ಸದಸ್ಯ:Niveditha Jain/ನನ್ನ ಪ್ರಯೋಗಪುಟ
[[[ ಶ್ರೀ ಪಂಚದುರ್ಗ ಪರಮೇಶ್ವರಿ ದೇವಸ್ಥಾನ ಕಕ್ಯಬೀಡು]]] ಈಗಿನ ಬಂಟ್ವಾಳ ತಾಲೂಕಿನ ಉಳಿಗ್ರಾಮದ ಕಕ್ಯೆಬೀಡು ಎಂಬಲ್ಲಿ ಸುಮಾರು ಐದು ಶತಮಾನಗಳ ಹಿಂದೆ ಮೈಂದ ಹೆಗ್ಗಡೆ ಎಂಬ ಬಲ್ಲಾಳ ಮನೆತನದ ಅರಸು ಆಳಿಕೊಂಡು ಬರುತ್ತಿದ್ದನು. ಸಕಲ ಸೌಭಾಗ್ಯದಿಂದ ಮೆರೆಯುತ್ತಿದ್ದ ಆತನು ಧರ್ಮನಿರತನೂ ಆಗಿದ್ದನು. ಆ ಸಮಯದಲ್ಲಿ ಉದಿಗುಡ್ಡೆ ಎಂಬಲ್ಲಿ ಒಬ್ಬಳು ತಾಯಿ ಮತ್ತು ಮೂವರು ಹೆಣ್ಣು ಮಕ್ಕಳು ಕಾಣಿಸಿಕೊಂಡರಂತೆ. ತಾಯಿಯ ಅರಸನ ಬೀಡಿಗೆ ಆಗಮಿಸಿ ತನ್ನ ಮಕ್ಕಳ ಪಾಲನೆಗೆ ಹಾಲನ್ನು ನೀಡಿದ್ದಲ್ಲದೆ, ಪ್ರತಿದಿನ ಬೇಕಾದ ಹಾಲನ್ನು ತನ್ನ ಬೀಡಿನಿಂದಲೇ ಕೊಂಡುಹೋಗಬಹುದೆಂದು ಸೂಚಿಸಿದನು.ಅರಸನ ಕೋರಿಕೆ ಪ್ರಕಾರ ಆಗುಂತಕೆ ಪ್ರತಿದಿನ ಹಾಲು ತೆಗೆದುಕೊಂಡು ಹೋಗಲು ಬೀಡಿಗೆ ಬರುತ್ತಿರುವಾಗ ಆಕೆಯ ಚಲನವಲನದಲ್ಲಿ ವಿಶೇಷತೆಯನ್ನು ಗುರುತಿಸಿದ ಅರಸನ ಉಳಿಗದವರು ಪರೀಕ್ಷೆ ಮಾಡುವ ಉದ್ದೇಶದಿಂದ ಹಾಲಿಗೆ ನೀರು ಬೆರೆಸಿಕೊಟ್ಟರು. ನೀರು ಹಾಲನ್ನು ಒಯ್ದು ಆ ಮಹಾತಾಯಿ ಅದೇ ದಿನ ರಾತ್ರಿ ಅರಸನಿಗೆ ಕನಸಿನಲ್ಲಿ ಪ್ರತ್ಯಕ್ಷಳಾಗಿ "ನಾನು ಮತ್ತು ನನ್ನ ಮಕ್ಕಳು ಸಾಮಾನ್ಯ ರೆಂದು ಭಾವಿಸಬೇಡ. ನಾವು ಐದು ಮಹಾ ದೈವಿಕ ಶಕ್ತಿಯಿಂದ ಕೂಡಿದ 'ಐವರು ಉಲ್ಲಾಕುಲು'. ನಿನ್ನ ಬೀಡಿನಲ್ಲಿ ಹಾಲು ಕೊಡುವ ಕಾಲದಲ್ಲಿ ನಡೆದ ಅಪಚಾರದ ಹೊಣೆಯನ್ನು ಅರಸನಾದ ನೀನು ವಹಿಸಿಕೊಂಡ ಅದಕ್ಕಾಗಿ ಪ್ರಾಯಶ್ಚಿತ್ತ ಅನುಭವಿಸಬೇಕು.