ಸದಸ್ಯ:Nishitha Nag M.V/ನನ್ನ ಪ್ರಯೋಗಪುಟ
ನಿಶಿತ ನಾಗ್ ಎಂ.ವಿ | |
---|---|
Born | ಹಿಂದೂಪುರ,ಆಂಧ್ರಪ್ರದೇಶ | ೨ ಅಕ್ಟೋಬರ್ ೨೦೦೦
Nationality | ಭಾರತೀಯ |
Academic background | |
Education | ಬಿಎಸ್ಸಿ |
Academic work |
ನಿಶಿತ ನಾಗ್ ಎಂ.ವಿ
ಪರಿಚಯ
ಬದಲಾಯಿಸಿಚಿನ್ನದ ಗಣಿಗಳಿಗೆ ಹಾಗು ಗಣಿಗಾರಿಕೆಗೆ ಪ್ರಸಿದ್ದವಾದ ಜಿಲ್ಲೆ ಕೋಲಾರ.
ಇಂತಹ ಚಿನ್ನದ ಜಿಲ್ಲೆಯ ಹುಡುಗಿಯಾದ ನನ್ನ ಹೆಸರು ನಿಶಿತ ನಾಗ್ ಎಂ.ವಿ.ನಾನು ಹುಟ್ಟಿದ್ದು ಅಕ್ಟೋಬರ್ ೨ ರಂದು ಆಂಧ್ರಪ್ರದೇಶ[೧]ದ ಹಿಂದೂಪುರ ದಲ್ಲಿ.ನಾನು ಹುಟ್ಟಿದಾಗ ಆ ಊರಿನಲ್ಲಿ ಖಾಲಿಯಾದ ಪುಷ್ಕಾರನಿಯೂ ಭಾರೀ ಮಳೆಯಿಂದ ತುಂಬಿತ್ತು.ಈ ಸನ್ನಿವೇಶ ನನ್ನನ್ನು ಈ ಜಗತ್ತಿಗೆ ಸ್ವಾಗತಿಸಿದಂತಿತ್ತು.
ಕುಟುಂಬ
ಬದಲಾಯಿಸಿದೇವರು ಏಕಕಾಲದಲ್ಲಿ ತನ್ನಿಂದ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲ ಎಂದು ತಂದೆಯನ್ನು ಸೃಷ್ಟಿಸಿದ.ಭಯವಾದಾಗ ಮುಗ್ದ ಮಕ್ಕಳು ಓಡಿಬಂದು ಬಿಗಿದಪ್ಪುವುದು ತಂದೆಯನ್ನೇ.ನನ್ನ ನೆಚ್ಚಿನ ವ್ಯಕ್ತಿ ನನ್ನ ತಂದೆ ವಿನಯ್ ನಾಗ್ ಎಂ.ವಿ ಸ್ವಂತ ವ್ಯಾಪಾರವನ್ನು ನಡೆಸುತ್ತಾರೆ ಹಾಗು ತುಂಬಾ ಶ್ರಮದಾಯಕ ವ್ಯಕ್ತಿಯು ಹೌದು.ಅವರು ನನ್ನ ಜೀವನದ ಪ್ರತಿಯೊಂದು ಅಂಶಗಳಲ್ಲೂ ನನಗೆ ಬೆಂಬಲ ನೀಡುತ್ತಾರೆ.ಯಾವುದೇ ಮಗುವಿನ ಬಾಯಿಂದ ಬರುವ ಮೊದಲ ಪದವೆಂದರೆ ಅಮ್ಮ.ಜಗತ್ತಿನೆಲ್ಲೆಡೆ ಪ್ರತಿಯೋಬ್ಬರ ಜೀವನದಲ್ಲೂ ತಾಯಿಗೆ ಅಪರೂಪದ ಸ್ಥಾನವನ್ನು ನೀಡಲಾಗಿದೆ.ಅಮ್ಮ ಎಂಬ ಎರಡು ಅಕ್ಷರಗಳಲ್ಲಿರುವ ಶಕ್ತಿ ಅಪಾರವಾದದ್ದು.ನನ್ನ ನೆಚ್ಚಿನ ವ್ಯಕ್ತಿ ನನ್ನ ತಾಯಿ ಸುನಿತ ಎಂ.ವಿ ಮನೆಯೊಡತಿಯಾಗಿದ್ದರೆ,ಆಕೆ ನನ್ನ ಮೇಲೆ ತುಂಬಾ ಕಾಳಜಿ ವಹಿಸುತ್ತಾಳೆ,ಕರುಣಾಳು ಹಾಗು ನನ್ನ ಅತ್ಯುತ್ತಮ ಗೆಳತಿಯಾಗಿದ್ದಾಳೆ.ನನ್ನ ಪ್ರೀತಿಯ ಸಹೋದರ ನನ್ನ ತಮ್ಮ ನಿಶಾಂತ್ ನಾಗ್ ಎಂ.ವಿ ೭ನೇ ತರಗತಿಯಲ್ಲಿ ಓದುತ್ತಿದ್ದಾನೆ.ಅವನು ತುಂಬಾ ಕರುಣಾಳು ಹಾಗು ಒಳ್ಳೆಯವನು.
