ಹಚ್ಚ ಹಸಿರುಗಳಿಂದ ತುಂಬಿ, ಮಲೆನಾಡ ಸಿರಿ ಎಂದೇ ಪ್ರಸಿದ್ದ ಪಡೆದಿರುವ ಶಿವಮೊಗ್ಗ ಜಿಲ್ಲೆಯಲ್ಲಿ ೨೫-೬-೧೯೯೬ ರಂದು ಮಾರ್ಕ ಡಿಕಾಸ್ತ ಹಾಗೂ ಅನಿತಾ ಡಿಕಾಸ್ತ ಇವರ ಪುತ್ರನಾಗಿ ಒಬ್ಬ ಶ್ರೇಷ್ಟ ಸಂಗೀತಗಾರ,ಸಾಹಿತಿ ಈ ಭೂಮಿಗೆ ಬಂದರು ಅದು ಬೇರೆ ಯಾರು ಅಲ್ಲ ನಿಶಾಂತ ಅಂತೋಣಿ ಡಿಕಾಸ್ತ.
ಹುಟ್ಟುದ ದಿನದಿಂದಲೆ ಶಾಂತಿ,ಪ್ರೀತಿ, ಸಹಾಯ, ಗೆಳೆತನವನ್ನು ಮೈಗೂಡಿಸಿಕೊಂಡು ಬೆಳೆದ ವ್ಯಕ್ತಿ ನಾನು ಶತಮಾನಗಳಿಂದ ಪ್ರಸಿದ್ದಿ ಪಡಿದಿರುವ ಆರ್.ಸಿ ಶಾಲೆ ಶಿವಮೊಗ್ಗದಲ್ಲಿ ನನ್ನ ಪ್ರಾಥಮಿಕ ಶಿಕ್ಷಣಮನ್ನು ಮುಗಿಸಿದೆ. ಅಲ್ಲಿಂದಲೇ ನನ್ನ ಒಂದೊಂದು ಹವ್ಯಾಸಗಳು ಪ್ರಾರಂಭವಾಯಿತು. ಸಂಗೀತ ನುಡಿಸುವುದು, ಹಾಡುವುದು, ಕವಿತೆ ಬರೆಯುವುದು ಹಾಗೂ ಅನೇಕ ಹವ್ಯಾಸಗಳು ನನ್ನಲ್ಲಿ ಹುಟ್ಟಿಕೊಂಡವು.
ನಂತರ ನಾನು ಶಿವಮೊಗ್ಗದಲ್ಲಿ ನನ್ನ ಪ್ರೌಢಶಿಕ್ಷಣವನ್ನು ಲೋಯೊಲ ಶಾಲೆಯಲ್ಲಿ ಮುಗಿಸಿದೆ.ನಾನು ಅಲ್ಲಿಯೂ ನನ್ನ ಹವ್ಯಾಸಗಳನ್ನು ಮುಂದುವರೆಸಿದೆ. ವಿಶೇಷವೆಂದರೆ ದೇವರ ಕರೆ ನನಗೆ ಚಿಕ್ಕಂದಿನಿಂದಲೂ ಇದ್ದರೂ ಪ್ರೌಢ ಶಾಲೆಯಲ್ಲಿ ಅದರ ಆಸಕ್ತಿ ಹೆಚ್ಚಾಯಿತು. ಬೇರೆಯವರಲ್ಲಿ ಅನುಕಂಪ ಪ್ರೀತಿ,ಬಡವರಿಗೆ ಸಹಾಯ ಮಾಡಲು ಪ್ರಾರಂಭಮಾಡಿದೆ ನನಗೆ ತಿಳಿಯದೆ. ನಂತರ ಎಸ್.ಎಸ್.ಎಲ್.ಸಿ ನಂತರ ಒಬ್ಬ ಕ್ರೈಸ್ತ ಧರ್ಮದ ಗುರುವಾಗಲೂ ಹೊರಟೆ. ಮೈಸೂರಿನ ಸಂತ್ ಮರಿಯಮ್ಮನವರ ಗುರುಮಠದಲ್ಲಿ ೩ ವರ್ಷ ತರಬೇತಿಯನ್ನು ಪಡೆದೆ.ಹಾಗೂ ಅಲ್ಲಿಂದಲೇ ನನ್ನ ಪಿ.ಯು.ಸಿ ಯನ್ನು ಸಂತ್ ಫಿಲೋಮಿನ ಕಾಲೇಜಿನಲ್ಲಿ ಮುಗಿಸಿದೆ.ಇಲ್ಲಿ ಇರುವಾಗಲೇ ನನಗೆ ನನ್ನ ಜೀವನದ ಮುಖ್ಯವಾದ ದಿನಗಳು ಪ್ರಾರಂಭವಾಯಿತು. ಹಾಗೇ ಅಲ್ಲಿ ನಾನು ಹೆಚ್ಚಾಗಿ ಬೆಳೆದೆ,ಕಲಿತೆ.
ಒಂದನೇ ತರಗತಿಯಿಂದ ೧೦ ನೇ ತರಗತಿಯವರೆಗೆ ಅನೇಕ ಪ್ರಶಸ್ತಿಗಳು ಬಂದವು. ಭಾವಗೀತೆ ಹಾಗೂ ಜನಪದ ಗೀತೆಯಲ್ಲಿ ಜಲ್ಲಾಮಟ್ಟದಲ್ಲಿ ಭಾಗವಹಿಸಿದ್ದೇನೆ. ಹಾಗೇ ಪಿ.ಯು.ಸಿ ಯಲ್ಲಿ ನಾನು ಬರೆದ ಒಂದು ಪ್ರಬಂದಕ್ಕೆ ವಿವೇಕಾನಂದ ಟ್ರಸ್ಟ್ ನಿಂದ ದ್ವೀತಿಯ ಬಹುಮಾನ ಬಂದಿದೆ.ಕಾಲೇಜಿನಲ್ಲಿ ಎಲ್ಲಾ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ. ೩ ವರ್ಷ ಹಿಂದೆ "ಸಂಕೀರ್ತಿಸೋಣ" ಎಂಬ ದ್ವನಿಸುರುಳಿಯಲ್ಲಿ ಹಾಡಿದ್ದೇನೆ. ಇತ್ತಿಚೆಗೆ "ನನ್ನ ಜೀವನದ ಬರವಣಿಗೆ" ಎಂಬ ಒಂದು ಪುಸ್ತಕವನ್ನು ಬರೆಯುತ್ತಿದ್ದೇನೆ.
ಇದು ನನ್ನ ಜೀವನದ ಪುಟ್ಟ ಘಟನೆಯಾಗಿದೆ.