌಕ ಮತ್ತು ಸರಳೂಗಳಲ್ಲಿಯೂ ಇದರ ಉಪಯೋಗವಿದೆ. ೪೩೦ ಸರಣಿಯಲ್ಲಿ ಅಂಗಾರದ ಅಂಶವನ್ನು ಕುಂಠಿತಗೊಳಿಸಿದಾಗ ಈ ಉಕ್ಕಿನ ತುಕ್ಕು ನಿರೋಧಕತೆ ಅತ್ಯುತ್ತಮ ಮಟ್ಟಕ್ಕೇರಿ ಇದು ಔದ್ಯೋಗಿಕ ಉಪಕರಣಗಳ ತಯಾರಿಕೆಲ್ಲಿ ಪ್ರಶಸ್ತವೆನಿಸುತ್ತದೆ.

೨) ಅಸ್ಟೆನೈಟಿಕ್ ಸ್ಟೈನ್ ಲೆಸ್ ಸ್ಟೀಲ್:- ಈ ಮಿಶ್ರಲೋಹ ಶ್ರೇಣಿಯನ್ನು ೩೦೦ ಸರಣಿ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ೧೮ ಶೇಕಡ ಮತ್ತು ೮ ಶೇಕಡ ನಿಕ್ಕಲದ್ ಸೇರಿರುವ ಮಿಶ್ರಲೋಹ ಮುಖ್ಯ. ಜಗತ್ತಿನ ಒಟ್ಟು ತುಕ್ಕು ಹಿಡಿಯದ ಉಕ್ಕುಗಳ ಉತ್ಪಾದನೆ೬ಯಲ್ಲಿ ಈ ಮಿಶ್ರಲೋಹದ ತಯಾರಿಕೆಯ ಪಾಲು ೮೦ ಶೇಕಡ ಆಗಿದೆ. ಗೃಹೋಪಯೋಗಿ ಪಾತ್ರೆಗಳಲ್ಲಿ ಈ ಸ್ಟೈನ್ ಲೆಸ್ ಸ್ಟೀಲ್ ಬಳಕೆ ಅಧಿಕ.ಈ ಮಿಶ್ರಲೋಹ ಸರಣಿಯಲ್ಲಿ ಉಕ್ಕಿನೊಂದಿಗೆ ಬೇರೆ ಬೇರೆ ಲೊಹಗಳನ್ನು ಜೋಡಿಸಿ ವಿವಿಧ ಗುಣಗಳುಳ್ಳ ಸ್ಟೈನ್ ಲೆಸ್ ಸ್ಟೀಲ್ ಗಲನ್ನು ರಚಿಸಲಾಗಿದೆ.

೩) ಮಾರ್ಟೆನ್ ಸೈಟಿಕ್ ಸ್ಟೈನ್ಲೆಸ್ ಸ್ಟೀಲ್ :-ಈ ಮಾದರಿಯ ಸ್ಟೈನ್ಲೆಸ್ ಸ್ಟೀಲ್ ೧೧-೧೮ ಶೇಕಢ ಕ್ರೋಮಿಯಂ ಹಾಗೂ ೦.೧-೧.೦ ಶೇಕಡ ಅಂಗಾರದಿಂದ ಕೂಡಿದೆ. ಈ ಉಕ್ಕನ್ನು ಶಾಖ ಸಂಸ್ಥರಣೆಗೆ ಓಳಪಡಿಸಿ ಅಧಿಕ ಕಠಿಣತೆಯನ್ನು ಪಡೆಯಬಹುದು. ಇವುಗಳನ್ನು ಅಡಿಗೆ ಸಲಕರಣೆಗಳು ಹಾಗೂ ವೈದ್ಯಕೀಯ ಉಪಕರಣಗಲ ತಯಾರಿಕೆಲ್ಲಿ ಬಳಸಲಾಗುತ್ತದೆ. ಜಮಗು ತಡೆಯುವಿಕೆಯ ಮಟ್ಟ ಈ ಮಿಶ್ರ ಲೋಹಗಳಲ್ಲಿ ಮೇಲೆ ಕಾಣಿಸಿದ ಅಸ್ಟೆನೈಟಿಕ್ ಲೋಹಗಳಿಗಿಂತ ಕಡಿಮೆ.

೪) ಡ್ಯುಪ್ಲೆಕ್ಸ ಅಥವಾ ದ್ವಿ ಸ್ಥಾಯಿ ಸ್ಟೈನ್ ಲೆಸ್ ಸ್ಟೀಲ್:- ಈ ಮಿಶ್ರ ಲೋಹ ಅಸ್ಟೆನೈಟಿಕ್ ಮತ್ತು ಫೆರೈಟಿಕ್ ಅಂಶಗಳ ಮಿಶ್ರಣದಿಂದ ಕೂಡಿದ್ದು ಇವುಗಳ ಸಾಮಾರ್ಥ್ಯ ಹಾಗೂ ಜಂಗು ನಿರೋಧಕತೆ ಇವೆರೆಡು ತರಹದ ಮಿಶ್ರಲೋಹಗಳಿಗಿಂತಲೂ ಉತ್ತಮ. ಇವುಗಳ ಉಪಯೋಗ ಕಲ್ಲೆಣ್ಣೆ ಮತ್ತು ನಿಸರ್ಗ ಅನಿಲಗಳ ಉಪಕರಣಗಳಲ್ಲಿದೆ.

ಔದ್ಯೋಗಿಕ ಕ್ಷೇತ್ರಗಳಲ್ಲಿ:- ರಾಸಾಯನಿಕ, ತೈಲ ರಾಸಾಯನಿಕ ಮತ್ತು ವಿದ್ಯುತ್ ಉತ್ಪಾದಾನಾ ಕೇಂದ್ರಗಳಲ್ಲಿ ಉಷ್ಣ ವಿನಿಮಯಕಗಳಿಗಾಗಿಯೂ, ನೀರಿನ ಸಾಗಣೆ ಮತ್ತು ಶೇಖರಣೆಗಾಗಿಯೂ, ವಿವಿಧ ಮಾದರಿಯ ಬೊಗುಣಿ ಮತ್ತು ಭಟ್ಟಿಗಳ ರಚನೆಗಾಗಿಯು ಉಪಯೋಗಿಸಲ್ಪಡುತ್ತದೆ. ಕಾಗದ ತಯಾರಿಕೆ ಮತ್ತು ಹಾಲಿನ ಶುದ್ಧೀಕರಣದ ಉದ್ಯಮಗಳಲ್ಲಿ ದೊಡ್ಡ ಗಾತ್ರದ ಟಾಂಕಿಗಳ ರಚನೆಗೂ ಸ್ಟೈನ್ಲೆಸ್ ಸ್ಟೀಲ್ ಗಳ ಉಪಯೋಗವಿದೆ, ಕೃಷಿ ಉದ್ಯಮದಲ್ಲಿ ನೀರಿನ ಚಲಾವಣೆಯ ಪಂಪುಗಳಲ್ಲಿ ರೈಲು ಮೋಠಾರು ಬಂಡಿಗಳಲ್ಲಿ ಈ ಮಿಶ್ರಲೋಹಗಳದ್ದೇ ಮೇಲು ಕೈ, ನಾಣ್ಯಗಳಲ್ಲೂ ಇವು ಪುಯೋಗಿಸಲ್ಪಡುತ್ತದೆ.