ವಿದ್ಯಾಭ್ಯಾಸ
ಬದಲಾಯಿಸಿನಾನು ಚಿನ್ಮಯ ವಿದ್ಯಾಲಯ ಕೋಲಾರ ನಲ್ಲಿ ೧೦ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದೇನೆ.ನನ್ನ ಎಲ್ಲಾ ಗುರುಗಳು ಉತ್ತಮ ಬೆಂಬಲ ನೀಡುತ್ತಿದ್ದರು.ಇದರಿಂದ ೧೦ನೆಯ ತರಗತಿಯ ಪರೀಕ್ಷೆಗಳಲ್ಲಿ ೯೮.೫೬% ಪಡೆಯಲು ಸಾಧ್ಯವಾಯಿತು.ಶಾಲೆಯಲ್ಲಿದ್ದ ನನ್ನ ಪ್ರೀತಿಯ ಗೆಳತಿ ಹೆಸರು ಅನುಪಮ.ಆಕೆ ನನ್ನ ಎಲ್ಲ ಸಂತೋಷ-ನೋವುಗಳಲ್ಲಿ ಭಾಗಿಯಾಗಿದ್ದಳು.ಈ ಎಲ್ಲ ಕಾರಣದಿಂದಾಗಿ ನನ್ನ ಶಾಲೆಯ ದಿನಗಳನ್ನು ಕಳೆದುಕೊಳ್ಳುತ್ತೇನೆ.ಮೊದಲು ವೈದ್ಯಕಿ ಆಗಬೇಕು ಎಂಬ ಅಸಕ್ತಿಯಿದ್ದ ಕಾರಣ ವಿಙ್ಞಾನ ತೆಗೆದುಕೊಳ್ಳಲು ನಿಶ್ಚಯಿಸಿದೆ.ನಂತರ ಒಂದು ಕಾರ್ಯಕ್ರಮದಿಂದ ನನ್ನಗೆ ಸಿಎ ಮಾಡುವ ಆಸಕ್ತಿ ಮೂಡಿತು ಇದರಿಂದ ಪದವಿ ಪೂರ್ವ ಶಿಕ್ಷಣವನ್ನು ವಾಣಿಜ್ಯಾ ವಿಭಾಗದಲ್ಲಿ ಮಾಡಲು ಟ್ರಾನ್ಸೆಂಡ್ ಪಿಯು ಕಾಲೇಜನ್ನು ಸೇರಿಕೊಂಡೆನು.ಅಲ್ಲಿನ ಉತ್ತಮ ಬೋಧನೆಯಿಂದಾಗಿ ನಾನು ೯೭% ಪಡೆದುಕೊಂಡೆನು.ನಂತರ ನನಗೆ ವಿಚಾರ ವಿಙ್ಞಾನ ಮಾಡುವ ಆಸಕ್ತಿ ಮೂಡಿ,ಅದಕ್ಕೆ ಸಹಾಯವಾಗುವ ಬಿಎಸ್ಸಿ ಪದವಿಯನ್ನು ಅರ್ಥಶಾಸ್ತ್ರ,ಗಣಿತ ಹಾಗು ಸಂಖ್ಯಾಶಾಸ್ತ್ರ ವಿಷಾಯಗಳಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯ[೨]ದಲ್ಲಿ ಮಾಡುತ್ತಿದ್ದೇೆನೆ.
ಈ ಕಾಲೇಜು ಬಹುತೇಕ ಎಲ್ಲ ವಿಷಯಗಳಲ್ಲಿ ನನಗೆ ಸಹಾಯ ಮಾಡುತ್ತಿದೆ.ಇಲ್ಲಿನ ಶಿಕ್ಷಕರು ಒಳ್ಳೆಯ ಬೆಂಬಲವನ್ನು ನೀಡುತ್ತಿದ್ದಾರೇ.
