ಸದಸ್ಯ:Nisha 20/ನನ್ನ ಪ್ರಯೋಗಪುಟ
ಆಶಿಶ್ ಬಲ್ಲಾಳ್
ಬದಲಾಯಿಸಿಆಶಿಶ್ ಕುಮಾರ್ ಬಲ್ಲಾಲ್ ಇವರು ಅಕ್ಟೋಬರ್ ೮ ,೧೯೭೦ ರಂದು ಜನಿಸಿದರು.ಇವರು ಹಾಕಿ ತಂಡದ ಮಾಜಿ ಭಾರತೀಯ ಗೋಲ್ಕಿಪರ್.೧೯೯೨ ರಲ್ಲಿ ಬಾರ್ಸಿಲೊನ ಒಲಂಪಿಕ್ಸ್,೧೯೯೦ ರ ವಿಶ್ವಕಪ್,ಮೂರು ಚಾಂಪಿಯನ್ ಟ್ರೋಪಿ ಪಂದ್ಯಾವಳಿಗಳು(೧೯೮೯,೧೯೯೩,೧೯೯೬),ಎರಡು ಏಷ್ಯನ್ ಪಂದ್ಯಾವಳಿಗಳು(೧೯೯೪,೧೯೯೮) ಮತ್ತು ಎರಡು ಏಷ್ಯ ಕಪ್ಗಗಳಲ್ಲಿ (೧೯೮೯,೧೯೯೩) ನಲ್ಲಿ ಭಾಗವಹಿಸಿದ್ದಾರೆ.ಒಟ್ಟು ಇವರು ೨೭೫ ಅಂತರರಾಷ್ಟ್ರಿಯ ಪಂದ್ಯಗಳಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಕೊರಿಯ ವಿರುಧ್ದ ೧೯೯೮ ರ ಬ್ಯಾಂಕಾಕ್ ಏಷ್ಯನ್ ಪಂದ್ಯಾವಳಿಯಲ್ಲಿ ಎರಡು ಟೈಬ್ರೆಕರ್ ಗುರಿಗಳನ್ನು ಉಳಿಸಿಕೊಂಡಾಗ ಬಲ್ಲಾಲ್ ಅವರು ಭಾರತದಲ್ಲಿ ಮನೆಮಾತಾದರು.
ವೈಯುಕ್ತಿಕ ಜೀವನ
ಬದಲಾಯಿಸಿಬಲ್ಲಾಲ್ ಬಂಟ ಸಮುದಾಯದಿಂದ ಬಂದವರು.ಇವರು ಬಂಟ ಸಮುದಾಯದ ಸಹನಾ ಎಂಬವರನ್ನು ವಿವಾಹವಾದರು.ಯಾಶ್ ಬಲ್ಲಾಲ್ ಮತ್ತು ವಾನ್ಶ್ ಬಲ್ಲಾಲ್ ಇವರ ಪುತ್ರರು.
ಸಾಧನೆ
ಬದಲಾಯಿಸಿಬ್ಯಾಂಕಾಕ್ ನಲ್ಲಿ ನಡೆದ ಏಶಿಯಾಡ್ ಪಂದ್ಯಾಟದಲ್ಲಿ ಪ್ರತಿನಿಧಿಸಿದ ಬಲ್ಲಾಲ್ ನಾಯಕತ್ವದ ಬಲ್ಲಾಲ್ ನೇತ್ರತ್ವದ ಭಾರತ ತಂಡವು ಚಿನ್ನದ ಪದಕ ಪಡೆಯಿತು[೧]
ಪ್ರಶಸ್ತಿಗಳು
ಬದಲಾಯಿಸಿ- ಹಾಕಿ ಆಟದಲ್ಲಿ ಅವರ ಅತ್ಯುತ್ತಮ ಕೊದುಗೆಗಾಗಿ ೧೯೯೭ರಲ್ಲಿ ಭಾರತ ಸರ್ಕಾರ ಏಕಲವ್ಯ ಪ್ರಶಸ್ತಿಯನ್ನು ನೀಡಿತು.
- ೧೯೯೭ ರಲ್ಲಿ ಕರ್ನಾಟಕ ಸರ್ಕಾರವು ಅರ್ಜುನ ಪ್ರಶಸ್ತಿಯನ್ನು ನೀಡಿತು.[೨]
ಉಲ್ಲೇಖಗಳು
ಬದಲಾಯಿಸಿ<references>/