ಹವ್ಯಸ
ಬದಲಾಯಿಸಿನನ್ನ ಹವ್ಯಸಗಳೆಂದರೆ ಹಾಡುವುದು,ಚಿತ್ರಕಲೆ,ನೃತ್ಯ, ಪುಸ್ತಕಗಳನ್ನು ಓದುವುದು,ಕಷ್ಟಕರವಾದ ಒಗಟುಗಳನ್ನು ಪರಿಹರಿಸುವುದು ಹಾಗು ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತೇನೆ.ಹಾಡುವ ಮತ್ತು ಚಿತ್ರಕಲೆಯಲ್ಲಿ ನಾನು ಹಲವಾರು ಬಹುಮಾನಗಳನ್ನು ಪಡೆದಿದ್ದೇನೆ ಹಾಗು ರಾಜ್ಯ ಮಟ್ಟದ ಅಬ್ಯಾಕಸ್ ಆಟಗಾರತಿಯು ಹೌದು.ನಾನು ೧ನೇ ತರಗತಿಯಿಂದ ಸಂಗೀತವನ್ನು ಪ್ರಾರಂಭಿಸಿದೆ ಆದರೆ ನನ್ನ ಕಿರಿಯ ಪರೀಕ್ಷೆಯನ್ನು ಪೂರ್ಣಗೊಳಿಸಲಿಲ್ಲ ಏಕೆಂದರೆ ನಾನು ಎಲ್ಲಿ ಹೋದರು ಆ ಶಿಕ್ಷಕರು ವರ್ಗಾವಣೆಯಾಗುತ್ತಿದ್ದರು ಅಥವಾ ಮದುವೆ ಯಾಗುತ್ತಿದ್ದರು ಆದ್ದರಿಂದ ಸಂಗೀತವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ,ನಂತರ ನಾನೇ ಹಾಡುವುದನ್ನು ಸ್ವಂತವಾಗಿ ಕಲಿತೆನು.ಹಾಡುವುದರಲ್ಲಿ ಮುಖ್ಯವಾಗಿ ನಾನು ಭಗವದ್ಗೀತೆ[೩]ಮತ್ತು ಭಾವ ಗೀತೆಯಲ್ಲಿ ಬಹುಮಾನಗಳನ್ನು ಪಡೆದಿದ್ದೇನೆ.ನಾನು ಎಲ್ಲಾ ರೀತಿಯ ಚಿತ್ರಕಲೆಗಳನ್ನು ಮಾಡುತ್ತೇನೆ.ನನಗೆ ಗ್ರಾಫಿಕ್ ವಿನ್ಯಾಸದಲ್ಲಿ ಆಸಕ್ತಿ ಇದ್ದ ಕಾರಣ ಅದನ್ನು ಕಲಿತಿರುವೆನು.ನಾನು ಕೀಬೋರ್ಡ್ ನುಡಿಸುವುದನ್ನು ಮತ್ತು ಅನೇಕ ಕಲಾಕೃತಿಗಳನ್ನು ಕಲಿತಿರುವೆನು.ನನಗೆ ಗಿಡಗಳೆಂದರೆ,ಹೂಗಳೆಂದರೆ ಬಹಳ ಇಷ್ಟ,ಎಕೆಂದರೆ ಅವು ಸುಂದರವಾಗಿರಾತ್ತಾದೆ ಹಾಗು ಒಳ್ಳೆಯ ಪರಿಮಳವನ್ನು ನೀಡುತ್ತದೆ.ಈ ಸುಂದರವಾದ ಗಿಡಗಳು ನನ್ನ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.ಓದುವುದೆಂದರೆ ನನ್ನಗೆ ಎಷ್ಟು ಇಷ್ಟವೆಂದರೆ,ನನ್ನಗೆ ತಲೆನೋವು ಬಂದಾಗ ಏನಾದರು ಓದಿದರೆ ತಲೆನೋವು ಕಡಿಮೆಯಾಗುತ್ತದೆ.
ದಾರಿ ತೋರಿದ ದೀಪಗಳು
ಬದಲಾಯಿಸಿನನಗೆ ಪ್ರಾಮಾಣಿಕವಾಗಿರಾಲು ತುಂಬಾ ಇಷ್ಟ,ಆದರೆ ಒಳ್ಳೆಯವರಿಗೆ ಕಾಲ ಇಲ್ಲ ಎನ್ನುವಂತೆ ನನ್ನ ಒಂದು ಪ್ರಾಮಾಣಿಕತೆಯಿಂದ ಎಲ್ಲ ಸ್ನೇಹಿತರನ್ನು ಕಳೆದುಕೊಂಡೆನು,ನಂಬಿದವರೇ ನಮ್ಮನ್ನು ಮೋಸ ಮಾಡುತ್ತಾರೆ.ನಮ್ಮನ್ನು ಕೆಳಗೆಳೆಯಲು ಪ್ರಯತ್ನಿಸುತ್ತಾರೆ,ಅಂತಹ ಜನರಿಂದ ಸ್ವಲ್ಪ ದೂರವಿರುವುದು ಒಳ್ಳೆಯದು,ಆಗ ಪರಿಚಯವಾದ ನನ್ನ ಗೆಳತಿ ಅನುಪಮ ನನ್ನಗೆ ಎಲ್ಲ ಸಮಯದಲ್ಲೂ ತನ್ನ ಒಂದು ಬೆಂಬಲವನ್ನು ನೀಡುತ್ತಿದ್ದಳು.ಆಕೆಯಷ್ಟು ಒಳ್ಳೆಯ ಮನಸ್ಸುಳ್ಳ ವ್ಯಕ್ತಿಯನ್ನು ನಾನು ಈವರೆಗು ಕಂಡಿಲ್ಲ.ಈ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲೂ ನನಗೆ ಒಳ್ಳೆಯ ಸ್ನೇಹಿತರು ಇದ್ದಾರೆ.ನಾನು ಹೊಸ ವ್ಯಕ್ತಿಗಳೊಂದಿಗೆ ಮಾತನಾಡಲು ಭಯ ಹಾಗು ನಾಚಿಕೆ ಪಡುತ್ತೇನೆ,ಆದ್ದರಿಂದ ನನ್ನ ಸ್ನೇಹಿತರು ಪ್ರತೀ ಕ್ಷಣದಲ್ಲೂ ಧೈರ್ಯ ಹಾಗು ಬೆಂಬಲವನ್ನು ನೀಡುತ್ತಾರೆ.ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ ಹಾಗು ದಾರಿ ತೋರಿಸುವ ದೀಪ.ಮಗುವಿನ ಪ್ರತೀ ಹಂತದಲ್ಲೂ ಗುರುವಿನ ಅವಶ್ಯಕತೆಯಿರುತ್ತದೆ.ನನಗೆ ಇಂತಹ ನೆಚ್ಚಿನ ಗುರುಗಳು ಎಂದು ಇಲ್ಲ ಎಕೆಂದರೆ ಎಲ್ಲರು ನಮ್ಮ ಒಳ್ಳಿತನೇ ಬಯಸುತ್ತಾರೆ.ಆದ್ದರಿಂದ ಎಲ್ಲರೂ ನನ್ನ ನೆಚ್ಚಿನ ಗುರುಗಳೇ.ಆದ್ದರಿಂದ ನಾನು ವಿಶೇಷವಾಗಿ ಆ ಎಲ್ಲಾ ದಾರಿ ತೋರುವ ದೀಪಗಳಿಗೆ ವಂದಿಸುತ್ತೇನೆ.
ಕೃತಜ್ಞತೆಗಳು
ಬದಲಾಯಿಸಿಕೊನೆಯದಾಗಿ ನಾನು ಹೇಳಲು ಬಯಸುವುದೇನೆಂದರೆ,ಜೀವನ ಅಂದ ಮೇಲೆ ಕಷ್ಟ-ಸುಖಗಳು ಬಂದೆ ಬರುತ್ತದೆ.ಅವುಗಳಿಗೆ ಸೋಲದೆ ಸರಿಯಾದ ದಾರಿಯ ಕಡೆ ನಡೆಯಬೇಕು.ಅದಕ್ಕೆ ಸಹಾಯ ಮಾಡಿದವರನ್ನು ಎಂದಿಗೂ ಮರೆಯಬಾರದು.ಇಲ್ಲಿಯವರೆಗೆ ನನ್ನ ಜೀವನದ ಪ್ರತಿ ಅಂಶದಲ್ಲಿ ಒಳ್ಳೆಯ ಸಹಾಯ ಹಾಗು ಬೆಂಬಲ ನೀಡುತ್ತಿರುವ ಎಲ್ಲರಿಗು ನಾನು ಧನ್ಯಾಳಾಗಿದ್ದೆನೆ.
ಉಲ್ಲೇಖನ
ಬದಲಾಯಿಸಿ